ತನ್ನ ತಂದೆಯಿಂದ 1800 ಸಾಲ ಪಡೆದು ಒಂದೇ ತಿಂಗಳಲ್ಲಿ 20 ಲಕ್ಷ ಸಂಪಾದಿಸಿ ಈಗ ಲಕ್ಷಾಧೀಶ್ವರನಾದ ಯುವಕ: ಪ್ರತಿಯೊಬ್ಬರೂ ಓದಲೇಬೇಕಾದ ಯಶಸ್ಸಿನ ಕಥೆಯಿದು

in Uncategorized 1,828 views

ಒಂದು ವೇಳೆ ನಿಮ್ಮಲ್ಲಿ ಜಯ ಗಳಿಸಬೇಕು, ಯಶಸ್ಸು ಸಾಧಿಸಬೇಕೆಂಬ ಛಲವಿದ್ದಲ್ಲಿ ಜಯ ನಿಮಗೆ ಕಟ್ಟಿಟ್ಟ ಬುತ್ತಿ. ಉತ್ತರಪ್ರದೇಶದ ಚಂದೋಲಿ ಜಿಲ್ಲೆಯ ಪುಟ್ಟ ಹಳ್ಳಿಯ ಮೃತ್ಯುಂಜಯ ಸಿಂಗ್ ರವರ ಕಥೆ ತುಂಬಾ ರೋಚಕವಾಗಿದೆ. ಮೃತ್ಯುಂಜಯ ಸಿಂಗ್ ತನ್ನ ಸ್ವಂತ ಕಂಪೆನಿಯೊಂದನ್ನ ಶುರು ಮಾಡಲು ತನ್ನ ತಂದೆಯಿಂದ 18 ನೂರು ರೂಪಾಯಿಗಳನ್ನು ಸಾಲದ ರೂಪದಲ್ಲಿ ತೆಗೆದುಕೊಂಡಿದ್ದ.

Advertisement

ಆತ ಶುರು ಮಾಡಿದ ಆ್ಯಡ್‌ಜಂಕ್ಷನ್ ಡಾಟ್ ಕಾಮ್ ಕೇವಲ 20 ದಿನಗಳಲ್ಲೇ 20 ಲಕ್ಷ ಟರ್ನ್ ಓವರ್ ಮಾಡೋದನ್ನ ಶುರು ಮಾಡಿದೆ. ನೋಡು ನೋಡುತ್ತಲೇ ಮೃತ್ಯುಂಜಯ ಸಿಂಗ್ ನ ವೆಬಸೈಟ್ ನಲ್ಲಿ ದೊಡ್ಡ ದೊಡ್ಡ ಕಂಪೆನಿಗಳಾದ 9Apps, VidMate, UC Browser, ಅಲಿಬಾಬಾ, Amazon Fivver ಹಾಗು ಇನ್ನೂ ಹಲವು ಕಂಪೆನಿಗಳು ತಮ್ಮ ಪ್ರಾಡಕ್ಟ್ಸ್ ಗಳ ಪ್ರೊಮೋಷನ್ ಮಾಡುತ್ತಿವೆ ಹಾಗು ಅದರ ಸಹಾಯದಿಂದ ಪಬ್ಲಿಷರ್ ಹೆಚ್ಚೆಚ್ಚು ಹಣ ಸಂಪಾದನೆ ಮಾಡುತ್ತಿದ್ದಾನೆ.

ಇಲ್ಲಿ Publisher ಅಂದರೆ ವೆಬಸೈಟ್ ಮಾಲೀಕ ಮೃತ್ಯುಂಜಯ ಸಿಂಗ್. ಆತ ತನ್ನ ಕಠಿಣ ಪರಿಶ್ರಮದಿಂದ ಇಂಟರ್ನೆಟ್ ಜಗತ್ತಿನಲ್ಲಿ ಎಲ್ಲರನ್ನೂ ದಂಗುಬಡಿಸುವಂತಹ ಸಾಧನೆಯನ್ನ ಮಾಡುತ್ತ ಮುನ್ನುಗ್ಗುತ್ತಿದ್ದಾನೆ‌. 21 ವರ್ಷ ವಯಸ್ಸಿನ ಮೃತ್ಯುಂಜಯ ಎಥಿಕಲ್ ಹ್ಯಾಕರ್ ಆಗಿದ್ದು ಆತ ತನ್ನ ಕಠಿಣ ಪರಿಶ್ರಮದ ಮೈಲಕ ಆ್ಯಡ್‌ಜಂಕ್ಷನ್ ಡಾಟ್ ಕಾಮ್ ಎಂಬ ಆ್ಯಡವರ್ಟೈಸಮೆಂಟ್ ಟೆಕ್ನಾಲಾಜಿಗೆ ಸಂಬಂಧಿಸಿದ ವೆಬಸೈಟ್ ತಯಾರಿಸಿದ್ದ. ಆ ವೆಬಸೈಟ್ ಬಹಳ ಇನೋವೇಟಿವ್ ರೀತಿಯಲ್ಲಿ ಆತ ಡಿಸೈನ್ ಮಾಡಿದ್ದಾನೆ.

