4 ಲಕ್ಷ ವರ್ಷಗಳಷ್ಟು ಹಳೆಯ ವೈರಸ್‌ನ್ನ ಜೀವಂತ ಮಾಡುತ್ತಿದೆ ರಷ್ಯಾ: ಮನುಷ್ಯನ ದೇಹದಲ್ಲಿಲ್ಲ ಇದರಿಂದ ಬಚಾವಾಗುವುಷ್ಟು ಇಮ್ಯುನಿಟಿ ಪವರ್, ಬರಲಿದೆ ಮತ್ತೊಂದು ಮಹಾಮಾರಿ

in Uncategorized 23,948 views

ರಷ್ಯಾದಲ್ಲಿ 4 ಲಕ್ಷ ವರ್ಷಗಳಷ್ಟು ಹಳೆಯದಾದ ವೈರಸ್ ಜೀವಂತಗೊಳಿಸಲಾಗುತ್ತಿದೆ. ಸೈಬೀರಿಯಾದ ನಗರವಾದ ನೊವೊಸಿಬಿರ್ಸ್ಕ್‌ನಲ್ಲಿ ಒಂದು ಬಯೊವೆಪನ್ಸದ ಲ್ಯಾಬ್ ಈ ಕುರಿತು ಕಾರ್ಯನಿರ್ವಹಿಸುತ್ತಿದೆ. ಈ ವೈರಸ್‌ನಿಂದಾಗಿ, ಹಿಮಯುಗದ ಬೃಹದ್ಗಜಗಳು (mammoth) ಮತ್ತು ಪ್ರಾಚೀನ ಘೇಂಡಾಮೃಗಗಳ ಅಸ್ತಿತ್ವವು ಕೊನೆಗೊಂಡಿತ್ತು ಎಂದು ಈ ಪ್ರಯೋಗಾಲಯದ ವಿಜ್ಞಾನಿ ಹೇಳುತ್ತಾರೆ.

Advertisement

ಏನಿದು 4 ಲಕ್ಷ ವರ್ಷಗಳಷ್ಟು ಹಳೆಯ ವೈರಸ್ ಹಾಗು ಈ ವೈರಸ್ ಸೃಷ್ಟಿಸಿದ್ದ ನಷ್ಟ ಎಂಥದ್ದು?

ದಿ ಸನ್ ವರದಿಯ ಪ್ರಕಾರ, ರಷ್ಯಾದ ಯಾಕುಟಿಯಾ ಎಂಬ ಸ್ಥಳದಲ್ಲಿ ಲಕ್ಷಾಂತರ ವರ್ಷಗಳ ಹಿಂದೆ ಸತ್ತ ಬೃಹದ್ಗಜಗಳು (mammoth) ಮತ್ತು ಘೇಂಡಾಮೃಗಗಳ ದೇಹಗಳು ಪತ್ತೆಯಾಗಿವೆ. ಈ ಸ್ಥಳದ ತಾಪಮಾನ -55 ಡಿಗ್ರಿಗಿಂತ ಕಡಿಮೆಯಿದೆ.

4 ಲಕ್ಷ ವರ್ಷಗಳ ಕಾಲ ಹಿಮದಡಿಯಲ್ಲಿ ಹೂತುಹೋಗಿರುವ ಈ ಪ್ರಾಣಿಗಳ ಮೃತ ದೇಹಗಳು ಈಗಲೂ ಸುರಕ್ಷಿತವಾಗಿರಲು ಇದೇ ಕಾರಣ. ಸಂಶೋಧನೆಯ ಸಮಯದಲ್ಲಿ, ವಿಜ್ಞಾನಿ ಮ್ಯಾಮತ್ನ ದೇಹದಿಂದ ಈ ಅಪಾಯಕಾರಿ ವೈರಸ್ ಸಿಕ್ಕಿತ್ತು.

ಈ ವೈರಸ್‌ಗಳಿಂದಾಗಿ, ಹಿಮಯುಗದಲ್ಲಿ ಸಾಂಕ್ರಾಮಿಕ ರೋಗ ಹರಡಿತ್ತು. ಇದರಲ್ಲಿ ನೂರಾರು ದೊಡ್ಡ ಪ್ರಾಣಿಗಳು ಒಟ್ಟಾಗಿ ಕೊಲ್ಲಲ್ಪಟ್ಟಿದ್ದವು ಎಂದು ಹೇಳಲಾಗುತ್ತಿದೆ.

ರಷ್ಯಾದ ಲ್ಯಾಬ್ ನಲ್ಲಿ ಈ ವೈರಸ್‌ನ್ನ ಮತ್ತೆ ಜೀವಂತಗೊಳಿಸಿತ್ತಿರುವ ಕಾರಣ?

