ಪಂಕಜ್ ಶಿಂಗಲೆ ಹಾಗು ಅವರ ಪತ್ನಿ ಗೀತಾ ಕೆಲ ವರ್ಷಗಳ ಹಿಂದೆ ಕೈಲಾಶ್ ಮಾನಸ ಸರೋವರ ಯಾತ್ರೆಗೆ ಹೋಗಿ ಬಂದಿದ್ದರು. ಪಂಕಜ್ ಹಾಗು ಗೀತಾ ಇಬ್ಬರೂ ದೇಶದ ಸುಪ್ರಸಿದ್ದ ಚಾನೆಲ್ ಒಂದರ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾವು ಕೈಲಾಶ್ ಮಾನಸ ಸರೋವರದಲ್ಲಿ ಸಾಕ್ಷಾತ್ ಭಗವಾನ್ ಶಿವನನ್ನ ಕಂಡದ್ದೇವೆ ಅಂದಿದ್ದಷ್ಟೇ ಅಲ್ಲದೆ ತಮ್ಮ ಜೊತೆಗಿದ್ದ ಭಕ್ತರೆಲ್ಲರೂ ಭಗವಾನ್ ಶಿವನನ್ನ ನೋಡಿದ್ದಾರೆ ಎಂದಿದ್ದಾರೆ.
ಕೈಲಾಶ ಪರ್ವತ ಸಮುದ್ರ ಮಟ್ಟದಿಂದ ಬರೋಬ್ಬರಿ 19,200 ಫೀಟ್ ಎತ್ತರದಲ್ಲಿದೆ ಹಾಗು ಕೈಲಾಶ ಮಾನಸ ಸರೋವರ ಯಾತ್ರೆಗೆ ಹೋಗಲು ಹಾಗು ಕೈಲಾಶ ಪರ್ವತವನ್ನ ನೋಡಲು ಬಹಳಷ್ಟು ಕಿಲೋಮೀಟರ್ ನಡೆದುಕೊಂಡೇ ಹೋಗಬೇಕಾಗುತ್ತೆ, ಅಷ್ಟೇ ಅಲ್ಲದೆ ಅದೂ ಮೈ ಕೊರೆಯುವ ಚಳಿ ಹಾಗು ಹಿಮದಲ್ಲೇ ನಡೆದುಕೊಂಡು ಹೋಗಬೇಕಾಗುತ್ತೆ.
ಪಂಕಜ್ ಹಾಗು ಗೀತಾ ದಂಪತಿಗಳು ಹೇಳುವ ಪ್ರಕಾರ ಅವರು ಡೇರಾಮುಖ್ ಸ್ಥಳ ತಲುಪಿದ ಬಳಿಕ ಅವರು ಕೈಲಾಶ ಪರ್ವತದ ಕಡೆಗೆ ತೆರಳಲು ಶುರು ಮಾಡಿದರು, 20 ಕಿಲೋಮೀಟರ್ ಏರಿದ ಬಳಿಕ ಸಂಜೆಯ ಹೊತ್ತಿಗೆ ಅವರು ಕೈಲಾಶ ಪರ್ವತದವರೆಗೆ ತಲುಪಿದ್ದರು, ಅವರ ಜೊತೆಗೆ ಇನ್ನೂ ಹಲವಾರಯ ಭಕ್ತರ ದಂಡೇ ಅವರೊಟ್ಟಿಗಿತ್ತು.
ಆ ಸಂಜೆಯಂದು ಕೈಲಾಶ ಪರ್ವತವನ್ನ ದೂರದಿಂದಲೇ ಅವರು ದರ್ಶನ ಪಡೆದು ಅವರಿಬ್ಬರೂ ಹಾಗು ಅನ್ಯ ಭಕ್ತರೂ ಭಕ್ತಿ ಪರವಶವಾಗಿಬಿಟ್ಟಿದ್ದರು. ಅಲ್ಲಿ ಅವರೆಲ್ಲಾ ಭೋಲೇ ಬಾಬಾ ಭಜನೆಯನ್ನ ಹಾಡುತ್ತ ಹೊರಟಿದ್ದರು. ಅಂದು ಸಂಜೆ ಅವರೆಲ್ಲ ಕೈಲಾಶ ಪರ್ವತದ ಫೋಟೋಗಳನ್ನೂ ಕ್ಲಿಕ್ಕಿಸಿದ್ದರು. ಮರುದಿನ ಬೆಳಿಗ್ಗೆ ಪಂಕಜ್ ಹಾಗು ಗೀತಾ ಬೆಳ್ಳಂಬೆಳಗ್ಗೆ ಬೇಗನೇ ಎದ್ದು ಎಲ್ಲ ಯಾತ್ರಿಕರ ಜೊತೆ ಕೈಲಾಶ ಪರ್ವತದ ಪರಿಕ್ರಮ ಮಾಡಲು ಎಲ್ಲಾ ತಯಾರಿಗಳನ್ನೂ ನಡೆಸುತ್ತಿದ್ದರು.
