“ಹುಡುಗರ ಜೊತೆ ಕೊ-ಎಜುಕೇಷನ್ ಇರೋ ಕಾರಣದಿಂದ ಮುಸ್ಲಿಂ ಯುವತಿಯರು ಇಸ್ಲಾಂ ಬಿಡ್ತಿದಾರೆ, ಇದೊಂದು ದೊಡ್ಡ ಷಡ್ಯಂತ್ರ, ಮುಂದೆ ಅನಾಹುತ ಆಗುತ್ತೆ”: ಮೌಲಾನಾ ಮದನಿ

in Uncategorized 2,773 views

ಜಮಿಯತ್-ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಸಹ-ಶಿಕ್ಷಣವು (coeducation) ಮುಸ್ಲಿಂ ಹೆಣ್ಣುಮಕ್ಕಳನ್ನು ‘ಇಸ್ಲಾಂ ಧರ್ಮವನ್ನು ತ್ಯಜಿಸುವ’ತ್ತ ಕೊಂಡೊಯ್ಯುತ್ತಿದೆ. ಇದನ್ನು ತಡೆಯಲು ಹೆಚ್ಚಿನ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಜಮಿಯತ್ ಸಭೆಯಲ್ಲಿ ಅರ್ಷದ್ ಮದನಿ ಮಾತನಾಡುತ್ತ, “ಸಂಪೂರ್ಣ ಯೋಜನೆ ಅಡಿಯಲ್ಲಿ ಮುಸ್ಲಿಮರ ವಿರುದ್ಧ ಷಡ್ಯಂತ್ರವನ್ನು ಪ್ರಾರಂಭಿಸಲಾಗಿದೆ. ಈ ಯೋಜನೆಯಡಿಯಲ್ಲಿ ಮುಸ್ಲಿಂ ಹುಡುಗಿಯರನ್ನು ಟಾರ್ಗೆಟ್ ಮಾಡಲಾಗುತ್ತಿದೆ” ಎಂದರು.

Advertisement

ಈ ದುರಾಸೆ ಮತ್ತು ಧರ್ಮಭ್ರಷ್ಟತೆಯನ್ನು ತಡೆಯಲು ಯಾವುದೇ ಪರಿಣಾಮಕಾರಿ ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಸ್ಫೋಟಕವಾಗಲಿದೆ ಎಂದು ಅವರು ಹೇಳಿದ್ದಾರೆ. ಸಹ-ಶಿಕ್ಷಣ (coeducation) ಪದ್ಧತಿಯಿಂದಾಗಿ ಇಸ್ಲಾಂ ಧರ್ಮವನ್ನು ತೊರೆಯುವ ದುರಾಸೆ ಮತ್ತು ಷಡ್ಯಂತ್ರವನ್ನು ಪ್ರೋತ್ಸಾಹಿಸಲಾಗುತ್ತಿದೆ. ಅದಕ್ಕಾಗಿಯೇ ನಾವು ಇದನ್ನು ವಿರೋಧಿಸುತ್ತಿದ್ದೇವೆ ಎಂದಿದ್ದಾರೆ.

ಅವರು ಮುಂದೆ ಮಾತನಾಡುತ್ತ, ಆದರೆ ಮಾಧ್ಯಮಗಳು ಅವರ ದೃಷ್ಟಿಕೋನವನ್ನು ತಪ್ಪಾಗಿ ಬಿಂಬಿಸಿ, ಮೌಲಾನಾ ಮದನಿ ಹೆಣ್ಣುಮಕ್ಕಳ ಶಿಕ್ಷಣದ ವಿರುದ್ಧ, ಅವರು ಸಹ-ಶಿಕ್ಷಣದ ವಿರುದ್ಧ ಎಂದು ಬಿಂಬಿಸಿದ್ದರು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ತಾನು ವಿರೋಧಿಯಲ್ಲ, ಅದರ ಪರ ಪ್ರತಿಪಾದಿಸುತ್ತೇನೆ ಎಂದೂ ಮದನಿ ಹೇಳಿದ್ದಾರೆ.

