ದರ್ಗಾ-ಎ-ಹಕೀಮಿ ಜಾಗದಲ್ಲಿ ಹೂತು ಹೋಗಿದ್ದ ಆಂಜನೇಯ ವಿಗ್ರಹ ಪತ್ತೆ: ಬೀಗ ಮುರಿದು ಪೂಜೆ ಮಾಡಿದ ಹಿಂದುಗಳು

in Uncategorized 8,495 views

ಮಧ್ಯಪ್ರದೇಶದ ಬುರ್ಹಾನ್‌ಪುರದಲ್ಲಿರುವ ದರ್ಗಾ-ಎ-ಹಕೀಮಿ ಮತ್ತು ಇಚ್ಚೇಶ್ವರ ದೇವಸ್ಥಾನ ಟ್ರಸ್ಟ್ ನಡುವಿನ ಅತಿಕ್ರಮಣ ಕುರಿತು ವಿವಾದ ಮುಂದುವರೆದಿದೆ. ಏತನ್ಮಧ್ಯೆ, ಹಿಂದೂ ಸಂಘಟನೆಗಳು ಮತ್ತು ದರ್ಗಾ-ಎ-ಹಕೀಮಿ ಮುಖಾಮುಖಿಯಾದ ಬಗ್ಗೆ ಮತ್ತೊಂದು ವಿವಾದವೂ ಮುನ್ನೆಲೆಗೆ ಬಂದಿದೆ. ಮಂಗಳವಾರ ಮಧ್ಯಾಹ್ನ, ದರ್ಗಾದ ಹಿಂಭಾಗದಲ್ಲಿ ಸಾಕಷ್ಟು ಕೋಲಾಹಲ ಉಂಟಾಯಿತು. ಹಿಂದೂ ಸಂಘಟನೆಗಳು, ಇಚ್ಚೇಶ್ವರ ಹನುಮಾನ್ ಮಂದಿರ ಟ್ರಸ್ಟ್ ಸದಸ್ಯರು ಮತ್ತು ಸ್ಥಳೀಯ ಜನರು ದರ್ಗಾ ಬಳಿ ಪ್ರತಿಭಟನೆ ನಡೆಸಿದರು.

Advertisement

ಮಂಗಳವಾರ ಪ್ರತಿಭಟನೆ ನಡೆದದ್ಯಾಕೆ?

ಬುರ್ಹಾನ್‌ಪುರದ ಲೋಧಿಪುರದಲ್ಲಿರುವ ದರ್ಗಾ-ಎ-ಹಕೀಮಿ ಜಾಗದ ಜಮೀನಿನಲ್ಲಿ ಆಂಜನೇಯನ ವಿಗ್ರಹವನ್ನು ಪೂಜಿಸುವ ಬಗ್ಗೆ ವಿವಾದ ಉಂಟಾಗಿದೆ. ಹಿಂದೂ ಸಂಘಟನೆಗಳು ಮತ್ತು ಸ್ಥಳೀಯ ಜನರು ಈ ಸ್ಥಳದಲ್ಲಿ ದೇವಸ್ಥಾನವಿತ್ತು ಮತ್ತು ಅದನ್ನು ರಕ್ಷಿಸುವ ಭರವಸೆಯೊಂದಿಗೆ ದರ್ಗಾದೊಂದಿಗೆ ಜಮೀನು ಒಪ್ಪಂದವನ್ನು ಮಾಡಲಾಗಿತ್ತು ಎಂದು ಹೇಳಿಕೊಳ್ಳುತ್ತಾರೆ. ಆದರೆ ದರ್ಗಾ ಕಡೆಯಿಂದ ದೇವಸ್ಥಾನ ಧ್ವಂಸ ಮಾಡಿದ್ದು ಮಾತ್ರವಲ್ಲದೆ ಅದಕ್ಕೆ ಹೋಗುವ ರಸ್ತೆಗೂ ಬೀಗ ಹಾಕಲಾಗಿದೆ.

ಜಮೀನಿನಲ್ಲಿ ದೇವಸ್ಥಾನವಿದೆ ಎಂದು ಗೊತ್ತಾಗಿದ್ದು ಹೇಗೆ?

