AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಇತ್ತೀಚಿನ ದಿನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಮುಸ್ಲಿಂ ಸಮುದಾಯದ ಬಗ್ಗೆ ಮಾತನಾಡಿದ ಓವೈಸಿ, ಸರ್ಕಾರ ಮುಸ್ಲಿಮರಿಗಾಗಿ ಏನನ್ನೂ ಮಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇಸ್ಲಾಂ ಭಾರತಕ್ಕೆ ಪ್ರಜಾಪ್ರಭುತ್ವವನ್ನು ಉಡುಗೊರೆಯಾಗಿ ನೀಡಿದೆ ಎಂದು ಅವರು ಇತ್ತೀಚೆಗೆ ಹೇಳಿದ್ದಾರೆ. ಒವೈಸಿ ಹೇಳಿಕೆಗೆ ಸೋಶಿಯಲ್ ಮೀಡಿಯಾ ಯೂಸರ್ ಗಳು ನಾನಾ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಅಸಾದುದ್ದಿನ್ ಓವೈಸಿ ಹೇಳಿದ್ದೇನು?
ಅಸಾದುದ್ದಿನ್ ಓವೈಸಿ ಮಾತನಾಡುತ್ತ, “ಗಂಗಾ ಮತ್ತು ಯಮುನಾ ನದಿಗಳು ಪ್ರತ್ಯೇಕವಾಗಿ ಹುಟ್ಟುತ್ತವೆ ಆದರೆ ಅವುಗಳನ್ನು ಸಂಗಮ ಎಂದು ಕರೆಯಲಾಗುತ್ತದೆ. ಈ ದೇಶದಲ್ಲಿ ಸಾಕಷ್ಟು ಸಂಪತ್ತು ಇತ್ತು ಆದರೆ ನಂತರ ನಾವು (ಮುಸಲ್ಮಾನರು) ಮುಚ್ಚಿದ ಬಾಗಿಲುಗಳನ್ನು ತೆರೆದೆವು. ಇಸ್ಲಾಂ ಈ ದೇಶಕ್ಕೆ ಅನೇಕ ಕೊಡುಗೆಗಳನ್ನು ನೀಡಿದೆ ಅದರಲ್ಲಿ ಅತ್ಯಂತ ಪ್ರಮುಖ ಕೊಡುಗೆಯೆಂದರೆ ಅದು ಮುಸಲ್ಮಾನರರು ನೀಡಿದ ಪ್ರಜಾಪ್ರಭುತ್ವದ ಕೊಡುಗೆಯಾಗಿದೆ” ಎಂದಿದ್ದಾರೆ.
"इस्लाम ने भारत को लोकतंत्र का तोहफा दिया है"
◆ AIMIM के प्रमुख @asadowaisi का बयान pic.twitter.com/TBxetbbMfJ
— News24 (@news24tvchannel) January 15, 2023
ಜನ ಕೊಟ್ಟ ಪ್ರತಿಕ್ರಿಯೆ ಹೇಗಿದೆ ನೋಡಿ
ಜಿತೇಂದ್ರ ಚೌರಾಸಿಯಾ ಎಂಬ ಟ್ವಿಟರ್ ಯೂಸರ್ – ಪ್ರಜಾಪ್ರಭುತ್ವವನ್ನು ಮುಸ್ಲಿಮರಲ್ಲ ಸಂವಿಧಾನ ನೀಡಿದೆ ಎಂದಿದ್ದಾರೆ. ಗೌರವ್ ಚಂದ್ ಎಂಬ ಹೆಸರಿನ ಟ್ವಿಟರ್ ಹ್ಯಾಂಡಲ್, “ದಯವಿಟ್ಟು ಈ ಚಮತ್ಕಾರಿ ಇತಿಹಾಸ ಪುಸ್ತಕದ ಪುಟವನ್ನು ಸಾರ್ವಜನಿಕರ ಮುಂದೆ ಹಂಚಿಕೊಳ್ಳಿ ಸರ್, ಅಲ್ಲಿ ಇಸ್ಲಾಂ ಭಾರತಕ್ಕೆ ಪ್ರಜಾಪ್ರಭುತ್ವವನ್ನು ಉಡುಗೊರೆಯಾಗಿ ನೀಡಿದೆ ಎಂದು ಬರೆಯಲಾಗಿದೆ” ಎಂದು ಬರೆದಿದ್ದಾರೆ. ಸಂತೋಷ್ ಕುಮಾರ್ ಎಂಬ ಯೂಸರ್ ನಗುವ ಎಮೋಜಿಯೊಂದಿಗೆ ಕಾಮೆಂಟ್ ಮಾಡುತ್ತ – ಇನ್ನೊಂದು ಜೋಕ್ ಹೇಳಿ ಎಂದಿದ್ದಾರೆ.
