ಗರುಡ ಪುರಾಣದ ಪ್ರಕಾರ ಪ್ರಾಣ ಹೋಗುವ ಸಂದರ್ಭದಲ್ಲಿ ಸಾಯುವಾತನ ಬಳಿ ಬಂದು ನಿಂತಿರುತ್ತಾರೆ ಈ ಇಬ್ಬರು ವ್ಯಕ್ತಿಗಳು: ಮನುಷ್ಯ ಸಾಯುವಾಗ ಏನೆಲ್ಲಾ ಅನುಭವವಾಗುತ್ತೆ ನೋಡಿ

in Uncategorized 5,959 views

ಈ ಭೂಮಂಡಲದ ಮೇಲೆ ಜನಿಸುವ ಪ್ರತಿಯೊಂದು ಜೀವಿಯ ಸಾವು ಕೂಡ ನಿಶ್ಚಿತವಾಗಿರುತ್ತದೆ. ದೇಹ ಸಾಯಬಹುದು ಆದರೆ ಆತ್ಮ‌ ಅಮರವಿರುತ್ತದೆಯಾದರೂ ಅದು ದೇಹವನ್ನ ನಿಶ್ಚಿತ ಸಮಯದಲ್ಲಿ ತೊರೆಯಲೇಬೇಕು. ಇದೇ ಮನುಷ್ಯನದ್ದಾಗಲಿ ಅಥವ ಯಾವುದೇ ಜೀವಿಯದ್ದಾಗಲಿ ವಯೋಸಹಜ ಗುಣ. ಇದನ್ನ ತಡೆಯೋಕೆ ಮಾತ್ರ ಯಾರಿಂದಲೂ ಅಥವ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ.

Advertisement

ಭೂಮಂಡಲದ ಜೀವಿ ಅದೆಷ್ಟೇ ಪ್ರಯತ್ನಪಟ್ಟರೂ ಸಾವನ್ನ ಮಾತ್ರ ಗೆಲ್ಲಲು ಸಾಧ್ಯವೇ ಇಲ್ಲ. ಆದರೆ ಜೀವನ ನಶ್ವರವೆಂದು ಗೊತ್ತಿದ್ದರೂ ಕೂಡ ಮನುಷ್ಯ ಅತಿಯಾಸೆ, ದುರಾಸೆ, ಅನಾಚಾರಗಳನ್ನ ಮಾಡುತ್ತಲೇ ಇರುತ್ತಾನೆ. ಬದುಕಿರುವ ಕೆಲ ಕ್ಷಣಗಳ ಖುಷಿಗಾಗಿ ಮನುಷ್ಯ ಮತ್ತೊಬ್ಬರನ್ನ ಮೋಸ ಮಾಡುತ್ತ, ಕಷ್ಟ ಕೊಡುತ್ತೆ, ಅಳಿಸುತ್ತ, ನೋವು ಕೊಡುತ್ತ ತನ್ನ ಸ್ವಾರ್ಥ ಸಾಧನೆಗಳಿಗಾಗಿ ಮಾಡಬಾರದ್ದನ್ನೆಲ್ಲಾ ಮಾಡುತ್ತಾನೆ.

ಮನುಷ್ಯನಿಗೆ ಮುಂದೆ ಏನಾಗುತ್ತೆ ಅನ್ನೋದು ಬೇಕಿಲ್ಲ ಅಥವ ಅದರ ಬಗ್ಗೆ ಯೋಚಿಸುವಷ್ಟೂ ಆತನ ಬಳಿ ಸಹನೆಯಿರುವುದಿಲ್ಲ ಆದರೆ ಇಂದು ತಾನು ಚೆನ್ನಾಗಿದ್ದರೆ ಸಾಕು ಎಂಬ ಸ್ವಾರ್ಥವೇ ಆತನಲ್ಲಿ ತುಂಬಿರುತ್ತದೆ. ಆದರೆ ಯಾವಾಗ ಸಮಯ ಕೈ ಮೀರಿ ಹೋಗುತ್ತೋ ಆಗ ಒಳ್ಳೆಯದೇನಾದರೂ ಮಾಡಬೇಕೆಂದರೂ ಆತನಿಗೆ ಮಾಡೋಕೆ ಅವಕಾಶ ಸಿಗದಂತಾಗಿಬಿಡುತ್ತದೆ.

