“ದೇಶದ ಗಡಿ ಕಾಯೋರೇ ನಮ್ಮ ರಿಯಲ್ ಹೀರೋ, ಯಾವನ್ರೀ ಕಿಂಗ್ ಖಾನ್? ಅವನೊಬ್ಬ ಲೋಫರ್, ತನ್ನ ತಾಯಿಗೂ ಇದೇ ರೀತಿ ಬೆತ್ತಲೆ ಮಾಡ್ತಾನಾ?”: ಪಠಾಣ್ ವಿರುದ್ಧ ಮುಸ್ಲಿಮರ ಆಕ್ರೋಶ

in Uncategorized 559 views

ನವದೆಹಲಿ: ಪಠಾಣ್ ಚಿತ್ರವನ್ನ ಬಾಯ್ಕಾಟ್ ಮಾಡುವಂತೆ ಕಳೆದ ತಿಂಗಳಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸೆನ್ಸಾರ್ ಮಂಡಳಿ ಕೂಡ ಪಠಾಣ್ ಚಿತ್ರದಲ್ಲಿ ಬದಲಾವಣೆ ಮಾಡುವಂತೆ ಎಚ್ಚರಿಕೆ ನೀಡಿತ್ತು. ಪಠಾಣ್ ಚಿತ್ರದ ಮೂಲಕ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ಕೆರಿಯರ್ ಕೂಡ ಎಲ್ಲೋ ಅಪಾಯದಲ್ಲಿರುವಂತೆ ಕಾಣುತ್ತಿದೆ. ವರ್ಷದ ಆರಂಭದಲ್ಲಿ ಬಾಲಿವುಡ್‌ನ ದೊಡ್ಡ ಚಿತ್ರವೊಂದು ಬಿಡುಗಡೆಗೆ ಸಿದ್ಧವಾಗಿದೆ ಮತ್ತು ಈ ಚಿತ್ರದ ಬಿಡುಗಡೆಯು ಬಾಲಿವುಡ್‌ಗೆ ಈ ವರ್ಷ ಹೇಗಿರಲಿದೆ ಎಂಬ ಅಂದಾಜನ್ನು ನೀಡಲಿದೆ.

Advertisement
ಶಾರುಖ್ ಖಾನ್ ಈ ವರ್ಷ ಮೂರು ಚಿತ್ರಗಳೊಂದಿಗೆ ಚಿತ್ರಮಂದಿರಗಳ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಶಾರುಖ್ ಖಾನ್ ನಾಯಕನಟನಾಗಿ ನಟಿಸಿದಿದ್ದ ಕೊನೆಯ ಚಿತ್ರ ZERO 2018 ರಲ್ಲಿ ತೆರೆಕಂಡಿತ್ತು. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಶಾರುಖ್ ಖಾನ್ ಈಗ ಹಿಟ್ ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರೆ ಆದರೆ ಬಾಯ್‌ಕಾಟ್ ಪಠಾಣ್ ಟ್ರೆಂಡ್ ಮಾತ್ರ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಮತ್ತೊಮ್ಮೆ ಬಾಯ್‌ಕಾಟ್ ಪಠಾಣ್ ಶುರುವಾಗಿದೆ.

ಕಳೆದ ಹಲವು ತಿಂಗಳಿಂದ ಪಠಾಣ್ ಚಿತ್ರವನ್ನ ಬಾಯ್‌ಕಾಟ್ ಮಾಡುವಂತೆ ಅಭಿಯಾನ ನಡೆಸಲಾಗುತ್ತಿದೆ. ಈಗ ಮತ್ತೊಮ್ಮೆ ಬಾಯ್‌ಕಾಟ್ ಪಠಾಣ್ ಶುರುವಾಗಿದೆ. ಪ್ರೇಕ್ಷಕರು ಮತ್ತೆ ಪಠಾಣ್ ಬಗ್ಗೆ ಟ್ರೆಂಡಿಂಗ್ ಆರಂಭಿಸಿದ್ದಾರೆ. ಇತ್ತೀಚೆಗೆ, ಸುನೀಲ್ ಶೆಟ್ಟಿ ಬಾಯ್‌ಕಾಟ್ ಟ್ರೆಂಡ್ ನ್ನ ವಿರೋಧಿಸಿದ್ದರು ಮತ್ತು ಈ ರೀತಿ ಸಂಭವಿಸಬಾರದು ಎಂದು ಹೇಳಿದ್ದರು. ಆದರೆ ಇದೀಗ ಪಠಾಣ್ ಚಿತ್ರದ ಬಿಡುಗಡೆ ದಿನಾಂಕ ಹತ್ತಿರವಿರುವಾಗಲೇ ಮತ್ತೊಮ್ಮೆ ಚಿತ್ರಕ್ಕೆ ಬಹಿಷ್ಕಾರದ ಬಿಸಿ ತಟ್ಟುತ್ತಿದೆ.

