“ನಾವು ಮುಸಲ್ಮಾನರು ಹೆಚ್ಚೆಚ್ಚು ಮಕ್ಕಳನ್ನ ಹುಟ್ಟಸ್ಲಿಲ್ಲಾಂದ್ರೆ ಈ ಭಾರತವನ್ನ ಮುಸಲ್ಮಾನರು ಆಳೋಕೆ ಹೇಗೆ ಸಾಧ್ಯ? ನಮ್ಮ ಮುಸ್ಲಿಮನೊಬ್ಬ ಪಿಎಂ ಹೇಗಾಗ್ತಾನೆ?”: #ಗುಫ್ರಾನ್_ನೂರ್

in Uncategorized 1,071 views

ಎಐಎಂಐಎಂ ಪಕ್ಷದ ಉತ್ತಪ್ರದೇಶದ ಅಲಿಗಢ ಜಿಲ್ಲಾಧ್ಯಕ್ಷ ಮತ್ತು ಒವೈಸಿ ಆಪ್ತ ಗುಫ್ರಾನ್ ನೂರ್‌ನ ವಿವಾದಾತ್ಮಕ ಹೇಳಿಕೆ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಹೇಳಿಕೆಯಲ್ಲಿ, ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡುವವರನ್ನು ವಿರೋಧಿಸುವುದು ಮತ್ತು ಹೆಚ್ಚು ಹೆಚ್ಚು ಮಕ್ಕಳನ್ನು ಹೆರುವುದನ್ನ ಈತ ಪ್ರತಿಪಾದಿಸುತ್ತಿದ್ದಾನೆ. ನಾವು ಹೆಚ್ಚೆಚ್ಚು ಮಕ್ಕಳನ್ನು ಹುಟ್ಟಿಸದಿದ್ದರೆ ನಾವು ಈ ಭಾರತದ ಮೇಲೆ ರಾಜ್ (ಅಧಿಕಾರ) ನಡೆಸಲು ಸಾಧ್ಯ? ಎಂದು ಗುಫ್ರಾನ್ ನೂರ್ ಹೇಳುವುದನ್ನು ವೀಡಿಯೊದಲ್ಲಿ ಕೇಳಬಹುದು.

Advertisement

ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ಗುಫ್ರಾನ್ ನೂರ್, “ನಮ್ಮ ಮುಖ್ಯಸ್ಥ ಓವೈಸ್ ಸಾಹಿಬ್ ಅಲ್ಲಾನ ಹೆಸರೇಳಿ ಮಾತ್ರ ಹೆದರಿಸುತ್ತಾರೆ. ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್‌ನವರು ಭಾಷಣ ಆರಂಭಿಸಿದಾಗ ಬಿಜೆಪಿಯ ಹೆಸರಿನಿಂದ ಹೆದರಿಸುತ್ತಾರೆ. ಮನುಷ್ಯರಿಗೆ ಹೆದರಿಸುತ್ತಾರೆ‌. ಮೊದಲು ಇಲ್ಲಿ ವ್ಯತ್ಯಾಸ ತಿಳಿದುಕೊಳ್ಳಿ. ಮುಸ್ಲಿಂ ಸಮುದಾಯವು ನಂಬಿಕೆಯಿಂದ ಮತ್ತು ಎಲ್ಲ ರೀತಿಯಲ್ಲೂ ಕೆಳಗಿಳಿದಿದೆ. ಜನ ಹೆಚ್ಚು ಮಕ್ಕಳನ್ನ ಹೆರಬೇಡಿ ಎನ್ನುತ್ತಾರೆ. 1 ಬೇಕು, 2 ಸಾಕು ಎನ್ನುತ್ತಾರೆ. ಅಯ್ಯೋ, ನಾವು ಹೆಚ್ಚೆಚ್ಚು ಮಕ್ಕಳನ್ನ ಹೆರದೇ ಭಾರತದ ಮೇಲೆ ಹೇಗೆ ರಾಜ್ (ಆಳ್ವಿಕೆ) ಮಾಡಬಹುದು? ನಮ್ಮ ಓವೈಸಿ ಸಾಹೇಬರು ಹೇಗೆ ಪ್ರಧಾನಿಯಾಗುತ್ತಾರೆ? ನಮ್ಮ ಶೌಕತ್ ಸಾಹೇಬರು ಹೇಗೆ ಮುಖ್ಯಮಂತ್ರಿಯಾಗುತ್ತಾರೆ? ಮಕ್ಕಳನ್ನು ಹೆಚ್ಚೆಚ್ಚು ಮಾಡದಂತೆ ದಲಿತರನ್ನು ಬೆದರಿಸಲಾಗುತ್ತಿದೆ. ಮಕ್ಕಳನ್ನು ಹೆರೋದನ್ನ ತಡೆಯಲು ಮುಸ್ಲಿಮರನ್ನು ಬೆದರಿಸಲಾಗುತ್ತಿದೆ. ಮಕ್ಕಳನ್ನು ಹೆರೋದನ್ನ ಯಾಕೆ ಬಂದ್ ಮಾಡಬೇಕು? ಇದು ನಮ್ಮ ಷರಿಯತ್‌ನ ವಿರುದ್ಧವಾಗಿದೆ. ನಮ್ಮ ಮಹಿಳೆಯರು ಮತ್ತು ಯುವತಿಯರು ಬುರ್ಖಾ ಹಾಕಿಕೊಳ್ಳಬೇಕು” ಎಂದು ಹೇಳೋದನ್ನ ನೀವು ಕೇಳಬಹುದು.