ಜಮಿಯತ್-ಉಲೆಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಮದನಿ ಮಾತನಾಡುತ್ತ, “ದೇಶದ ಪ್ರಗತಿ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ನಾವು ಏನು ಮಾಡಬಹುದೋ ಅದನ್ನು ಈಗಲೇ ಮಾಡಬೇಕು. ದೇಶದ ಸ್ವಾತಂತ್ರ್ಯದ ನಂತರ, ನಾವು ಒಂದು ರಾಷ್ಟ್ರವಾಗಿ ಇತಿಹಾಸದಲ್ಲಿ ಅತ್ಯಂತ ಮಹತ್ವದ ಘಟ್ಟವನ್ನು ತಲುಪಿದ್ದೇವೆ” ಎಂದರು.

ಮೌಲಾನಾ ಅರ್ಷದ್ ಮದನಿ, ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶಾಲೆಗಳನ್ನು ಪ್ರತಿಪಾದಿಸುತ್ತಾ, “ಒಂದೆಡೆ ನಾವು ಅನೇಕ ರೀತಿಯ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುತ್ತಿದ್ದೇವೆ. ಮತ್ತೊಂದೆಡೆ, ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಅಭಿವೃದ್ಧಿಯ ಹಾದಿಯೂ ನಮಗೆ ಮುಚ್ಚಿಹೋಗಿದೆ. ನಮ್ಮ ವಿರುದ್ಧ ನಡೆಸುತ್ತಿರುವ ಷಡ್ಯಂತ್ರಗಳನ್ನು ವಿಫಲಗೊಳಿಸಬೇಕಾದರೆ ನಾವು ನಮ್ಮ ಹುಡುಗ ಹುಡುಗಿಯರಿಗೆ ಪ್ರತ್ಯೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕು” ಎಂದಿದ್ದಾರೆ.

ಜ್ಞಾನವಾಪಿ ವಿವಾದದ ಬಗ್ಗೆಯೂ ಈ ಹಿಂದೆ ಮಾತನಾಡಿದ್ದ ಮೌಲಾನಾ ಮದನಿ

ಕೋಮುವಾದಿಗಳ ಕಿಡಿಗೇಡಿತನದಿಂದ ಜ್ಞಾನವಾಪಿ ಮಸೀದಿ ವಿಚಾರ ಸಾರ್ವಜನಿಕ ಹಾಗೂ ನ್ಯಾಯಾಂಗ ಮಟ್ಟದಲ್ಲಿ ಇಂದಿನ ಚರ್ಚೆಗೆ ಗ್ರಾಸವಾಗಿದೆ ಎಂದು ಜಮೀಯತ್ ಉಲೇಮಾ-ಎ-ಹಿಂದ್ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಮಹಮೂದ್ ಅಸಾದ್ ಮದನಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದರು.

ಕೆಲವು ಸಮಾಜ ವಿರೋಧಿಗಳು ಮತ್ತು ಪಕ್ಷಪಾತಿ ಮಾಧ್ಯಮಗಳು ಭಾವನಾತ್ಮಕವಾಗಿ ವಿರೂಪಗೊಳಿಸಿ ಎರಡು ಸಮುದಾಯಗಳ ನಡುವೆ ಬಿರುಕು ಮೂಡಿಸಲು ಯತ್ನಿಸುತ್ತಿವೆ. ಈ ಸಂದರ್ಭಗಳಲ್ಲಿ ಜಮಿಯತ್ ಉಲೇಮಾ-ಎ-ಹಿಂದ್ ಭಾರತದ ಎಲ್ಲಾ ಮುಸ್ಲಿಮರಿಗೆ, ವಿಶೇಷವಾಗಿ ಭಾರತದ ಮುಸ್ಲಿಮರಿಗೆ ಸಹಾನುಭೂತಿಯ ಮನವಿಯನ್ನು ಮಾಡುತ್ತದೆ ಎಂದಿದ್ದರು.