ದರ್ಗಾ-ಎ-ಹಕಿಮಿ ಮತ್ತು ಇಚ್ಚೇಶ್ವರ ದೇವಸ್ಥಾನ ಟ್ರಸ್ಟ್ ನಡುವೆ ನಡೆಯುತ್ತಿರುವ ವಿವಾದವನ್ನು ಪರಿಹರಿಸುವ ಸಲುವಾಗಿ, ದೇವಸ್ಥಾನದ ಟ್ರಸ್ಟ್‌ನ ಜನರು ಕಳೆದ ದಿನಗಳು ಜಮೀನಿನ ಬಳಿ ಶಾಸಕಿ ಸುಮಿತ್ರಾ ಕಾಸ್ಡೇಕರ್ ಅವರೊಂದಿಗೆ ಚರ್ಚಿಸುತ್ತಿದ್ದರು. ಇಲ್ಲಿ ಪುರಾತನವಾದ ಶಿವಾಲಯವಿತ್ತು. ದಟ್ಟವಾದ ಪೊದೆಗಳ ನಡುವೆ ಆಂಜನೇಯನ ಪುರಾತನ ವಿಗ್ರಹ ಸಿಕ್ಕಿತ್ತು ಎಂದು ಟ್ರಸ್ಟ್ ನವರು ಹೇಳಿಕೊಂಡಿದ್ದರು. ಇದು ದೇವಾಲಯದ ಟ್ರಸ್ಟ್ ಮತ್ತು ಹಿಂದೂ ಸಂಘಟನೆಯ ಜನರ ಹಕ್ಕುಗಳನ್ನು ಬಲಪಡಿಸಿತು. ಆಂಜನೇಯನ ವಿಗ್ರಹ ಸಿಕ್ಕ ತಕ್ಷ ಭಕ್ತರು ಪೂಜಿಸಲು ಬಯಸಿದರು. ಆದರೆ ದರ್ಗಾದಿಂದ ಜಮೀನಿಗೆ ಹೋಗುವ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಇದರಿಂದ ಇತ್ತೀಚಿನ ವಿವಾದ ಹುಟ್ಟಿಕೊಂಡಿದೆ.

ಆಂಜನೇಯನ ಪೂಜೆ ಮಾಡಿದ ಭಕ್ತರು

ದೇವರ ಪೂಜೆಯನ್ನು ನಿಲ್ಲಿಸಿದ ನಂತರ, ಪ್ರತಿಭಟಿಸುವ ಭಕ್ತರ ಸಂಖ್ಯೆ ಹೆಚ್ಚಾಗತೊಡಗಿತು. ಭಕ್ತರು ಗೇಟಿನ ಹೊರಗೆ ಸ್ತೋತ್ರಗಳನ್ನು ಮತ್ತು ಹನುಮಾನ್ ಚಾಲೀಸಾವನ್ನು ಪಠಿಸಿದರು. ಇದಾದ ಬಳಿಕ ಗೇಟ್ ಬಂದ್ ಮಾಡಿರುವುದನ್ನು ವಿರೋಧಿಸಿ ಬೀಗ ಒಡೆದು ಹೊಲದ ಜಾಗಕ್ಕೆ ತೆರಳಿದ ಬಳಿಕ ಅಲ್ಲಿ ಪುರಾತನ ಆಂಜನೇಯನ ವಿಗ್ರಹ ಸಿಕ್ಕಿತು. ಅಲ್ಲಿ ಅವರು ಆಂಜನೇಯನನ್ನ ಪೂಜಿಸಿದರು. ಆಂಜನೇಯನ ಮೂರ್ತಿಯನ್ನು ಪೂಜಿಸುವ ಸಂಪೂರ್ಣ ಹಕ್ಕಿನ ಬಗ್ಗೆ ಹಿಂದೂ ಸಂಘಟನೆ ಮಾತನಾಡುತ್ತಿದೆ. ಅದೇ ಸಮಯದಲ್ಲಿ, ಅನುಮತಿಯಿಲ್ಲದೆ ಖಾಸಗಿ ಆಸ್ತಿಯನ್ನು ಬಲವಂತವಾಗಿ ಪ್ರವೇಶಿಸಲಾಗಿದೆ ಎಂದು ದರ್ಗಾ ಆಡಳಿತವು ಹೇಳುತ್ತಿದೆ.

ಪ್ರಕರಣದ ಬಗ್ಗೆ ದರ್ಗಾ-ಎ-ಹಕೀಮಿ ಸದಸ್ಯರು ಹೇಳೋದೇನು?

