ಶಾರುಖ್ ಖಾನ್ ಅವರ ಮೊದಲ ಚಿತ್ರ 1992 ರಲ್ಲಿ ಬಿಡುಗಡೆಯಾಗಿತ್ತು ಆದರೆ ಶಾರುಖ್ ಖಾನ್ ಗೌರಿ ಖಾನ್ ಅವರನ್ನು 1991 ರಲ್ಲಿ ಅಂದರೆ ತಮ್ಮ ಚಿತ್ರ ಬಿಡುಗಡೆಯಾಗುವ ಒಂದು ವರ್ಷದ ಮೊದಲು ವಿವಾಹವಾದರು. ಶಾರುಖ್ ಖಾನ್ ಮದುವೆಯಾದ ಬಳಿಕ ಗೌರಿಯ ಕುಟುಂಬಸ್ಥರು ಹಾಗು ತಂದೆ ತಾಯಿ ಶಾರುಖ್ ಖಾನ್ ಧರ್ಮದ ಬಗ್ಗೆ ತುಂಬಾ ಕೋಪಗೊಂಡು ಟೆನ್ಶನ್ ಆಗಿದ್ದರು.
ಇಂಟರ್‌ವ್ಯೂ ಒಂದರಲ್ಲಿ ಶಾರುಖ್ ಖಾನ್ ತನ್ನ ಮದುವೆಗೆ ಸಂಬಂಧಿಸಿದ ವಿಷಯವೊಂದನ್ನ ಬಹಿರಂಗಪಡಿಸಿದ್ದರು. ಅವರು ಹೇಳುವಂತೆ “ನನಗೆ ನೆನಪಿದೆ, ನಮ್ಮ ಮದುವೆಯಾದ ಬಳಿಕ ಗೌರಿಯ ಸಂಬಂಧಿಕರು ಈ ಬಗ್ಗೆ ಅಸಮಾಧಾನಗೊಂಡಿದ್ದರು, ಹಳೆಯ ಕಾಲದ ಜನ, ನಾನು ಅವರ ಭಾವನೆಗಳಿಗೆ ಬೆಲೆ ಕೊಡುತ್ತೇನೆ. ಗೌರಿಯ ಕುಟುಂಬ ಹಳೆಯ ಕಾಲದ ಜನರಾಗಿದ್ದಾರೆ. ನಾನು ಅವರ ಮನೆಗೆ ಹೋದಾಗ ಅವರು ಈತ ಮುಸ್ಲಿಂ ಯುವಕ, ಈತ ನಮ್ಮ ಗೌರಿಯನ್ನ ಮದುವೆಯಾದ ಬಳಿಕ ಈತ ನಮ್ಮ ಹುಡುಗಿಯ ಹೆಸರು ಹೆಸರು ಬದಲಾಯಿಸುತ್ತಾನಾ? ಆಕೆಯನ್ನೂ ಮುಸ್ಲಿಂ ಮಾಡಿಬಿಡುತ್ತಾನೆ ಎಂದಿದ್ದರು.
ಗೌರಿ ಕುಟುಂಬಸ್ಥರ ಈ ದೃಷ್ಟಿಕೋನವನ್ನ ನೋಡಿ ನಾನು ತಮಾಷೆಗೆಂದು “ನಾನು ಈಕೆಯನ್ನ ಮದುವೆಯಾದ ಬಳಿಕ ಈಕೆ ಬುರ್ಖಾ ಹಾಕಿಕೊಳ್ಳಬೇಕು, ನಮಾಜ್ ಮಾಡಬೇಕು” ಎಂದು ಹೇಳಿದೆ. ಆಗ ಗೌರಿ ಕುಟುಂಬದವರು ನಾನು ಗೌರಿಯನ್ನ ಧರ್ಮ ಪರಿವರ್ತನೆ ಮಾಡಿಬಿಟ್ಟಿದ್ದಾನಾ ಎಂದುಕೊಂಡುಬಿಟ್ಟರು. ಆಗ ನಾನು ಗೌರಿ ಕುಟುಂಬಸ್ಥರೆದುರು ಈಗ ಗೌರಿ ಮುಸಲ್ಮಾನಳಾಗಿಬಿಟ್ಟಿದ್ದಾಳೆ, ಮನೆಯಿಂಸ ಹೊರಬರುವಂತಿಲ್ಲ, ಆಕೆಯ ಹೆಸರನ್ನ ಗೌರಿಯಿಂದ ಬದಲಿಸಿ ಆಯೇಶಾ ಅಂತ ಮಾಡಿಬಿಡುತ್ತೇನೆ ಎಂದಿದ್ದೆ.