ತಾನು ಮಾಡಿದ್ದು ತಪ್ಪು, ತಾನೇನು ಅನಾಚಾರಗಳನ್ನ, ಹೀನ ಕೃತ್ಯಗಳನ್ನ ಮಾಡಿದ್ದೆ ಅನ್ನೋದರ ಬಗ್ಗೆ ಯೋಚಿಸುತ್ತಲೇ ಇಡೀ ಜೀವನಪರ್ಯಂತ ಕೊರಗುತ್ತ ಕೂತುಬಿಡುತ್ತಾನೆ. ಹೌದು, ಒಬ್ಬ ವ್ಯಕ್ತಿಯ ಸಾವು ಸಮೀಪಿಸಿತೆಂದರೆ ಆತ ತನ್ನ ಪರಿವಾರದವರನ್ನ, ಸ್ನೇಹಿತರ ಬಗ್ಗೆ ಯೋಚಿಸಲಿಕ್ಕಿಲ್ಲ ಆದರೆ ತಾನು ಹಿಂದೆ ಮಾಡಿದ್ದ ಹೀನ ಕೃತ್ಯಗಳು, ಪಾಪಗಳನ್ನ ಮಾತ್ರ ನೆನೆಸಿಕೊಳ್ಳದೇ ಇರಲಾರನು.

ತಾನು ಇನ್ನೇನು ಸಾಯುತ್ತೀನಿ ಅಂತ ಮನುಷ್ಯನಿಗೆ ಗೊತ್ತಾದಾಗ ಶಾರೀರಿಕ ನೋವು ಕಾಣಿಸಿಕೊಳ್ಳುತ್ತದೆ, ಕಷ್ಟವಾಗುತ್ತಿದೆ ಎಂಬ ಅನುಭವವಾಗುತ್ತದೆ, ಆಗ ಆತನಿಗೆ ತಾನು ಮಾಡಿದ ಪಾಪ ಕಾರ್ಯಗಳ ಬಗ್ಗೆ ನೆನಪಾಗಿ ಪಶ್ಚಾತಾಪ ಕೂಡ ಪಡುತ್ತಾನೆ. ಸಾಯುವ ಹೊತ್ತಿಗೆ ಆತನ ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯೋಕೆ ಆರಂಭವಾಗುತ್ತೆ, ಆದರೆ ಆಗ ಆತನೇನೂ ಮಾಡುವ ಸ್ಥಿತಿಯಲ್ಲಿರಲ್ಲ. ಆಗ ಆತ ತನ್ನ ಜೀವನದಲ್ಲಿ ತಾನು ಮಾಡಿದ್ದ ಒಳ್ಳೆಯ, ಕೆಟ್ಟ ಕಾರ್ಯಗಳ ಬಗ್ಗೆ ಯೋಚಿಸುತ್ತಲೇ ಇರುತ್ತಾನೆ.

ಗರುಡ ಪುರಾಣದಲ್ಲಿ ಹೇಳಿರುವಂತೆ ಮನುಷ್ಯನದ್ದಾಗಲಿ ಅಥವ ಭೂಮಂಡಲದ ಯಾವ ಜೀವಿಯ ಮೃತ್ಯು ಸಮೀಸಿದಾಗ ಆ ವ್ಯಕ್ತಿಗೆ ಆ ಇಬ್ಬರು ವ್ಯಕ್ತಿಗಳು ತನ್ನನ್ನ ಕರೆದುಕೊಂಡು ಹೋಗೋಕೆ ಬರುತ್ತಿದ್ದಾರೆ, ತನ್ನನ್ನೇ ಕ್ರೋಧದಿಂದ ತುಂಬಿದ ಕಣ್ಣುಗಳಿಂದ ನೋಡುತ್ತಿದ್ದಾರೆ ಎಂದು ಭಾಸವಾಗುತ್ತದೆ. ಸಾಯುವ ಆ ಮನುಷ್ಯ ಆ ಇಬ್ಬರು ವ್ಯಕ್ತಿಗಳನ್ನ ನೋಡಬಹುದು, ಅವರು ಯಾರು ಅನ್ನೋದೂ ಕೂಡ ಆತನ ಅನುಭವಕ್ಕೆ ಬರುತ್ತೆ.

