ಹಿಂದೂ ಮಂದಿರದ ಮೇಲೆ ಉಗುಳುವುದು, ಮನೆ ಮಾರಿ ಹೋಗು ಇಲ್ಲವಾದರೆ ಇಸ್ಲಾಂಗೆ ಮತಾಂತರವಾಗು ಎಂದು ಹಿಂದೂ ಮಹಿಳೆಯನ್ನ ಥಳಿಸಿದ ಮೂರು ಬುರ್ಖಾಧಾರಿಗಳು ಅರೆಸ್ಟ್

in Uncategorized 3,156 views

ಉತ್ತರ ಪ್ರದೇಶದ ಬಲರಾಮ್‌ಪುರದ ಜಾಫ್ರಾಬಾದ್ ಪ್ರದೇಶದಲ್ಲಿ ಹಿಂದೂ ಮಹಿಳೆಯೊಬ್ಬರು ಬಲವಂತದ ಮತಾಂತರ ಮಾಡಲು ಒತ್ತಾಯಿಸುತ್ತಿರುವ ಬಗ್ಗೆ ದೂರು ದಾಖಲಿಸಿದ್ದಾರೆ. ವರದಿಯೊಂದರ ಪ್ರಕಾರ, ಮುಸ್ಲಿಂ ಕುಟುಂಬದ ಮಹಿಳೆಯರು ತಮ್ಮ ಮನೆಯಲ್ಲಿ ನಿರ್ಮಿಸಿದ ದೇವಾಲಯದ ಮೇಲೆ ಉಗುಳಿದರು ಮತ್ತು ‘ನಿನ್ನ ಈ ದೇವಾಲಯ ಅಶುದ್ಧವಾಗಿದೆ ಈಗ ನೀನು ಮುಸ್ಲಿಮಳಾಗಿಬಿಟ್ಟೆ’ ಎಂದು ಇಸ್ಲಾಂಗೆ ಮತಾಂತರ ಮಾಡಲು ಧಮಕಿ ಹಾಕಿದ್ದಾರೆ ಎಂದು ಹಿಂದೂ ಮಹಿಳೆ ದೀಪಾ ಆರೋಪಿಸಿದ್ದಾರೆ.

Advertisement

ಕೆಲವು ದಿನಗಳ ಹಿಂದೆ, ಮಹಿಳೆ ತನ್ನ ಸುತ್ತಲಿನ ಮುಸ್ಲಿಂ ಕುಟುಂಬಗಳು ತನ್ನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಮತ್ತು ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದರು. ಮಹಿಳೆ 7 ಜನರ ವಿರುದ್ಧ ಉತ್ತರ ಪ್ರದೇಶ ಧರ್ಮ ಬದಲಾವಣೆ ನಿಷೇಧ ಕಾಯ್ದೆ-2021 ಸೇರಿದಂತೆ ಇತರ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಈ ಪೈಕಿ ಮೂವರು ಬುರ್ಖಾಧಾರಿ ಮಹಿಳೆಯರನ್ನು ಬಂಧಿಸಲಾಗಿದೆ.

