ಅರ್ಜುನ್ ಕಪೂರ್ ಅಭಿನಯದ ‘ಕುತ್ತೆ’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ರಿಲೀಸ್ ಆದ ಕೂಡಲೇ ‘ಡಿಸಾಸ್ಟರ್’ ಎಂಬ ಶ್ರೇಣಿಗೆ ಬಂದಿದೆ. ‘ಕುತ್ತೆ’ ಚಿತ್ರವು ಶುಕ್ರವಾರ (ಜನವರಿ 13, 2023) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ನಸಿರುದ್ದೀನ್ ಶಾ ಮತ್ತು ಕುಮುದ್ ಮಿಶ್ರಾ ಅವರಲ್ಲದೆ, ಚಿತ್ರದಲ್ಲಿ 3 ನಟಿಯರಾದ ತಬು, ಕೊಂಕಣಾ ಸೇನ್ ಶರ್ಮಾ ಮತ್ತು ರಾಧಿಕಾ ಮದನ್ ಕೂಡ ನಟಿಸಿದ್ದಾರೆ. ಹಿರಿಯ ಚಲನಚಿತ್ರ ನಿರ್ದೇಶಕ ವಿಶಾಲ್ ಭಾರದ್ವಾಜ್ ಅವರ ಪುತ್ರ ಆಸ್ಮಾನ್ ಭಾರದ್ವಾಜ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ವಿಶಾಲ್ ಭಾರದ್ವಾಜ್ ‘ಮಕ್ಬೂಲ್ (2003)’, ‘ಓಂಕಾರ (2006)’, ‘ಇಷ್ಕಿಯಾ (2010)’ ಮತ್ತು ‘ಹೈದರ್ (2014)’ ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.
‘ಕುತ್ತೆ’ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಮೊದಲ ದಿನ 1 ಕೋಟಿಗಿಂತ ಕಡಿಮೆ ಆಗುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ. ಚಿತ್ರದ ಕಥೆಯನ್ನು ಸಹ-ಬರಹದ ಜೊತೆಗೆ ವಿಶಾಲ್ ಭಾರದ್ವಾಜ್ ಸಂಗೀತವನ್ನೂ ನೀಡಿದ್ದಾರೆ. ಅಲ್ಲದೆ ಅದರ ನಿರ್ಮಾಪಕರಲ್ಲಿ ಒಬ್ಬರು ಕೂಡ ಹೌದು. ‘ಕುತ್ತೆ’ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಹೀನಾಯ ಮಟ್ಟಿಗೆ ತಲುಪಿದೆಯೆಂದರೆ 20 ಕೋಟಿ ಬಜೆಟ್ ನ ಈ ಚಿತ್ರ ತನ್ನ ಜೀವಿತಾವಧಿಯಲ್ಲಿ ಖರ್ಚಿನ ಕಾಲು ಭಾಗವನ್ನಾದರೂ ಗಳಿಸಿದರೆ ಅದೇ ದೊಡ್ಡ ವಿಷಯ ಎಂಬಂತಾಗಿದೆ.
ದಕ್ಷಿಣ ಭಾರತದಲ್ಲಿ ಕಳೆದ 3 ದಿನಗಳಲ್ಲಿ 4 ದೊಡ್ಡ ಚಿತ್ರಗಳು ಬಿಡುಗಡೆಯಾಗಿವೆ. ತಮಿಳು ಇಂಡಸ್ಟ್ರಿಯಲ್ಲಿ ‘ಥಾಲಾ’ ಅಜಿತ್ ಕುಮಾರ್ ಅವರ ‘ತುನಿವು’ ವರ್ಸಸ್ ‘ತಲಪತಿ’ ವಿಜಯ್ ಅವರ ‘ವಾರಿಸು’ ಸಿನಿಮಾ ನಡೆಯುತ್ತಿದೆ. ಎರಡೂ ಚಿತ್ರಗಳು 100 ಕೋಟಿ ರುಪಾಯಿಯತ್ತ ದಾಪುಗಾಲಿಡುತ್ತಿವೆ. ಮತ್ತೊಂದೆಡೆ, ನಂದಮೂರಿ ಬಾಲಕೃಷ್ಣ ಅಭಿನಯದ ‘ವೀರ ನರಸಿಂಹ ರೆಡ್ಡಿ’ ಚಿತ್ರ ಮೊದಲ ದಿನವೇ 48 ಕೋಟಿ ಗಳಿಸಿ ಇತಿಹಾಸ ಸೃಷ್ಟಿಸಿದೆ. ಇದು ಅವರ ವೃತ್ತಿಜೀವನದ ಅತ್ಯುತ್ತಮ ಚಿತ್ರವಾಗಿದೆ. ಥಿಯೇಟರ್ಗಳಲ್ಲಿ ಅವರ ಅಭಿಮಾನಿಗಳು ‘ಜೈ ಬಾಲಯ್ಯ’ ಎಂದು ನೃತ್ಯ ಮಾಡುತ್ತಿರುವುದು ಕಂಡುಬಂದಿತು.
