“ಭಾರತದಲ್ಲಿ ಇನ್ನು ನಮಗೆ (ಮುಸ್ಲಿಮರಿಗೆ) ಉಳಿಗಾಲವಿಲ್ಲ, ಕೇಸರಿ (ಭಗವಾ) ಧ್ವಜವನ್ನ ರಾಷ್ಟ್ರಧ್ವಜ ಮಾಡಿಬಿಡ್ತಾರೆ”: ಕಣ್ಣೀರಿಟ್ಟ ಮೆಹಬೂಬಾ ಮುಫ್ತಿ

in Uncategorized 18,250 views

ಜಮ್ಮು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸಿದಾಗಿನಿಂದ, ಅಂದಿನಿಂದಲೂ ಮುಖ್ಯಮಂತ್ರಿಯಾಗಿದ್ದ ಮೆಹಬೂಬಾ ಮುಫ್ತಿ (Ex CM Mehbooba Mufti) ಕಂಗಾಲಾಗಿದ್ದಾರೆ. ಕೆಲವೊಮ್ಮೆ ಅವರು ಯುವಕರು ಬಂದೂಕುಗಳನ್ನು ಕೈಗೆತ್ತಿಕೊಳ್ಳುತ್ತಾರೆ ಎಂದು ಬೆದರಿಸಿದರೆ, ಕೆಲವೊಮ್ಮೆ ಅವರು ಕೇಂದ್ರ ಸರ್ಕಾರ ಜನಸಂಖ್ಯಾಶಾಸ್ತ್ರವನ್ನು (Demography) ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ಮುಸಲ್ಮಾನರಿಗೆ ಭಯವನ್ನು ತೋರಿಸುತ್ತಾರೆ. ಈ ಬಾರಿ ಈಕೆ ಮೋದಿ ಸರ್ಕಾರ ಈ ದೇಶದ ಧ್ವಜವನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಿಬಿಡುತ್ತಾರೆ ಎಂದು ಮುಸಲ್ಮಾನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ.

Advertisement

ಬಿಜೆಪಿ ಸರ್ಕಾರ ಜಮ್ಮು ಕಾಶ್ಮೀರದಿಂದ ತಮ್ಮ (ಈ ಮೊದಲಿದ್ದ ಜಮ್ಮು ಕಾಶ್ಮೀರದ ಧ್ವಜ) ಧ್ವಜವನ್ನು ಕಸಿದುಕೊಂಡಿದೆ, ಸಂವಿಧಾನವನ್ನು ಕಿತ್ತುಕೊಂಡಿದೆ, 370 ಅನ್ನು ತೆಗೆದುಹಾಕುವ ಮೂಲಕ ವಿಶೇಷ ಸ್ಥಾನಮಾನವನ್ನು ಕಿತ್ತುಕೊಂಡಿದೆ ಮತ್ತು ಈಗ ಅದು ಶೀಘ್ರದಲ್ಲೇ ದೇಶದ ಸಂವಿಧಾನವನ್ನೂ ಬದಲಾಯಿಸಲು ಹೊರಟಿದೆ. ಬಿಜೆಪಿ ದೇಶದ ರಾಷ್ಟ್ರಧ್ವಜ ತ್ರಿವರ್ಣ ಧ್ವಜವನ್ನು ಕೇಸರಿ ಬಣ್ಣಕ್ಕೆ ಬದಲಾಯಿಸಲಿದೆ ಎಂದು ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಹೇಳಿದ್ದಾರೆ.