ಈ ಪ್ರದೇಶವು ಮುಸ್ಲಿಮರಿಂದ ಸುತ್ತುವರಿದಿದೆ ಎಂದು ಸಂತ್ರಸ್ತೆ ದೀಪಾ ಹೇಳುತ್ತಾರೆ. ಈ ಜನರು ಮತಾಂತರವಾಗುವಂತೆ ಒತ್ತಡ ಹೇರುತ್ತಾರೆ ಮತ್ತು ಒಂದು ವೇಳೆ ಆಗದಿದ್ದರೆ ತನ್ನನ್ನ ಮನೆ ಮಾರಾಟ ಮಾಡಿ ಹೋಗು ಎನ್ನುತ್ತಿದ್ದಾರೆ. ಮುಸ್ಲಿಂ ಮಹಿಳೆಯರು ತನ್ನ ಮನೆಯ ಅಂಗಳದಲ್ಲಿರುವ ದೇವಸ್ಥಾನದ ಮೇಲೆ ಉಗುಳಿದ್ದರಿಂದ ಕಿಟಕಿಯ ಮೇಲೆ ಬಟ್ಟೆ ಹಾಕಿದ್ದೇನೆ ಎಂದು ಅವರು ಹೇಳುತ್ತಾರೆ. ಕೆಲವೊಮ್ಮೆ ಅವರು ನೀರನ್ನು ಸಹ ಎಸೆಯುತ್ತಾರೆ. ಘಟನೆಯ ವಿಡಿಯೋ ಕೂಡ ನನ್ನ ಬಳಿ ಇದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಪ್ರಕರಣದ ದೂರಿನ ಪ್ರತಿ ಪ್ರಕಾರ, ಘಟನೆ ರೆಹ್ರಾ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಜಾಫ್ರಾಬಾದ್ ಗ್ರಾಮದಲ್ಲಿ ನಡೆದಿದೆ. ಇಲ್ಲಿ ದೀಪಾ ನಿಶಾದ್ ತನ್ನ ಕುಟುಂಬದೊಂದಿಗೆ ವಾಸಿಸುತ್ತಾರೆ. ತನ್ನ ಮನೆಯ ಮೂರು ಕಡೆ ಮುಸ್ಲಿಂ ಜನಸಂಖ್ಯೆ ಇದೆ ಎನ್ನುತ್ತಾರೆ ದೀಪಾ. ಅದೇ ಗ್ರಾಮದ ಮೊಹರ್ರಾಮ, ಶಹಜಾದಿ, ಸಾಹಿಬಾ ಎಂಬ ಮಹಿಳೆಯರು ತಮ್ಮ ಮನೆಯ ಇರ್ಫಾನ್, ಸೋನು, ಅಫ್ರಿದ್ ಸೇರಿ ಹಲವು ಬಾರಿ ನನಗೆ ಥಳಿಸಿದ್ದಾರೆ ಎಂದು ದೀಪಾ ಆರೋಪಿಸಿದ್ದಾರೆ.

ದೂರಿನಲ್ಲಿ, ಅಮಿರ್ಜಾದೆ ಮತ್ತು ಇರ್ಫಾನ್ ಎಂಬ ವ್ಯಕ್ತಿಗಳು ತಮ್ಮ ಗ್ರಾಮವು ಮುಸ್ಲಿಂ ಬಾಹುಳ್ಯವಿರುವ ಪ್ರದೇಶ ಎಂದು ಹೇಳುವ ಮೂಲಕ ಸಂತ್ರಸ್ತೆಗೆ ಮನೆ ಮಾರಾಟ ಮಾಡಿ ಬೇರೆಡೆಗೆ ಹೋಗುವಂತೆ ಅಥವಾ ಇಸ್ಲಾಂಗೆ ಮತಾಂತರಗೊಳ್ಳುವಂತೆ ಬೆದರಿಕೆ ಹಾಕಿದ್ದಾರೆ. ಈ ಎರಡು ಆಯ್ಕೆಗಳಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳದಿದ್ದರೆ, ಸಂತ್ರಸ್ತೆ ಮತ್ತು ಅವಳ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗುತ್ತದೆ ಎಂದು ಆರೋಪಿಸಲಾಗಿದೆ.

ತಮ್ಮ ಮನೆಯನ್ನು ಮಾರಿ ಓಡಿಹೋಗಲಿ ಅಥವ ಇಸ್ಲಾಂಗೆ ಮತಾಂತರಗೊಳ್ಳಲು ನಿರಾಕರಿಸಿದ್ದಕ್ಕೆ ಆರೋಪಿಗಳು ತನ್ನ ಕುಟುಂಬವನ್ನು ನಿರ್ದಯವಾಗಿ ಥಳಿಸಿದ್ದಾರೆ ಎಂದು ದೂರಿನಲ್ಲಿ ದೀಪಾ ತಿಳಿಸಿದ್ದಾರೆ. ಡಿಸೆಂಬರ್ 17, 2022 ರ ಘಟನೆಯನ್ನು ಉಲ್ಲೇಖಿಸುತ್ತ, ಆ ದಿನ ಆರೋಪಿಗಳು ತನ್ನನ್ನು ಮತ್ತು ಅವಳ ಸಹೋದರಿಯನ್ನು ನಿರ್ದಯವಾಗಿ ಥಳಿಸಿದ್ದಾರೆ ಎಂದು ದೀಪಾ ಹೇಳಿದರು. ದೀಪಾ ಕಿರುಕುಳ ನೀಡುತ್ತ ಅಮೀರ್ಜಾದೆ ತನ್ನ ಮೊಬೈಲ್ ನಂಬರ್ ನೀಡಿ ತನ್ನೊಂದಿಗೆ ಮಾತನಾಡುವಂತೆ ಒತ್ತಾಯಿಸಿದ್ದಾನೆ. ಈ ದೂರನ್ನು ಡಿಸೆಂಬರ್ 20, 2022 ರಂದು ನೀಡಲಾಗಿದೆ.

Advertisement
Share this on...