#BoycottBollywood ನಿಂದ ಬರ್ಬಾದ್ ಆದ ಬಾಲಿವುಡ್, “ಮೋದಿಜೀಗೆ ಹೇಳಿ ಈ ಬಾಯ್‌ಕಾಟ್ ಟ್ರೆಂಡ್ ನಿಲ್ಲಿಸಿ, ನಾವು ಒಳ್ಳೆ ಕೆಲಸ ಮಾಡ್ತಿದೀವಿ, ಡ್ರಗ್ಸ್‌ ನ್ನ….”: ಯೋಗಿ ಆದಿತ್ಯನಾಥರೆದುರು ಪರಿಪರಿಯಾಗಿ ಬೇಡಿಕೊಂಡ ಸುನಿಲ್ ಶೆಟ್ಟಿ

in Uncategorized 1,921 views

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಬಾಯ್‌ಕಾಟ್ ಟ್ರೆಂಡ್ ಭಾರೀ ಸದ್ದು ಮಾಡುತ್ತಿದೆ, ಒಂದು ಗುಂಪು ಮತ್ತು ಪ್ರೇಕ್ಷಕರು ನೋಡಲು ಬಯಸದ ಯಾವುದೇ ಚಿತ್ರ ಬರುತ್ತಿದ್ದಂತೆ ಪ್ರೇಕ್ಷಕರು ಅದರ ಬಾಯ್‌ಕಾಟ್ ಅಭಿಯಾನವನ್ನ ನಡೆಸುತ್ತಾರೆ. ಈ ಬಾಯ್‌ಕಾಟ್ ಟ್ರೆಂಡ್ ಬಿರುಗಾಳಿಯಂತಾಗಿದ್ದು ಇದರಿಂದಾಗಿ ಅನೇಕ ಚಿತ್ರಗಳ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳು ತಲೆಕೆಳಗಾಗಿವೆ ಹಾಗು ಬಾಲಿವುಡ್ ಚಿತ್ರಗಳು ಮಕಾಡೆ ಮಲಗುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಪ್ರದರ್ಶನ ನೀಡಬಹುದಾದ ವಿಷಯವನ್ನು ಹೊಂದಿರುವ ಅನೇಕ ಚಲನಚಿತ್ರಗಳೂ ಬಾಯ್‌ಕಾಟ್‌ಗೆ ಬಲಿಯಾಗುತ್ತವೆ. ಬಾಯ್‌ಕಾಟ್ ಬಾಲಿವುಡ್ ಗೆ ಸಂಬಂಧವೇ ಇಲ್ಲದ ಚಿತ್ರಗಳೂ ಕೂಡ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಹಲವು ಕಲಾವಿದರು ಬಾಯ್‌ಕಾಟ್‌ ಬಾಲಿವುಡ್‌ ಅನ್ನು ವಿವಿಧ ರೀತಿಯಲ್ಲಿ ಗೆಲ್ಲಲು ಯತ್ನಿಸುತ್ತಿದ್ದರೆ, ಸುನೀಲ್‌ ಶೆಟ್ಟಿಯಂತಹ ಕಲಾವಿದರು ಬಾಲಿವುಡ್‌ ಬಾಯ್‌ಕಾಟ್‌ ಬಗ್ಗೆ ವಿಭಿನ್ನವಾಗಿ ಹೇಳಿದ್ದು, ಬನ್ನಿ ಅವರು ಏನು ಹೇಳಿದ್ದಾರೆ ಅನ್ನೋದನ್ನ ನೋಡೋಣ.

Advertisement

ಬಾಯ್‌ಕಾಟ್ ಬಾಲಿವುಡ್ ನಿಂದ ಬಚಾವಾಗಲು ಹಲವಾರು ಮಾರ್ಗಗಳ ಬಗ್ಗೆ ಬಾಲಿವುಡ್ ಚಿಂತಿಸುತ್ತಿದೆ‌. ಬಹಳಷ್ಟು ಸ್ಟಾರ್ ಗಳೂ ಈ ಬಾಯ್‌ಕಾಟ್ ಬಾಲಿವುಡ್ ಟ್ರೆಂಡ್‌ನ್ನ ಸೋಲಿಸಲು ವಿವಿಧ ರೀತಿಯ ಸ್ಟಂಟ್ ಮಾಡುತ್ತಿದ್ದಾರೆ. ಕೆಲವರು ತಮಗೆ ಈ ಬಾಯ್‌ಕಾಟ್ ಬಾಲಿವುಡ್ ಟ್ರೆಂಡ್ ನಿಂದ ಯಾವುದೇ ವ್ಯತ್ಯಾಸ ಆಗಲ್ಲ ಅಂತ ಹೇಳುತ್ತಿದ್ದರೆ ಇನ್ನು ಕೆಲವರು ಇದೆಲ್ಲಾ ಸಾಧ್ಯವಿಲ್ಲ ಈ ಬಾಲಿವುಡ್ ಬಾಯ್‌ಕಾಟ್ ಟ್ರೆಂಡ್ ಚಿತ್ರಗಳಿಗೆ ಯಾವುದೇ ಎಫೆಕ್ಟ್ ಆಗಲ್ಲ, ಚಿತ್ರ ಒಳ್ಳೆಯದಾಗಿದ್ದರೆ ಜನ ಅಂತಹ ಚಿತ್ರವನ್ನ ನೋಡೇ ನೋಡುತ್ತಾರೆ ಅಂತ ಇನ್ನು ಕೆಲವರು ಹೇಳುತ್ತಾರೆ. ಕೆಲ ಕಲಾವಿದರಂತೂ ಈ ಬಾಯ್‌ಕಾಟ್ ಬಾಲಿವುಡ್ ಟ್ರೆಂಡ್ ತಮ್ಮ ಒಂದು ಕೂದಲನ್ನೂ ಅಲುಗಾಡಿಸಲು ಸಾಧ್ಯವಿಲ್ಲ ಎನ್ನುತ್ತಾರೆ.

