ಪಾಕಿಸ್ತಾನದ ಕ್ವೆಟ್ಟಾದಲ್ಲಿರುವ ಹಾಜಿ ಜಾನ್ ಮೊಹಮ್ಮದ್ ಮನೆಯಲ್ಲಿ ಹೊಸ ವರ್ಷದಂದು 60 ನೇ ಮಗು ಜನಿಸಿದೆ. ಇಷ್ಟಕ್ಕೇ ತೃಪ್ತಿಯಾಗದ ಹಾಜಿ ಇನ್ನೂ ಹೆಚ್ಚು ಮಕ್ಕಳನ್ನು ಹೊಂದಲು ಬಯಸುತ್ತಾನಂತೆ. ಇನ್ನು ಹೆಚ್ಚಿನ ಮಕ್ಕಳಿಗಾಗಿ ನಾಲ್ಕನೇ ಮದುವೆ ಮಾಡಿಕೊಳ್ಳುವುದಾಗಿ ಹಾಜಿ ಹೇಳಿದ್ದಾನೆ. ಹಾಜಿ ಜಾನ್ ಮೊಹಮ್ಮದ್ ತನ್ನ ಮೂವರು ಪತ್ನಿಯರಿಂದ 60 ಮಕ್ಕಳು ಜನಿಸಿದರೆ, ಅದರಲ್ಲಿ 5 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಜಾನ್ ಮೊಹಮ್ಮದ್‌ನ ಇನ್ನುಳಿದ 55 ಮಕ್ಕಳು ಆರೋಗ್ಯವಾಗಿವೆ.
ಹೊಸ ವರ್ಷದ ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಮತ್ತೊಂದು ಮಗು ಜನಿಸಿರುವುದು ತುಂಬಾ ಖುಷಿ ತಂದಿದೆ ಎಂದು ಜಾನ್ ಮೊಹಮ್ಮದ್ ಮಾಧ್ಯಮಗಳಿಗೆ ತಿಳಿಸಿದ್ದಾನೆ. ಆ ಮಗುವಿಗೆ ಹಾಜಿ ಖುಷ್ ಖಲ್ ಖಾನ್ ಎಂದು ಹೆಸರಿಟ್ಟಿದ್ದಾನೆ. ಹಾಜಿಯ ಮೂವರು ಹೆಂಡತಿಯರು ಮತ್ತು ಎಲ್ಲಾ ಮಕ್ಕಳು ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈತ ವೃತ್ತಿಯಲ್ಲಿ ಕಾಂಪೌಂಡರ್ ಆಗಿದ್ದು, ಸ್ವಂತ ಕ್ಲಿನಿಕ್ ನಡೆಸುತ್ತಿದ್ದಾನೆ. 60 ಮಕ್ಕಳಿಗೇ ಸಾಕಾಗದೆ ಇನ್ನೂ ಹೆಚ್ಚಿನ ಮಕ್ಕಳನ್ನು ಹೊಂದಲು ಬಯಸಿದ್ದು ಇದಕ್ಕಾಗಿ ಹಾಜಿ ನಾಲ್ಕನೇ ಮದುವೆಯಾಗಲು ಹೆಣ್ಣನ್ನು ಹುಡುಕುತ್ತಿದ್ದಾನೆ. ಈಗಾಗಲೇ 60 ಮಕ್ಕಳ ತಂದೆಯಾಗಿರುವ ಹಾಜಿ 100 ಮಕ್ಕಳನ್ನು ಹೊಂದುವ ಗುರಿ ಹೊಂದಿರುವುದಾಗಿ ಹೇಳಿದ್ದಾನೆ.