ಪಠಾಣ್ ಚಿತ್ರದ ಬಗ್ಗೆ ಒಂದು ವರ್ಗದವರಷ್ಟೇ ಅಲ್ಲ, ಮುಸ್ಲಿಮರ ಕಡೆಯವರೂ ಪಠಾಣ್ ಚಿತ್ರದ ಬಗ್ಗೆ ಸಿಟ್ಟಾಗಿದ್ದಾರೆ. ಪಠಾಣ್ ಅಂತ ಹೇಳಿಕೊಂಡ ಮಾತ್ರಕ್ಕೆ ಶಾರುಖ್ ಖಾನ್ ಪಠಾಣ್ ಆಗುವುದಿಲ್ಲ. ಯಾವುದೇ ಪಠಾಣ್ ಕೂಡ ಇವನ ರೀತಿ ಆಶ್ಲೀಲ‌ ಕೆಲಸ ಮಾಡುವುದಿಲ್ಲ ಎಂದು ಅವರು ನಂಬುತ್ತಾರೆ. ಈ ರೀತಿಯ ನಗ್ನತೆ ಯಾವ ಧರ್ಮದಲ್ಲೂ ಇಲ್ಲ, ಹಾಗಾದರೆ ಪಠಾಣ್ ಹೆಸರಿರುವ ಚಿತ್ರದಲ್ಲಿ ಯಾಕೆ ಈ ರೀತಿ ತೋರಿಸುತ್ತಿದ್ದಾರೆ? ಪಠಾಣ್ ಹೆಸರಿನಲ್ಲಿ ಶಾರುಖ್ ತಮ್ಮನ್ನು ಅವಮಾನಿಸುತ್ತಿದ್ದಾರೆ ಎನ್ನುತ್ತಾರೆ ಮುಸ್ಲಿಮರು.

ಈ ಶಾರುಖ್ ಖಾನ್ ಯಾವ ಕಂಗ್? ಬಾರ್ಡರ್ ನಲ್ಲಿ ದೇಶ ಕಾಯುವವನು ಕಿಂಗ್ ಹೊರತು ಈ ಶಾರುಖ್ ಖಾನ್ ಅಲ್ಲ. ದೇಶದ ರಕ್ಷಣೆ ಮಾಡುವವನೇ ಕಿಂಗ್ ಹೊರತು ಈ ಶಾರುಖ್ ಖಾನ್ ಕಿಂಗ್ ಅಲ್ಲ ಎಂದು ಮುಸ್ಲಿಮರು ಹೇಳುತ್ತಾರೆ. ಅಷ್ಟೇ ಅಲ್ಲ ಈ ಶಾರುಖ್ ಖಾನ್ ಮುಸ್ಲಿಂ ಅನ್ನೋದನ್ನೂ ನಾವು ಒಪ್ಪಲ್ಲ, ಈ ಶಾರುಖ್ ಖಾನ್ ಪಕ್ಕಾ (ನಿಜವಾದ) ಮುಸ್ಲಿಂ ಅಲ್ಲವೇ ಅಲ್ಲ, ಚಿತ್ರದಲ್ಲಿ ನಟಿಯರನ್ನ ಅರೆ ನಗ್ನ ತೋರಿಸುವ ಈತ ತನ್ನ ತಾಯಿಯನ್ನೂ ಇದೇ ರೀತಿ ಬಟ್ಟೆ ತೊಡಿಸಿ ನಟಿಸುವ ಹಾಗೆ ಮಾಡುತ್ತಾನಾ? ಎಂದು ಹೇಳಿದ್ದಾರೆ.