ಬಿಜೆಪಿ ಜತೆಗೂಡಿ ಜಮ್ಮು-ಕಾಶ್ಮೀರದಲ್ಲಿ ಸಮ್ಮಿಶ್ರ ಸರ್ಕಾರ ನಡೆಸಿದ್ದ ಮೆಹಬೂಬಾ ಮುಫ್ತಿ, ಬಿಜೆಪಿ ದೇಶದ ಸಂವಿಧಾನವನ್ನು ಬುಲ್ಡೋಜರ್‌ನಿಂದ ಹೊಸಕಿ ಹಾಕಿದೆ. ಲಡಾಖ್ ಅನ್ನು ಜಮ್ಮು ಕಾಶ್ಮೀರದಿಂದ ಪ್ರತ್ಯೇಕಿಸಿ, ಕೇಂದ್ರಾಡಳಿತ ಪ್ರದೇಶ ಮಾಡಿದ ಬಗ್ಗೆಯೂ ಅವರು ತಮ್ಮ ದುಃಖವನ್ನು ವ್ಯಕ್ತಪಡಿಸಿದರು. ಲಡಾಖ್ ಜಮ್ಮು ಕಾಶ್ಮೀರದ ಅವಿಭಾಜ್ಯ ಅಂಗವಾಗಿದೆ ಎಂದು ಮೆಹಬೂಬಾ ಹೇಳಿದ್ದಾರೆ. ಜಮ್ಮು ಕಾಶ್ಮೀರದ ಹಳೆಯ ಸ್ಥಾನಮಾನವನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಇದಷ್ಟೇ ಅಲ್ಲದೆ, ಜಮ್ಮು ಕಾಶ್ಮೀರದಿಂದ ಸಶಸ್ತ್ರ ಪಡೆಗಳನ್ನು ಮತ್ತು AFSPA ಕ್ರಮಬದ್ಧವಾಗಿ ಹಿಂತೆಗೆದುಕೊಳ್ಳಬೇಕು ಅನ್ನು ಸಹ ಮೆಹಬೂಬಾ ಮುಫ್ತಿ ಒತ್ತಾಯಿಸಿದರು. ಆದರೆ, ರಾಜ್ಯದಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ನಡೆಸುತ್ತಿರುವ ದಾಳಿಗಳು ಮತ್ತು ಹಿಂದೂಗಳ ಮೇಲಿನ ಟಾರ್ಗೆಟ್ ಕಿಲ್ಲಿಂಗ್ ಬಗ್ಗೆ ಮಾತ್ರ ಉಲ್ಲೇಖಿಸಿಲ್ಲ ಅಥವಾ ಭದ್ರತಾ ಪಡೆಗಳನ್ನು ಹಿಂತೆಗೆದುಕೊಂಡ ನಂತರ ಈ ಹಿಂದೂಗಳನ್ನು ಹೇಗೆ ರಕ್ಷಿಸಲಾಗುತ್ತದೆ ಎಂದು ಮಾತ್ರ ಮೆಹಬೂಬಾ ಮುಫ್ತಿ ಹೇಳಲೇ ಇಲ್ಲ.

ತಮ್ಮ ತಂದೆ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುಣ್ಯತಿಥಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅವರು, ಜಮ್ಮು ಕಾಶ್ಮೀರವು ಮಹಾತ್ಮ ಗಾಂಧಿಯವರ ಭಾರತದೊಂದಿಗೆ ಹೋಗಿದೆಯೇ ಹೊರತು ನಾಥುರಾಮ್ ಗೋಡ್ಸೆ ಭಾರತದೊಂದಿಗೆ ಅಲ್ಲ ಎಂದು ಹೇಳಿದರು. ಪಿಡಿಪಿ ಸಂಸ್ಥಾಪಕ ತನ್ನ ತಂದೆಯ ಬಗ್ಗೆ ಮಾತನಾಡಿದ ಮೆಹಬೂಬಾ, ತಮ್ಮ ತಂದೆ ಶುದ್ಧ ಭಾರತೀಯ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಜೊತೆ ಭಾರತ ಮಾತುಕತೆ ನಡೆಸಬೇಕು ಎಂದಿದ್ದ ಮೆಹಬೂಬಾ ಮುಫ್ತಿ

ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಮತ್ತೊಮ್ಮೆ ಪಾಕಿಸ್ತಾನದ ರಾಗವನ್ನು ಹಾಡಿದ್ದರು. ಮೋದಿ ಸರ್ಕಾರ ಕಣಿವೆಯಲ್ಲಿ ಎಷ್ಟೇ ಸೈನಿಕರನ್ನು ಡೆಪ್ಲಾಯ್ ಮಾಡಿದರೂ (ನಿಯೋಜಿಸಿದರೂ) ಜಮ್ಮು ಕಾಶ್ಮೀರದ ಬಗ್ಗೆ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲೇಬೇಕಾಗುತ್ತದೆ ಎಂದು ಮುಫ್ತಿ ಟಿವಿ ಚಾನೆಲ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದರು. ಪಾಕಿಸ್ತಾನದೊಂದಿಗೆ ಮಾತುಕತೆ ಇಲ್ಲದೆ ಕಾಶ್ಮೀರ ಸಮಸ್ಯೆಗೆ ಪರಿಹಾರ ಸಾಧ್ಯವೇ ಇಲ್ಲ ಎಂದು ಮೆಹಬೂಬಾ ಹೇಳಿದ್ದರು. ಮೆಹಬೂಬಾ ಈ ಹಿಂದೆಯೂ ಇದೇ ಮಾತನ್ನ ಹಲವಾರು ಬಾರಿ ಹೇಳಿದ್ದರು, ಆದರೆ ಆಕೆಯ ಪಾಕಿಸ್ತಾನಿ ಪರವಾದ ರಾಗವನ್ನು ಯಾರೂ ಕಿಮ್ಮತ್ತೇ ಕೊಟ್ಟಿರಲಿಲ್ಲ. ಮೆಹಬೂಬಾ ಮಾತನಾಡುತ್ತ, ನಮ್ಮ ಮನೆಯಲ್ಲೇ ಸಮಸ್ಯೆ ಇದೆ ಅದಕ್ಕಾಗಿಯೇ ವಿಫಲರಾಗುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಪಾಕ್ ನಡುವಿನ ಶಾಂತಿ ಸ್ಥಾಪನೆಯಾಗಬೇಕಾದರೆ ಪಾಕಿಸ್ತಾನದ ಜೊತೆ ಮಾತುಕತೆಯ ಹೊರತಾಗಿ ಭಾರತಕ್ಕೆ ಬೇರೆ ಮಾರ್ಗವೇ ಇಲ್ಲ ಎಂದು ಹೇಳಿದ್ದರು.

ದೇಶದಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯ, ಕೋಮುಗಲಭೆಗಳಿಗೆ ಮೋದಿ ಸರಕಾರವೇ ನೇರ ಹೊಣೆ ಹಾಗು ಕಾರಣ ಎಂದು ಮೆಹಬೂಬಾ ಆರೋಪಿಸಿದ್ದಾರೆ. ಪಾಕಿಸ್ತಾನದಲ್ಲಿ ಧರ್ಮದ ಹೆಸರಿನಲ್ಲಿ ಬಂದೂಕುಗಳನ್ನು ನೀಡಲಾಗುತ್ತಿತ್ತು ಮತ್ತು ಇಂದು ಅವರು ಕೆಟ್ಟ ಸ್ಥಿತಿಯಲ್ಲಿದ್ದಾರೆ ಎಂದು ಅವರು ಹೇಳಿದರು. ಹಿಂದೂ-ಮುಸ್ಲಿಂ ಹೆಸರಿನಲ್ಲಿ ಜನ ಜಗಳವಾಡುವಂತೆ ಮಾಡಿದ್ದೇವೆ. ಧರ್ಮದ ಹೆಸರಿನಲ್ಲಿ ಕತ್ತಿಗಳನ್ನೂ ಜನರಿಗೆ ಹಂಚಿದ್ದೇವೆ ಎಂದರು. ಲೌಡ್‌ಸ್ಪೀಕರ್ ವಿವಾದದ ಕುರಿತು ಮಾತನಾಡಿದ ಮೆಹಬೂಬಾ ಮುಫ್ತಿ, ಮೊದಲು ಹಿಜಾಬ್, ನಂತರ ಲೌಡ್‌ಸ್ಪೀಕರ್ ವಿವಾದ ಬಂದಿತು. ಈಗ ಹಲಾಲ್ ವಿಷಯವನ್ನು ಪ್ರಸ್ತಾಪಿಸಲಾಗುತ್ತಿದೆ. ಅದೂ ಮುಗೀತು ಅಂತ ಅಂದುಕೊಳ್ಳುವಷ್ಟರಲ್ಲೇ ಅತಿಕ್ರಮಣದ ಹೆಸರಿನಲ್ಲಿ ಅಲ್ಪಸಂಖ್ಯಾತರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಮೋದಿ ಸರ್ಕಾರ ಕಾಶ್ಮೀರವನ್ನು ಸಂಪೂರ್ಣವಾಗಿ ನಾಶ ಮಾಡುತ್ತಿದೆ ಎಂದು ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ. ಜಮ್ಮು ಕಾಶ್ಮೀರ ಮುಸ್ಲಿಂ ಬಾಹುಳ್ಯವಾಗಿದ್ದು, ಇದರಿಂದಾಗಿ ಕೇಂದ್ರ ಸರ್ಕಾರ ನಮ್ಮನ್ನು ದುರ್ಬಲಗೊಳಿಸುವ ಮೂಲಕ ನಮ್ಮ ಅಸ್ತಿತ್ವವನ್ನು ಕೊನೆಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ಟಿವಿ ಚಾನೆಲ್ ಜೊತೆಗಿನ ಸಂವಾದದಲ್ಲಿ ಮೆಹಬೂಬಾ ಮಾತನಾಡುತ್ತ, ಸೇನೆಗೆ ನೀಡಿರುವ ವಿಶೇಷ ಅಧಿಕಾರ, AFSPA ನಿಂದಾಗಿ ಕಣಿವೆಯ ಜನರು ಅಸಮಾಧಾನಗೊಂಡಿದ್ದಾರೆ. ಈ ಕಾನೂನಿನ ನಂತರವೂ ಭಯೋತ್ಪಾದಕ ಘಟನೆಗಳು ನಿರಂತರವಾಗಿ ನಡೆಯುತ್ತಿವೆ ಮತ್ತು ಸಾಮಾನ್ಯ ಜನರೊಂದಿಗೆ ರಾಜಕಾರಣಿಗಳೂ ಗುರಿಯಾಗುತ್ತಿದ್ದಾರೆ ಎಂದರು. ಗಮನಿಸಬೇಕಾದ ಸಂಗತಿಯೇನೆಂದರೆ ಈ ಹಿಂದೆ ಜಮ್ಮು ಕಾಶ್ಮೀರ ಸರ್ಕಾರವು ಮೆಹಬೂಬಾ ಸೇರಿದಂತೆ ಕಾಶ್ಮೀರದ ಎಲ್ಲಾ ಮಾಜಿ ಸಿಎಂಗಳ ಭದ್ರತಾ ವ್ಯವಸ್ಥೆಯನ್ನು ಹಿಂಪಡೆದಿತ್ತು. ಅವರಿಗೆ ನೀಡಲಾದ ಇತರ ಕೆಲವು ವಿಶೇಷ ಹಕ್ಕುಗಳನ್ನೂ ಮೊಟಕುಗೊಳಿಸಲಾಗಿತ್ತು. ಅಂದಿನಿಂದ, ಮೆಹಬೂಬಾ ಮುಫ್ತಿ ಕೆಂಡಾಮಂಡಲವಾಗಿ ಅಸಮಾಧಾನಗೊಂಡಿದ್ದು ಪ್ರತಿದಿನ ದೇಶ ವಿರೋಧಿ, ಮೋದಿ ಸರ್ಕಾರದ ವಿರುದ್ಧದ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ.

