ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ಲವ್ ಜಿಹಾದ್ ನ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆರೋಪಿಯ ಹೆಸರು ಮೊಹಮ್ಮದ್ ಇಜಹಾರ್. ರಾಕೇಶ್ ಎಂಬ ಸೋಶಿಯಲ್ ಮೀಡಿಯಾ ಅಕೌಂಟ್ ಮಾಡಿಕೊಂಡು ಅದರ ಮೂಲಕ ಹಿಂದೂ ಮಹಿಳೆಯನ್ನು ವಂಚಿಸಿದ ಆರೋಪ ಈತನ ಮೇಲಿದೆ. ಸಂತ್ರಸ್ತೆಯ ಪ್ರಕಾರ, ಮೂಲತಃ ಪಶ್ಚಿಮ ಬಂಗಾಳದ ತನ್ನನ್ನ ಇಜಹಾರ್ ಒತ್ತೆಯಾಳಾಗಿ ಇಟ್ಟುಕೊಂಡು ನಿಕಾಹ್ (ಮದುವೆ) ಮತ್ತು ಮತಾಂತರಕ್ಕೆ ಒತ್ತಡ ಹೇರುತ್ತಿದ್ದ ಎಂದು ತಿಳಿಸಿದ್ದಾಳೆ. ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಸೋಮವಾರ (ಡಿಸೆಂಬರ್ 26, 2022) ದಾಲ್ಸಿಂಗ್ ಸರಾಯ್ ರೈಲು ನಿಲ್ದಾಣದಲ್ಲಿ ಆರೋಪಿಯ ಹಿಡಿತದಿಂದ ಸಂತ್ರಸ್ತೆಯನ್ನು ಬಂಧಮುಕ್ತ ಮಾಡಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಸಮಸ್ತಿಪುರದ ತಾಜ್ಪುರದ ನಿವಾಸಿ ಮೊಹಮ್ಮದ್ ಇಜಹಾರ್, ಕೋಲ್ಕತ್ತಾದ ಟಿಟಾರ್ಗಢ್ ಪರಗಣದಿಂದ ಸಂತ್ರಸ್ತೆಯನ್ನು ಸೋಶಿಯಲ್ ಮೀಡಿಯಾ ಮೂಲಕ ಪರಿಚಯವಾಗಿದ್ದ. ಫೇಸ್ ಬುಕ್ ನಲ್ಲಿ ಇಜಹಾರ್ ತನ್ನ ಅಕೌಂಟನ್ನ ರಾಕೇಶ್ ಎಂಬ ಹೆಸರಿನಿಂದ ಕ್ರಿಯೇಟ್ ಮಾಡಿದ್ದ ಎನ್ನಲಾಗಿದೆ. ಕೆಲವೇ ದಿನಗಳಲ್ಲಿ ಇಬ್ಬರೂ ಹತ್ತಿರವಾದರು. ಮೇ 2022 ರಲ್ಲಿ, ಇಜಹಾರ್ ರಾಕೇಶ್ ವೇಷದಲ್ಲಿ ಯುವತಿಯನ್ನ ಭೇಟಿಯಾಗಲು ಕೋಲ್ಕತ್ತಾಗೆ ಬಂದನು. ಇಲ್ಲಿ ಇಬ್ಬರೂ ಮೊದಲ ಬಾರಿಗೆ ಭೇಟಿಯಾದರು. ಕೆಲ ಸಮಯದ ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು.
ಮೇ 2022 ರಲ್ಲಿ, ಮೊಹಮ್ಮದ್ ಇಜಹಾರ್ ಹಿಂದೂ ಯುವತಿಯನ್ನ ಕೋಲ್ಕತ್ತಾದಿಂದ ಬಿಹಾರದ ಸಮಸ್ತಿಪುರಕ್ಕೆ ಕರೆತಂದನು. ಸಂತ್ರಸ್ತೆಯ ಪ್ರಕಾರ, ತಾಜ್ಪುರಕ್ಕೆ ಬಂದ ನಂತರ ರಾಕೇಶ್ ಮುಸ್ಲಿಂ ಹಾಗು ಇಜಹಾರ್ ಗಡ ಈಗಾಗಲೇ ಮದುವೆಯಾಗಿದ್ದು 2 ಮಕ್ಕಳ ತಂದೆ ಎಂದು ಗೊತ್ತಾಗಿದೆ. ಸಂತ್ರಸ್ತೆ ತನ್ನ ಮನೆಗೆ ವಾಪಸ್ ಹೋಗುತ್ತೇನೆ ಎಂದು ಒತ್ತಾಯಿಸಿದಾಗ ಇಜಹಾರ್ ಆಕೆಯನ್ನ ಥಳಿಸಿದ್ದಾನೆ. ಆಕೆಯ ಫೋನ್ ಒಡೆದಿದ್ದಾನೆ. ಏತನ್ಮಧ್ಯೆ, ಇಜಹಾರ್ ಸಂತ್ರಸ್ತೆಯ ಮೇಲೆ ಇಸ್ಲಾಂಗೆ ಮತಾಂತರಗೊಳ್ಳಲು ಮತ್ತು ತನ್ನನ್ನು ಮದುವೆಯಾಗುವಂತೆ ಒತ್ತಡವನ್ನು ಮುಂದುವರೆಸಿದನು. ಮೊಹಮ್ಮದ್ ಇಝಾರ್ ಸಂತ್ರಸ್ತೆಯನ್ನು ಇಸ್ಲಾಂಗೆ ಮತಾಂತರಿಸಿ ಆಕೆಯನ್ನ ಸೂಫಿಯಾ ಖಾತೂನ್ ಎಂದು ಮರುನಾಮಕರಣ ಮಾಡಲು ಬಯಸಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಸುಮಾರು 10 ದಿನಗಳ ಹಿಂದೆ ಸಂತ್ರಸ್ತೆ ಹಾಗೋ ಹೀಗೋ ಮೊಹಮ್ಮದ್ ಇಜಹಾರ್ನ ಫೋನ್ ಅನ್ನು ತೆಗೆದುಕೊಂಡು ತನ್ನ ತಾಯಿಗೆ ಈ ಬಗ್ಗೆ ತಿಳಿಸಿದ್ದಳು ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಪಡೆದ ನಂತರ, ಯುವತಿಯ ತಾಯಿ ಕೋಲ್ಕತ್ತಾದ ನಾಥೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ಸಮಸ್ತಿಪುರದ ತಾಜ್ಪುರದಲ್ಲಿ ತನ್ನ ಮಗಳನ್ನು ಒತ್ತೆಯಾಳಾಗಿ ಇರಿಸಿರುವ ಬಗ್ಗೆ ಮಾಹಿತಿ ನೀಡಿದರು. ಕೋಲ್ಕತ್ತಾ ಪೊಲೀಸರ ಮಾಹಿತಿ ಮೇರೆಗೆ ಬಿಹಾರದ ತಾಜ್ಪುರ ಪೊಲೀಸರು ಯುವತಿಯನ್ನ ಪತ್ತೆ ಹಚ್ಚಿ ಪೊಲೀಸ್ ಠಾಣೆಯಲ್ಲಿ ಇರಿಸಿದ್ದರು.
ಮಗಳು ಸಿಕ್ಕಿದ್ದಾಳೆ ಎಂಬ ಮಾಹಿತಿ ಪಡೆದ ಸಂತ್ರಸ್ತೆಯ ತಾಯಿ ಸಮಸ್ತಿಪುರ ತಲುಪಿದರು. ಇಲ್ಲಿ ಅವರಿಗೆ ಮಗಳನ್ನು ಒಪ್ಪಿಸಲಾಯಿತು. ಸಂತ್ರಸ್ತೆ ತನ್ನ ತಾಯಿಯೊಂದಿಗೆ ಕೋಲ್ಕತ್ತಾಗೆ ಹಿಂತಿರುಗುತ್ತಿದ್ದಾಗ ಮೊಹಮ್ಮದ್ ಇಜಹಾರ್ನ ಹಿಂಬಾಲಕರು ಮತ್ತೆ ದಾಲ್ಸಿಂಗ್ ಸರಾಯ್ ನಿಲ್ದಾಣದಲ್ಲಿ ಆಕೆಯನ್ನ ಸುತ್ತುವರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆಗ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಿಗೆ ವಿಷಯ ತಿಳಿಯಿತು. ಕೂಡಲೇ ಕಾರ್ಯಕರ್ತರು ರೇಲ್ವೆ ನಿಲ್ದಾಣ ತಲುಪಿದರು. ವಿಎಚ್ಪಿ ಕಾರ್ಯಕರ್ತರು ತಾಯಿ ಮತ್ತು ಮಗಳನ್ನು ಇಜಹಾರ್ನ ಹಿಡಿತದಿಂದ ಮುಕ್ತಗೊಳಿಸಿದರು.
ವಿಎಚ್ಪಿ ಪದಾಧಿಕಾರಿಗಳ ಪ್ರಕಾರ, ಇಷ್ಟೆಲ್ಲಾ ಕಿರುಕುಳ ನೀಡಿದ ನಂತರವೂ ಯುವತಿ ಹಿಂದೂ ಧರ್ಮವನ್ನು ತೊರೆದಿಲ್ಲ, ಆದ್ದರಿಂದ ಆಕೆಯನ್ನ ಗೌರವಿಸಿ ಸುರಕ್ಷಿತವಾಗಿ ಕೋಲ್ಕತ್ತಾಕ್ಕೆ ಕಳುಹಿಸಲಾಗುವುದು ಎಂದಿದ್ದಾರೆ. ಇಲ್ಲಿ ಸಂತ್ರಸ್ತೆ ಆರೋಪಿ ಮೊಹಮ್ಮದ್ ಇಜಹಾರ್ ವಿರುದ್ಧ ತಾಜ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಇಜಹಾರ್ ಕುಟುಂಬದ ಸದಸ್ಯರನ್ನೂ ಹೆಸರಿಸಲಾಗಿದೆ. ಈ ಕುರಿತು ಠಾಣಾ ಪ್ರಭಾರಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.