ರವೀಂದ್ರ ಶುಕ್ಲಾ ಎಂಬ ಯೂಸರ್, ಇಸ್ಲಾಂ ಏನನ್ನೂ ನೀಡಿಲ್ಲ, ಆದರೆ ನಮ್ಮ ದೇಶದ ಸಾಂವಿಧಾನಿಕ ಹುದ್ದೆಗಳ ಮೇಲೆ ಕುಳಿತಿರುವ ನಾಯಕರು ನಮಗೆ ಪ್ರಜಾಪ್ರಭುತ್ವದ ಉಡುಗೊರೆಯನ್ನು ನೀಡಿದ್ದಾರೆ ಎಂದು ಬರೆದಿದ್ದಾರೆ. ಮಾಯಾಂಕ್ ಎಂಬ ಯೂಸರ್ – ಹಾಗಾದರೆ ಗಲ್ಫ್ ದೇಶಗಳಲ್ಲಿ ಪ್ರಜಾಪ್ರಭುತ್ವ ಏಕೆ ಕಂಡುಬಂದಿಲ್ಲ? ಅದೇ ಪ್ರಜಾಪ್ರಭುತ್ವವನ್ನು ನಾಶ ಮಾಡಲು ನೀವು ಬಿಜೆಪಿಯ ಮಡಿಲಲ್ಲಿ ಕುಳಿತಿದ್ದೀರಿ ಎಂದು ರಾಹುಲ್ ಹೆಸರಿನ ಟ್ವಿಟರ್ ಹ್ಯಾಂಡಲ್‌ನಿಂದ ಬರೆಯಲಾಗಿದೆ. ಉಳಿದ 56 ದೇಶಗಳಿಗೆ ಪ್ರಜಾಪ್ರಭುತ್ವದ ಉಡುಗೊರೆಯನ್ನು ಇಸ್ಲಾಂ ಏಕೆ ನೀಡಲಿಲ್ಲ ಎಂದು ಜೈ ಶರ್ಮಾ ಎಂಬ ಯೂಸರ್ ಕಮೆಂಟ್ ಮಾಡಿದ್ದಾರೆ.
ನಿಮ್ಮ ಮಾಹಿತಿಗಾಗಿ ತಿಳಿಸಬಯಸುವ ವಿಷಯವೇನೆಂದರೆ ಇತ್ತೀಚಿಗೆ ಅಸಾದುದ್ದೀನ್ ಓವೈಸಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಒವೈಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ವ್ಯಂಗ್ಯವಾಡುತ್ತಿದ್ದಾರೆ, ರಾಹುಲ್ ಗಾಂಧಿ ತಾನು ಅಸ್ತಿತ್ವದಲ್ಲೇ ಇಲ್ಲ, ರಾಹುಲ್ ಗಾಂಧಿಯನ್ನ ತಾನೇ ಕೊಂದಿದ್ದೇನೆ ಎಂದು ಹೇಳ್ತಾರಂದ್ರೆ ಈಗಿರುವ ರಾಹುಲ್ ಗಾಂಧಿಯೇನು ದೆವ್ವವೇ? ಎಂದು ಹೇಳಿದ್ದರು. ಒವೈಸಿ ಹೇಳಿಕೆಗೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:
“ನಾವು ಹೆಚ್ಚೆಚ್ಚು ಮಕ್ಕಳನ್ನ ಹುಟ್ಟಸ್ಲಿಲ್ಲಾಂದ್ರೆ ಈ ಭಾರತವನ್ನ ಹೇಗೇ ಆಳೋಕೆ ಸಾಧ್ಯ? ಓವೈಸಿ ಸಾಬ್ ಪಿಎಂ ಹೇಗಾಗ್ತಾರೆ? ಜೈ ಓವೈಸಿ”: AIMIM ಮುಖಂಡ
