“ನೀನು ಕ್ರಿಶ್ಚಿಯನ್ ಆಗಿಲ್ಲ, ನಿನ್ನ ಅಂತ್ಯಸಂಸ್ಕಾರ ಮಾಡೋಕೂ ನಾವು ಬರಲ್ಲ” ಎಂದ ಮಕ್ಕಳು, “ಹಾಳಾಗಿ ಹೋಗಿ, ನನ್ನ ಸನಾತನ ಧರ್ಮ ಬಿಡಲ್ಲ” ಎಂದು ಎರಡು ಕೋಟಿಯ ಆಸ್ತಿಯನ್ನ ದೇವಾಲಯಕ್ಕೆ ದಾನ ಮಾಡಿದ ತಂದೆ

in Uncategorized 68,960 views

2016 ರಲ್ಲಿ ಚೆನ್ನೈನ ಚಿಂತಕರ ಚಾವಡಿಯಾದ ಸೆಂಟರ್ ಫಾರ್ ಪಾಲಿಸಿ ಸ್ಟಡೀಸ್ ಬಿಡುಗಡೆ ಮಾಡಿದ ವರದಿಯ ಪ್ರಕಾರ ಕ್ರಿಶ್ಚಿಯನ್ ಮತದ ಬೆಳವಣಿಗೆಗೆ ಭಾರತದ ತಮಿಳುನಾಡು ರಾಜ್ಯದಲ್ಲಿ ಅತ್ಯಂತ ಅನುಕೂಲಕರ ರಾಜ್ಯವಾಗಿದೆ ಎಂದು ಬಹಿರಂಗಪಡಿಸಿದೆ. ರಾಜ್ಯದಲ್ಲಿ ಮತಾಂತರ ಪ್ರಕರಣಗಳು ಬಹಳ ಹಿಂದಿನಿಂದಲೂ ನಾಟಕೀಯವಾಗಿ ಹೆಚ್ಚುತ್ತಿವೆ. ಆದರೆ, ಹಿಂದೂ ಧರ್ಮದಲ್ಲಿ ನಂಬಿಕೆ ಇರುವವರು ಎಂತಹುದೇ ಕಷ್ಟ ಬಂದರೂ ಅದನ್ನ ಎದುರಿಸುತ್ತಿದ್ದಾರೆ. ಆದರೆ, ಆ ಒಬ್ಬ ಹಿಂದೂ ವ್ಯಕ್ತಿ ಧೈರ್ಯದ ಹೆಜ್ಜೆಯನ್ನಿಡುತ್ತ, ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡ ತನ್ನ ಸ್ವಂತ ಮಕ್ಕಳನ್ನೂ ಕಡೆಗಣಿಸಲು ನಿರ್ಧರಿಸಿದನು.

Advertisement

ಕಷ್ಟಪಟ್ಟು ಸಂಪಾದಿಸಿದ ಆಸ್ತಿಯನ್ನೇ ಹಿಂದೂ ಧರ್ಮಕ್ಕಾಗಿ ಬದಿಗಿಟ್ಟರು

ತಮಿಳುನಾಡಿನ ಕಾಂಚೀಪುರಂ ನಿವಾಸಿಯಾಗಿರುವ 85 ವರ್ಷದ ದಿನಮಲರ್ ವೇಲಾಯುಧಂ ಅವರು ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡಿದ್ದಕ್ಕಾಗಿ ತಮ್ಮ ಮಕ್ಕಳ ನಿರ್ಧಾರಕ್ಕೆ ಸಿಟ್ಟಾಗಿದ್ದರು. ಹಿಂದೂ ಸಂಪ್ರದಾಯದಂತೆ ತನ್ನ ಮಕ್ಕಳು ತನ್ನ ಅಂತ್ಯಸಂಸ್ಕಾರ ಮಾಡುವುದಿಲ್ಲ ಎಂದು ಹೇಳಿದಾಗ ಮನನೊಂದ ಅವರು ತಮ್ಮ 2 ಕೋಟಿ ಮೌಲ್ಯದ ಮನೆಯನ್ನು ಮುರುಗನ್ ದೇವಸ್ಥಾನವೊಂದಕ್ಕೆ ದೇಣಿಗೆಯಾಗಿ ನೀಡಿದ್ದಾರೆ.