ಜಮೀನಿನ ವಿವಾದದ ಕುರಿತು ದರ್ಗಾದ ಕಮಿಟಿ ಹೇಳುವ ಪ್ರಕಾರ 1986 ರಲ್ಲಿ ಶಂಕರ್ ಸಿಂಗ್ ಎಂಬ ವ್ಯಕ್ತಿಯಿಂದ ಜಮೀನನ್ನು ಖರೀದಿಸಿತ್ತು. ಆಂಜನೇಯನ ವಿಗ್ರಹವನ್ನು ಹಲವು ವರ್ಷಗಳಿಂದ ಅಲ್ಲಿ ಇರಿಸಲಾಗಿತ್ತು. ಜಮೀನಿನ ಮಾಲೀಕನೇ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದಾನೆ ಎಂದು ದರ್ಗಾ ಹೇಳುತ್ತದೆ. ಅದು ಸಾರ್ವಜನಿಕ ಸ್ಥಳವಾಗಲೀ, ದೇವಸ್ಥಾನವಾಗಲೀ ಇರಲಿಲ್ಲ. ಇಲ್ಲಿ ಖಾಸಗಿ ವೇದಿಕೆ ಮತ್ತು ವಿಗ್ರಹವಿತ್ತು. ಇಂದಿಗೂ ಅವುಗಳು ಅದೇ ಸ್ಥಿತಿಯಲ್ಲಿವೆ. ಟ್ರಸ್ಟ್ ಅದನ್ನು ಸುರಕ್ಷಿತವಾಗಿಟ್ಟಿದೆ ಎಂದು ಹೇಳಿದ್ದಾರೆ. ಮಂಗಳವಾರ, ವಿವಾದದ ಸಮಯದಲ್ಲಿ, ನಾವು ಪೂಜೆಗೆ ದರ್ಗಾದ ಅನುಮತಿ ತೆಗೆದುಕೊಳ್ಳುವ ಬಗ್ಗೆ ಮಾತನಾಡಿದ್ದೇವೆ, ಅದನ್ನು ಸ್ವೀಕರಿಸಲಿಲ್ಲ. ಜಮೀನನ್ನು ದರ್ಗಾ ಖಾಸಗಿ ಆಸ್ತಿ ಎಂದು ಹೇಳಿಕೊಳ್ಳುತ್ತಿದೆ. ಈ ರೀತಿ ಬೀಗ ಒಡೆದು ಯಾರೊಬ್ಬರ ಖಾಸಗಿ ಸ್ವತ್ತಿಗೆ ನುಗ್ಗುವುದು ತಪ್ಪು ಎಂದು ದರ್ಗಾದ ಪರವಾಗಿ ಹೇಳಲಾಗಿದ್ದು, ಈ ಸಂಬಂಧ 100ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣದ ಬಗ್ಗೆ ಹಿಂದೂ ಸಂಘಟನೆಗಳು ಹಾಗು ಮಂದಿರ ಟ್ರಸ್ಟ್ ವಾದವೇನು?

ವರದಿಗಳ ಪ್ರಕಾರ, ಇಚ್ಚೇಶ್ವರ ದೇವಸ್ಥಾನ ಸಮಿತಿಯ ಸದಸ್ಯ ಮಹೇಶ್ ಸಿಂಗ್ ಚೌಹಾಣ್ ಮಾತನಾಡುತ್ತ, “ನಾವು 1912 ರ ನಕ್ಷೆಯನ್ನು ನೋಡಿದ್ದೇವೆ. ಅಲ್ಲಿ ದೇವಸ್ಥಾನವಿದ್ದ ಉಲ್ಲೇಖವಿದೆ. ಕ್ಷೇತ್ರದಲ್ಲಿ ಹನುಮಂತನ ವಿಗ್ರಹವೂ ಪತ್ತೆಯಾಗಿದೆ. ನಮ್ಮ ಧಾರ್ಮಿಕ ಸ್ವಾತಂತ್ರ್ಯದ ಅಡಿಯಲ್ಲಿ ಅಲ್ಲಿ ಪೂಜೆ ಮಾಡುವ ಹಕ್ಕು ನಮಗಿದೆ. ಈ ಬಗ್ಗೆ ದರ್ಗಾ ಆಡಳಿತ ಮಂಡಳಿಯವರೊಂದಿಗೆ ಒಪ್ಪಂದವನ್ನೂ ಮಾಡಿಕೊಳ್ಳಲಾಗಿತ್ತು ಆದರೆ ಜನರು ಪೂಜೆಗೆ ಬಂದಾಗ ಗೇಟ್‌ಗೆ ಹೊರಗಡೆ ಬೀಗ ಹಾಕಲಾಗಿತ್ತು. ಇದರಿಂದ ಆಕ್ರೋಶಗೊಂಡ ಭಕ್ತರು ಬೀಗ ಒಡೆದಿದ್ದಾರೆ” ಎಂದು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಸುಮಾರು 4 ಎಕರೆ ಜಾಗದಲ್ಲಿ ಹನುಮಾನ್ ದೇವಸ್ಥಾನ ಮತ್ತು ದೊಡ್ಡ ಶಿವಲಿಂಗದ ಉಲ್ಲೇಖವಿದೆ ಎಂದು ಮಹೇಶ್ ಸಿಂಗ್ ಚೌಹಾಣ್ ನಕ್ಷೆಯನ್ನು ಉಲ್ಲೇಖಿಸಿ ಹೇಳಿದರು. ದರ್ಗಾದ ಹಿಂಭಾಗದ ಹೊಲಗಳಲ್ಲಿ ಪುರಾತನ ದೇವಾಲಯವಿದೆ ಎಂದು ಸ್ಥಳೀಯರು ಹೇಳಿದ್ದಾರೆ. ನಾವು ಅಲ್ಲಿಗೆ ತಲುಪಿದಾಗ, ನಮಗೆ ಹನುಮಾನ್ ಜೀ ಮೂರ್ತಿಯು ಮಣ್ಣಿನಲ್ಲಿ ಕಂಡುಬಂದಿತು. ಆ ನಂತರ ನಮ್ಮ ಮತ್ತು ಭಕ್ತರ ನಂಬಿಕೆ ಬಲಗೊಂಡಿತು.