ಕೆಲಸವಿಲ್ಲದಿದ್ದರೆ ಯುವಕರು ಬಂದೂಕು ಕೈಗೆತ್ತಿಕೊಳ್ಳುತ್ತಾರೆ ಎಂದಿದ್ದ ಮೆಹಬೂಬಾ ಮುಫ್ತಿ

370 ನೇ ವಿಧಿಯನ್ನು ಕಾಶ್ಮೀರದಿಂದ ರದ್ದುಪಡಿಸಲಾಗಿರುವುದರಿಂದ ಮೆಹಬೂಬಾ ಮುಫ್ತಿ ತನ್ನ ವಿವಾದಾತ್ಮಕ ಹೇಳಿಕೆಗಳಿಂದ ಸುದ್ದಿಯಾಗುತ್ತಿದ್ದಾಳೆ. ಆರ್ಟಿಕಲ್ 370 ರದ್ದುಪಡಿಸಿದಾಗಿನಿಂದ ಈಕೆ ಇಂತಹ ಹಲವಾರು ಹೇಳಿಕೆಗಳನ್ನ ನೀಡುತ್ತಿದ್ದಾಳೆ. ಈಗ ಮತ್ತೊಮ್ಮೆ ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಹೇಳಿಕೆ ನೀಡಿದ್ದು ರಾಜ್ಯದಲ್ಲಿರು ಕಲ್ಲು ತೂರಾಟಗಾರರು, ಉ-ಗ್ರರಿಗೆ ಬೆಂಬಲಿಸಿದ್ದಳು. ಕೆಲಸವಿಲ್ಲದಿದ್ದಾಗ ಹುಡುಗರು ಬಂದೂಕುಗಳನ್ನು ಕೈಗೆತ್ತಿಕೊಳ್ಳುತ್ತಾರೆ ಎಂದು ಮೆಹಬೂಬಾ ಮುಫ್ತಿ ಹೇಳಿದ್ದರು.