Today released film #Kutte has got earthshattering opening of 5%, while 80% shows are cancelled because of no audience. Means even Kutte didn’t go to watch this film. Producer Bhushan Kumar is the only desperate producer in Bollywood who is still making films with Arjun Kapoor.
— KRK (@kamaalrkhan) January 13, 2023
ಇದೀಗ ಈ ಚಿತ್ರಕ್ಕೆ ಪೈಪೋಟಿ ನೀಡಲು ‘ಮೆಗಾಸ್ಟಾರ್’ ಚಿರಂಜೀವಿ ಹಾಗೂ ‘ಮಾಸ್ ಮಹಾರಾಜ’ ರವಿತೇಜ ಅಭಿನಯದ ತೆಲುಗು ಚಿತ್ರ ‘ವಾಲ್ಟರ್ ವೀರಯ್ಯ’ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಹಿಂದಿಯಲ್ಲಿ ಹೆಚ್ಚು ಪೈಪೋಟಿ ಇಲ್ಲದಿದ್ದರೂ ಅರ್ಜುನ್ ಕಪೂರ್ ಚಿತ್ರ ಸೋಲನುಭವಿಸಿತು. ಅರ್ಜುನ್ ಕಪೂರ್ ಅವರು ಕೆಲವು ದಿನಗಳ ಹಿಂದೆ ಹೇಳಿದ್ದರು, “ಬಾಯ್ಕಾಟ್ ಬಗ್ಗೆ ನಾವು ಮೌನವಾಗಿರುವ ಮೂಲಕ ತಪ್ಪು ಮಾಡಿದ್ದೇವೆ ಮತ್ತು ಅದು ನಮ್ಮ ಮರ್ಯಾದೆಯಾಗಿದೆ ಆದರೆ ಜನರು ಅದರ ಲಾಭವನ್ನು ಪಡೆಯಲು ಪ್ರಾರಂಭಿಸಿದ್ದಾರೆ. ‘ನಮ್ಮ ಕೆಲಸ ತಾನೇ ಹೇಳುತ್ತದೆ’ ಎಂದು ಯೋಚಿಸುವ ತಪ್ಪನ್ನು ನಾವು ಮಾಡಿದ್ದೇವೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದರು.
ಎಲ್ಲರ ಆಕ್ರೋಶಕ್ಕೆ ಗುರಿಯಾಗಿದ್ದ ಅರ್ಜುನ್ ಕಪೂರ್
ಬಾಲಿವುಡ್ ಚಿತ್ರಗಳ ಬಾಯ್ಕಾಟ್ ಮಾಡೋರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದ್ದ ನಟ ಅರ್ಜುನ್ ಕಪೂರ್ ಎಲ್ಲ ಕಡೆಯಿಂದಲೂ ಜನರ ಆಕ್ರೋಶಕ್ಕೆ ಗುರಿಯಾಗಿದ್ದರು. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಸಾರ್ವಜನಿಕರಿಗೆ ಜನರಿಗೆ ಬೆದರಿಕೆ ಹಾಕುವ ಬದಲು ತಮ್ಮ ನಟನೆಯತ್ತ ಗಮನ ಹರಿಸಬೇಕು ಎಂದು ಹೇಳಿದ್ದರು. ಚಲನಚಿತ್ರ ನಟ-ವಿಮರ್ಶಕ ಕಮಲ್ ರಶೀದ್ ಖಾನ್ (ಕೆಆರ್ಕೆ) ಅರ್ಜುನ್ ಕಪೂರ್ ಅವರನ್ನು ಗೇಲಿ ಮಾಡಿದ್ದರು ಮತ್ತು ಒಂದು ನಾಯಿ ಕೂಡ ಚಿತ್ರ ನೋಡಲು ಹೋಗದ ನಟನನ್ನು ಜನ ಹೇಗೆ ಬಾಯ್ಕಾಟ್ ಮಾಡ್ತಾರೆ? ಎಂದು ಹೇಳಿದ್ದರು.