ಸೈಬೀರಿಯಾದ ನಗರವಾದ ನೊವೊಸಿಬಿರ್ಸ್ಕ್‌ನಲ್ಲಿ ಒಂದು ಬಯೋವೆಪನ್ಸ್ ಲ್ಯಾಬ್ ಇದೆ. ರಷ್ಯಾದ ಜನರು ಈ ಲ್ಯಾಬ್ ಅನ್ನು ‘ವೆಕ್ಟರ್ ಸ್ಟೇಟ್ ರಿಸರ್ಚ್ ಸೆಂಟರ್ ಆಫ್ ವೈರಾಲಜಿ’ ಎಂಬ ಹೆಸರಿನಿಂದಲೂ ಕರೆಯತ್ತಾರೆ.

ಇದೇ ಲ್ಯಾಬ್ ನಲ್ಲಿ, ವಿಜ್ಞಾನಿಗಳು ಈ ವೈರಸ್ ಅನ್ನು ಜೀವಂತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ವೈರಸ್‌ಗಳು ಹಿಮಯುಗದಲ್ಲಿ ಬೃಹದ್ಗಜಗಳು ಮತ್ತು ಪ್ರಾಚೀನ ಘೇಂಡಾಮೃಗಗಳ ಸಾವಿಗೆ ಕಾರಣವಾಗಿದ್ದವು ಎಂದು ಸಂಶೋಧನಾ ವಿಜ್ಞಾನಿಗಳು ಹೇಳುತ್ತಾರೆ.

ಈ ಅಪಾಯಕಾರಿ ಸಾಂಕ್ರಾಮಿಕ ವೈರಸ್ ಬಗ್ಗೆ ತಿಳಿದುಕೊಳ್ಳಲು ಮತ್ತೊಮ್ಮೆ ಜೀವಂತಗೊಳಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ರಷ್ಯಾದ ಈ ರಿಸರ್ಚ್ ನಿಂದಾಗಿ ಜಗತ್ತಿನಾದ್ಯಂತ ಮತ್ತೊಂದು ಮಹಾಮಾರಿ ಬರಬಹುದು ಎಂಬ ಎಚ್ಚರಿಕೆ

ಸಾಮಾನ್ಯವಾಗಿ, ಈ ರೀತಿಯ ಸಂಶೋಧನೆಯು ಒಂದು ದೇಶದಲ್ಲಿ ಮಾಡಿದಾಗ, ಅದು ಪ್ರಪಂಚದಾದ್ಯಂತದ ವಿಜ್ಞಾನಿಗಳಿಗೂ ತಿಳಿದಿರುತ್ತದೆ. ಪ್ರತಿಯೊಂದು ದೇಶವು ತನ್ನ ಸಂಶೋಧನೆಯನ್ನು ಇತರ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯವನ್ನು ಪಡೆದುಕೊಂಡು ನಡೆಸುತ್ತದೆ.

ಆದರೆ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ, ಪ್ರಪಂಚದ ಉಳಿದ ವಿಜ್ಞಾನಿಗಳು ರಷ್ಯಾದ ವಿಜ್ಞಾನಿಗಳೊಂದಿಗೆ ಸಂಪರ್ಕದಲ್ಲಿಲ್ಲ. ರಷ್ಯಾ ತನ್ನ ಪ್ರಯೋಗಾಲಯದಲ್ಲಿ ಈ ವೈರಸ್ ಅನ್ನು ಜೈವಿಕ ಶಸ್ತ್ರಾಸ್ತ್ರಗಳಾಗಿ ಪರಿವರ್ತಿಸಬಹುದು ಎಂದು ಯುರೋಪಿಯನ್ ದೇಶಗಳು ಚಿಂತಿಸುತ್ತಿರುವುದಕ್ಕೆ ಇದೇ ಪ್ರಮುಖ ಕಾರಣವಾಗಿದೆ.

ಲಂಡನ್‌ನ ಕಿಂಗ್ಸ್ ಕಾಲೇಜಿನ ಬಯೋ ಸೆಕ್ಯೂರಿಟಿ ಎಕ್ಸಪರ್ಟ್ ಫಿಲಿಪಾ ಲೆಂಟ್ಜೋಸ್ ಅವರು ಮಾತನಾಡುತ್ತ, ಒಂದು ವೇಳೆ ಈ ವೈರಸ್ ಲ್ಯಾಬ್‌ನ ಹೊರಗೇನಾದರೂ ಬಂದರೆ ಜಗತ್ತಿನಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಬರಬಹುದು ಎಂದು ಎಚ್ಚರಿಸಿದ್ದಾರೆ. ಇದು ತುಂಬಾ ಅಪಾಯಕಾರಿ ಅಂದರೆ ಬೆಂಕಿಯೊಂದಿಗೆ ಆಟವಾಡಿದಂತೆ ಎಂದು ಅವರು ಹೇಳಿದರು.