ಇಷ್ಟು ಮಕ್ಕಳನ್ನ ಕೊಟ್ಟಿದ್ದಕ್ಕಾಗಿ ಹಾಜಿ ಅಲ್ಲಾಹ್‌ಗೆ ಚಿರಋಣಿಯಾಗಿದ್ದಾನೆ. ಈ ಸುದ್ದಿ ವೈರಲ್ ಆಗುತ್ತಲೇ ಸೋಶಿಯಲ್ ಮೀಡಿಯಾಗಳಲ್ಲಿ ಜನ ಸಿಕ್ಕಾಪಟ್ಟೆ ತಮಾಷೆ ಮಾಡುತ್ತಿದ್ದಾರೆ. ಒಬ್ಬ ಯೂಸರ್ ಹಾಜಿ ಬಗ್ಗೆ ಟ್ರೋಲ್ ಮಾಡುತ್ತ, “ಈಗ ಇನ್ನೂ 15 ಮಾತ್ರ ಉಳಿದಿವೆ, ಅವುಗಳನ್ನೂ ಕಂಪ್ಲೀಟ್ ಮಾಡದ್ಮೇಲೆ ಮನೆಯಲ್ಲೇ ಪ್ರೈಮರಿ ಸ್ಕೂಲ್ ತೆರೆಯಬಹುದು, ಎಲ್ಲರಿಗೂ ಒಬ್ಬೊರಂತೆ ಮ್ಯಾತ್ಸ್ ಟೀಚರ್, ಸೈನ್ಸ್ ಟೀಚರ್, ಪಿ.ಟಿ ಟೀಚರ್ & ಸೋಶಿಯಲ್ ಸ್ಟಡೀಸ್ ಟೀಚರ್ ಗಳನ್ನ ಮದುವೆಯಾಗಿ ಬಿಡು” ಎಂದಿದ್ದಾರೆ.
बस अब 15 ही और बचे है, वो भी कर लोगे तो घर में ही प्राइमरी स्कूल खोल सकते हो सब के लिए, और एक मैथ्स टीचर, साइनस टीचर, पीटी टीचर और सोशल studies टीचर से शादी कर लो।
— Free Wheeler (@RoadHound) January 3, 2023
ಎಸ್.ರಾಜಭರ್ ಎಂಬ ಯೂಸರ್, “ಮುಂದೆ ಹೋಗಿ ಹಾಜಿ ಒಂದು ಹೊಸ ಪಾಕಿಸ್ತಾನ ಕಟ್ಟುತ್ತಾನೆ” ಎಂದಿದ್ದಾರೆ.
आगे चलकर एक नया पाकिस्तान बनाएगे।
हाजी साहब— S Rajbhar (@SriBhag00021090) January 3, 2023
ಸಾತ್ವಿಕ್ ಎಂಬ ಯೂಸರ್, “ದೇಶ ಬರ್ಬಾದ್ ಆಗ್ತಿದೆ ಆದರೆ ಹಾಜಿ ಜಾನ್ ಮೊಹಮ್ಮದ್ ಜನಸಂಖ್ಯೆ ಹೆಚ್ಚಿಸುವ ಗುರಿಯಲ್ಲಿದ್ದಾನೆ” ಎಂದಿದ್ದಾರೆ.
देश कंगाली के रास्ते है, हाजी जान मोहम्मद आबादी बढ़ाने के रास्ते.
हाजी जान मोहम्मद के घर 60वें बच्चे ने लिया जन्म, पाकिस्तान के हाजी जान ने कहा, "और बच्चे पैदा करने के लिए मैं चौथी शादी करूंगा"#Pakistan #Trending
— Satwik Sharma (@SatwikJourno) January 3, 2023
ಆರೀಫ್ ಎಂಬ ಯೂಸರ್, “ಹಾಗಂದ್ರೆ ಅದನ್ನ ಮನೆ ಅಲ್ಲ ಜಿಲ್ಲೆ ಅಂತ ಘೋಷಣೆ ಮಾಡು” ಎಂದಿದ್ದಾರೆ.