ವೇಲಾಯುಧಂ ಅವರು ತಮಿಳುನಾಡು ಸರ್ಕಾರದ ಆರೋಗ್ಯ ನಿರೀಕ್ಷಕರಾಗಿ (Health Inspector) ಕೆಲಸ ಮಾಡಿದ್ದರು. ಅವರ ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಕ್ರಿಶ್ಚಿಯನ್ನರನ್ನು ಮದುವೆಯಾಗಿ ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡಿದ್ದಾರೆ. ಹೀಗಾಗಿ, ಮಕ್ಕಳ ಈ ನಿರ್ಧಾರದಿಂದ ಮನನೊಂದು ಅವರು ತಮ್ಮ ಮನೆಯ ಆಸ್ತಿ ಪಾಸ್ತಿಯನ್ನ ದೇವಸ್ಥಾನಕ್ಕೆ ನೀಡಲು ನಿರ್ಧರಿಸಿದರು. ದೇವಸ್ಥಾನವು ಸರ್ಕಾರದ ನಿಯಂತ್ರಿತ ಆಸ್ತಿಗಳ ಅಡಿಯಲ್ಲಿ ಬರುವುದರಿಂದ ವೇಲಾಯುಧಂ ರವರು HRCE ಸಚಿವರಿಗೆ ಮನೆಯ ಕಾಗದಪತ್ರಗಳನ್ನ ಹಸ್ತಾಂತರಿಸಿದರು.

ಮಾಧ್ಯಮ ಸಂವಾದದಲ್ಲಿ ಮಾತನಾಡಿದ ವೇಲಾಯುಧಂ, “ಹಿಂದೂ ಧರ್ಮದ ಅನುಯಾಯಿಯಾಗಿ ನನ್ನ ಮಕ್ಕಳು ನನ್ನ ಅಂತಿಮ ವಿಧಿವಿಧಾನಗಳನ್ನು ಮಾಡಬೇಕೆಂದು ನಾನು ಬಯಸಿದ್ದೆ. ನನ್ನ ಇಬ್ಬರು ಹೆಣ್ಣುಮಕ್ಕಳು ಕ್ರಿಶ್ಚಿಯನ್ ಪುರುಷರನ್ನು ಮದುವೆಯಾಗಿ ಸರ್ಕಾರಿ ಉದ್ಯೋಗದಲ್ಲಿದ್ದಾರೆ. ನನ್ನ ಮಗ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ ಮತ್ತು ಅವನೂ ಕ್ರಿಶ್ಚಿಯನ್ ಮಹಿಳೆಯನ್ನು ಮದುವೆಯಾಗಿದ್ದಾನೆ. ಈಗ ಮೂವರೂ ಕ್ರೈಸ್ತ ಮತಕ್ಕೆ ಮತಾಂತರಗೊಂಡಿದ್ದಾರೆ. ಹಾಗಾಗಿ ಅವರು ಹಿಂದೂ ಸಂಪ್ರದಾಯದಂತೆ ನನ್ನ ಅಂತಿಮ ವಿಧಿವಿಧಾನಗಳನ್ನು ಮಾಡಲ್ಲ” ಎಂದರು.