ಅಸಲಿಗೆ ಈ ಇಬ್ಬರೂ ವ್ಯಕ್ತಿಗಳು ಯಮದೂತರಾಗಿರುತ್ತಾರೆ, ಸಾಯುವ ವ್ಯಕ್ತಿಯನ್ನ ಯಮಲೋಕಕ್ಕೆ ಕರೆದೊಯ್ಯಲು ಆ ಇಬ್ಬರೂ ದೂತರು ಆತನೆದುರು ನಿಂತಿರುತ್ತಾರೆ. ಗರುಡ ಪುರಾಣದಲ್ಲಿ ಈ ವಿಷಯದ ಕುರಿತಾಗಿ ವಿವರವಾಗಿ ವಿಸ್ತಾರವಾಗಿ ಉಲ್ಲೇಖಗಳನ್ನ ನಾವು ಕಾಣಬಹುದಾಗಿದೆ. ಸತ್ತ ಬಳಿಕ ವ್ಯಕ್ತಿ ಶರೀರವನ್ನೇನೋ ತ್ಯಜಿಸುತ್ತಾನೆ ಆದರೆ ಆತ್ಮ ಮಾತ್ರ ಸಾಯುವುದಿಲ್ಲ.

ಮನುಷ್ಯ ಸತ್ತ ಬಳಿಕ ಆತನ ಆತ್ಮಕ್ಕೆ ತಾನು ಸತ್ತಿದ್ದೇನೆ ಎಂದು 2 ದಿನಗಳವರೆಗೆ ಅನಿಸೋದೇ ಇಲ್ಲ, ತನ್ನ ಶವವನ್ನ ನೋಡಿ ತನ್ನ ಹೆಂಡತಿ ಮಕ್ಕಳು, ಪರಿವಾರದವರು ಅಳುತ್ತಿರೋದನ್ನ ನೋಡಿ ಅರೇ ಇವರ‌್ಯಾಕೆ ಅಳುತ್ತಿದ್ದಾರೆ ನಾನು ಜೀವಂತವಿದ್ದೇನಲ್ಲ ಅಂತಲೇ ಆ ಆತ್ಮಕ್ಕೆ ಭಾಸವಾಗುತ್ತೆ. ಆದರೆ ಆತ್ಮ ಮಾತ್ರ ದೇಹದಿಂದ ದೂರವಾಗಿರುತ್ತದೆ. ದೇಹಕ್ಕೆ ಸಾವಿರಬಹುದು ಆದರೆ ಆತ್ಮಕ್ಕೆ ಮಾತ್ರ ಸಾವೇ ಇಲ್ಲ, ಅದು ಅಮರ.

ಆತ್ಮ ದೇಹ ಬಿಟ್ಟು ಹೊರಹೋಗಬಹುದು ಆದರೆ ಆ ಆತ್ಮ ಮತ್ತೆ ತನ್ನ ಜಾಗ ಹುಡುಕಿಕೊಳ್ಳುತ್ತ ಮತ್ತೆ ಮತ್ತೊಬ್ಬ ಮನುಷ್ಯನ ದೇಹದಲ್ಲಿ ಅಂದರೆ ಹುಟ್ಟುವ ನವಜಾತ ಮಗುವಿನ ದೇಹದಲ್ಲಾಗಲಿ ಅಥವ ಪ್ರಾಣಿ ಪಕ್ಷಿಗಳ ರೂಪದಲ್ಲಿ ಅಥವ ಗಿಡ ಮರಗಳಾಗಿಯೂ ಮತ್ತೆ ತನ್ನ ರೂಪವನ್ನ ಮರಳಿ ಪಡೆಯುತ್ತೆ ಅನ್ನುತ್ತೆ ಗರುಡ ಪುರಾಣ. ಇದು 100% ಶತ ಸತ್ಯ.

ಸಮ್ಮೋಹಿನಿ ತಂತ್ರದ ಮೂಲಕ ಮನುಷ್ಯನ ಪೂರ್ವ ಜನ್ಮದ ರಹಸ್ಯಗಳನ್ನ ತಿಳಿದುಕೊಳ್ಳುವ ಶೋಗಳನ್ನ ನೀವು ನೋಡಿರುತ್ತೀರ, ಅದರಲ್ಲಿ ವ್ಯಕ್ತಿ ತಾನು ಹಿಂದಿನ ಜನ್ಮದಲ್ಲಿ ಏನಾಗಿದ್ದ ಅನ್ನೋದನ್ನ ನಿಖರವಾಗಿ ಹೇಳಬಲ್ಲನೂ ಕೂಡ. ಇದೇ ರೀತಿಯ ಸಮ್ಮೋಹಿನಿ ತಂತ್ರದ ಮೂಲಕ ವ್ಯಕ್ತಿಯೊಬ್ಬನನ್ನ ನೀನು ಹಿಂದಿನ ಜನ್ಮದಲ್ಲಿ ಏನಾಗಿದ್ದೆ ಎಂದು ಕೇಳಿದಾಗ ಆತ ನಾನು ಮರವಾಗಿದ್ದೆ, ಪಕ್ಷಿಯಾಗಿದ್ದೆ,‌ ಪ್ರಾಣಿಯಾಗಿದ್ದೆ ಎಂದು ಹೇಳಿದ ಉದಾಹರಣೆಗಳೂ ಸಾಕಷ್ಟಿವೆ‌.

