“ಒಬ್ಬ ವ್ಯಕ್ತಿ ಒಂದೇ ಬಾರಿ ಪ್ರಧಾನಮಂತ್ರಿಯಾಗುವಂತಹ ಕಾನೂನು ತರಬೇಕು, ಇಲ್ಲಾಂದ್ರೆ ಈ ಮೋದಿ….”: ಲೇಖಕಿ ಅರುಂಧತಿ ರಾಯ್

in Uncategorized 6,867 views

ನವದೆಹಲಿ: ಪ್ರಧಾನಿ ಮೋದಿಯವರ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ ವಿರೋಧ ಪಕ್ಷಗಳು ಈಗಾಗಲೇ ಕಂಗಾಲಾಗಿ ಹೋಗಿವೆ. ಆದರೆ ಈಗ ಅವರ ರಾಜಕೀಯೇತರ ವಿರೋಧಿಗಳಿಗೂ ಕೂಡ ತಮ್ಮ ಅಸ್ತಿತ್ವ ಹಾಗು ಅಭದ್ರತೆಯನ್ನು ಅನುಭವಿಸಲು ಪ್ರಾರಂಭಿಸಿದ್ದಾರೆ, ಆದ್ದರಿಂದ ಈ ವಿರೋಧಿಗಳಿಗೆ ಪ್ರಧಾನಿ ಮೋದಿಯವರ ವಿರಾಟ ವ್ಯಕ್ತಿತ್ವದ ಬಗ್ಗೆ ಅಸುರಕ್ಷಿತ ಭಾವನೆ ಕಾಡುತ್ತಿದ್ದು ಇದೀಗ ಹೇಗಾದರೂ ಮಾಡಿ ಪ್ರಧಾನಿ ಮೋದಿಯನ್ನ ಕಟ್ಟಿ ಹಾಕಲು ಹೊಸ ರಾಗ ಶುರು ಮಾಡಿದ್ದಾರೆ. ತಮ್ಮನ್ನು ತಾವು ಸಂವಿಧಾನದ ಪೂಜಾರಿಗಳೆಂದು ಪರಿಗಣಿಸುವ ಈ ಜನರು ಈಗ ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲೇಖಿಸಿ ಪ್ರಧಾನಿ ಮೋದಿಯವರ ಬೆಳೆಯುತ್ತಿರುವ ರಾಜಕೀಯ ಸ್ಥಾನಮಾನವನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ.

Advertisement

ಇಂದಿನ ದಿನಗಳಲ್ಲಿ ಪ್ರಧಾನಿ ಮೋದಿಯವರ ಜನಪ್ರಿಯತೆ ಯಾರಿಂದಲೂ ಮರೆಯಾಗಿಲ್ಲ. ಇಂದು, ಪ್ರಧಾನಿ ಮೋದಿಯವರ ಜನಪ್ರಿಯತೆ ಪ್ರಪಂಚದ ಮೂಲೆಮೂಲೆಯಲ್ಲೂ ಗೋಚರಿಸುತ್ತಿದೆ. ನಾವು ಅನೇಕ ಸಂದರ್ಭಗಳಲ್ಲಿ ಅದರ ವಿಶಿಷ್ಟತೆಯನ್ನು ನೋಡಿದ್ದೇವೆ, ಆದ್ದರಿಂದ ಪ್ರಧಾನಿ ಮೋದಿಯವರ ಹೆಚ್ಚುತ್ತಿರುವ ಜನಪ್ರಿಯತೆಯಿಂದ ಕಂಗಾಲಾಗಿರುವ ಈ ಜನರು, ಪ್ರಧಾನಿ ಮೋದಿಯವರ ರಾಜಕೀಯ ಚದುರಂಗದಾಟವನ್ನು ನಿಲ್ಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ, ಆದರೆ ದುರದೃಷ್ಟವಶಾತ್ ಅವರ ಎಲ್ಲಾ ಪ್ರಯತ್ನಗಳು ವಿಫಲಗೊಳ್ಳುತ್ತವೆ.

