“ನಿನ್ನ ಸ್ಯಾಲರಿ ಎಷ್ಟು?” ಎಂದು ಕೇಳಿದ ಶಾರುಖ್ ಖಾನ್‌ಗೆ ಎಲ್ಲರೆದುರೇ ವೇದಿಕೆಯ ಮೇಲೆ ಹಿಗ್ಗಾಮುಗ್ಗಾ ಝಾಡಿಸಿದ್ದ ಮುಕೇಶ್ ಅಂಬಾನಿ ಮಗ.!

in Uncategorized 255,104 views

ಪ್ರಪಂಚದಾದ್ಯಂತ ಚರ್ಚೆಯ ಹಾಗು ಶ್ರೀಮಂತ, ಫೇಮಸ್ ಜೋಡಿಯೆಂದರೆ ಅದು ಮುಕೇಶ್ ಅಂಬಾನಿ ಹಾಗು ನೀತಾ ಅಂಬಾನಿ ಜೋಡಿಯಾಗಿದೆ. ಈ ಜೋಡಿ ತಮ್ಮ ಲೈಫ್ ಸ್ಟೈಲ್ ನಿಂದ ಚರ್ಚೆಗೆ ಕಾರಣರಾಗಿರುತ್ತಾರೆ. ಮುಕೇಶ್ ಅಂಬಾನಿ ಹಾಗು ನೀತಾ ಅಂಬಾನಿಗೆ ಮೂರು ಮಕ್ಕಳಿದ್ದಾರೆ. ಇವರಲ್ಲಿ ಈಶಾ ಅಂಬಾನಿ, ಆಕಾಶ್ ಅಂಬಾನಿ ಅವಳಿ ಜವಳಿ ಮಕ್ಕಳು ಹಾಗು ಮೂರನೆಯ ಮಗ ಅನಂತ ಅಂಬಾನಿಯಾಗಿದ್ದಾರೆ. ಅಂಬಾನಿಯವರ ಮೂರನೆಯ ಮಗ ಅನಂತ್ ಅಂಬಾನಿ ತನ್ನ ತಂದೆಯಂತೆ ಸಿಂಪಲ್ ಆಗಿರಲು ಇಷ್ಟಪಡುತ್ತಾರೆ, ಅನಂತ್ ಅಂಬಾನಿ ಎಷ್ಟು ಸೈಲೆಂಟ್, ಸಿಂಪಲ್ ಆಗಿದ್ದಾರೋ ಅಷ್ಟೇ ಚಾಣಾಕ್ಷರೂ ಆಗಿದ್ದಾರೆ. ಒಮ್ಮೆ ಅನಂತ್ ಅಂಬಾನಿಯವರ ಚಾಣಾಕ್ಷತನ ಹಾಗು ಖಡಕ್ ಉತ್ತರ ಬಾಲಿವುಡ್ ನಟ ಶಾಹರುಖ್ ಖಾನ್‌ನ ಬಾಯಿಯನ್ನ ಬಂದ್ ಮಾಡಿದ್ದರು.

Advertisement

ವಾಸ್ತವವಾಗಿ, 2017 ರಲ್ಲಿ, ರಿಲಯನ್ಸ್ ಕಂಪನಿ 40 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಶಾರುಖ್ ಖಾನ್ ಹೋಸ್ಟ್ ಮಾಡುತ್ತಿದ್ದರು. ವೇದಿಕೆಯಲ್ಲಿ ಮುಕೇಶ್ ಅಂಬಾನಿಯ ಮೂವರು ಮಕ್ಕಳೊಂದಿಗೆ ಶಾರುಖ್ ಖಾನ್ ಮಾತನಾಡುತ್ತಾರೆ. ಅಲ್ಲದೆ, ಶಾರುಖ್ ಖಾನ್ ಆಕಾಶ್ ಮತ್ತು ಇಶಾ ಅವರೊಂದಿಗೆ ಡ್ಯಾನ್ಸ್ ಕೂಡ ಮಾಡಿದರು. ಏತನ್ಮಧ್ಯೆ, ವೇದಿಕೆಯಲ್ಲಿ ಅನಂತ್ ಅಂಬಾನಿ ಅವರೊಂದಿಗೆ ಮಾತನಾಡುವಾಗ, ಶಾರುಖ್ ಖಾನ್ ಅವರಿಗೆ ನನ್ನ ಮೊದಲ ಸಂಬಳ ₹ 50 ಇತ್ತು ಎಂದು ಹೇಳಿದರು.