‘ಈ ವೈರಸ್ ಎಷ್ಟು ಶಕ್ತಿಶಾಲಿಯೆಂದರೆ ಇದನ್ನ ಮನುಷ್ಯರು ತಡೆದುಕೊಳ್ಳಲು ಸಾಧ್ಯವಿಲ್ಲ’

ರಷ್ಯಾ ಮಾಡುತ್ತಿರುವ ಸಂಶೋಧನೆಯು ತುಂಬಾ ಅಪಾಯಕಾರಿ ಎಂದು ಫ್ರಾನ್ಸ್‌ನ ಎಕ್ಸ್-ಮಾರ್ಸಿಲೆ ಯೂನಿವರ್ಸಿಟಿಯ ನ್ಯಾಷನಲ್ ಸೆಂಟರ್ ಆಫ್ ಸೈಂಟಿಫಿಕ್ ರಿಸರ್ಚ್‌ನ ಪ್ರೊಫೆಸರ್ ಜೀನ್ ಮೈಕೆಲ್ ಕ್ಲಾವೆರಿ ಹೇಳಿದ್ದಾರೆ.

ಈ ವೈರಸ್ ಮೂಲಕ ಸೋಂಕು ಹರಡಿದರೆ, ಅದನ್ನು ತಡೆದುಕೊಳ್ಳುವಷ್ಟು ಮನುಷ್ಯನ ದೇಹದ ರೋಗನಿರೋಧಕ ಶಕ್ತಿ ಇರುವುದಿಲ್ಲ. ಇದಕ್ಕೆ ಕಾರಣವೆಂದರೆ ನಮ್ಮ ದೇಹವು 4 ಲಕ್ಷ ವರ್ಷಗಳಷ್ಟು ಹಳೆಯದಾದ ವೈರಸ್ ಅನ್ನು ಇದುವರೆಗೂ ಎಂದಿಗೂ ಎದುರಿಸಲಿಲ್ಲ ಎಂದು ಅವರು ಹೇಳಿದರು.

ಇದಕ್ಕೂ ಮೊದಲು ಸಿಕ್ಕಿತ್ತು 48 ಸಾವಿರ ವರ್ಷಗಳಷ್ಟು ಹಳೆಯದಾದ ಜಾಂಬಿ ವೈರಸ್

ಡಿಸೆಂಬರ್ 1, 2022 ರಂದು, ರಷ್ಯಾದ ಅದೇ ಯಾಕುಟಿಯಾ ಪ್ರದೇಶದ ಸರೋವರದ ಅಡಿಯಲ್ಲಿ 48,500 ವರ್ಷಗಳಷ್ಟು ಹಳೆಯದಾದ ಜಾಂಬಿ ವೈರಸ್ ಕಂಡುಬಂದಿತ್ತು. ಫ್ರೆಂಚ್ ಸಂಶೋಧಕರು ವೈರಸ್ ಅನ್ನು ಕಂಡುಹಿಡಿದಿದ್ದಾರೆ ಎಂದು ಹೇಳಿದ್ದಾರೆ.

ಜೊಂಬಿ ವೈರಸ್ ನಲ್ಲಿ 13 ಬಗೆಯ ಹೊಸ ಸೂಕ್ಷ್ಮಾಣುಗಳು ಪತ್ತೆಯಾಗಿವೆ. ಈ ಎಲ್ಲಾ ಸೂಕ್ಷ್ಮಜೀವಿಗಳು 48 ಸಾವಿರ ವರ್ಷಗಳಿಗಿಂತಲೂ ಹೆಚ್ಚು ಕಾಲ ಮಂಜುಗಡ್ಡೆಯಲ್ಲಿ ಹೆಪ್ಪುಗಟ್ಟಿದವು, ಆದರೂ ಅವುಗಳು ಸೋಂಕನ್ನು ಹರಡುವ ಸಾಮರ್ಥ್ಯವನ್ನು ಹೊಂದಿವೆ ಎಂದು ವಿಜ್ಞಾನಿಗಳು ತಿಳಿಸಿದ್ದರು.

ಈ ವೈರಸ್ ಬಗ್ಗೆ bioRxiv ಡಿಜಿಟಲ್ ಲೈಬ್ರರಿಯಲ್ಲಿ ಸಂಶೋಧನೆಯನ್ನು ಪ್ರಕಟಿಸಲಾಗಿದೆ. ಸರೋವರದಲ್ಲಿ ಹುದುಗಿರುವ ಈ ವೈರಾಣುಗಳು ಹೊರಗೆ ಬಂದು ಪರಿಸರದಲ್ಲಿ ಹರಡಿ ನಂತರ ಮನುಷ್ಯರು ಮತ್ತು ಪ್ರಾಣಿಗಳು ಅನಾರೋಗ್ಯಕ್ಕೆ ಒಳಗಾಗಬಹುದು ಎಂದು ಸಂಶೋಧನೆಯಲ್ಲಿ ತೊಡಗಿರುವ ವಿಜ್ಞಾನಿಗಳು ಹೇಳುತ್ತಾರೆ.

Advertisement
Share this on...