ಮನುಷ್ಯನಾಗಿ ಹುಟ್ಟೋಕೆ ಪೂರ್ವ ಜನ್ಮದ ಪುಣ್ಯ ಮಾಡಿದೀಯ ಅಂತ ಹಿರಿಯರು ಹೇಳೋದನ್ನ ನೀವು ಕೇಳಿರುತ್ತೀರಲ್ಲ? ಹೌದು ದೇಹದಿಂದ ಆತ್ಮ ಬೇರ್ಪಟ್ಟ ಬಳಿಕ ಆ ಆತ್ಮ ಈ ಭೂಮಂಡಲದ ಪ್ರಕೃತಿಯಲ್ಲಾಗಲಿ ಅಥವ 84 ಲಕ್ಷ ಚರಾಚರ ಜೀವಿಗಳ ರೂಪದಲ್ಲಿ ಮತ್ತೆ ಜನ್ಮ ತಾಳುತ್ತೆ ಆದರೆ ಮುಂದಿನ ಜನ್ಮದಲ್ಲೂ ಮನುಷ್ಯನ ರೂಪವಾಗೇ ಹುಟ್ಟುತ್ತೆ ಅನ್ನೋದು ಆತ್ಮಕ್ಕೆ ಗೊತ್ತಿರುವುದಿಲ್ಲ, ಹಾಗಾಗಿ ಹಿಂದಿನ ಜನ್ಮದಲ್ಲಿ ಮನುಷ್ಯನಾಗಿ ಹುಟ್ಟಿ ಈ ಜನ್ಮದಲ್ಲೂ ಆ ಆತ್ಮ ಮತ್ತೆ ಮನುಷ್ಯನ ದೇಹವನ್ನೇ ಪ್ರವೇಶಿಸಿದರೆ ಮಾನವನಾಗಿ ಹುಟ್ಟೋದಕ್ಕೂ ಪುಣ್ಯ ಮಾಡಿರಬೇಕು ಅಂತ ನಮ್ಮ ಹಿರಿಯರು ಹೇಳೋದು.

ಪುರಾಣಗಳೆಲ್ಲಾ ಸುಳ್ಳು ಅಂತ ಹೇಳುವ ಜನರಿಗೆ ನಮ್ಮ ದೇಶದಲ್ಲೇನೂ ಬರವಿಲ್ಲ ಆದರೆ ಪುರಾಣಗಳು ಸುಳ್ಳು ಅಂತ ಬೊಬ್ಬೆಯಿಡುವ ಜನರು ಮಾತ್ರ ಸತ್ತ ಮೇಲೆ ಮನುಷ್ಯನ ಆತ್ಮ ಏನಾಗುತ್ತೆ ಅಂತ ಕೇಳಿದರೆ ಮಾತ್ರ ನಿರುತ್ತರರಾಗಿಬಿಡುತ್ತಾರೆ‌. ಬಾಯಿಗೆ ಬಂದದ್ದನ್ನೆಲ್ಲಾ ಹೇಳುವ ಬದಲು ತಾವೇ ಹೀಯಾಳಿಸಿದ ಅದೇ ಪುರಾಣಗಳನ್ನ, ವೇದಗಳನ್ನ ಓದಿದರೆ ಒಂದಷ್ಟು ಜ್ಞಾನಾರ್ಜನೆಯಾದರೂ ಮಾಡಿಕೊಳ್ಳಬಹುದು ಅನ್ನೋದು ಮಾತ್ರ ಅವರಿಗೆ ಸಾಯೋವರೆಗೂ ಗೊತ್ತಾಗಲ್ಲ.

– Vinod Hindu Nationalist 

Advertisement
Share this on...