फिर उसे घर नहीं जिला घोषित करदू, क्या आदमी है।😀😒
— 02 (@MeRif02) January 3, 2023
ಚಂದನ್ ಸಿಂಗ್ ಎಂಬ ಯೂಸರ್, “ಸೂಪರ್, ಛಲ ಬಿಡಬೇಡ, ತಾಲಿಬಾನ್‌ಗೆ ಬೇರೆ ಮುಸ್ಲಿಮರೊಂದಿಗೆ ಹೋರಾಡೋಕೆ ಮತ್ತಷ್ಟು ಹುಡುಗರ ಅವಶ್ಯಕತೆ ಇದೆ” ಎಂದಿದ್ದಾರೆ.
Bahot badhiya…..keep going……Taliban needs more fighter to fight with another muslims
— Chandan Singh (@Chandan74284404) January 3, 2023
— Ashish Sehgal🚩🛕🇮🇳 ॐ १०८ (@Ashish39421944) January 3, 2023
ರಕ್ಷಿತ್ ಎಂಬ ಯೂಸರ್, “ಯಾಕೆ ಆಶ್ಚರ್ಯ?, ಅವರ ಗುರಿ ಜಗತ್ತನ್ನ ಕಬ್ಜಾ ಮಾಡೋದು, ಇಂಥವರು ತಮಗಿಂತ ಹೆಚ್ಚಿನ ಸಂಖ್ಯೆಯವರಾದರೆ ತಮ್ಮ ಮುಂದಿನ ಪೀಳಿಗೆಗೆ ಏನಾಗಬಹುದು ಎಂದು ಚಿಂತಿಸಬೇಕು” ಎಂದಿದ್ದಾರೆ.
आश्चर्य किस बात का उनका लक्ष्य तय है उन्हें दुनिया पर कब्जा करना है चिंता तो दूसरों को करनी है कि जब ये उनसे तादाद में ज्यादा होंगे तो तुम्हारी आने वाली पीढ़ियों का क्या भविष्य होगा
— Rakshit Ahir (@Rakshitmukdam) January 3, 2023
ಇದನ್ನೂ ಓದಿ:
12 ಜನ ಹೆಂಡತಿಯರು, 102 ಮಕ್ಕಳು, 568 ಮೊಮ್ಮಕ್ಕಳು: ಕುಟುಂಬ ನಡೆಸೋಗ್ತಿಲ್ಲ ನಿರೋಧ್ ಬಳಸೋಣ ಅಂತ ಕೊನೆಗೂ ನಿರ್ಧಾರ ಕೈಗೊಂಡ #ಮೂಸಾ
12 ಪತ್ನಿಯರು, 102 ಮಕ್ಕಳು ಮತ್ತು 568 ಮೊಮ್ಮಕ್ಕಳನ್ನು ಹೊಂದಿರುವ ಉಗಾಂಡಾದ ರೈತ ಮೂಸಾ ಹಸಾಹಯಾ ತಮ್ಮ ಕುಟುಂಬವನ್ನು ಇನ್ನು ಮುಂದೆ ವಿಸ್ತರಿಸದಿರಲು ನಿರ್ಧರಿಸಿದ್ದಾರೆ. ಮೂಸಾ ಅವರು ವೃತ್ತಿಯಲ್ಲಿ ಕೃಷಿಕರಾಗಿದ್ದು, ಇಷ್ಟು ದೊಡ್ಡ ಕುಟುಂಬದ ದೈನಂದಿನ ಖರ್ಚು ಭರಿಸುವುದೇ ಕಷ್ಟವಾಗುತ್ತಿದೆ. ಬೆಳೆಯುತ್ತಿರುವ ಕುಟುಂಬದೊಂದಿಗೆ ಮೂಸಾ ಆದಾಯವು ನಿರಂತರವಾಗಿ ಕಡಿಮೆಯಾಗುತ್ತಿದ್ದು ಮೂಸಾ ತನ್ನ ಹೆಂಡತಿಯರಿಗೆ ಗರ್ಭನಿರೋಧಕಗಳನ್ನು ಬಳಸಲು ಸೂಚಿಸಿದ್ದಾರೆ.