ಶಾರುಖ್ ಖಾನ್ ದೆಹಲಿ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗ ಅವರು ಒಮ್ಮೆ ಪಂಕಜ್ ಉದಾಸ್ ಅವರ ಮ್ಯೂಸಿಕ್ ಕನ್ಸರ್ಟ್ ನಲ್ಲಿ ವಾಲಂಟೀಯರ್ ಆಗಿದ್ದರು. ಅದಕ್ಕೆ ಪ್ರತಿಯಾಗಿ ಶಾರುಖ್‌ಗೆ 50 ರೂಪಾಯಿ ಸಿಕ್ಕಿತ್ತು. ಶಾರುಖ್ ಖಾನ್ ತಮ್ಮ ಮೊದಲ ಗಳಿಕೆಯ ನಂತರ ತಾಜ್ ಮಹಲ್ ಅನ್ನು ನೋಡಲು ಹೋಗಿದ್ದರು. ತನ್ನ ಮೊದಲ ಸಂಬಳದ ಬಗ್ಗೆ ತಿಳಿಸಿದ ಶಾರುಖ್ ಅನಂತ್ ಅಂಬಾನಿಯ ಮೊದಲ ಸಂಬಳದ ಬಗ್ಗೆ ಕೇಳಿದರು. ಈ ಪ್ರಶ್ನೆಯ ನಂತರ, ಕಾರ್ಯಕ್ರಮದಲ್ಲಿ ಹಾಜರಿದ್ದ ಎಲ್ಲರೂ ಅನಂತ್ ಅಂಬಾನಿ ನೀಡಿದ ಉತ್ತರವನ್ನು ಕೇಳಿ ಬಿದ್ದು ಬಿದ್ದು ನಗಲಾರಂಭಿಸಿದರು.

ತಮ್ಮ ಮೊದಲ ಸಂಬಳದ ಪ್ರಶ್ನೆಯಲ್ಲಿ, ಅನಂತ್ ಅಂಬಾನಿ ಶಾರುಖ್ ಖಾನ್‌ಗೆ ಉತ್ತರಿಸುತ್ತ, “ನೀವು ಸುಮ್ಮನಿದ್ದುಬಿಡಿ, ನನ್ನ ಮೊದಲ ಸಂಬಳದ ಬಗ್ಗೆ ಹೇಳಿದರೆ ನಿಮಗೆ ಮುಜುಗರವಾಗುತ್ತದೆ” ಎಂದು ಹೇಳಿದರು. ಅನಂತ್ ಅಂಬಾನಿಯವರ ಈ ಉತ್ತರವನ್ನು ಕೇಳಿದ ಶಾರುಖ್ ಖಾನ್ ಆ ಅವಮಾನದಿಂದ ಅನೇಕ ವರ್ಷಗಳ ಕಾಲ ಅಘಾತಕ್ಕೊಳಗಾಗಿದ್ದರು.

ಶಾರುಖ್ ಖಾನ್ ಭಾರತೀಯ ಉದ್ಯಮಿ ಮುಖೇಶ್ ಅಂಬಾನಿಯವರ ಆಪ್ತ ಕುಟುಂಬ ಸ್ನೇಹಿತರಾಗಿದ್ದಾರೆ ಮತ್ತು ಅವರ ಅನೇಕ ಗ್ರ್ಯಾಂಡ್ ಪಾರ್ಟಿಗಳಲ್ಲಿ ಭಾಗವಹಿಸಿದ್ದರು.

ವರದಿಯ ಪ್ರಕಾರ, ಅಂಬಾನಿ ಕುಟುಂಬವು ಜೂನ್ 30 ರಂದು ತಮ್ಮ ನಿವಾಸದಲ್ಲಿ ನಿಶ್ಚಿತಾರ್ಥದ ಪಾರ್ಟಿಗಾಗಿ ಗೋವಾದಲ್ಲಿ ಸೇರಿದ್ದರು. ನಿಶ್ಚಿತಾರ್ಥ ಸಮಾರಂಭದಲ್ಲಿ ಶಾರುಖ್ ಹೋಸ್ಟ್ ಆಗಿದ್ದರು. ಆ ಪಾರ್ಟಿಯಲ್ಲಿ ಶಾರುಖ್ ಖಾನ್ ಪರ್ಫಾರ್ಮೆನ್ಸ್ ಕೂಡ ನೀಡಿದ್ದರು. ಅನೇಕ ಬಾಲಿವುಡ್ ಸೆಲಬ್ರಿಟಿಗಳು ಯುವ ಜೋಡಿಗಳ ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಹೋಸ್ಟ್ ಮಾಡುತ್ತಿದ್ದ ಶಾರುಖ್ ಖಾನ್ ತನಗೆ ಹಿಂದೆ ಅನಂತ್ ಅಂಬಾನಿಯಿಂದಾದ ಅವಮಾನದ ಕಾರಣ ಯಾವ ಪ್ರಶ್ನೆಗಳನ್ನೂ ಕೇಳದೆ ಸೈಲೆಂಟಾಗಿ ತಮ್ಮ ಕೆಲಸ ಮಾಡಿ ಮನೆಗೆ ಹೊರಟು ಹೋಗಿದ್ದರಂತೆ.

Advertisement
Share this on...