ಅವರು ಮುಂದೆ ಮಾತನಾಡುತ್ತ, “ನಾನು 2,680 ಚದರ ಅಡಿ ಆಸ್ತಿಯಲ್ಲಿ ಮನೆ ಹೊಂದಿದ್ದೇನೆ, ಅದು ಈಗ ಸುಮಾರು 2 ಕೋಟಿ ರೂ. ಬೆಲೆ ಬಾಳುತ್ತದೆ‌. ಧರ್ಮ ಬದಲಿಸಿದವರಿಗೆ ನನ್ನ ಮನೆ ಕೊಡಲು ನನಗೆ ಇಷ್ಟವಿಲ್ಲ. ಹಾಗಾಗಿ ಅದನ್ನು ನನ್ನ ಕುಲದೈವವಾದ ಕುಮಾರಕ್ಕೊಟ್ಟಂ ಮುರುಗನ್ ದೇವಸ್ಥಾನಕ್ಕೆ ದಾನ ಮಾಡಿದ್ದೇನೆ. ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಂಡವರು ನಾನು ಸತ್ತರೂ ಯಾವುದೇ ವಿಧಿವಿಧಾನಗಳ ಮೂಲಕ ನನ್ನ ಅಂತ್ಯಸಂಸ್ಕಾರ ಮಾಡುವುದಿಲ್ಲ. ಹಾಗಾಗಿ ನನ್ನ ಆಸ್ತಿಯನ್ನು ಅವರಿಗೆ ನೀಡಲು ಬಯಸುವುದಿಲ್ಲ. ನನ್ನ ಎರಡನೇ ಮಗ ಮತ್ತು ಮಗಳು ಮನೆಯ ಒಂದು ಭಾಗದಲ್ಲಿ ವಾಸವಾಗಿದ್ದಾರೆ. ನಾನು ಮತ್ತು ನನ್ನ ಹೆಂಡತಿ ಇರುವವರೆಗೂ ಅವರು ಇಲ್ಲಿ ವಾಸಿಸಬಹುದು. ಆದರೆ ನಾನು ಸತ್ತ ತಕ್ಷಣ ದೇವಾಲಯವು ಮನೆಯನ್ನು ಸ್ವಾಧೀನಪಡಿಸಿಕೊಳ್ಳುತ್ತದೆ” ಎಂದರು.

ಡೆಮಾಗ್ರಾಫಿ ಬದಲಾವಣೆಗೆ ಕಾರಣವಾಗುತ್ತಿವೆ ಕ್ರಿಶ್ಚಿಯನ್ ಮಿಷನರಿಗಳು

ವೇಲಾಯುಧಂ ರವರು ತಮ್ಮ ಆಸ್ತಿಯನ್ನ ದೇವಾಲಯಕ್ಕೆ ನೀಡಿದ್ದರೂ, ಕ್ರಿಶ್ಚಿಯನ್ ಮಿಷನರಿಗಳು ಕ್ರಿಪ್ಟೋ ಎಕ್ಸ್ಚೇಂಜಸ್ ಮೂಲಕ HRCE ಯನ್ನೂ ನುಸುಳಿದ್ದಾರೆ ಎಂಬುದನ್ನು ಗಮನಿಸಬೇಕು. ಈ ಮಿಷನರಿಗಳು ದೇವಾಲಯದ ಆಸ್ತಿಗಳನ್ನು ಅತಿಕ್ರಮಿಸಿ ಅಕ್ರಮವಾಗಿ ವಶಪಡಿಸಿಕೊಳ್ಳುತ್ತಿವೆ. ಈ ಮಿಷನರಿಗಳು ಯುವಕರು ಮತ್ತು ದಲಿತರನ್ನು ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಳಿಸುವಂತೆ ಒತ್ತಡ ಹೇರುತ್ತಾರೆ ಮತ್ತು ಇದರ ಪರಿಣಾಮವಾಗಿ ತೀವ್ರ ಜನಸಂಖ್ಯಾ (severe demographic) ಬದಲಾವಣೆಗೆ ಕಾರಣವಾಗುತ್ತಿದೆ.

ಈ ವರ್ಷದ ಆರಂಭದಲ್ಲಿ, 18 ವರ್ಷ ವಯಸ್ಸಿನ ಹುಡುಗನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ, ಕಾರಣ ಅವನ ಕುಟುಂಬವು ತನ್ನ ಹಳ್ಳಿಯಲ್ಲಿ ಮಿಷನರಿಗಳ ಪ್ರಭಾವದಿಂದ ಅವನನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿತ್ತು. 2017 ರಲ್ಲಿ, ಕರ್ನಾಟಕದಲ್ಲಿ ಕ್ರಿಶ್ಚಿಯನ್ ಮತಕ್ಕೆ ಮತಾಂತರಗೊಳ್ಳಲಿಲ್ಲ ಎಂಬ ಕಾರಣಕ್ಕೆ ಒಬ್ಬ ಯುವಕನನ್ನ ಅವನ ಸ್ವಂತ ತಂದೆಯೇ ಥಳಿಸಿದ್ದರು.