ಮೂಸಾ ವಾಸಿಸುವ ಉಗಾಂಡಾದ ಲುಸಾಕಾ ನಗರದಲ್ಲಿ ಬಹುಪತ್ನಿತ್ವಕ್ಕೆ ಮಾನ್ಯತೆಯಿದೆ. ಇದೇ ಕಾರಣಕ್ಕೆ ಮೂಸಾ ಒಬ್ಬಳಾದ ನಂತರ ಮತ್ತೊಬ್ಬಳಂತೆ ಒಟ್ಟು 12 ಜನರನ್ನ ಮದುವೆಯಾಗುತ್ತಾ ಹೋದರು. ಈಗ ಮೂಸಾಗೆ 12 ಹೆಂಡತಿಯರಿದ್ದಾರೆ. ಸಂಸಾರ ಬೆಳೆದಂತೆ ಸಂಸಾರದ ಖರ್ಚುಗಳೂ ಹೆಚ್ಚಿದವು. ದಿ ಸನ್ ವರದಿಯ ಪ್ರಕಾರ, 67 ವರ್ಷದ ಮೂಸಾ ತನ್ನ ಹೆಂಡತಿಯರಿಗೆ ಗರ್ಭನಿರೋಧಕಗಳನ್ನು ಬಳಸುವಂತೆ ಸೂಚಿಸಿದ್ದಾನೆ. ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಸಾಕಾಗುವಷ್ಟು ಆಹಾರವನ್ನು ನಿರ್ವಹಿಸುವುದು ಮೂಸಾಗೆ ಕಷ್ಟಕರವಾಗುತ್ತಿದೆ. ಮೂಸಾನ ಆರ್ಥಿಕ ಸ್ಥಿತಿಯನ್ನು ನೋಡಿ ಅವನ ಇಬ್ಬರು ಹೆಂಡತಿಯರೂ ಆತನನ್ನ ಬಿಟ್ಟು ಹೋಗಿದ್ದಾರೆ.
ವರದಿಯ ಪ್ರಕಾರ, ಬಹುವಿವಾಹಗಳ ಬಗ್ಗೆ ಮೂಸಾಗೆ ಕೇಳಿದಾಗ, ಒಬ್ಬ ಪುರುಷನು ಕೇವಲ ಒಬ್ಬ ಹೆಂಡತಿಯಿಂದ ಹೇಗೆ ತೃಪ್ತನಾಗಲು ಸಾಧ್ಯ? ಹಾಗಾಗಿ 12 ಮದುವೆಯಾಗಿದ್ದೇನೆ ಎಂದು ಹೇಳಿದ್ದಾನೆ. ಮೋಸೆಸ್‌ನ ಎಲ್ಲಾ ಹೆಂಡತಿಯರು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು, ಇದಕ್ಕೆ ಕಾರಣ ತಿಳಿಸಿದ ಮೂಸಾ, ಅವರು ಒಂದೇ ಮನೆಯಲ್ಲೇ ಇದ್ದರೆ ಅವರ ಮೇಲೆ ಕಣ್ಣಿಡಬಹುದು ಮತ್ತು ನನ್ನ ಹೆಂಡತಿಯರು ಇತರ ಪುರುಷರೊಂದಿಗೆ ಸಂಬಂಧವನ್ನು ಹೊಂದಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ. ಜುಲೈಕಾ ಮೂಸಾನ ಕಿರಿಯ ಹೆಂಡತಿ. ಜುಲೈಕಾ 11 ಮಕ್ಕಳಿಗೆ ಜನ್ಮ ನೀಡಿದ್ದು, ಈಗ ಮತ್ತೆ ಮಕ್ಕಳನ್ನ ಹೆರಲು ಸಾಧ್ಯವಿಲ್ಲ ಹಾಗಾಗಿ ಗರ್ಭನಿರೋಧಕ ಮಾತ್ರೆ ಬಳಸಲಾರಂಭಿಸಿದ್ದಾಳೆ.