ಎಐಎಂಐಎಂ ಪಕ್ಷದ ಉತ್ತಪ್ರದೇಶದ ಅಲಿಗಢ ಜಿಲ್ಲಾಧ್ಯಕ್ಷ ಮತ್ತು ಒವೈಸಿ ಆಪ್ತ ಗುಫ್ರಾನ್ ನೂರ್‌ನ ವಿವಾದಾತ್ಮಕ ಹೇಳಿಕೆ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಹೇಳಿಕೆಯಲ್ಲಿ, ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡುವವರನ್ನು ವಿರೋಧಿಸುವುದು ಮತ್ತು ಹೆಚ್ಚು ಹೆಚ್ಚು ಮಕ್ಕಳನ್ನು ಹೆರುವುದನ್ನ ಈತ ಪ್ರತಿಪಾದಿಸುತ್ತಿದ್ದಾನೆ. ನಾವು ಹೆಚ್ಚೆಚ್ಚು ಮಕ್ಕಳನ್ನು ಹುಟ್ಟಿಸದಿದ್ದರೆ ನಾವು ಈ ಭಾರತದ ಮೇಲೆ ರಾಜ್ (ಅಧಿಕಾರ) ನಡೆಸಲು ಸಾಧ್ಯ? ಎಂದು ಗುಫ್ರಾನ್ ನೂರ್ ಹೇಳುವುದನ್ನು ವೀಡಿಯೊದಲ್ಲಿ ಕೇಳಬಹುದು.
मुस्लिम अधिक बच्चे पैदा नहीं करेंगे तो कैसे हम राज करेंगे, #असदउद्दीन_ओवैसी कैसे प्रधानमंत्री बनेंगे #AIMIM के जिला अध्यक्ष जनसंख्या नियंत्रण कानून के विपरीत बच्चे पैदा करने का प्रचार कर रहे हैं – गुफरान नूर @myogiadityanath @asadowaisi @BJP4UP @aimim_national @BJP4India pic.twitter.com/y0sgmaw9bl
— Saurabh Singh Bhadouria ( सौरभ सिंह ) (@Bhadourialive) December 15, 2021
ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಗುಫ್ರಾನ್ ನೂರ್, “ನಮ್ಮ ಮುಖ್ಯಸ್ಥ ಓವೈಸ್ ಸಾಹಿಬ್ ಅಲ್ಲಾನ ಹೆಸರೇಳಿ ಮಾತ್ರ ಹೆದರಿಸುತ್ತಾರೆ. ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್‌ನವರು ಭಾಷಣ ಆರಂಭಿಸಿದಾಗ ಬಿಜೆಪಿಯ ಹೆಸರಿನಿಂದ ಹೆದರಿಸುತ್ತಾರೆ. ಮನುಷ್ಯರಿಗೆ ಹೆದರಿಸುತ್ತಾರೆ. ಮೊದಲು ಇಲ್ಲಿ ವ್ಯತ್ಯಾಸ ತಿಳಿದುಕೊಳ್ಳಿ. ಮುಸ್ಲಿಂ ಸಮುದಾಯವು ನಂಬಿಕೆಯಿಂದ ಮತ್ತು ಎಲ್ಲ ರೀತಿಯಲ್ಲೂ ಕೆಳಗಿಳಿದಿದೆ. ಜನ ಹೆಚ್ಚು ಮಕ್ಕಳನ್ನ ಹೆರಬೇಡಿ ಎನ್ನುತ್ತಾರೆ. 