“ಬರ್ಲಿನ್ ಏರ್‌ಪೋರ್ಟ್ ನಲ್ಲಿ ರೆಡ್‌ಹ್ಯಾಂಡ್ ಆಗಿ ಗಾಂಜಾ ಜೊತೆ ಸಿಕ್ಕಿಬಿದ್ದಿದ್ದ ಗೌರಿ ಖಾನ್.. ಮಗ, ಗಂಡನಿಗಿಂತ ದೊಡ್ಡ ಡ್ರಗ್ ಅಡಿಕ್ಟ್”

in Uncategorized 52,163 views

ಬಾಲಿವುಡ್ ನಲ್ಲಿ 30 ವರ್ಷಗಳಿಂದ ಸಕ್ರಿಯರಾಗಿರುವ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಬರ್ಲಿನ್‌ನಲ್ಲಿ ರೆಡ್ ಹ್ಯಾಂಡ್ ಆಗಿ ಗಾಂಜಾದ ಜೊತೆ ಸಿಕ್ಕಿಬಿದ್ದಿದ್ದರು ಎಂಬ ಸುದ್ದಿ ವೈರಲ್ ಆಗುತ್ತಿದೆ.

ಗೌರಿ ಖಾನ್ ವೃತ್ತಿಯಲ್ಲಿ ಇಂಟಿರಿಯರ್ ಡಿಸೈನರ್ ಆಗಿದ್ದಾರೆ. ಗೌರಿ ಖಾನ್ ಶಾರುಖ್ ಖಾನ್ ಪತ್ನಿ ಹಾಗು ಆರ್ಯನ್ ಖಾನ್ ತಾಯಿ. 2021 ರಲ್ಲಿ ಆರ್ಯನ್ ಖಾನ್ ಸೇರಿದಂತೆ ಇತರ ಆರೋಪಿಗಳಿಂದ ವಿವಿಧ ರೀತಿಯ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇಲ್ಲಿ ‘Koimoi’ ಹೆಸರಿನ ಮನರಂಜನಾ ವೆಬ್‌ಸೈಟ್ ಗೌರಿ ಖಾನ್ ಪ್ರಕರಣದ ಕುರಿತು ಮತ್ತೊಮ್ಮೆ ವರದಿಯನ್ನು ಪ್ರಕಟಿಸಿದೆ. ಬರ್ಲಿನ್ ವಿಮಾನ ನಿಲ್ದಾಣದಲ್ಲಿ ಗಾಂಜಾ ಜೊತೆ ಗೌರಿ ಖಾನ್ ಸಿಕ್ಕಿಬಿದ್ದಿದ್ದಳು ಎಂದು ಬರೆಯಲಾಗಿದೆ.

Advertisement

ಈ ಲೇಖನದಲ್ಲಿ ಬರ್ಲಿನ್ ವಿಮಾನ ನಿಲ್ದಾಣದಲ್ಲಿ ಗೌರಿ ಖಾನ್ ಬಂಧನದ ಬಗ್ಗೆ ಎಲ್ಲಿಯೂ ಅಧಿಕೃತ ಹೇಳಿಕೆ ಇರಲಿಲ್ಲ. ಆದರೆ, ಆಕೆಯಿಂದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂಬ ಆರೋಪವನ್ನು ಆಧರಿಸಿ ಮಾಧ್ಯಮ ವರದಿಗಳು ಪ್ರಕಟವಾಗಿದ್ದವು. ಅನೇಕ ಮಾಧ್ಯಮ ವರದಿಗಳಲ್ಲಿ ಆಕೆಯನ್ನು ‘ಡ್ರಗ್ ಅಡಿಕ್ಟ್’ ಎಂದೂ ಕರೆಯಲಾಗಿತ್ತು, ಆದರೆ ಒಂದು ಲೈಫ್‌ಸ್ಟೈಲ್ ಮ್ಯಾಗಜೀನ್ ಗೆ ಸಂದರ್ಶನ ನೀಡುವಾಗ ಗೌರಿ ಖಾನ್ ಈ ಆರೋಪಗಳನ್ನು ನಿರಾಕರಿಸಿದ್ದಳು. ಇಂತಹ ಸುದ್ದಿಗಳಿಂದ ನನಗೇನೂ ವ್ಯತ್ಯಾಸ ಆಗಲ್ಲ, ನಾನು ತಲೆಕೆಡಿಸಿಕೊಂಡಿಲ್ಲ ಎಂದು ಗೌರಿ ಖಾನ್ ಹೇಳಿದ್ದಳು.

ಸುದ್ದಿ ಮೂಲಗಳ ಪ್ರಕಾರ ಗೌರಿ ಖಾನ್ ಬಳಿ ಕೇವಲ ಒಬ್ಬ ವ್ಯಕ್ತಿ ಬಳಸಬಹುದಾದಷ್ಟು ಮಾತ್ರ ಗಾಂಜಾ ಇದ್ದದ್ದರಿಂದ ಆಕೆಯನ್ನ ಬಂಧಿಸದೆ ಬಿಟ್ಟು ಬಿಡಲಾಯಿತು ಎಂದು ವರದಿಯಗಾಗಿತ್ತು. ಬರ್ಲಿನ್ ಅಥವಾ ಭಾರತದ ವಿಮಾನ ನಿಲ್ದಾಣ ಆಡಳಿತವು ಆಕೆಯ ಹೆಸರನ್ನು ಎಂದಿಗೂ ಬಹಿರಂಗಪಡಿಸಲಿಲ್ಲ. ಆಕೆ ಬರ್ಲಿನ್ ನಲ್ಲಿ ಸಿಕ್ಕಿಬಿದ್ದಿದ್ದಾರೆ ಎಂಬ ಸುದ್ದಿ ಮಾತ್ರ ಬಂದಿತ್ತು. ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರವೂ, ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಡ್ರಗ್ ಪ್ರಕರಣದಲ್ಲಿ ಎನ್‌ಸಿಬಿಯ ರೇಡಾರ್‌ನಲ್ಲಿ ಬಂದಿದ್ದರು.

Advertisement
Share this on...