ಕೆನಡಾದ ಇಮಾಮ್ ಶೇಖ್ ಯೂನಸ್ ಕಥರಾಡಾ ಮುಸ್ಲಿಮೇತರರ ವಿರುದ್ಧ ವಿಷ ಕಕ್ಕಿದ್ದಾನೆ. ಇದಕ್ಕೆ ಸಂಬಂಧಿಸಿದ ಆತನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಇಮಾಮ್ ಯೂನಸ್ ಮುಸ್ಲಿಮೇತರರ ವಿರುದ್ಧ ಮುಸ್ಲಿಮರನ್ನು ಪ್ರಚೋದಿಸಿ ಎತ್ತುಕಟ್ಟುತ್ತಿದ್ದಾನೆ. ಶೇಖ್ ಯೂನಸ್ ಮಾತನಾಡುತ್ತ, “ಮುಸ್ಲಿಮೇತರರು ಅಲ್ಲಾಹನ ಶತ್ರುಗಳು ಆದ್ದರಿಂದ ಅವರು ನಮ್ಮ ಶತ್ರುಗಳು ಯಾರು ಅನ್ನೋದನ್ನ ನಮ್ಮ ಮಕ್ಕಳು ಅರ್ಥಮಾಡಿಕೊಳ್ಳಬೇಕು” ಎನ್ನುತ್ತಿದ್ದಾನೆ.
ಅಮೇರಿಕಾ ಮೂಲದ ಮಿಡಲ್ ಈಸ್ಟ್ ಮೀಡಿಯಾ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಟ್ವಿಟರ್ ಹ್ಯಾಂಡಲ್ MEMRI ನಿಂದ ಈ ವೀಡಿಯೊವನ್ನು ಪೋಸ್ಟ್ ಮಾಡಲಾಗಿದೆ. ಸಬ್ ಟೈಟಲ್ ಗಳು ವೀಡಿಯೊದಲ್ಲಿ ಹೇಳಲಾದ ಇಂಗ್ಲಿಷ್ ಅನುವಾದಗಳನ್ನು ಸಹ ಒಳಗೊಂಡಿವೆ. ವರದಿಗಳ ಪ್ರಕಾರ, ಕೆನಡಾದ ವಿಕ್ಟೋರಿಯಾದಲ್ಲಿ ಮುಸ್ಲಿಮರಿಗಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕೆನಡಾದ ಇಮಾಮ್ ಶೇಖ್ ಯೂನಸ್ ಮಾತನಾಡುತ್ತಿದ್ದ. ಈ ಸಂದರ್ಭದಲ್ಲಿ ಈತ ಮುಸ್ಲಿಮೇತರರ ಬಗ್ಗೆ ತುಂಬಾ ಪ್ರಚೋದನಕಾರಿ ಮಾತುಗಳನ್ನಾಡಿದ್ದಾನೆ. ಈತನ ಟಾರ್ಗೆಟ್ ಆಗಿದ್ದವರಲ್ಲಿ ಹೆಚ್ಚಿನವರು ಕ್ರಿಶ್ಚಿಯನ್ನರು. ಇಮಾಮ್ ತನ್ನ ಭಾಷಣದಲ್ಲಿ “ಅಲ್ಲಾಹನನ್ನು ಅವಮಾನಿಸುವವರು ಅಲ್ಲಾಹನ ಶತ್ರುಗಳು. ಅವನನ್ನು ಯಾರೂ ಸೃಷ್ಟಿಸಿಲ್ಲ, ತಾನು ಯಾರ ಮಗುವೂ ಅಲ್ಲ ಅಥವಾ ತನ್ನ ಯಾವುದೇ ಮಕ್ಕಳೂ ಇಲ್ಲ ಎಂದು ಅಲ್ಲಾಹ್ ಕುರಾನ್‌ನಲ್ಲಿ ಹೇಳಿದ್ದಾನೆ. ಆದರೆ ಅಲ್ಲಾಗೆ ಒಬ್ಬ ಮಗನಿದ್ದಾನೆ ಎಂದು ಕ್ರಿಶ್ಚಿಯನ್ನರು ಹೇಳುತ್ತಾರೆ. ಇದು ಅಲ್ಲಾಹನಿಗೆ ಮಾಡಿದ ಅವಮಾನವಲ್ಲವೇ?” ಎಂದು ಹೇಳುತ್ತಾನೆ.