ಮೂಸಾನ ಹಿರಿಯ ಮಗ ತನ್ನ ಕೊನೆಯ ಅಂದರೆ ತನ್ನ ಕಿರಿಯ ತಾಯಿಗಿಂತ 21 ವರ್ಷ ದೊಡ್ಡವನು. ಮೂಸಾನ ಕಿರಿಯ ಮಗನಿಗೆ 6 ವರ್ಷ. ಕುಟುಂಬದ ಆರ್ಥಿಕ ಸ್ಥಿತಿ ಹದಗೆಡಲು ಪ್ರಮುಖ ಕಾರಣವೆಂದರೆ ಮೂಸಾನ ಆರೋಗ್ಯ ಹದಗೆಟ್ಟ ಕಾರಣ ಮೂಸಾ ಮೊದಲಿನಂತೆ ಕಷ್ಟಪಟ್ಟು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಕಳಪೆ ಆರ್ಥಿಕ ಸ್ಥಿತಿಯಿಂದಾಗಿ, ಮೂಸಾ ಇನ್ನು ಮುಂದೆ 700 ಕ್ಕಿಂತ ಹೆಚ್ಚು ಸದಸ್ಯರ ಈ ಕುಟುಂಬವನ್ನು ಹೆಚ್ಚಿಸಲು ಬಯಸುವುದಿಲ್ಲ ಎಂದು ಹೇಳಿದ್ದಾನೆ.
ಇದನ್ನೂ ಓದಿ:
6 ಮದುವೆ ಮಾಡಿಕೊಂಡು ಬರೋಬ್ಬರಿ 54 ಮಕ್ಕಳನ್ನ ಬೆವರು ಸುರಿಸಿ ಹುಟ್ಟಿಸಿ ಮಕ್ಕಳನ್ನ ಸಾಕಲಾಗದೆ ಕೊನೆಯುಸಿರೆಳೆದ ಅಬ್ದುಲ್ ಮಜೀದ್
ಪಾಕಿಸ್ತಾನವು ಈಗಾಗಲೇ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದೆ, ಅದರ ಮೇಲೆ ‘ಜನಸಂಖ್ಯಾ ಸ್ಫೋಟ’ ಅಲ್ಲಿನ ಬಡತನವನ್ನು ಮತ್ತಷ್ಟು ಹೆಚ್ಚಿಸಿದೆ. ಈಗ ಈ ಈ ಅಬ್ದುಲ್ ಮಜೀದ್ ಚಚ್ಚಾನನ್ನೇ ನೋಡಿ! ಈತ 6 ಮದುವೆಗಳನ್ನು ಮಾಡಿಕೊಂಡಿದ್ದ. ಕಷ್ಟಪಟ್ಟು ಬೆವರು ಸುರಿಸಿ 54 ಮಕ್ಕಳನ್ನೂ ಹುಟ್ಟಿಸಿದ್ದ. ಆದರೆ ಇಂತಹ ದೊಡ್ಡ ಕುಟುಂಬದ ಹೊರತಾಗಿಯೂ ಹೆಂಡತಿ ಮಕ್ಕಳನ್ನು ಸಾಕಲು ಜೀವನದುದ್ದಕ್ಕೂ ಹೆಣಗಾಡಿದ ಅಬ್ದುಲ್ ಮಜೀದ್ ಡಿಸೆಂಬರ್ 7 ರಂದು ಇಹಲೋಕ ತ್ಯಜಿಸಿದ್ದಾನೆ.