ರಾಜ್ಯದಲ್ಲಿ ತನ್ನ ರಾಜಕೀಯ ಅಸ್ತಿತ್ವ ಕೊನೆಯಾಗುತ್ತಿರುವ ಬಗ್ಗೆ ಕಂಗಾಲಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಪಿಡಿಪಿ ಅಧ್ಯಕ್ಷೆ, “ಆರ್ಟಿಕಲ್ 370 ಅನ್ನು ತೆಗೆದುಹಾಕಿದ ನಂತರ, ಜಮ್ಮು ಕಾಶ್ಮೀರದ ಭೂಮಿ ಮತ್ತು ಉದ್ಯೋಗಗಳನ್ನು ಕಿತ್ತುಕೊಳ್ಳಲು ಬಿಜೆಪಿ ಉದ್ದೇಶಿಸಿದೆ. ಡೋಗ್ರಾ ಸಂಸ್ಕೃತಿಯನ್ನು ಉಳಿಸುವುದು 370 ರ ಗುರಿಯಾಗಿತ್ತು. ಅದು ದೇಶದ ಧ್ವಜವಾಗಲಿ, ಜಮ್ಮು ಕಾಶ್ಮೀರದ ಧ್ವಜವಾಗಲಿ, ಅದನ್ನು ನಮಗೆ ಸಂವಿಧಾನವು ನೀಡಿದೆ. ಬಿಜೆಪಿ ನಮ್ಮಿಂದ ಆ ಧ್ವಜವನ್ನು ಕಸಿದುಕೊಂಡಿದೆ” ಎಂದಿದ್ದರು.

ಪತ್ರಕರ್ತರೊಂದಿಗೆ ಮಾತನಾಡಿದ ರಾಜ್ಯದ ಮಾಜಿ ಸಿಎಂ ಮೆಹಬೂಬಾ ಮುಫ್ತಿ, “ಇಂದು ಅವರ (ಬಿಜೆಪಿ) ಸಮಯವಿದೆ, ಕಾಲ ಹೀಗೇ ಇರಲ್ಲ ನಾಳೆ ನಾವು ಅಧಿಕಾರಕ್ಕೆ ಬರುತ್ತೇವೆ. ಬಾರ್ಡರ್‌ನ ರಸ್ತೆಗಳನ್ನ ಓಪನ್ ಮಾಡಬೇಕು. ಜಮ್ಮು ಕಾಶ್ಮೀರ ಉಭಯ ದೇಶಗಳ (ಭಾರತ ಪಾಕಿಸ್ತಾನ) ನಡುವೆ ಶಾಂತಿಯ ಸೇತುವೆಯಾಯಿತು. ನಮ್ಮ ಧ್ವಜವನ್ನು ನಮಗೆ ಹಿಂತಿರುಗಿಸಿ. ನಾವು ಒಟ್ಟಾಗಿ ಚುನಾವಣೆಗಳಲ್ಲಿ ಹೋರಾಡುತ್ತಿದ್ದೇವೆ. ಜಮ್ಮು ಕಾಶ್ಮೀರವನ್ನು ತುಂಡುಗಳಾಗಿ ಕತ್ತರಿಸಲಾಗಿದೆ. ಈ ಶಕ್ತಿಯನ್ನು (ಬಿಜೆಪಿ) ಸೋಲಿಸಲು ನಾವು ಕೈಜೋಡಿಸಿದ್ದೇವೆ” ಎಂದು ಹೇಳಿದ್ದರು.

370 ನೇ ವಿಧಿಗೆ ಸಂಬಂಧಿಸಿದಂತೆ ಮಾತನಾಡಿದ ಮೆಹಬೂಬಾ, ಇದು ಮುಸ್ಲಿಂ ಅಥವಾ ಹಿಂದೂಗಳಿಗೆ ಸಂಬಂಧಿಸಿದ ವಿಷಯವಲ್ಲ, ಆದರೆ ಇದು ಜಮ್ಮು ಕಾಶ್ಮೀರದ ಜನರ ಗುರುತು. ಜನರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಕೇಂದ್ರ ಸರ್ಕಾರ ಬಾಬಾಸಾಹೇಬರ ಸಂವಿಧಾನದೊಂದಿಗೆ ಆಟವಾಡಿದೆ ಎಂದು ಹೇಳಿದ್ದಾಳೆ. ಬಿಜೆಪಿಯನ್ನು ಗುರಿಯಾಗಿಸಿ‌ಕೊಂಡು ಮೆಹಬೂಬಾ ಮುಫ್ತಿ ಕಾಶ್ಮೀರಿ ಪಂಡಿತರ ವಿಷ್ಯ ಏನಾಯ್ತು? ಬಿಜೆಪಿ ಅವರಿಗೆ ಭರವಸೆ ನೀಡಿತ್ತು ಆದರೆ ಏನೂ ಆಗಲಿಲ್ಲ ಎಂದು ಬಿಜೆಪಿಯನ್ನ ಪ್ರಶ್ನಿಸಿದ್ದರು.

Advertisement
Share this on...