“ಯಾರ ಜೊತೆ ಬೇಕಾದರೂ ಓಡಾಡು ಎಷ್ಟು ಹುಡುಗರ ಜೊತೆ ಬೇಕಾದ್ರೂ, ನೈಟೌಟ್ ಮಾಡು ಆದರೆ ಒಬ್ಬನ ಜೊತೆ ಮಾತ್ರ…” ಮಗಳು ಸುಹಾನಾ ಖಾನ್‌ಗೆ ಗೌರಿ ಖಾನ್ ಸಲಹೆ

in Uncategorized 740 views

ಬಾಲಿವುಡ್ ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅವರು ಕರಣ್ ಜೋಹರ್ ಅವರ ಚಾಟ್ ಶೋ ಕಾಫಿ ‘ವಿತ್ ಕರಣ್ ಎಸ್ 7’ (Koffee With Karan S7) ನ ಮುಂದಿನ ಸಂಚಿಕೆಯಲ್ಲಿ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಹೊಸ ಪ್ರೋಮೋವನ್ನು ಕರಣ್ ಜೋಹರ್ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಗೌರಿ ಖಾನ್ (Gauri Khan) ತಮ್ಮ ಮಗಳು ಸುಹಾನಾ ಖಾನ್ (Suhana Khan) ಗಾಗಿ ಸಂದೇಶ ನೀಡುತ್ತಿದ್ದಾರೆ.

Advertisement

‘ಕಾಫಿ ವಿತ್ ಕರಣ್ – 7’ (Koffee With Karan S7) ಸಂಚಿಕೆಯಲ್ಲಿ ಗೌರಿ ಖಾನ್ ಜೊತೆಗೆ ಚಂಕಿ ಪಾಂಡೆ ಅವರ ಪತ್ನಿ ಭಾವನಾ ಪಾಂಡೆ (Bhavna Pandey) ಮತ್ತು ಸಂಜಯ್ ಕಪೂರ್ ಅವರ ಪತ್ನಿ ಮಹೀಪ್ ಕಪೂರ್ (Maheep Kapoor) ಕೂಡ ಕಾಣಿಸಿಕೊಳ್ಳಲಿದ್ದಾರೆ.

ಪ್ರೋಮೋದ ಆರಂಭದಲ್ಲಿ ಕರಣ್ ಜೋಹರ್ ಎಂದಿನಂತೆ ತಮ್ಮ ಅತಿಥಿಗಳನ್ನು ಸ್ವಾಗತಿಸುತ್ತಾರೆ. ಈ ಸಮಯದಲ್ಲಿ, ಅವರು ಸುಹಾನಾ ಖಾನ್‌ಗೆ ಏನು ಸಲಹೆ ನೀಡಲು ಬಯಸುತ್ತೀರಿ ಎಂದು ಗೌರಿ ಖಾನ್‌ಗೆ ಕೇಳಿದರು. ಅದಕ್ಕೆ ಗೌರಿ ಖಾನ್:

‘ಏಕಕಾಲದಲ್ಲಿ ಒಬ್ಬ ಹುಡುಗನ ಜೊತೆ ಮಾತ್ರ ಡೇಟ್ ಮಾಡು’ ಎಂದು ಹೇಳುತ್ತಾರೆ.

ಇದನ್ನು ಕೇಳಿದ ಕರಣ್ ಜೋಹರ್ ಜೋರಾಗಿ ನಗಲು ಪ್ರಾರಂಭಿಸುತ್ತಾರೆ. ಇದರ ನಂತರ ಅವರು ಮಹೀಪ್ ಕಪೂರ್ ಅವರನ್ನು ಯಾವ ಬಾಲಿವುಡ್ ನಟನೊಂದಿಗೆ ಕೆಲಸ ಮಾಡಲು ಬಯಸುತ್ತೀರ? ಎಂದು ಕೇಳಿದರು. ಇದಕ್ಕೆ ಉತ್ತರಿಸುವ ಮಹೀಪ್ ಕಪೂರ್, ಹೃತಿಕ್ ರೋಷನ್ ಹೆಸರನ್ನು ಹೇಳುತ್ತ “ಅವರ ಲುಕ್ಸ್ ಚೆನ್ನಾಗಿದೆ, ನೋಡಲು ಸ್ಮಾರ್ಟ್ ಇದಾರೆ, ನಾನೂ ಅವರೊಂದಿಗೆ ಚೆನ್ನಾಗಿ ಕಾಣುತ್ತೇನೆ“ ಎಂದು ಹೇಳುತ್ತಾರೆ.

https://twitter.com/karanjohar/status/1571733489934041093?t=Sdn0Pa5sN4Lt0MuKODKZEA&s=19

ಇದರ ನಂತರ, ಕರಣ್ ಜೋಹರ್ ಅನನ್ಯಾ ಪಾಂಡೆ ಅವರ ತಾಯಿ ಭಾವನಾ ಪಾಂಡೆ ಅವರನ್ನು ಯಾವ ಬಾಲಿವುಡ್ ಸೆಲೆಬ್ರಿಟಿಯೊಂದಿಗೆ ಕೆಲಸ ಮಾಡಲು ಬಯಸುತ್ತೀರಿ ಎಂದು ಕೇಳಿದರು. ಇದಕ್ಕೆ ಭಾವನಾ, “ಹಲವು ಜನರೊಂದಿಗೆ” ಎಂದು ಹೇಳುತ್ತಾರೆ. ಇದರ ನಂತರ, ಕರಣ್ ಜೋಹರ್ ಮತ್ತೆ ಗೌರಿ ಖಾನ್ ಅವರನ್ನು ಯಾವ ಚಿತ್ರದ ಟೈಟಲ್ ನೊಂದಿಗೆ ನಿಮ್ಮ ಮತ್ತು ಶಾರುಖ್ ಖಾನ್ ಅವರ ಪ್ರೇಮಕಥೆಯನ್ನು ವ್ಯಾಖ್ಯಾನಿಸಲು ಬಯಸುತ್ತೀರಿ? ಎಂದು ಕೇಳುತ್ತಾರೆ. ಅದಕ್ಕೆ ಗೌರಿ ಖಾನ್ ಉತ್ತರಿಸುತ್ತ,

“ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ. ಏಕೆಂದರೆ ಆ ಚಿತ್ರ ನನಗೆ ತುಂಬಾ ಇಷ್ಟ” ಎನ್ನುತ್ತಾರೆ.

‘ಕಾಫಿ ವಿತ್ ಕರಣ್ S7’ (Koffee With Karan S7) ನ ಈ ಪ್ರೋಮೋದಲ್ಲಿ, ಕರಣ್ ಜೋಹರ್ ಅವರು ತಮ್ಮ ತಮ್ಮ ಚಾಯ್ಸ್‌ನ ಸೆಲೆಬ್ರಿಟಿಗಳಿಗೆ ಕರೆ ಮಾಡಲು ಮೂವರನ್ನೂ ಕೇಳುತ್ತಾರೆ. ಗೌರಿ ಖಾನ್ ಶಾರುಖ್ ಖಾನ್ ಗೆ ಕಾಲ್ ಮಾಡುತ್ತಾರೆ. ಇದಕ್ಕೆ ಕರಣ್, “ಶಾರುಖ್ ಕಾಲ್ ರಿಸೀವ್ ಮಾಡಿದರೆ, ನಾನು ನಿಮಗೆ ಫಿಕ್ಸ್ ಪಾಯಿಂಟ್ ನೀಡುತ್ತೇನೆ” ಎಂದು ಹೇಳುತ್ತಾರೆ. ಆಗ ಶಾರುಖ್ ಖಾನ್ ಅವರೇ ಫೋನ್ ಪಿಕ್ ಮಾಡಿ ‘ಹಾಯ್ ಕರಣ್’ ಎಂದು ಹೇಳುವ ಮೂಲಕ ಪ್ರತಿಕ್ರಿಯಿಸುತ್ತಾರೆ.

Advertisement
Share this on...