ಏತನ್ಮಧ್ಯೆ, (ಕು)ಖ್ಯಾತ ಲೇಖಕಿ, ಪ್ರತ್ಯೇಕತಾವಾದಿಗಳ, ಉ ಗ್ರರ ಪರ ವಕಾಲತ್ತು ವಹಿಸಿ ಮಾತನಾಡುವ ಅರುಂಧತಿ ರಾಯ್ ಅವರು ಪ್ರಧಾನಿ ಮೋದಿಯವರ ಹೆಚ್ಚುತ್ತಿರುವ ಜನಪ್ರಿಯತೆಯಿಂದ ಕಂಗಾಲಾಗಿ ಎಂತಹ ಹೇಳಿಕೆಯನ್ನು ನೀಡಿದ್ದಾರೆಂದರೆ, ಇದರಿಂದಾಗಿ ಆಕೆಯನ್ನ ಸೋಶಿಯಲ್ ಮೀಡಿಯಾಗಳಲ್ಲಿ ಜನ‌ ಹಿಗ್ಗಾಮುಗ್ಗಾ ಝಾಡಿಸುತ್ತಿದ್ದಾರೆ. ಅಷ್ಟಕ್ಕೂ ಅರುಂಧತಿ ರಾಯ್ ಪ್ರಧಾನಿ ಮೋದಿ ಬಗ್ಗೆ ಏನು ಹೇಳಿದ್ದಾರೆ? ಅನ್ನೋದಕ್ಕೂ ಮುನ್ನ ಈ (ಕು)ಖ್ಯಾತ ಲೇಖಕಿ ಅರುಂಧತಿ ರಾಯ್ ಯಾರು ಅನ್ನೋದನ್ನ ನೋಡೋಣ ಬನ್ನಿ‌.

ಅರುಂಧತಿ ರಾಯ್ ಇಂಗ್ಲಿಷ್ ಲೇಖಕಿಯಾಗಿದ್ದು, ಪ್ರತಿ ಸಮಕಾಲೀನ ವಿಷಯದ ಬಗ್ಗೆ ನಿಸ್ಸಂದಿಗ್ಧವಾದ ಅಭಿಪ್ರಾಯವನ್ನು ಬರೆಯುತ್ತಾರೆ. ಬರವಣಿಗೆಯ ಹೊರತಾಗಿ, “ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್” ಗಾಗಿ ಬೂಕರ್ ಪ್ರಶಸ್ತಿಯನ್ನು ಪಡೆದಿರುವ ಅರುಂಧತಿ ರಾಯ್, ನರ್ಮದಾ ಬಚಾವೋ ಆಂದೋಲನ ಸೇರಿದಂತೆ ಭಾರತದ ಇತರ ಸಾಮೂಹಿಕ ಚಳುವಳಿಗಳಲ್ಲಿ ಭಾಗವಹಿಸಿದ್ದಾರೆ. ಅವರ ಕೆಲ ಪುಸ್ತಕಗಳು ನ್ಯಾಯ್ ಕಾ ಗಣಿತ್, ಆಹತ್ ದೇಶ್, ಕಟಘರೆ ಮೇ ಲೋಕತಂತ್ರ ಆಗಿವೆ.