ಈ ಎಲ್ಲ ಮಾತುಗಳನ್ನ ಕೇಳಿದ ಬಳಿಕ ಗೌರಿ ಕುಟುಂಬ ದಂಗಾಗಿಬಿಟ್ಟಿದ್ದರು, ಟೆನ್ಶನ್ ಜಾಸ್ತಿಯಾಗೋದನ್ನ ಕಂಡು ನಾನು ಸುಮ್ಮನೆ ತಮಾಷೆ ಮಾಡುತ್ತಿದ್ದೆ ಎಂದು ಹೇಳಿದೆ. ಆಗ ಇಡೀ ಕುಟುಂಬ ನಗೆಗಡಲಲ್ಲಿ ತೇಲಿ ನಗಲಾರಂಭಿಸಿದರು ಎಂದು ಶಾರುಖ್ ಖಾನ್ ಇಂಟರ್‌ವ್ಯೂ ನಲ್ಲಿ ತಿಳಿಸಿದ್ದರು. ಶಾರುಖ್ ಖಾನ್ ಹೇಳುವಂತೆ ನಾನು ಹಾಗು ಗೌರಿ ಬೇರೆ ಬೇರೆ ಧರ್ಮದವರಾಗಿದ್ದರೂ ಇಬ್ಬರೂ ಪರಸ್ಪರ ಧರ್ಮಗಳನ್ನ ಗೌರವಿಸುತ್ತೇವೆ, ನಾವಿಬ್ಬರೂ ನಮ್ಮ ಧರ್ಮಗಳನ್ನ ಒಬ್ಬರ ಮೇಲೊಬ್ಬರು ಹೇರಿಲ್ಲ, ಇಬ್ಬರೂ ಒಬ್ಬರನ್ನೊಬ್ಬರು ಪರಸ್ಪರ ಸಮ್ಮಾನ ನೀಡುತ್ತೇವೆ ಎಂದು ಹೇಳುತ್ತಾರೆ.
ಇದನ್ನೂ ಓದಿ:
ಶಾರುಖ್ ಖಾನ್ ಗೆ ಕಲ್ಲಿನಿಂದ ಹೊಡೆಯಲು ಮುಂದಾಗಿದ್ದ ಡೈರೆಕ್ಟರ್
ಹಳೆಯ ಸಂದರ್ಶನವೊಂದರಲ್ಲಿ, ಶೋ ನಿರ್ದೇಶಕ ಕರ್ನಲ್ ರಾಜ್ ಕಪೂರ್ ಶಾರುಖ್ ಬಗ್ಗೆ ಬಹಳ ಆಸಕ್ತಿದಾಯಕ ವಿಷಯವನ್ನ ಹೇಳಿದ್ದರು ಮಾಡಿದ್ದಾರೆ. ‘ಫೌಜಿ’ ಚಿತ್ರೀಕರಣಕ್ಕಾಗಿ ಶಾರುಖ್ ಸೆಟ್‌ಗಳಲ್ಲಿ ತಡವಾಗಿ ಬರುತ್ತಿದ್ದರು ಎಂದು ಅವರು ಹೇಳಿದ್ದಾರೆ. ಈ ರೀತಿಯಾಗಿ ತಡವಾಗಿ ಬರುವ ಅಭ್ಯಾಸ ಮೊದಲಿನಿಂದಲೂ ಶಾರುಖ್ ಗಿತ್ತು. ಶಾರುಖ್ ಖಾನ್ ಲೇಟಾಗಿ ಬರುವ ಕಾರಣ, ಜನರು ಸೆಟ್‌ಗಳಲ್ಲಿ ಕಾಯಬೇಕಾಗುತ್ತಿತ್ತು. ಒಂದು ದಿನ, ನಿರ್ದೇಶಕರು ಶಾರುಖ್ ಖಾನ್‌ನ ಈ ಅಭ್ಯಾಸವನ್ನ ಕೊನೆಗೊಳಿಸಲು ನಿರ್ದೇಶಕರು ಶಾರುಖ್ ಖಾನ್‌ಗೆ ಕ-ಲ್ಲಿ-ನಿಂದ ಹೊ-ಡೆ-ಯಲು ಮುಂದಾಗಿ ಶಾರುಖ್ ಖಾನ್ ಬೆನ್ನಟ್ಟಿದ್ದರು.