ಹೀಗಿರುವಾಗ ಸುನೀಲ್ ಶೆಟ್ಟಿ ದೊಡ್ಡ ಅಪೀಲ್ ಮಾಡಿದ್ದಾರೆ. ಸುನೀಲ್ ಶೆಟ್ಟಿ ಇತ್ತೀಚೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದರು, ಅಲ್ಲಿ ಉತ್ತರ ಪ್ರದೇಶದಲ್ಲಿ ಮುಂಬರುವ ಫಿಲ್ಮ್ ಸಿಟಿ ಬಗ್ಗೆ ಚರ್ಚೆಗಳು ನಡೆದವು. ಈ ಸಂವಾದದಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಾಲಿವುಡ್ ಉದ್ಯಮದಿಂದ ಚಲನಚಿತ್ರ ಸಲಹೆಗಳು ಮತ್ತು ಸಹಕಾರಕ್ಕಾಗಿ ಒತ್ತಾಯಿಸಿದ್ದಾರೆ. ಹೀಗಿರುವಾಗ ಸುನೀಲ್ ಶೆಟ್ಟಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಮನವಿ ಮಾಡಿದ್ದಾರೆ.

ಸುನೀಲ್ ಶೆಟ್ಟಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ, “ಇತತೀಚೆಗೆ ಟ್ರೆಂಡಿಂಗ್ ಆಗುತ್ತಿರುವ ಹ್ಯಾಶ್‌ಟ್ಯಾಗ್ ಅಂದರೆ ಅದು ಹ್ಯಾಶ್‌ಟ್ಯಾಗ್ #BoycottBollywood. ನೀವು ಹೇಳಿದರೆ ಮಾತ್ರ ಇದು ನಿಲ್ಲಬಹುದು. ನಮ್ಮಲ್ಲಿ ಶೇಕಡಾ 99 ರಷ್ಟು ಜನರು ದಿನವಿಡೀ ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ. ನಾವು ಆ ತರಹದವರಲ್ಲ. ನಾವು ದಿನವಿಡೀ ತಪ್ಪು ಕೆಲಸಗಳನ್ನು ಮಾಡುವುದಿಲ್ಲ. ಒಳ್ಳೆಯ ಕೆಲಸವನ್ನೂ ಮಾಡುತ್ತೇವೆ. ಭಾರತೀಯರನ್ನು ಯಾರಾದರೂ ಒಗ್ಗೂಡಿಸಿದ್ದರೆ ಅದು ಮ್ಯೂಸಿಕ್ ಆಗಿದೆ. ನಾವು ನಮ್ಮ ಸಂಗೀತ ಮತ್ತು ಕಥೆಗಳ ಮೇಲೆ ಕೇಂದ್ರೀಕರಿಸಬೇಕು. ನೀವು ಮತ್ತು ನಮ್ಮ ಪ್ರಧಾನಿ ಮೋದಿ ಬಯಸಿದರೆ ಬಾಯ್‌ಕಾಟ್ ಬಾಲಿವುಡ್ ಟ್ರೆಂಡ್ ನ್ನ ನಿಲ್ಲಿಸಬಹುದು” ಎಂದು ಹೇಳಿದ್ದಾರೆ.

ಅಲ್ಲದೆ, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದಾಗಿ ಸುನೀಲ್ ಶೆಟ್ಟಿ ತಿಳಿಸಿದರು. ಇದಕ್ಕೆ ಕಡಿವಾಣ ಹಾಕಬೇಕು ಜೊತೆಗೆ ವಿಷಯ ಸುಧಾರಣೆಗೂ ಪ್ರಯತ್ನಿಸುತ್ತೇವೆ ಎಂದರು. ನಾವೆಲ್ಲರೂ ತಪ್ಪಲ್ಲ, ನೀವು ಇದರತ್ತ ಗಮನ ಹರಿಸಿ ಈ ರೀತಿ ಮಾಡಬೇಡಿ ಎಂದು ಜನರಿಗೆ ತಿಳಿಸಿ ಎಂದರು. ಜನರು ನಮ್ಮನ್ನು ತಪ್ಪಾಗಿ ಅರ್ಥಮಾಡಿಕೊಳ್ಳುವುದನ್ನು ನಿಲ್ಲಿಸುವುದು ಬಹಳ ಮುಖ್ಯ ಏಕೆಂದರೆ ನಮ್ಮಲ್ಲಿ ಹೆಚ್ಚಿನವರು ತಪ್ಪು ಮಾಡುವವರಲ್ಲ. ಈ ಬಗ್ಗೆ ಸಾರ್ವಜನಿಕರೊಂದಿಗೆ ಮಾತನಾಡಲು ಪ್ರಧಾನಿಯವರನ್ನೂ ಕೇಳಬೇಕು, ಈ ಬಾಯ್‌ಕಾಟ್ ಟ್ರೆಂಡ್ ನಿಲ್ಲಲಿ ಎಂದು ಸುನೀಲ್ ಶೆಟ್ಟಿ ಯೋಗಿ ಆದಿತ್ಯನಾಥ್ ಅವರಿಗೆ ಹೇಳಿದ್ದಾರೆ.

Advertisement
Share this on...