ಕ್ರಿಮಿನಲ್ ಅನೀಸ್ ದಾ ಳಿ ಯಲ್ಲಿ ಪ್ರಾಣ ಕಳೆದುಕೊಂಡ ದೆಹಲಿ ಪೊಲೀಸ್ ವೀರ ಎಎಸ್ಐ ಶಂಭು ದಯಾಳ್ ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಈ ವೇಳೆ ದೆಹಲಿ ಪೊಲೀಸ್ ಆಯುಕ್ತರೇ ಅವರ ಮೃತದೇಹಕ್ಕೆ ಹೆಗಲು ಕೊಟ್ಟಿದ್ದರು. ಶಂಭು ದಯಾಳ್ ಅವರ ಗೌರವಾರ್ಥ ಜನರು ಪುಷ್ಪವೃಷ್ಟಿ ಮಾಡಿದರು. ಇದೇ ವೇಳೆ ಮೊಹಮ್ಮದ್ ಅನೀಸ್ ಶಂಭು ದಯಾಳ್ ರವರ ಮೇಲೆ ಹ-ಲ್ಲೆ ನಡೆಸಿದ ವಿಡಿಯೋ ಕೂಡ ಹೊರಬಿದ್ದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಎಎಸ್ಐ ಶಂಭು ದಯಾಳ್ ಚಾಕು ಇರಿತದ ನಂತರವೂ ಅನೀಸ್ ನೊಂದಿಗೆ ಹೋರಾಡುತ್ತಿರುವುದು ಕಂಡುಬಂದಿದೆ.
ಮಾಧ್ಯಮ ವರದಿಗಳ ಪ್ರಕಾರ, ಡಿಸಿಪಿ ಪ್ರಧಾನ ಕಚೇರಿಯಲ್ಲಿ ಹುತಾತ್ಮ ಯೋಧ ಶಂಭು ದಯಾಳ್ ಅವರ ಅಂತಿಮ ವಿದಾಯಕ್ಕೆ ದೆಹಲಿ ಪೊಲೀಸರ ಎಲ್ಲ ಸಿಬ್ಬಂದಿಗಳೂ ಆಗಮಿಸಿದ್ದರು. ಸ್ವತಃ ಪೋಲಿಸ್ ಆಯುಕ್ತ ಸಂಜಯ್ ಅರೋರಾ ಕೂಡ ಉಪಸ್ಥಿತರಿದ್ದರು. ತನ್ನ ಅಧೀನ ಅಧಿಕಾರಿಯಾಗಿದ್ದ ಎಎಸ್ಐನ ಮೃತದೇಹಕ್ಕೆ ಅವರು ಹೆಗಲನ್ನೂ ಕೊಟ್ಟಿದ್ದಾರೆ. ಶಂಭು ದಯಾಳ್ ಅವರ ಪಾರ್ಥಿವ ಶರೀರವು ರಾಜಸ್ಥಾನದ ಸೀಕರ್ ಜಿಲ್ಲೆಯ ಗಾವ್ಲಿ ಬಿಹಾರಿಪುರ ಗ್ರಾಮಕ್ಕೆ ತಲುಪಿದಾಗ, ಜನರು ಶವದ ಮೇಲೆ ಪುಷ್ಪವೃಷ್ಟಿ ಮಾಡಿದರು. ಈ ವೇಳೆ ದೇಶಭಕ್ತಿಯ ಘೋಷಣೆಗಳೂ ಮೊಳಗಿದವು.
ಗ್ರಾಮದಲ್ಲಿ ಅಂತ್ಯಕ್ರಿಯೆ ವೇಳೆ ಸಾವಿರಾರು ಜನರು ನೆರೆದಿದ್ದರು. ದೆಹಲಿ ಪೊಲೀಸರು ಗಾರ್ಡ್ ಆಫ್ ಹಾನರ್ನ್ನೂ ನೀಡಿದರು. ಹುತಾತ್ಮ ಯೋಧ ಶಂಭು ದಯಾಳ್ ಅವರ ಪಾರ್ಥಿವ ಶರೀರವನ್ನು ಮೆರವಣಿಗೆಯ ಮೂಲಕ ಕೊಂಡೊಯ್ಯಲಾಯಿತು, ಈ ಸಂದರ್ಭದಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಜನರು ಅವರಿಗೆ ಗೌರವ ಸಲ್ಲಿಸಿದರು.