“ಈತನ ಚಿತ್ರ ಎಲ್ಲೂ ಬಿಡುಗಡೆ ಮಾಡೋಕೆ ಬಿಡಲ್ಲ, ಈ ಶಾರುಖ್ ಖಾನ್ ನಮ್ಮ ಇಸ್ಲಾಂನ್ನ….”: ಹಿಂದುಗಳಾಯ್ತು ಈಗ ಶಾರುಖ್ ವಿರುದ್ಧ ತಿರುಗಿಬಿದ್ದ ಮುಸ್ಲಿಂ ಸಂಘಟನೆಗಳು

ಹಿಂದೂ ಸಂಘಟನೆಗಳಿಂದ ವಿರೋಧ ಎದುರಿಸುತ್ತಿರುವ ಶಾರುಖ್ ಖಾನ್ ಚಿತ್ರ ಪಠಾಣ್ ಚಿತ್ರಕ್ಕೆ ಮುಸ್ಲಿಂ ಸಂಘಟನೆಗಳ ವಿರೋಧವೂ ವ್ಯಕ್ತವಾಗುತ್ತಿದೆ. ಮಧ್ಯಪ್ರದೇಶದ ಉಲೇಮಾ ಬೋರ್ಡ್ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಪಠಾಣ್ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಮಂಡಳಿಯಿಂದ ಹೇಳಲಾಗಿದೆ.

ಉಲೇಮಾ ಮಂಡಳಿಯ ಹೊರತಾಗಿ ಅಖಿಲ ಭಾರತ ಮುಸ್ಲಿಂ ತ್ಯೋಹಾರ್ ಕಮಿಟಿ ಕೂಡ ಶಾರುಖ್ ಅಭಿನಯದ ‘ಪಠಾಣ್’ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದೆ. ಮುಸ್ಲಿಂ ತ್ಯೋಹಾರ್ ಕಮಿಟಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಧ್ಯಪ್ರದೇಶ ಬಿಟ್ಟು ದೇಶದ ಎಲ್ಲೂ ಸಿನಿಮಾ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಘೋಷಿಸಿದೆ. ಪಠಾಣ್ ಚಿತ್ರವನ್ನು ವಿರೋಧಿಸುತ್ತಿರುವ ಮುಸ್ಲಿಂ ಸಂಘಟನೆಗಳು ಶಾರುಖ್ ಖಾನ್ ಇಸ್ಲಾಂಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸುತ್ತಿವೆ.

ಇತ್ತೀಚೆಗಷ್ಟೇ ಪಠಾಣ್ ಚಿತ್ರದ ಪೋಸ್ಟರ್ ಗಳನ್ನು ಚಿತ್ರಮಂದಿರದಲ್ಲಿ ಧ್ವಂಸ ಮಾಡಿ ಥಿಯೇಟರ್ ನಲ್ಲಿ ಗಲಾಟೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಹೀಗಿರುವಾಗ ಪಠಾಣ್ ಚಿತ್ರಕ್ಕೆ ನಿರಂತರ ವಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ಈ ಚಿತ್ರ ಪ್ರದರ್ಶಿಸುವ ಥಿಯೇಟರ್‌ಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹದಗೆಡುತ್ತಿರುವ ಪರಿಸ್ಥಿತಿ ನೋಡಿದರೆ ಶಾರುಖ್ ಖಾನ್ ವೃತ್ತಿಜೀವನಕ್ಕೆ ಇದು ಕಂಟಕವಾಗಿ ಪರಿಣಮಿಸಬಹುದು. ಜನವರಿ 25ರಂದು ಚಿತ್ರ ಬಿಡುಗಡೆಯಾದ ನಂತರ ಏನಾಗಲಿದೆ ಎಂಬುದನ್ನ ಕಾದು ನೋಡಬೇಕಿದೆ.

Advertisement
Share this on...