ಈ ವೀಡಿಯೊ ನೆನ್ನೆಯ ಅಂದರೆ ಡಿಸೆಂಬರ್ 14 ರದ್ದು ಎಂದು (ಮಂಗಳವಾರ) ಹೇಳಲಾಗುತ್ತಿದೆ. ಗುಫ್ರಾನ್ ನೂರ್ ಅವರೇ ತಮ್ಮ ಪ್ರೊಫೈಲ್‌ನಲ್ಲಿ ವೀಡಿಯೊದಲ್ಲಿ ಸ್ಥಳ ಮತ್ತು ಜನರಿರುವ ಚಿತ್ರವನ್ನು ಹಂಚಿಕೊಂಡಿದ್ದಾನೆ. ಇದರಲ್ಲಿ ಅವರು, ‘ಎಐಎಂಐಎಂ ಅಲಿಘರ್ ತಂಡವು ಬ್ಲಾಕ್ ಅಧ್ಯಕ್ಷರ ಬಳಿ ಹೋಗಿ ಗ್ರಾಮಾಧ್ಯಕ್ಷರನ್ನು ನೇಮಕ ಮಾಡಿದೆ’ ಎಂದು ಬರೆಯಲಾಗಿದೆ.

ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಗುಫ್ರಾನ್ ನೂರ್, “ನಿನ್ನೆ ನಾವು ಅಲಿಘರ್‌ನ ಅದೇ ಸ್ಥಳದಲ್ಲಿ ಕೋಣೆಯಲ್ಲಿ ಕುಳಿತು ನಮ್ಮ ನಡುವೆ ದೀನ್ ಬಗ್ಗೆ ಚರ್ಚಿಸುತ್ತಿದ್ದೆವು” ಎಂದು ಗುಫ್ರಾನ್ ನೂರ್ ಹೇಳಿದ್ದಾನೆ. ಆದರೆ ಈ ವಿಡಿಯೋ ಮಾಡಿ ವೈರಲ್ ಮಾಡಿದ್ದು ಯಾರೋ ಗೊತ್ತಿಲ್ಲ. ಇದರೊಂದಿಗೆ ವಿಡಿಯೋವನ್ನು ಕ್ರಾಪ್ ಮಾಡಿ ಎಡಿಟ್ ಮಾಡಲಾಗಿದೆ ಎಂದು ಹೇಳಿದ್ದಾನೆ.

ಎಐಎಂಐಎಂಗೂ ಮುನ್ನ ಗುಫ್ರಾನ್ ನೂರ್ ಆಮ್ ಆದ್ಮಿ ಪಕ್ಷದ ನಾಯಕರಿಗೆ ಆಪ್ತನಾಗಿದ್ದನು. ಈ ಹಿಂದೆ ಈತ ಆಮ್ ಆದ್ಮಿ ಪಕ್ಷದ ಕಾರ್ಯಕರ್ತನಾಗಿದ್ದನು. ಎಎಪಿಯ ಹಲವು ದೊಡ್ಡ ನಾಯಕರ ಜೊತೆ ಈತನಿರುವ ಚಿತ್ರಗಳೂ ಇವೆ.

ಆಮ್ ಆದ್ಮಿ ಪಕ್ಷದ ಗೋಪಾಲ್ ರಾವ್ ಜೊತೆ
ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್ ಜೊತೆ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೊತೆ
Advertisement
Share this on...