ಇಸ್ಲಾಂಬಾದ್: ಪಾಕಿಸ್ತಾನವು ಈಗಾಗಲೇ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದೆ, ಅದರ ಮೇಲೆ ‘ಜನಸಂಖ್ಯಾ ಸ್ಫೋಟ’ ಅಲ್ಲಿನ ಬಡತನವನ್ನು ಮತ್ತಷ್ಟು ಹೆಚ್ಚಿಸಿದೆ. ಈಗ ಈ ಈ ಅಬ್ದುಲ್ ಮಜೀದ್ ಚಚ್ಚಾನನ್ನೇ ನೋಡಿ! ಇಸ್ಲಾಂನಲ್ಲಿ ಒಂದಕ್ಕಿಂತ ಹೆಚ್ಚು ಮದುವೆಗಳನ್ನು ಮಾಡಿಕೊಳ್ಳುವ ಸ್ವಾತಂತ್ರ್ಯದ ದುರುಪಯೋಗ ಪಡೆದ ಈತ 6 ಮದುವೆಗಳನ್ನು ಮಾಡಿಕೊಂಡಿದ್ದ. ಕಷ್ಟಪಟ್ಟು ಬೆವರು ಸುರಿಸಿ 54 ಮಕ್ಕಳನ್ನೂ ಹುಟ್ಟಿಸಿದ್ದ. ಆದರೆ ಇಂತಹ ದೊಡ್ಡ ಕುಟುಂಬದ ಹೊರತಾಗಿಯೂ ಹೆಂಡತಿ ಮಕ್ಕಳನ್ನು ಸಾಕಲು ಜೀವನದುದ್ದಕ್ಕೂ ಹೆಣಗಾಡಿದ ಅಬ್ದುಲ್ ಮಜೀದ್ ಈಗ ಡಿಸೆಂಬರ್ 7 ರಂದು ಇಹಲೋಕ ತ್ಯಜಿಸಿದ್ದಾನೆ ಎಂದು ತಿಳಿದು ಬಂದಿದೆ.
ಅಬ್ದುಲ್ ಮಜೀದ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ನೋಶ್ಕಿ ಜಿಲ್ಲೆಯ ನಿವಾಸಿ ಅಬ್ದುಲ್ (75) ಟ್ರಕ್ ಚಾಲಕನಾಗಿದ್ದ. ಆತನ ಮೇಲೆ ಕುಟುಂಬದ ಹೊರೆ ಎಷ್ಟಿತ್ತೆಂದರೆ ವೃದ್ಧಾಪ್ಯದಲ್ಲೂ ಲಾರಿ ಓಡಿಸಬೇಕಾಗಿತ್ತು. ಅವರ ಮಗ ಶಾ ವಾಲಿ ಪ್ರಕಾರ, ಆತನ ಅಬ್ಬು ಸಾಯುವ 5 ದಿನಗಳ ಮುನ್ನವೂ ಟ್ರಕ್ ಓಡಿಸುತ್ತಿದ್ದ.
ಬಹುತೇಕ ಮಕ್ಕಳು ನಿರುದ್ಯೋಗಿಗಳು, ಸಾಯುವವರೆಗೂ ಲಾರಿ ನಡೆಸುತ್ತಿದ್ದ ಅಬ್ದುಲ್
ಪಾಕಿಸ್ತಾನದ ಹೆಚ್ಚುತ್ತಿರುವ ಜನಸಂಖ್ಯೆಯು ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ. ಇದರ ಪರಿಣಾಮ ಜನರು ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ಅಬ್ದುಲ್ ಮಜೀದ್ ಪುತ್ರ ಶಾಹ್ ವಾಲಿ ಮಾತನಾಡಿ, ಅವರ ಕುಟುಂಬದಲ್ಲಿ ಹಲವರು ಕೆಲಸವಿಲ್ಲದೆ ಖಾಲಿ ಕುಳಿತಿದ್ದಾರೆ. ತಂದೆ ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು, ಆದರೆ ಹಣದ ಕೊರತೆಯಿಂದ ಚಿಕಿತ್ಸೆ ನೀಡಲು ಸಾಧ್ಯವಾಗಲಿಲ್ಲ ಎಂದಿದ್ದಾನೆ. ಮತ್ತೊಂದೆಡೆ, ಈ ಹಿಂದೆ ಬಂದ ಪ್ರವಾಹದಲ್ಲಿ ಮನೆ ಕೊಚ್ಚಿ ಹೋಗಿತ್ತು. ಅಬ್ದುಲ್ ಮಜೀದ್ ತನ್ನ ಜೀವನದುದ್ದಕ್ಕೂ ಟ್ರಕ್ ಓಡಿಸುತ್ತಿದ್ದ ಎಂದು ಸಂಬಂಧಿಕರು ಹೇಳುತ್ತಾರೆ. ಅಬ್ದುಲ್ ಮಜೀದ್‌ಗೆ ಟ್ರಕ್ ಓಡಿಸುವುದರಿಂದ ಪ್ರತಿ ತಿಂಗಳು 15 ರಿಂದ 25 ಸಾವಿರ ಪಾಕಿಸ್ತಾನಿ ರೂಪಾಯಿಗಳನ್ನೂ ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಹಣದಿಂದ ಇಷ್ಟು ದೊಡ್ಡ ಕುಟುಂಬದ ಖರ್ಚು ಹೇಗೆ ನಡೆಯುತ್ತಿತ್ತು ಎಂಬುದನ್ನು ಊಹಿಸಬಹುದು. ಅಬ್ದುಲ್ ಅವರ ಮಗ ಶಾ 37 ವರ್ಷದವನಾಗಿದ್ದು ಆತನೂ ಟ್ರಕ್ ಓಡಿಸುತ್ತಾನೆ.
2017 ರಲ್ಲಿ ಪಾಕಿಸ್ತಾನದ ಜನಗಣತಿಯನ್ನು ನಡೆಸಿದಾಗ, ಅಬ್ದುಲ್ ಮಜೀದ್ ಸುದ್ದಿಯಲ್ಲಿದ್ದ. ಪಾಕಿಸ್ತಾನದಲ್ಲಿ 19 ವರ್ಷಗಳ ನಂತರ ಜನಗಣತಿ ನಡೆಸಲಾಗಿತ್ತು. ಆ ಸಮಯದಲ್ಲಿ ಅಬ್ದುಲ್ 4 ಹೆಂಡತಿಯರು ಮತ್ತು 42 ಮಕ್ಕಳೊಂದಿಗೆ ವಾಸಿಸುತ್ತಿದ್ದನು. ಇಬ್ಬರು ಪತ್ನಿಯರು ಮತ್ತು 12 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಅಬ್ದುಲ್ ಮಜೀದ್ 18ನೇ ವಯಸ್ಸಿನಲ್ಲೇ ವಿವಾಹವಾಗಿದ್ದ. ಆತನ 22 ಗಂಡು ಮತ್ತು 20 ಹೆಣ್ಣು ಮಕ್ಕಳು ಕೇವಲ 7 ಕೋಣೆಗಳ ಮನೆಯಲ್ಲೇ ವಾಸಿಸುತ್ತಿದ್ದರು. ಅಬ್ದುಲ್ ಮಜೀದ್ ಅವರ ಬಹುತೇಕ ಮಕ್ಕಳು 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಕಿರಿಯ ಮಗಳಿಗೆ 7 ವರ್ಷ ಎಂದು ಹೇಳಲಾಗಿದೆ.
ಬಡತನದ ಕಾರಣ ಪ್ರಾಣ ಕಳೆದುಕೊಂಡ ಮಕ್ಕಳು
2017 ರಲ್ಲಿ ಸಂದರ್ಶನವೊಂದರಲ್ಲಿ, ಅಬ್ದುಲ್ ಮಜೀದ್ ಬಡತನ, ಹಣದ ಕೊರತೆಯಿಂದಾಗಿ ತನ್ನ ಮಕ್ಕಳಿಗೆ ಊಟ ಕೂಡ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದ. ಸರಿಯಾದ ಪೋಷಣೆಯ ಕೊರತೆಯಿಂದ ಎಷ್ಟೋ ಮಕ್ಕಳು ಸಾವನ್ನಪ್ಪಿದ್ದಾರೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ, ಮಜೀದ್ ತನ್ನ ಹಿರಿಯ ಮಗನಿಗೆ ಮಾತ್ರ ಸರಿಯಾದ ಶಿಕ್ಷಣ ಕೊಡಿಸಲು ಶಕ್ತನಾಗಿದ್ದ. ವಯಸ್ಸು ಕಳೆದಂತೆ ಸಮಸ್ಯೆಗಳು ಹೆಚ್ಚುತ್ತಲೇ ಇದ್ದವು.