ಸೆಟ್‌ನಲ್ಲಿ ತಡವಾಗಿ ಬರುತ್ತಿದ್ದ ಕಾರಣ ನಾನು ಶಾರುಖ್‌ನನ್ನು ಕ-ಲ್ಲಿ-ನಿಂದ ಹೊ-ಡೆ-ಯಲು ಆತನನ್ನ ಬೆನ್ನಟ್ಟಿದ್ದೆ ಎಂದು ಅವರು ಹೇಳಿದ್ದಾರೆ. ಇದರ ನಂತರ, ಶಾರುಖ್ ಕೂಡ ಸಮಯಕ್ಕೆ ಬರಲು ಪ್ರಾರಂಭಿಸಿದನು. ಆ ಸಮಯದಲ್ಲಿ, ಶಾರುಖ್ ಸಮಯಪ್ರಜ್ಞೆಯನ್ನ ಪಾಲಿಸಲು ಪ್ರಾರಂಭಿಸಿದನು, ಆದರೂ ಈ ಅಭ್ಯಾಸವು ಆತನಿಂದ ಹೋಗಲಿಲ್ಲ. ಶಾರುಖ್ ಇಂದಿಗೂ ಕಷ್ಟಪಟ್ಟು ಕೆಲಸ ಮಾಡುತ್ತಾನೆ, ಆದರೆ ಸಮಯಕ್ಕೆ ಸರಿಯಾಗಿ ಸಮಯಕ್ಕೆ ಬರುವುದು ಅವನಿಗೆ ಇನ್ನೂ ಬಹಳ ಕಷ್ಟ ಎಂದು ಹೇಳಿದ್ದಾರೆ.
ಫೌಜಿ ಧಾರಾವಾಹಿಯಿಂದಲೇ ಶಾರುಖ್ ನಟನಾ ಜಗತ್ತಿಗೆ ಪ್ರವೇಶಿಸಿದ್ದನು. ಇದರ ನಂತರ ‘ಸರ್ಕಸ್’ ಧಾರಾವಾಹಿಯಲ್ಲಿಯೂ ಆತ ಕೆಲಸ ಮಾಡಿದನು. ಇದರ ನಂತರ, ಅದೃಷ್ಟ ಮತ್ತು ಕಠಿಣ ಪರಿಶ್ರಮವು ಶಾರುಖ್ ಖಾನ್‌ನ್ನ ದೊಡ್ಡ ಪರದೆಯತ್ತ ಕರೆದುಕೊಂಡು ಹೋಯಿತು. ಮೊದಲ ಚಿತ್ರ ‘ದಿವಾನ’ ದೊಂದಿಗೆ, ಶಾರುಖ್ ಯಶಸ್ಸಿನ ಧ್ವಜವನ್ನು ಹಾರಿಸಿದ ಮತ್ತು ಅದರ ನಂತರ ಅಲ್ಲಿಂದ ಇಲ್ಲಿಯವರೆಗೆ ತಮ್ಮ ವೃತ್ತಿಜೀವನದಲ್ಲಿ ಹಿಂದೆ ತಿರುಗಿ ನೋಡಲೇ ಇಲ್ಲ.
ಶಾರುಖ್ ಖಾನ್ ಸೆಲ್ಫ್ ಮೇಡ್ ಸ್ಟಾರ್ ಆಗಿದ್ದು ಈ ಕಾರಣದಿಂದಾಗಿ ಜನರು ಅವನನ್ನು ಪ್ರೀತಿಸುತ್ತಾರೆ. ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಕೂಡ ಶಾರುಖ್ ಖಾನ್‌ನ್ನ ತುಂಬಾ ಇಷ್ಟಪಡುತ್ತಿದ್ದನು. ಚಲನಚಿತ್ರಗಳ ಪ್ರಪಂಚದ ಹೊರಗಿನ ಅನೇಕ ಸ್ಟಾರ್ ಗಳು ಕೂಡ ಸಹ ಯಶಸ್ಸಿನ ಕನಸು ಕಾಣುತ್ತಾರೆ ಏಕೆಂದರೆ ಶಾರುಖ್ ಖಾನ್ ತಳಮಟ್ಟದಿಂದ ಈ ಮಟ್ಟಕ್ಕೆ ತಲುಪಿರುವ ಯಶಸ್ಸಿನ ಗಾಥೆ ಅವರಿಗೆ ಗೊತ್ತು. ಶಾರುಖ್ ಕೂಡ ಬಾಲಿವುಡ್‌ಗೆ ಔಟ್‌ಸೈಡರ್ ಆಗಿದ್ದವನೇ ಆದರೆ ತನ್ನ ಕಠಿಣ ಪರಿಶ್ರಮದ ಆಧಾರದ ಮೇಲೆ ಈ ಮಟ್ಟಕ್ಕೆ ತಲುಪಿದ್ದಾನೆ.