ಇಸ್ಲಾಂ ಧಿಕ್ಕರಿಸಿ ಸಪ್ತಪದಿ ತುಳಿಯುವ ಮೂಲಕ ಹಿಂದೂ ಯುವಕನನ್ನ ಮದುವೆಯಾಗಿ #ಜ್ಯೋತಿ ಆದ ಮುಸ್ಲಿಂ ಯುವತಿ: ಮನೆಯವರಿಂದ ನೂತನ ದಂಪತಿಗೆ…

in Uncategorized 16,615 views

ಬರೇಲಿ:

Advertisement
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಮುಸ್ಲಿಂ ಯುವತಿಯೊಬ್ಬಳು ತಾನು ಪ್ರೀತಿಸಿದ ಹಿಂದೂ ಯುವಕನ ಜೊತೆ ಜೀವನ ನಡೆಸಲು ತನ್ನ ಮನೆಬಿಟ್ಟು ದೇವಸ್ಥಾನಕ್ಕೆ ಹೋಗಿ ತನ್ನ ಪ್ರಿಯಕರನೊಂದಿಗೆ ಮದುವೆಯಾಗಿದ್ದಾಳೆ ಮದುವೆಯ ನಂತರ ಈಕೆ ತನ್ನ ಹೆಸರನ್ನೂ ಸಹ ಬದಲಾಯಿಸಿಕೊಂಡಿದ್ದಾಳೆ. ಇದಾದ ಬಳಿಕ ಯುವತಿಯ ಕುಟುಂಬಸ್ಥರು ಆಕೆಯ ಜೀವ ತೆಗೆಯಲು ಮುಂದಾಗಿದ್ದಾರೆ. ಇದೀಗ ಈ ಜೋಡಿಗೆ ನಿರಂತರವಾಗಿ ಬೆದರಿಕೆ ಹಾಕಲಾಗುತ್ತಿದೆ.

ಮತ್ತೊಂದೆಡೆ ಕುಟುಂಬಸ್ಥರು ಯುವತಿ ಅಪ್ರಾಪ್ತೆ ಎಂದು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಇದೀಗ ಯುವಕನ ಕುಟುಂಬದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಈಗ ಯುವತಿ ತನ್ನ ಆಧಾರ್ ಕಾರ್ಡ್ ತೋರಿಸಿ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದು, ರಕ್ಷಣೆ ನೀಡುವಂತೆ ಉನ್ನತಾಧಿಕಾರಿಗಳಿಗೆ ಮನವಿ ಮಾಡಿದ್ದಾಳೆ. ಯುವಕ ಹಾಗೂ ಯುವತಿ ಒಂದೇ ಗ್ರಾಮದವರಾದ ಕಾರಣ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ.

ಮಾಹಿತಿಯ ಪ್ರಕಾರ, ಮುಸ್ಲಿಂ ಯುವತಿಯೊಬ್ಬಳು ಹಿಂದೂ ಯುವಕನನ್ನು ವಿವಾಹವಾದ ಪ್ರಕರಣವು ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಿಂದ ವರದಿಯಾಗಿದೆ. ವಾಸ್ತವವಾಗಿ, ಜೀನತ್ ತನ್ನದೇ ಗ್ರಾಮದ ಹಿಂದೂ ಯುವಕನನ್ನು ಪ್ರೀತಿಸುತ್ತಿದ್ದಳು. ಇದಾದ ನಂತರ ಇಬ್ಬರೂ ದೇವಸ್ಥಾನದಲ್ಲಿ ವಿವಾಹವಾದರು. ಮದುವೆಯ ನಂತರ ಜೀನತ್ ತನ್ನ ಹೆಸರನ್ನು ಜ್ಯೋತಿ ಶರ್ಮಾ ಎಂದು ಬದಲಾಯಿಸಿಕೊಂಡಿದ್ದಾಳೆ. ಈ ವಿಷಯ ಯುವತಿಯ ಮನೆಯವರಿಗೆ ತಿಳಿದಾಗ ಈ ಜೋಡಿಗೆ ಬೆದರಿಕೆ ಹಾಕಿದ್ದಾರೆ.

ಜೀನತ್ ಮನೆಯವರು ಧಮಕಿ ಹಾಗು ಬೆದರಿಸಲಾರಂಭಸಿದಾಗ ಈ ಜೋಡಿ ಓಡಿ ಹೋಗಿದ್ದಾರೆ. ಇದಾದ ನಂತರ, ಯುವತಿಯ ತಾಯಿ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನ್ನ ಮಗಳು ಅಪ್ರಾಪ್ತೆ ಎಂದು ಹೇಳಿದ್ದಾಳೆ. ಸ್ಥಳೀಯ ಪೊಲೀಸರು ಯುವಕನ ಕುಟುಂಬಸ್ಥರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಹತಾಶಳಾದ ಜೀನತ್ ನಿಂದ ಜ್ಯೋತಿ ಶರ್ಮಾ ಆದ ಯುವತಿ ತನ್ನ ಆಧಾರ್ ಕಾರ್ಡ್ ನ ವೀಡಿಯೋವನ್ನು ವೈರಲ್ ಮಾಡಿದ್ದು, ರಕ್ಷಣೆ ನೀಡುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದಾಳೆ. ಯುವಕ ಹಾಗೂ ಯುವತಿ ಒಂದೇ ಗ್ರಾಮದವರಾದ ಕಾರಣ ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ.