ಒಂದಕ್ಕಿಂತ ಹೆಚ್ಚು ಮದುವೆಯಾಗುವ ಬಗ್ಗೆ ಭಾರತದಲ್ಲೂ ವ್ಯಕ್ತವಾಗುತ್ತಿದೆ ವಿರೋಧ
ಭಾರತದ ಬಗ್ಗೆ ಮಾತನಾಡುವುದಾದರೆ ಇತ್ತೀಚೆಗೆ, ಅಸ್ಸಾಂನ ರಾಜಕೀಯ ಪಕ್ಷ AIUDF ಅಧ್ಯಕ್ಷ ಮತ್ತು ಧುಬ್ರಿ ಸಂಸದ ಬದ್ರುದ್ದೀನ್ ಅಜ್ಮಲ್ (AIUDF Chief Badruddin Ajmak) ಹೇಳಿಕೆ ನೀಡಿದ್ದು, “ಅವರು (ಹಿಂದೂಗಳು) 40 ವರ್ಷಗಳ ನಂತರ ಮದುವೆಯಾದರೆ ಅವರ ಬಳಿ ಮಕ್ಕಳು ಹುಟ್ಟಿಸೋ ಸಾಮರ್ಥ್ಯ ಎಲ್ಲಿರುತ್ತೆ? ಮಕ್ಕಳನ್ನು ಹೊಂದಲು ಅವರು ಮುಸ್ಲಿಂ ಫಾರ್ಮುಲಾವನ್ನ ಅನುಸರಿಸಬೇಕು ಮತ್ತು ತಮ್ಮ ಮಕ್ಕಳನ್ನು 18-20 ವರ್ಷ ವಯಸ್ಸಿನಲ್ಲೇ ಮದುವೆ ಮಾಡಿಸಬೇಕು” ಎಂದಿದ್ದರು. ಅಂದರೆ ಈತನ ಅರ್ಥ ಹಿಂದುಗಳೂ ಮುಸ್ಲಿಮರಂತೆ ಒಂದಕ್ಕಿಂತ ಹೆಚ್ಚು ಮದುವೆಗಳನ್ನ ಮಾಡಿಕೊಳ್ಳಬೇಕು ಎಂಬುದಾಗಿತ್ತು. ಆದರೆ, ಬಳಿಕ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದರು. ಅದೇ ಸಮಯದಲ್ಲಿ, ಸರ್ಕಾರಗಳು ಈಗ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆಯ ಕಡೆಗೆ ಕೆಲಸ ಮಾಡುತ್ತಿವೆ. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕನಿಗೆ ಧರ್ಮ ಅಥವಾ ಜಾತಿಯನ್ನು ಲೆಕ್ಕಿಸದೆ ಸಮಾನ ಕಾನೂನು ಜಾರಿಯಾಗಲಿದೆ. ಏಕರೂಪ ನಾಗರಿಕ ಸಂಹಿತೆ ಎಲ್ಲೇ ಜಾರಿಗೆ ಬಂದರೂ ಮದುವೆ, ವಿಚ್ಛೇದನ ಹಾಗೂ ಆಸ್ತಿ ಹಂಚಿಕೆಯಲ್ಲಿ ಎಲ್ಲ ಧರ್ಮದವರಿಗೂ ಒಂದೇ ಕಾನೂನು ಅನ್ವಯವಾಗಲಿದೆ.