ಭಾರತವು ಚೀನಾದ ವೈರಸ್‌ನೊಂದಿಗೆ ಹೋರಾಡುತ್ತಿರುವಾಗ, ಇಂತಹ ಮಿಷನರಿಗಳು ಭಾರತದಲ್ಲಿ ಹಿಂದೆಂದೂ ಕೇಳಿರದ ಮತಾಂತರದ ಅಲೆಯನ್ನು ಪ್ರಾರಂಭಿಸಿವೆ. ಕಳೆದ ವರ್ಷ ಲಾಕ್‌ಡೌನ್‌ನ ಮಧ್ಯೆ ಮಿಷನರಿಗಳು 1,00,000 ಜನರನ್ನು ಕ್ರಿಶ್ಚಿಯನ್ ಮತಕ್ಕೆ ಮತಾಂತರಿಸಲು ಪರಿವರ್ತಿಸಲು ಸಾಧ್ಯವಾಯಿತು ಎಂದು ವರದಿಗಳು ಸೂಚಿಸುತ್ತವೆ. ಇದಲ್ಲದೆ, ಮಿಷನರಿಗಳು ಭಾರತದಾದ್ಯಂತ ಹಲವಾರು ಚರ್ಚುಗಳನ್ನು ಕಟ್ಟಿ, ಅವುಗಳನ್ನು ತಮ್ಮ ಪರಭಕ್ಷಕ ಮತಾಂತರಕ್ಕೆ ಒಂದು ಆಯುಧದಂತೆ ಬಳಸಿಕೊಂಡವು.

ಹಿಂದಿ ಭಾಷಿಕರ ಹೃದಯಭಾಗ ಹಾಗೂ ದಕ್ಷಿಣದ ರಾಜ್ಯಗಳಲ್ಲಿ ಮತಾಂತರ ದೊಡ್ಡ ಸಮಸ್ಯೆಯಾಗಿದೆ. ಚರ್ಚ್ ಮತ್ತು ಮಿಷನರಿಗಳು ಮತಾಂತರದಲ್ಲಿ ತಮ್ಮ ಪಾತ್ರವನ್ನು ನಿರಾಕರಿಸುವುದನ್ನು ಮುಂದುವರೆಸುತ್ತಿರುವಾಗ, ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು “ತಮ್ಮ ಜನಸಂಖ್ಯೆಯನ್ನು ಹೆಚ್ಚಿಸಲು, ಕೆಲವು ಮಿಷನರಿಗಳು ಮತಾಂತರದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಪ್ರಚೋದನೆಯ ಮೂಲಕ ಮತಾಂತರವನ್ನು ನಿಲ್ಲಿಸಲು ಸರ್ಕಾರವು ಹಲವಾರು ಆಯ್ಕೆಗಳನ್ನು ಚರ್ಚಿಸುತ್ತಿದೆ” ಎಂದು ಹೇಳಿದ್ದರು (ಮತಾಂತರ ನಿಷೇಧ ಕಾಯ್ದೆ ಜಾರಿಯಾಗುವ ಮುನ್ನ).

ಇಸ್ಲಾಮಿಸ್ಟ್‌ಗಳ ನಂತರ ಮಿಷನರಿಗಳು ಮತಾಂತರ ದಂಧೆಯಲ್ಲಿ ಮುಂಚೂಣಿಯಲ್ಲಿವೆ ಮತ್ತು ದೇಶದಲ್ಲಿ ಮತಾಂತರವನ್ನು ತಡೆಯಲು ಮತಾಂತರ ನಿಷೇಧ ಕಾನೂನು ತಂದು ಈ ಮಿಷನರಿಗಳ ಆಟಾಟೋಪ ನಿಲ್ಲಿಸಲು ಇದು ಉತ್ತಮ ಸಮಯವಾಗಿದೆ‌.

Advertisement
Share this on...