ಅರುಂಧತಿ ರಾಯ್ ನವೆಂಬರ್ 24, 1961 ರಂದು ಶಿಲ್ಲಾಂಗ್‌ನಲ್ಲಿ ಜನಿಸಿದರು, ಕೇರಳದ ಸಿರಿಯನ್ ಕ್ರಿಶ್ಚಿಯನ್ ತಾಯಿ ಮೇರಿ ರಾಯ್ ಮತ್ತು ಕಲ್ಕತ್ತಾದ ಬಂಗಾಳಿ ಹಿಂದೂ ತಂದೆ ರಾಜೀಬ್ ರಾಯ್. ಅರುಂಧಿತ್ ರಾಯ್ ಮೋದಿ ಸರ್ಕಾರದ ಕಾರ್ಯಶೈಲಿಯ ಮೇಲೆ ಆಗಾಗ್ಗೆ ವಾಗ್ದಾಳಿ ನಡೆಸುತ್ತಾರೆ. ಬನ್ನಿ, ಈ ಬಾರಿ ಪ್ರಧಾನಿ ಮೋದಿ ಅವರ ಬಗ್ಗೆ ಅರುಂಧತಿ ರಾಯ್ ಹೇಳಿದ್ದೇನು? ಜನ ಯಾಕೆ ಆಕೆಯನ್ನ ಹಿಗ್ಗಾಮುಗ್ಗಾ ಝಾಡಿಸಿದ್ದಾರೆ ಅನ್ನೋದನ್ನ ತಿಳಿಸುತ್ತೇವೆ.

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಲೇಖಕಿ ಅರುಂಧಿತ್ ರಾಯ್, ಮುಂಬರುವ 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಈ ಅನುಕ್ರಮದಲ್ಲಿ, ಯಾವುದೇ ಹೆಸರನ್ನು ತೆಗೆದುಕೊಳ್ಳದೆ, ಪ್ರಧಾನಿ ಮೋದಿಯನ್ನು ತರಾಟೆಗೆ ತೆಗೆದುಕೊಂಡ ಅವರು, ನಮ್ಮ ದೇಶದಲ್ಲಿ ಒಬ್ಬ ವ್ಯಕ್ತಿಗೆ ಒಮ್ಮೆ ಮಾತ್ರ ಪ್ರಧಾನಿಯಾಗುವ ಅವಕಾಶವನ್ನು ನೀಡಬೇಕು ಅಂತಹ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ ಎಂದು ಹೇಳಿದರು. ಇದರರ್ಥ ಭಾರತದಲ್ಲಿ ಒಬ್ಬ ವ್ಯಕ್ತಿಗೆ ಒಮ್ಮೆ ಮಾತ್ರ ಪ್ರಧಾನಿಯಾಗುವ ಅವಕಾಶ ನೀಡಬೇಕು ಎಂಬುದಾಗಿತ್ತು.

“ನಾವು ಪದೇ ಪದೇ ಒಬ್ಬ ವ್ಯಕ್ತಿಯನ್ನು ಪ್ರಧಾನಿ ಹುದ್ದೆಗೆ ನಿಲ್ಲಿಸಿದಾಗ, ಈ ಮೂಲಕ ನಾವು ಪ್ರಜಾಪ್ರಭುತ್ವ ಅಲ್ಲ ‘ರಾಜ’ಪ್ರಭುತ್ವವನ್ನು ಸ್ಥಾಪಿಸಲು ಪ್ರಯತ್ನಿಸಿದಂತಾಗುತ್ತದೆ. ಈಗ ರಾಜ ಮಹಾರಾಜರ ಕಾಲ ಮುಗಿದಿದೆ. ಈಗ ನಾವು ಎಲ್ಲರಿಗೂ ಸಮಾನ ಹಕ್ಕುಗಳನ್ನು ಹೊಂದಿರುವ ಪ್ರಜಾಪ್ರಭುತ್ವ ದೇಶದಲ್ಲಿ ವಾಸಿಸುತ್ತಿದ್ದೇವೆ” ಎಂದಿದ್ದಾರೆ. ಆದಾಗ್ಯೂ, ಅರುಂಧತಿ ರಾಯ್ ವ್ಯಕ್ತಪಡಿಸಿದ ಅಭಿಪ್ರಾಯಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗುತ್ತಿದೆ. ಜನರು ವಿಭಿನ್ನ ರೀತಿಯಲ್ಲಿ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿರೋದನ್ನು ನೀವು ಕಾಣಬಹುದು.

Advertisement
Share this on...