ಮುಸ್ಲಿಮರು ಈ ಮೂರು ವಿಷಯಗಳ ಬಗ್ಗೆ ಎಚ್ಚರ ವಹಿಸಬೇಕು ಜಮಿಯತ್ ಉಲೇಮಾ-ಎ-ಹಿಂದ್ ಬಯಸುತ್ತದೆ…

(1) ಜ್ಞಾನವಾಪಿ ಮಸೀದಿಯಂತಹ ಸಮಸ್ಯೆಗಳನ್ನು ಬೀದಿಗೆ ತರಬಾರದು ಮತ್ತು ಎಲ್ಲಾ ರೀತಿಯ ಸಾರ್ವಜನಿಕ ಪ್ರತಿಭಟನೆಗಳನ್ನ ತಪ್ಪಿಸಬೇಕು.

(2) ಮಸ್ಜಿದ್ ಇಂತೇಜಾಮಿಯಾ ಕಮೀಟಿಯು ಈ ಪ್ರಕರಣದಲ್ಲಿ ಕಕ್ಷಿದಾರರಾಗಿ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣದ ವಿರುದ್ಧ ಹೋರಾಡುತ್ತಿದೆ. ಅವರು ಈ ಪ್ರಕರಣವನ್ನು ಕೊನೆಯವರೆಗೂ ದೃಢವಾಗಿ ಹೋರಾಡುತ್ತಾರೆ ಎಂದು ಭಾವಿಸುತ್ತೇವೆ. ಇದರಲ್ಲಿ ನೇರವಾಗಿ ಮಧ್ಯಪ್ರವೇಶಿಸದಂತೆ ದೇಶದ ಇತರೆ ಸಂಘಟನೆಗಳಿಗೆ ಮನವಿ ಮಾಡಲಾಗಿದೆ. ಏನೇ ಸಹಾಯ ಮಾಡಬೇಕಿದ್ದರೂ ಮೊದಲು ಕಮಿಟಿಗೆ ತಿಳಿಸಿ, ನಂತರ ಸಮಿತಿಯು ತನ್ನ ಇಚ್ಛೆಯಂತೆ ವಿಷಯಗಳನ್ನು ಪರಿಶೀಲಿಸುತ್ತದೆ.

(3) ಟಿವಿಯಲ್ಲಿ ಚರ್ಚೆ ಮಾಡುವ ಉಲೇಮಾ, ವಕ್ತಾರರು ಮತ್ತು ವಿಶೇಷವಾಗಿ ಪತ್ರಿಕಾ ವಕ್ತಾರರು ಟಿವಿ ಚರ್ಚೆಗಳು ಮತ್ತು ಡಿಬೇಟ್ ಗಳಲ್ಲಿ ಭಾಗವಹಿಸದಂತೆ ಅಥವ ಪಾಲ್ಗೊಳ್ಳದಂತೆ ಮನವಿ ಮಾಡಲಾಗುತ್ತದೆ. ಈ ವಿಷಯವು ನ್ಯಾಯಾಲಯದಲ್ಲಿ ಉಪನ್ಯಾಯಾಲಯದಲ್ಲಿರುವುದರಿಂದ ಸಾರ್ವಜನಿಕ ಚರ್ಚೆಗಳಲ್ಲಿ ಇಂತಹ ವಿಷಯದ ಬಗ್ಗೆ ಚರ್ಚೆ ನಡೆಸುವುದು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಹೇಳಿಕೆಗಳನ್ನು ನೀಡುವುದು ದೇಶದ ಮತ್ತು ಮುಸ್ಲಿಮರ ಹಿತಾಸಕ್ತಿಯಲ್ಲ.

 

Advertisement
Share this on...