“ಆ ಅಲ್ಲಾಹ್ ನಮಗೆ ಹೆಣ್ಣುಮಕ್ಕಳನ್ನ ಸೃಷ್ಟಿಸಲೇಬಾರದಿತ್ತು, ಪ್ರಾಣಿಗಳಿಗಿಂತ ಕಡೆಯಾಗಿ ನಮ್ಮ ಜೊತೆ ಇವರು ನಡೆದುಕೊಳ್ತಿದಾರೆ”: ಕಣ್ಣೀರಿಟ್ಟ ಮುಸ್ಲಿಂ ಮಹಿಳೆಯರು

in Uncategorized 2,890 views

ಅಫ್ಘಾನಿಸ್ತಾನವನ್ನು ತಮ್ಮ‌ ತೆಕ್ಕೆಗೆ ತೆಗೆದುಕೊಂಡ ನಂತರ, ತಾಲಿಬಾನ್ ಅಲ್ಲಿನ ಇಸ್ಲಾಮಿಕ್ ಕಾನೂನಿನ ಷರಿಯಾದ ಅಡಿಯಲ್ಲಿ ಕಠಿಣ ನಿಯಮಗಳನ್ನು ವಿಧಿಸಿದೆ. ಕಳೆದ ವಾರ, ತಾಲಿಬಾನ್ ಮಹಿಳೆಯರಿಗೆ ಉನ್ನತ ಶಿಕ್ಷಣ ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಿತ್ತು. ಅಂದಿನಿಂದ, ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿರುವ ಮಹಿಳೆಯರ ಸ್ಥಿತಿಯ ಬಿಕ್ಕಟ್ಟು ಮತ್ತಷ್ಟು ದಯನೀಯವಾಗಿದೆ. ಸದ್ಯದ ಪರಿಸ್ಥಿತಿಗೆ ಸಂಬಂಧಿಸಿದಂತೆ ಅಫ್ಘಾನಿಸ್ತಾನದ ಮಹಿಳೆಯೊಬ್ಬರು ಅಲ್ಲಾಹ್ ಹೆಣ್ಣುಮಕ್ಕಳನ್ನ ಸೃಷ್ಟಿಸದಿದ್ದರೇ ಒಳ್ಳೆಯದಿತ್ತು ಎಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.

ವಾಸ್ತವವಾಗಿ, ಅಮೇರಿಕಾ ಅಫ್ಘಾನಿಸ್ತಾನದಿಂದ ತನ್ನ ಪಡೆಗಳನ್ನು ಹಿಂದೆ ಕರೆಸಿಕೊಂಡ ನಂತರ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿತು. ಅಂದಿನಿಂದ, ತಾಲಿಬಾನ್ ಮಹಿಳೆಯರು ಉದ್ಯಾನವನಗಳಿಗೆ ಭೇಟಿ ನೀಡುವುದನ್ನು, ಶಾಲೆಗೆ ಹೋಗುವುದನ್ನು, ಸಾರ್ವಜನಿಕವಾಗಿ ತಮ್ಮ ಮುಖವನ್ನು ಮುಚ್ಚಿಕೊಳ್ಳಲೇಬೇಕು ಮತ್ತು ಪುರುಷ ಸಂಗಾತಿಯಿಲ್ಲದೆ ಹೊರಗೆ ಹೋಗುವುದನ್ನು ನಿಷೇಧಿಸುವ ಆದೇಶಗಳನ್ನು ಹೊರಡಿಸಿದೆ. ಇದಾದ ನಂತರ ಇದೀಗ ತಾಲಿಬಾನ್ ಮಹಿಳೆಯರ ಉನ್ನತ ಶಿಕ್ಷಣವನ್ನೂ ನಿಷೇಧಿಸಿದೆ.