ಸಂಪೂರ್ಣ ಪ್ರಕರಣದ ವಿವರ

ಕ್ಯಾಂಟ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರ ನಿವಾಸಿಯಾದ ಜೀನತ್, ತನ್ನ ತಂದೆ 3 ವರ್ಷಗಳ ಹಿಂದೆ ನಿಧನರಾದರು. ಅವಳು 6 ಒಡಹುಟ್ಟಿದವರಲ್ಲಿ ಎರಡನೆಯವಳು. ತಂದೆಯ ಮರಣದ ನಂತರ, ತನ್ನದೇ ಸಮುದಾಯದ ಯುವಕ ಮನೆಗೆ ಭೇಟಿ ನೀಡಲು ಪ್ರಾರಂಭಿಸಿದ. ಯುವಕ ತನ್ನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಎಂದು ಜೀನತ್ ಹೇಳುತ್ತಾಳೆ. ಈ ಬಗ್ಗೆ ತಾಯಿಗೆ ದೂರು ನೀಡಿದಾಗ ತಾಯಿ ಕೂಡ ಅದೇ ಯುವಕನಿಗೆ ಬೆಂಬಲ ನೀಡಿ ಇವನನ್ನೇ ಮದುವೆಯಾಗು ಎಂದು ಹೇಳಿದ್ದಾಳೆ.

ಈ ಸಂದರ್ಭದಲ್ಲಿ ಜೀನತ್ ಗ್ರಾಮದ ಸಚಿನ್ ಶರ್ಮಾ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಸಚಿನ್ ಜೀನತ್‌ಗೆ ಮದುವೆಯ ಪ್ರಸ್ತಾಪ ಮಾಡಿದಾಗ, ಆಕೆಯೂ ಒಪ್ಪಿಕೊಂಡಳು. ಇದಾದ ನಂತರ ಜೀನತ್ ತನ್ನ ದಾಖಲೆಗಳನ್ನೆಲ್ಲಾ (ಆಧಾರ್ ಕಾರ್ಡ್‌ನೊಂದಿಗೆ) ಮನೆಯಿಂದ ಓಡಿಹೋಗಿ ದೇವಸ್ಥಾನದಲ್ಲಿ ಸಚಿನ್ ಶರ್ಮಾ ಜೊತೆ ವಿವಾಹವಾದಳು. ಮದುವೆಯ ನಂತರ ಜೀನತ್ ತನ್ನ ಹೆಸರನ್ನು ಜ್ಯೋತಿ ಶರ್ಮಾ ಎಂದು ಬದಲಾಯಿಸಿಕೊಂಡಳು.

ತಾಯಿ ಹಾಗು ಕುಟುಂಬಸ್ಥರಿಂದ ಬೆದರಿಕೆಯ ಆರೋಪ

ಜೀನತ್‌ನಿಂದ ಜ್ಯೋತಿಯಾದ ಯುವತಿ ಹೇಳುವ ಪ್ರಕಾರ ತನ್ನ ತಾಯಿ ಮತ್ತು ಇತರ ಕುಟುಂಬ ಸದಸ್ಯರು ಸಚಿನ್, ಅವರ ಕುಟುಂಬ ಮತ್ತು ತನಗೂ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾಳೆ. ಆಕೆ ಮನೆಗೆ ಹಿಂತಿರುಗದಿದ್ದಾಗ ಕ್ಯಾಂಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಾನು ಮತಾಂತರಗೊಂಡಿಲ್ಲ ನಮಗೆ ಯಾವ ಧರ್ಮದಲ್ಲಿ ನಂಬಿಕೆ ಇದೆಯೋ ಆ ಧರ್ಮವನ್ನ ಅನುಸರಿಸುತ್ತೇನೆ. ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ.

ಕೆಲವು ಹಿಂದೂ ಸಂಘಟನೆಗಳಿಗೆ ಈ ವಿಷಯ ತಿಳಿದಾಗ, ಅವರ ಮಧ್ಯಸ್ಥಿಕೆಯಲ್ಲಿ ಪೊಲೀಸರು ಆಧಾರ್ ಕಾರ್ಡ್‌ನೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ದಾಖಲಿಸಿಕೊಳ್ಳುವಂತೆ ಬಾಲಕಿಯನ್ನು ಕೇಳಿದ್ದಾರೆ. ಸದ್ಯ ಈ ಜೋಡಿಯ ವಿಡಿಯೋ ವೈರಲ್ ಆಗಿದ್ದು, ರಕ್ಷಣೆ ನೀಡುವಂತೆ ಪೊಲೀಸ್ ವರಿಷ್ಠರಿಗೆ ಮನವಿ ಮಾಡಿದ್ದಾರೆ.

Advertisement
Share this on...