ಈ 2 ನಿಮಿಷದ 12 ಸೆಕೆಂಡುಗಳ ವೀಡಿಯೊದಲ್ಲಿ, ಇಮಾಮ್ ಮಾತನಾಡುತ್ತ, “ಮುಸ್ಲಿಮೇತರರು, ಇದರಲ್ಲಿ ಕ್ರಿಶ್ಚಿಯನ್ನರು, ಯಹೂದಿಗಳು ಮತ್ತು ಇತರ ಕಾಫಿರರೆಲ್ಲಾ ಅಲ್ಲಾಹನ ಶತ್ರುಗಳು. ಅವರು ನಿಮ್ಮ ಸ್ನೇಹಿತರು ಎಂದು ನೀವು ಭಾವಿಸುತ್ತೀರಾ? ಇಲ್ಲ, ಅವರು ಅಲ್ಲಾಹನ ಶತ್ರುಗಳಾಗಿದ್ದರೆ ಅವರು ನಿಮ್ಮ ಸ್ನೇಹಿತರಾಗುವುದು ಹೇಗೆ? ನಮ್ಮ ಮಕ್ಕಳು ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅವರು ಅಲ್ಲಾಹನ ಶತ್ರುಗಳು, ಆದ್ದರಿಂದ ಅವರು ನಿಮ್ಮ ಶತ್ರುಗಳು. ಅವರಲ್ಲಿ ಕೆಲವರು ಅಲ್ಲಾಹನ ಅಸ್ತಿತ್ವವನ್ನು ನಂಬುವುದಿಲ್ಲ. ಅಂತಹ ವ್ಯಕ್ತಿಯನ್ನು ನಿಮ್ಮ ಸ್ನೇಹಿತರನ್ನಾಗಿ ಮಾಡಿಕೊಳ್ಳಲು ನೀವು ಬಯಸುವಿರಾ?” ಎಂದು ಹೇಳುತ್ತಿದ್ದಾನೆ.
Canadian Imam Younus Kathrada: Non-Muslims Are Our Enemies – Our Children Must Understand This; May Allah Annihilate the Heretics and the Atheists #Canada #Jews #Christians #Antisemitism pic.twitter.com/s29NoV2Sjf
— MEMRI (@MEMRIReports) January 6, 2023
ವಿಡಿಯೋದ ಕೊನೆಯಲ್ಲಿ ಶೇಖ್ ಯೂನುಸ್ ಅರಬಿಯಲ್ಲಿ ದುವಾ ಓದುತ್ತ, “ಯಾ ಅಲ್ಲಾಹ್ ಇಸ್ಲಾಂ ಹಾಗು ಮುಸ್ಲಿಮರಿಗೆ ಶಕ್ತಿ ಕೊಡು, ಕಾಫಿರರಿಗೆ ಹಾಗು ದೇವ ದೇವಾದಿಗಳನ್ನ ಪೂಜಿಸುವವರನ್ನ ಅಪಮಾನಗೊಳಿಸು, ಇಸ್ಲಾಂನ ಶತ್ರುಗಳನ್ನ ಈ ಭೂಮಿಯಿಂದ ಕ್ಲೀನ್ ಮಾಡು” ಎಂದು ಹೇಳುತ್ತಾನೆ.
ಇಮಾಮ್ ಶೇಖ್ ಯೂನಸ್‌ನ ಸೋಶಿಯಲ್ ಮೀಡಿಯಾ ಅಕೌಂಟ್ ಗಳು ಇದೇ ರೀತಿಯ ದ್ವೇಷಪೂರಿತ ವೀಡಿಯೊಗಳಿಂದಲೇ ತುಂಬಿವೆ. ಕೆನಡಾದಲ್ಲಿ ನೆಲೆಸಿರುವ ಶೇಖ್ ಯೂನಸ್ ಇದೇ ರೀತಿಯ ಹೇಳಿಕೆಗಳನ್ನು ನೀಡುತ್ತ ವಿಷಕಕ್ಕುತ್ತಲೇ ಇರುತ್ತಾನೆ. ಆದರೆ ಕೆನಡಾ ಕ್ರಿಶ್ಚಿಯನ್ ಬಹುಸಂಖ್ಯಾತ ರಾಷ್ಟ್ರವಾಗಿದ್ದರೂ ಈತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಅಚ್ಚರಿಯ ನಿಜಕ್ಕೂ ಸಂಗತಿಯೇ ಸರಿ.