ಗೀತಾರವರು ಭೋಲೇನಾಥನ ಹೆಸರನ್ನ ಜಪಿಸುತ್ತ ಕೈಲಾಶ ಪರ್ವತದ ಗುಂಗಿನಲ್ಲಿ ಮಗ್ನರಾಗಿದ್ದರು. ಆಕೆ ತನಗೆ ಭಗವಾನ್ ಶಿವನ ಸಾಕ್ಷಾತ್ ದರ್ಶನವಾಗುವಂತಹ ಚಮತ್ಕಾರ ನಡೆಯಬೇಕು, ಯಾಕಂದ್ರೆ ಕೈಲಾಶ ಮಾನಸ ಸರೋವರ ಯಾತ್ರೆ ತುಂಬಾ ಕಠಿಣ ಯಾತ್ರೆಯಾಗಿದ್ದು ತಮ್ಮ ಜೀವನದಲ್ಲಿ ಮನುಷ್ಯ ಒಂದು ಬಾರಿಯಾದರೂ ಈ ಯಾತ್ರೆ ಮಾಡಬೇಕೆಂದುಕೊಳ್ಳಿತ್ತಾನೆ ಹಾಗು ಕೈಲಾಶ ಪರ್ವತದಲ್ಲಿ ಹಲವಾರು ಜನರಿಗೆ ಈಗಾಗಲೇ ಅಲೌಕಿಕ ಅನುಭವಗಳು ಅಲ್ಲಿ ಆಗಿವೆ ಅನ್ನೋದು ಗೀತಾರವರಿಗೂ ಗೊತ್ತಿತ್ತು.
ವಿಡಿಯೋ ನೋಡಿ:
Courtesy: India TV pic.twitter.com/oeJdm6xF9F
— Nationalist Views (@ntnlstviews) January 15, 2023
ಅಚಾನಕ್ಕಾಗಿ ಗೀತಾರವರು ಕೈಲಾಶ ಪರ್ವತದತ್ತ ನೋಡಿದರು ಹಾಗು ಖುಷಿಯಿಂದ ಹುಚ್ಚರಾಗಿಬಿಟ್ಟರು, ಜೋರಾಗಿ ಹರಹರ ಮಹಾದೇವ್ ಎಂದು ಚೀರಲಾರಂಭಿಸಿಬಿಟ್ಟಳು, ಮೊದ ಮೊದಲು ಅಲ್ಲಿದ್ದ ಜನ ಆಕೆ ಎಲ್ಲರಂತೆ ಹಾಗನ್ನುತ್ತಿರಬಹುದು ಅಂದುಕೊಂಡರು. ಆದರೆ ಅವರು ಮೇಲಿಂದ ಖುಷಿ ಖುಷಿಯಿಂದ ಎರಡೂ ಕೈಗಳನ್ನೆತ್ತಿ ಕುಣಿಯಲಾರಂಭಿಸಿದಾಗ ಅಲ್ಲಿದ್ದ ಜನರ ಚಿತ್ತವೂ ಆ ಪರ್ವತದ ಮೇಲಿದ್ದ ದೃಶ್ಯವನ್ನ ನೋಡಿಬಿಟ್ಟರು, ಆ ದೃಶ್ಯವನ್ನ ನೋಡಿ ಅಲ್ಲಿದ್ದ ಜನರ ಜನ್ಮ ಸಾರ್ಥವಾಗಿತ್ತು.
ತಕ್ಷಣವೇ ಗೀತಾ ತನ್ನ ಪತಿ ಪಂಕಜ್ ಹಾಗುವುಳಿದ ಯಾತ್ರಿಕರನ್ನ ಕೈಲಾಶ ಪರ್ವತದತ್ತ ಕೈ ಮಾಡಿ ಏನೋ ದೃಶ್ಯವೊಂದನ್ನ ತೋರಿಸಿದರು, ಆಗ ಭಕ್ತರೆಲ್ಲಾ ಒಂದು ಕ್ಷಣ ಖುಷಿಯಿಂದ ತೇಲಾಡುತ್ತ ಹರ ಹರ ಮಹಾದೇವ ಎಂದು ಕೂಗಲಾರಂಭಿಸಿದರು. ಎಲ್ಲ ಭಕ್ತರೂ ಹಾಗು ಪಂಕಜ್ ದಂಪತಿಗಳು ಆ ದೃಶ್ಯವನ್ನ ತಮ್ಮ ಕ್ಯಾಮರಾದಲ್ಲಿ ಸೆರೆ ಕೂಡ ಹಿಡಿದರು. ಅಸಲಿಗೆ ಕೈಲಾಶ ಪರ್ವತದಲ್ಲಿ ಗೀತಾ ಹಾಗು ಉಳಿದ ಭಕ್ತರಿಗೆ ಭಗವಾನ್ ಶಿವನ ಆಕೃತಿ ಸ್ಪಷ್ಟವಾಗಿ ಕಂಡಿತ್ತು.