Advertisement

ಈ ನಿಷೇಧದ ಬಗ್ಗೆ, 19 ವರ್ಷದ ಅಫ್ಘಾನಿಸ್ತಾನದ ಮಹಿಳೆ ತಾನು ಅಧ್ಯಯನ ಮಾಡಲು ವಿಶ್ವವಿದ್ಯಾಲಯಕ್ಕೆ ಹೋಗಲು ಬಯಸುತ್ತೇನೆ. ಆದರೆ ತಾಲಿಬಾನಿನ ಈ ನಿಷೇಧದ ನಂತರ ನಾನು ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.. ತಾಲಿಬಾನ್ ಸರ್ಕಾರದ ನಿರ್ಧಾರದ ಬಗ್ಗೆ ದುಃಖ ವ್ಯಕ್ತಪಡಿಸಿದ ಅವರು, “ಅಲ್ಲಾಹನು ಎಂದಿಗೂ ಮಹಿಳೆಯನ್ನ ಸೃಷ್ಟಿಸಲೇಬಾರದಿತ್ತು ಎಂದು ನಾನು ಬಯಸುತ್ತೇನೆ. ನಾವು ಈ ರೀತಿ ದುರದೃಷ್ಟಕರ ಜೀವನ ಬಾಳುವುದಕ್ಕಿಂತ ಸಾಯುವುದೇ ಉತ್ತಮ. ನಮ್ಮನ್ನು ಪ್ರಾಣಿಗಳಿಗಿಂತ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ಪ್ರಾಣಿಗಳು ತಮ್ಮಿಷ್ಟದ ಪ್ರಕಾರ ಎಲ್ಲಿಗೆ ಬೇಕಾದರೂ ಹೋಗಬಹುದು, ಆದರೆ ನಾವು ಹೆಣ್ಣುಮಕ್ಕಳು ನಮ್ಮ ಮನೆಯಿಂದ ಹೊರಬರುವ ಸ್ವಾತಂತ್ರ್ಯವನ್ನೂ ಹೊಂದಿಲ್ಲ” ಎಂದಿದ್ದಾಳೆ.

ತಾಲಿಬಾನ್ ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಈ ಪ್ರತಿಭಟನೆಯ ಹಲವು ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪ್ರತಿಭಟನಾನಿರತ ಹುಡುಗಿಯರು ಮಾತನಾಡುತ್ತ, “ತಾಲಿಬಾನ್‌ಗಳು ಯುವತಿಯರನ್ನು ವಿಶ್ವವಿದ್ಯಾಲಯದಿಂದ ಹೊರಹಾಕಿದರು. ಹೊರಗಿರುವ ಗೌರವಾನ್ವಿತ ಜನರು, ದಯವಿಟ್ಟು ನಮ್ಮನ್ನು ಬೆಂಬಲಿಸಿ, ಎಲ್ಲರಿಗೂ ಹಕ್ಕುಗಳು ಸಿಗುವಂತೆ ಮಾಡಿ ಅಥವಾ ಯಾರಿಗೂ ಯಾವ ಹಕ್ಕುಗಳು ಸಿಗದಂತಾದರೂ ಮಾಡಿ” ಎಂದರು.

ವರದಿಯ ಪ್ರಕಾರ, ರಾಜಧಾನಿ ಕಾಬೂಲ್‌ನಲ್ಲಿ ನಡೆದ ಪ್ರತಿಭಟನೆಯ ನಂತರ ಪ್ರತಿಭಟನಾನಿರತ ಯುವತಿಯರನ್ನ ತಾಲಿಬಾನ್ ಸರ್ಕಾರವು ಬಂಧಿಸಿತು. ಇವರಲ್ಲಿ ಕೆಲವರನ್ನು ನಂತರ ಬಿಡುಗಡೆ ಮಾಡಲಾಯಿತು. ಅದೇ ಸಮಯದಲ್ಲಿ, ತಾಲಿಬಾನ್ ಭದ್ರತಾ ಅಧಿಕಾರಿಗಳು ತಮ್ಮ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಪ್ರತಿಭಟಿಸುವ ಮಹಿಳೆಯರ ಮೇಲೆ ಹ-ಲ್ಲೆ ನಡೆಸುತ್ತಿರುವಂತಹ ಕೆಲವು ವೀಡಿಯೊಗಳು ಸಹ ಹೊರಬಂದಿವೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮಹಿಳೆಯರ ಮೇಲೆ ಹೇರಿರುವ ನಿಷೇಧದ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಇಷ್ಟೇ ಅಲ್ಲ, ಯುಎನ್ ಅಫ್ಘಾನಿಸ್ತಾನದಲ್ಲಿ ಅನೇಕ ಕಾರ್ಯಕ್ರಮಗಳನ್ನು ಸಹ ನಿಲ್ಲಿಸಿದೆ. ಅದೇ ಸಮಯದಲ್ಲಿ, ಈ ನಿರ್ಬಂಧಗಳಿಂದಾಗಿ, ವಿಶ್ವಸಂಸ್ಥೆಯು ಇತರ ಕೆಲವು ವಿಷಯಗಳನ್ನು ಸಹ ನಿಷೇಧಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಈ ಎಚ್ಚರಿಕೆಯಿಂದಾಗಿ ವಿಶ್ವಸಂಸ್ಥೆಯು ಅಫ್ಘಾನಿಸ್ತಾನಕ್ಕೆ ಸಿಗುವ ಫಂಡಿಂಗ್‌ನ್ನೂ ನಿಷೇಧಿಸಬಹುದು ಎಂದು ಹೇಳಲಾಗುತ್ತಿದೆ.

Advertisement
Share this on...