1 ಬೇಕು, 2 ಸಾಕು ಎನ್ನುತ್ತಾರೆ. ಅಯ್ಯೋ, ನಾವು ಹೆಚ್ಚೆಚ್ಚು ಮಕ್ಕಳನ್ನ ಹೆರದೇ ಭಾರತದ ಮೇಲೆ ಹೇಗೆ ರಾಜ್ (ಆಳ್ವಿಕೆ) ಮಾಡಬಹುದು? ನಮ್ಮ ಓವೈಸಿ ಸಾಹೇಬರು ಹೇಗೆ ಪ್ರಧಾನಿಯಾಗುತ್ತಾರೆ? ನಮ್ಮ ಶೌಕತ್ ಸಾಹೇಬರು ಹೇಗೆ ಮುಖ್ಯಮಂತ್ರಿಯಾಗುತ್ತಾರೆ? ಮಕ್ಕಳನ್ನು ಹೆಚ್ಚೆಚ್ಚು ಮಾಡದಂತೆ ದಲಿತರನ್ನು ಬೆದರಿಸಲಾಗುತ್ತಿದೆ. ಮಕ್ಕಳನ್ನು ಹೆರೋದನ್ನ ತಡೆಯಲು ಮುಸ್ಲಿಮರನ್ನು ಬೆದರಿಸಲಾಗುತ್ತಿದೆ. ಮಕ್ಕಳನ್ನು ಹೆರೋದನ್ನ ಯಾಕೆ ಬಂದ್ ಮಾಡಬೇಕು? ಇದು ನಮ್ಮ ಷರಿಯತ್‌ನ ವಿರುದ್ಧವಾಗಿದೆ. ನಮ್ಮ ಮಹಿಳೆಯರು ಮತ್ತು ಯುವತಿಯರು ಬುರ್ಖಾ ಹಾಕಿಕೊಳ್ಳಬೇಕು” ಎಂದು ಹೇಳೋದನ್ನ ನೀವು ಕೇಳಬಹುದು.
ಗುಫ್ರಾನ್ ನೂರ್ ಅವರೇ ತಮ್ಮ ಪ್ರೊಫೈಲ್‌ನಲ್ಲಿ ವೀಡಿಯೊದಲ್ಲಿ ಸ್ಥಳ ಮತ್ತು ಜನರಿರುವ ಚಿತ್ರವನ್ನು ಹಂಚಿಕೊಂಡಿದ್ದಾನೆ. ಇದರಲ್ಲಿ ಅವರು, ‘ಎಐಎಂಐಎಂ ಅಲಿಘರ್ ತಂಡವು ಬ್ಲಾಕ್ ಅಧ್ಯಕ್ಷರ ಬಳಿ ಹೋಗಿ ಗ್ರಾಮಾಧ್ಯಕ್ಷರನ್ನು ನೇಮಕ ಮಾಡಿದೆ’ ಎಂದು ಬರೆಯಲಾಗಿದೆ.
ಈ ವಿಷಯದ ಬಗ್ಗೆ ಗುಫ್ರಾನ್ ನೂರ್ ಪ್ರತಿಕ್ರಿಯಿಸುತ್ತ, “ನಿನ್ನೆ ನಾವು ಅಲಿಘರ್‌ನ ಅದೇ ಸ್ಥಳದಲ್ಲಿ ಕೋಣೆಯಲ್ಲಿ ಕುಳಿತು ನಮ್ಮ ನಡುವೆ ದೀನ್ ಬಗ್ಗೆ ಚರ್ಚಿಸುತ್ತಿದ್ದೆವು” ಎಂದು ಗುಫ್ರಾನ್ ನೂರ್ ಹೇಳಿದ್ದಾನೆ. ಆದರೆ ಈ ವಿಡಿಯೋ ಮಾಡಿ ವೈರಲ್ ಮಾಡಿದ್ದು ಯಾರೋ ಗೊತ್ತಿಲ್ಲ. ಇದರೊಂದಿಗೆ ವಿಡಿಯೋವನ್ನು ಕ್ರಾಪ್ ಮಾಡಿ ಎಡಿಟ್ ಮಾಡಲಾಗಿದೆ ಎಂದು ಹೇಳಿದ್ದಾನೆ.
ಎಐಎಂಐಎಂಗೂ ಮುನ್ನ ಗುಫ್ರಾನ್ ನೂರ್ ಆಮ್ ಆದ್ಮಿ ಪಕ್ಷದ ನಾಯಕರಿಗೆ ಆಪ್ತನಾಗಿದ್ದನು. ಈ ಹಿಂದೆ ಈತ ಆಮ್ ಆದ್ಮಿ ಪಕ್ಷದ ಕಾರ್ಯಕರ್ತನಾಗಿದ್ದನು. ಎಎಪಿಯ ಹಲವು ದೊಡ್ಡ ನಾಯಕರ ಜೊತೆ ಈತನಿರುವ ಚಿತ್ರಗಳೂ ಇವೆ.