ಮೃತ್ಯುಂಜಯ ಸಿಂಗನ ತಂದೆ ಮೂಲತಃ ರೈತರಾಗಿದ್ದು, ಆತನ ಅಣ್ಣ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮೃತ್ಯುಂಜಯ ಸಿಂಗನ ಸ್ಟಾರ್ಟಪ್ ಯಾತ್ರೆ ಉತ್ತರಪ್ರದೇಶ ಎಡಿಷನ್ 2017 ನ ವಿಜೇತನಾಗೂ ಹೊರ ಹೊಮ್ಮಿದ್ದಾನೆ. ಮೃತ್ಯುಂಜಯ ಹೇಳುವಂತೆ ಆತ ಮೊದಲು ತನ್ನ ವೆಬಸೈಟ್ ನಲ್ಲಿ ಮೊದಲು Google AdSense ನಿಂದ ತನ್ನ monetization ನಡೆಸುತ್ತಿದ್ದನಂತೆ.

ಆದರೆ ಕೆಲ ದಿನಗಳ ಬಳಿಕ ಆತನ ವೈಬಸೈಟ್ ಗೆ Google AdSense ಬಂದ್ ಆಗಿ ಆತ ಗಳಿಸಿದ್ದ ಹಣವೆಲ್ಲಾ ಮುಳುಗಿಹೋಗಿತ್ತು. ಬಳಿಕ ಆತ ಛಲ ಬಿಡದೆ, ಕುಗ್ಗದೆ ಈ ಸಮಸ್ಯೆಯಿಂದ ಹೊರ ಬರಲು ಆತ unique platform ಒಂದನ್ನ ಮಾಡಿ ಅದರಲ್ಲಿ ದೊಡ್ಡ ದೊಡ್ಡ ಕಂಪೆನಿಗಳ advertisement ಹಾಗು promotion ಮಾಡಿ ಹಾಗು publisher ತಮ್ಮ ವೆಬಸೈಟ್ ಹಾಗು application ನ ಮೂಲಕ ಹಣ ಗಳಿಸುವಂತೆ ಮಾಡುವ ಯೋಜನೆಯನ್ನ ರೂಪಿಸಿದ.

ಬಳಿಕವೇನು? ಆತ ಅಂದುಕೊಂಡಂತೆ ವೆಬಸೈಟ್ ಒಂದನ್ನ ತಯಾರಿಸಿದ, ದೊಡ್ಡ ದೊಡ್ಡ ಕಂಪೆನಿಗಳು ಆತನ ವೆಬಸೈಟ್ ನಲ್ಲಿ Ads ನೀಡಲು ಒಬ್ಬರ ಹಿಂದೆ ಒಬ್ಬರು ಬರಲಾರಂಭಿಸಿದರು. ಮೃತ್ಯುಂಜಯ ಸಿಂಗನ ಪ್ರಕಾರ ಈ ಜಗತ್ತಿನಲ್ಲಿ ಯಾವ ಕೆಲಸವೂ impossible ಅಲ್ಲ ಅನ್ನೋದನ್ನ ಸಾಬೀತು ಮಾಡಿ ತೋರಿಸಿದ್ದ‌. ತನ್ನ ವೆಬಸೈಟ್ ನಿಂದ ಬಹಳಷ್ಟು ಜನ ಕೂಡ ಹಣ ಸಂಪಾದಿಸುತ್ತಿದ್ದಾರೆ ಹಾಗು ಈತನ ವೆಬಸೈಟ್ ಕೇವಲ ಇಪ್ಪತ್ತೇ ದಿನಗಳಲ್ಲಿ ಎಂಥಾ ಗ್ರೋಥ್ ರೀಚ್ ಮಾಡಿತ್ತೆಂದರೆ ದೊಡ್ಡ ದೊಡ್ಡ ಕಂಪೆನಿಗಳು ಈತನ ಜೊತೆ ಟೈಯಪ್ ಮಾಡಿಕೊಳ್ಳಲು ಇದೀಗ ಮುಂದೆ ಬರುತ್ತಿವೆ.

ಮೃತ್ಯುಂಜಯ ತನ್ನ ಈ ಸ್ಟಾರ್ಟಪ್ ಶುರು ಮಾಡಲು ತನ್ನ ತಂದೆಯಿಂದ ಕೇವಲ 1800 ರೂ.ಗಳನ್ನ ಸಾಲ ಪಡೆದಿದ್ದ. ತಿಂಗಳೊಳಗಾಗಿ ಈತ ಶುರು ಮಾಡಿದ್ದ ಕಂಪೆನಿ ಈಗ ಲಕ್ಷಾಂತರ ರೂಪಾಯಿ ಟರ್ನ ಓವರ್ ಮಾಡುತ್ತಿದೆ. ಮೃತ್ಯುಂಜಯ ಸಿಂಗ್ ಗೆ ತನ್ನ ಮೊದಲ ಫಂಡಿಂಗ್ ಕೂಡ ಇದೀಗ ಆಗಿದೆ. ಇದೀಗ ಮೃತ್ಯುಂಜಯ ಎಂತಹ ಆ್ಯಪ್ ಮಾಡೋಕೆ ಹೊರಟಿದಾನೆಂದರೆ ಮೊಬೈಲ್ ಕಳೆದು ಹೋದಲ್ಲಿ ಅಥವ ಮೊಬೈಲ್ ಕಳ್ಳತನವಾಗಿದ್ದರೆ ಆ ಮೊಬೈಲನ್ನ ಲೊಕೇಟ್ ಮಾಡುವಂತಹ ವಿಶಿಷ್ಟವಾದ ಆ್ಯಪ್ ರೆಡಿ ಮಾಡಲು ತನ್ನನ್ನ ತಾನು ತೊಡಗಿಸಿಕೊಂಡಿದ್ದಾನೆ.

Advertisement
Share this on...