ಜಮೀನನ್ನು ಮಾರಾಟ ಮಾಡಿದ್ದ ಶಂಕರ್ ಸಿಂಗ್ ಚೌಹಾಣ್ ವಂಶಜರು ಹೇಳೋದೇನು?

ದರ್ಗಾಕ್ಕೆ ಜಮೀನು ಮಾರಾಟ ಮಾಡಿದ ಶಂಕರ್ ಸಿಂಗ್ ಚೌಹಾಣ್ ವಂಶಸ್ಥ ಜಗದೀಶ್ ಸಿಂಗ್ ಚೌಹಾಣ್ ಮಾತನಾಡಿ, ಜಮೀನು ಮಾರಾಟ ಮಾಡುವ ಮುನ್ನ ಮಾಡಿಕೊಂಡ ಒಪ್ಪಂದವನ್ನು ದರ್ಗಾ ಪಾಲಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. ಒಪ್ಪಂದದ ಪ್ರಕಾರ, ದೇವಸ್ಥಾನ ಮತ್ತು ದೇವಸ್ಥಾನಕ್ಕೆ ಹೋಗುವ ದಾರಿಯನ್ನು ಬಿಟ್ಟು ಹೊಲವನ್ನು ಮಾತ್ರ ಮಾರಾಟ ಮಾಡಲಾಗಿತ್ತು. ಈ ಸಂಬಂಧ ಜಗದೀಶ್ ಸಿಂಗ್ ಪೊಲೀಸರಿಗೂ ದೂರು ನೀಡಿದ್ದಾರೆ. ದರ್ಗಾದ ನಿಸ್ರೀನ್ ಅಲಿ ಅವರು ಜಗದೀಶ್ ಸಿಂಗ್ ಅವರಿಗೆ ಸುಳ್ಳು ಸಾಕ್ಷ್ಯ ನೀಡಬೇಕು ಎಂದು ಆಮಿಷ ಒಡ್ಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಜಗದೀಶ್ ಸಿಂಗ್ ಅವರಿಗೆ ಜಮೀನಿನಲ್ಲಿ ಆಂಜನೇಯನ ಮೂರ್ತಿ ಇತ್ತು ಎಂಬ ಸತ್ಯವನ್ನು ನಿರಾಕರಿಸುವಂತೆ ಹಾಗು ಮಂದಿರ ಸಮಿತಿಯ ಸದಸ್ಯರೇ ವಿಗ್ರಹವನ್ನು ಇಲ್ಲಿ ತಂದು ಇರಿಸಿದ್ದಾರೆ ಎಂದು ಸುಳ್ಳು ಸಾಕ್ಷಿ ಹೇಳುವಂತೆ ಆಮಿಷ ಒಡ್ಡಲಾಗಿತ್ತು. ಆದರೆ ಈ ದೇವಾಲಯವು ಹಲವು ತಲೆಮಾರುಗಳಿಂದ ಇಲ್ಲೇ ಸ್ಥಾಪಿಸಲ್ಪಟ್ಟಿದೆ ಎಂಬುದು ಸತ್ಯ ಎಂದು ತಿಳಿಸಿದ್ದಾರೆ.

ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ದರ್ಗಾದ ಸುಮಾರು 100 ಎಕರೆ ಜಮೀನಿನಲ್ಲಿ 4 ಎಕರೆ ದೇವಸ್ಥಾನದ್ದು ಎಂದು ಹೇಳಲಾಗುತ್ತಿದೆ. ಇದಲ್ಲದೇ ದರ್ಗಾ ಹಾಗೂ ಇಚ್ಚೇಶ್ವರ ಹನುಮಾನ್ ದೇವಸ್ಥಾನದ ನಡುವೆ ಅತಿಕ್ರಮಣ ವಿಚಾರವಾಗಿ ವಿವಾದವಿದೆ. ಈ ವಿವಾದ ಇತ್ಯರ್ಥಕ್ಕೆ ಈ ಹಿಂದೆ ಸರ್ವೆ ಕಾರ್ಯವೂ ನಡೆದಿದ್ದರೂ ಫಲ ಸಿಕ್ಕಿರಲಿಲ್ಲ.

Advertisement
Share this on...