ಏತನ್ಮಧ್ಯೆ, ಎಎಸ್ಐ ಶಂಭು ದಯಾಳ್ ಮೇಲೆ ಹ-ಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದೆ. ವೈರಲ್ ವೀಡಿಯೊದಲ್ಲಿ, ಅನೀಸ್ ಜನನಿಬಿಡ ಪ್ರದೇಶದಲ್ಲಿ ಅನೇಕ ಜನರ ನಡುವೆಯೇ ಚಾ ಕು ವಿನಿಂದ ಇ ರಿ ದಿರುವುದನ್ನು ಕಾಣಬಹುದು. ಹಲವಾರು ಗಾಯಗಳ ನಂತರವೂ ಶಂಭು ದಯಾಳ್ ಅನೀಸ್ನ್ನ ನೆಲಕ್ಕೆ ಉರುಳಿಸಿದ್ದರು. ದಾ ಳಿ ಯ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಜನರಲ್ಲಿ ಯಾರೊಬ್ಬರಃ ಶಂಭೂ ರವರ ಸಹಾಯಕ್ಕೆ ಬರಲಿಲ್ಲ. ಈ ಘಟನೆಯಿಂದ ಸ್ಥಳದಲ್ಲಿ ಕೋಲಾಹಲ ಸೃಷ್ಟಿಯಾಗಿ ಜನ ಅತ್ತಿತ್ತ ಓಡಲಾರಂಭಿಸಿದರ ಲಾಭವನ್ನು ಪಡೆದುಕೊಂಡು ಅನೀಸ್ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.
ಆದರೆ ಬಳಿಕ ಆತನನ್ನ ಸೆರೆಹಿಡಿಯಲಾಯಿತು. ದೆಹಲಿ ಪೊಲೀಸರ ಕಸ್ಟಡಿಯಲ್ಲಿ ಸಿಕ್ಕಿಬಿದ್ದ ಅನೀಸ್ ಫೋಟೋ ಕೂಡ ಸಾರ್ವಜನಿಕವಾಗಿದೆ.
दिल्ली पुलिस के ASI शंभूदयाल का दिनदहाड़े मर्डर करने वाले स्नेचर अनीश s/o राजू पहलवान पर अब IPC सेक्शन- 302, 353, 332, 307 में केस दर्ज हुआ। अनीश ने ये चाकू शर्ट के नीचे छिपाया हुआ था। ASI ने जैसे ही पकड़ा तो उन्हें चाकू से गोद डाला। #Delhi https://t.co/IDMAKnYMPY pic.twitter.com/tEqsQc4Kbd
— Sachin Gupta (@sachingupta787) January 10, 2023
ಹುತಾತ್ಮ ASI ಶಂಭು ದಯಾಳ್ ಅವರು ದೆಹಲಿ ಪೊಲೀಸ್ನಲ್ಲಿ 1993 ಬ್ಯಾಚ್ನ ಕಾನ್ಸ್ಟೆಬಲ್ ಆಗಿದ್ದರು, ನಂತರ ಅವರು ತಮ್ಮ ಸಾಮರ್ಥ್ಯದೊಂದಿಗೆ ಸಹಾಯಕ ಸಬ್-ಇನ್ಸ್ಪೆಕ್ಟರ್ ಹುದ್ದೆಗೆ ಬಡ್ತಿ ಪಡೆದರು. ಜನವರಿ 5, 2022 ರಂದು ಮಹಿಳೆಯೊಬ್ಬರ ಫೋನ್ ಕಿತ್ತುಕೊಂಡಿರುವ ದೂರಿನ ಮೇರೆಗೆ ಅವರು ಆರೋಪಿ ಅನೀಸ್ನನ್ನು ಕರೆತರುತ್ತಿದ್ದರು. ಈ ವೇಳೆ ಅನೀಸ್ ಅವರ ಮೇಲೆ ಚಾ ಕು ವಿನಿಂದ ಹ ಲ್ಲೆ ನಡೆಸಿದ್ದು, ಈ ಕಾರಣದಿಂದ ಗಂಭೀರವಾಗಿ ಗಾಯಗೊಂಡಿದ್ದ ಶಂಭು ದಯಾಳ್ ಅವರನ್ನು ಸುದೀರ್ಘ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಿಸದೆ ಹುತಾತ್ಮರಾಗಿದ್ದಾರೆ.