ಆ ಆಕೃತಿ ಶಿವನದ್ದೇ ಎಂಬ ಪೂರ್ಣ ವಿಶ್ವಾಸ ಗೀತಾರವರಿಗಿತ್ತು ಹಾಗು ಆಕೆ ಉಳಿದ ಯಾತ್ರಿಕರಿಗೆ ಆ ಆಕೃತಿಯ ಬಗ್ಗೆ ಕೇಳಿದಾಗ ಅವರೆಲ್ಲಾ ಅದು ಸಾಕ್ಷಾತ್ ಶಿವನ ಆಕೃತಿಯಂತೇ ಕಾಣುತ್ತಿದೆ ಎಂದು ಹೇಳಿದರು. ಆ ಅಲೌಕಿಕ ಅನುಭವವನ್ನ ಗೀತಾ ಹಾಗು ಪಂಕಜ್ ರವರು ಎಲ್ಲಾ ಯಾತ್ರಿಕರ ಜೊತೆಗೂ ಹಂಚಿಕೊಂಡರು. ಅದಾದ ಬಳಿಕ ಅವರಿಬ್ಬರೂ ಹಲವಾರು ಟಿವಿ ಚಾನೆಲ್ ಗಳಿಗೆ ಈ ಕುರಿತು ಇಂಟರ್ವ್ಯೂವ್ ಕೂಡ ಕೊಟ್ಟರು ಹಾಗು ಕೈಲಾಶ ಪರ್ವತದಲ್ಲಿ ಅವರು ಕಂಡ ಆಕೃತಿಯ ಫೋಟೋ ಕೂಡ ತೋರಿಸಿದರು. ಭಗವಾನ್ ಶಿವನ ಆಕೃತಿಯ ಜೊತೆ ಜೊತೆಗೆ ಎರಡು ಅನ್ಯ ಆಕೃತಿಗಳೂ ಅದರಲ್ಲಿ ಕಂಡಿದ್ದವು.
ಯಾವ ರೀತಿಯಲ್ಲಿ ನಾವು ಶಿವನ ಎದುರು ಸದಾ ವಿರಾಜಮಾನವಾಗಿರು ನಂದಿಯನ್ನ ಕಾಣುತ್ತೇವೋ ಅದೇ ರೀತಿಯಲ್ಲಿ ಆಕೆ ಕ್ಲಿಕ್ಕಿಸಿದ ಫೋಟೋದಲ್ಲೂ ಶಿವನ ಆಕೃತಿಯ ಎದುರು ನಂದಿ ವಿರಾಜಮಾನವಾಗಿದ್ದ ಆಕೃತಿಯೂ ಇತ್ತು. ಭಗವಾನ್ ಶಿವನ ಆ ಆಕೃತಿಯ ಎದುರಿನ ಬೆಟ್ಟದ ಆಕೃತಿಯಲ್ಲಿ ನಂದಿ ಕೂತಿದ್ದ ರೀತಿಯಲ್ಲೇ ಇತ್ತು, ಆ ದೃಶ್ಯ ಹೇಗಿತ್ತೆಂದರೆ ನಂದಿಯ ಆ ಪ್ರತಿಮೆ ಮಂಜು ಕರಗಿದ ಕಾರಣ ಹಾಗೆ ಹೊರಗೆ ಉಬ್ಬಿ ಬಂದಿತ್ತೆಂಬಂತೆ ಕಾಣುತ್ತಿತ್ತು.
ಅಲೌಕಿಕ ದೃಶ್ಯಗಳ ಆ ಚಮತ್ಕಾರ ಅಲ್ಲಿಗೇ ನಿಲ್ಲಲಿಲ್ಲ ಅಲ್ಲೇ ಪಕ್ಕದಲ್ಲಿದ ಬೆಟ್ಟದ ಮೇಲೆ ಶ್ರೀ ಗಣೇಶನ ಆಕೃತಿಯೂ ಕಂಡಿತ್ತು. ಬೆಟ್ಟದ ಮೇಲೆ ಮೂಡಿದ್ದ ಆ ಆಕೃತಿಯನ್ನ ನೋಡಿದರೆ ಸಾಕ್ಷಾತ್ ಗಣೇಶನ ಸೊಂಡಿಲಂತೆಯೇ ಕಾಣುತ್ತಿತ್ತು. ಆಕೆ ಕ್ಲಿಕ್ಕಿಸಿದ ಚಿತ್ರವನ್ನ ಆಕೆ ತಾನು ನೀಡಿದ ಎಲ್ಲ ಟಿವಿ ಚಾನೆಲ್ ಗಳ ಸಂದರ್ಶನದಲ್ಲೂ ತೋರಿಸಿದ್ದರು.