ಕೆಆರ್ಕೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ 8 ನಿಮಿಷ 29 ಸೆಕೆಂಡುಗಳ ವೀಡಿಯೊವೊಂದನ್ನು ಅಪ್ಲೋಡ್ ಮಾಡಿದ್ದರು. ಇದರಲ್ಲಿ ಅವರು ಅರ್ಜುನ್ ಕಪೂರ್ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದರು. ಅರ್ಜುನ್ ಹೇಳಿಕೆಯನ್ನು ಉಲ್ಲೇಖಿಸಿದ್ದ ಅವರು, “ಸಾರ್ವಜನಿಕರು ಅಮೀರ್ ಖಾನ್ ಚಿತ್ರವನ್ನು ಬಾಯ್ಕಾಟ್ ಮಾಡಿದರೆ ಅದು ಅರ್ಥವಾಗುತ್ತದೆ. ಶಾರುಖ್ ಖಾನ್ ಚಿತ್ರಕ್ಕೆ ಬಹಿಷ್ಕಾರ ಹಾಕಿದರೆ ಅರ್ಥವಾಗುತ್ತದೆ. ಆದರೆ ಅರ್ಜುನ್ ಕಪೂರ್ ನಂತಹ ಸೂಪರ್-ಡ್ಯೂಪರ್ ಗ್ರೇಟ್ ಫ್ಲಾಪ್ ನಾಯಕನನ್ನು ನೀವು ಹೇಗೆ ಅವಮಾನಿಸುತ್ತೀರಿ?. ಆತನ ಅಂತಹ ಕಳಪೆ ಚಿತ್ರವನ್ನು ನೀವು ಹೇಗೆ ಬಾಯ್ಕಾಟ್ ಮಾಡುತ್ತೀರ? ನಾಯಿ ಕೂಡ ನೋಡಲು ಹೋಗದ ನಟನ ಚಿತ್ರವನ್ನು ನೀವು ಹೇಗೆ ಬಾಯ್ಕಾಟ್ ಮಾಡಬಲ್ಲಿರಿ?” ಎಂದಿದ್ದರು.
ಕೆಆರ್ಕೆ ಇಲ್ಲಿಗೆ ನಿಲ್ಲುವುದಿಲ್ಲ, ಅವರು ಮುಂದೆ ಮಾತನಾಡುತ್ತ, “ಪಬ್ಲಿಕ್ ವರುಣ್ ಧವನ್ ಚಿತ್ರಕ್ಕೆ ಬಾಯ್ಕಾಟ್ ಮಾಡಿದರೆ ನಾನು ಒಪ್ಪುತ್ತೇನೆ. ಸಿದ್ಧಾರ್ಥ್ ಮಲ್ಹೋತ್ರಾ ಅವರ ಚಿತ್ರಗಳ ಬಾಯ್ಕಾಟ್ ಮಾಡ್ತಾರೆ ಅಂದರೂ ಅದನ್ನ ಅರ್ಥ ಮಾಡಿಕೊಳ್ಳಬಹುದು. ಆದರೆ ನಿಮ್ಮಂತಹ ಲಕ್ಖೇ (ಕೆಲಸಕ್ಕೆ ಬಾರದವನ) ಚಿತ್ರವನ್ನು ಸಾರ್ವಜನಿಕರ್ಯಾಕೆ ಬಾಯ್ಕಾಟ್ ಮಾಡ್ತಾರೆ?” ಎಂದಿದ್ದರು. ನೀವು ಸಂಪೂರ್ಣ ವೀಡಿಯೊವನ್ನು ಕೆಳಗೆ ವೀಕ್ಷಿಸಬಹುದು.