ಆಲ್ ಇಂಡಿಯಾ ಇಮಾಮ್ ಅಸೋಸಿಯೇಶನ್ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ಭಾನುವಾರ (22 ಜನವರಿ 2023) ಮತ್ತೊಮ್ಮೆ ಹಿಂದೂ ಧರ್ಮದ ವಿರುದ್ಧ ವಿಷ ಕಕ್ಕಿದ್ದಾನೆ. ಗುಜರಾತಿನ ಸೋಮನಾಥ ದೇಗುಲದಲ್ಲಿ ಕೆಟ್ಟ ಕೆಲಸ ನಡೀತಿದ್ವು ಇದೇ ಕಾರಣಕ್ಕಾಗಿ ಮೊಹಮ್ಮದ್ ಘಜ್ನವಿ ಆ ದೇವಸ್ಥಾನವನ್ಮ ಕೆಡವಿದ್ದ ಕಾರ್ಯ ಮಾಡಿದ್ದರು ಎಂದು ರಶೀದಿ ಹೇಳಿದ್ದಾನೆ. ಅದೇ ಸಮಯದಲ್ಲಿ ಮೊಘಲರಿಗೂ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ ಎಂದೂ ರಶೀದಿ ಹೇಳಿದ್ದಾನೆ.
ಇದರೊಂದಿಗೆ, ಅವರು ಇತಿಹಾಸದ ಬಗ್ಗೆ ಬಾಯಿ ಹರಿದುಕೊಳ್ಳುತ್ತ ಮೊಘಲ್ ಆಕ್ರಮಣಕಾರರ ಬಗ್ಗೆಯೂ ಜ್ಞಾನವನ್ನು ನೀಡಿದ್ದಾನೆ. ರಶೀದಿ ಮಾತನಾಡುತ್ತ, “ಮೊಘಲರು ಕಾಲರಾಗಿದ್ದರು ಎಂಬುದು ನಿಜ. ಎಲ್ಲಾ ಮೊಘಲ್ ದೊರೆಗಳು ತಮ್ಮದೇ ಆದ ಯುಗವನ್ನು ಹೊಂದಿದ್ದರು. ಮೊಘಲರಿಗೂ ಧರ್ಮಕ್ಕೂ ಯಾವುದೇ ಸಂಬಂಧವಿರಲಿಲ್ಲ. ಈ 800 ವರ್ಷಗಳಲ್ಲಿ, ಎಲ್ಲಾ ಮೊಘಲ್ ಚಕ್ರವರ್ತಿಗಳು ಅಥವಾ ಇತರ ಚಕ್ರವರ್ತಿಗಳು ಬಂದು ಹೋಗಿರಬಹುದು. ಅವರ ಇತಿಹಾಸವನ್ನು ಓದಿದರೆ, ಅವರಿಗೂ ಇಸ್ಲಾಂಗೈ ಯಾವುದೇ ಸಂಬಂಧವಿಲ್ಲ” ಎಂದಿದ್ದಾನೆ.
ಮುಂದೆ ಮಾತನಾಡಿದ ರಶೀದಿ, “ಇಸ್ಲಾಂನ ಹೆಸರಿನಲ್ಲಿ ಅವರು ಯಾವುದೇ ರೀತಿಯ ಕೆಲಸ ಮಾಡಿಲ್ಲ. ಇಂತಹ ಅನೇಕ ಉದಾಹರಣೆಗಳಿವೆ. ಘಜ್ನವಿ ಸೋಮನಾಥ ದೇಗುಲವನ್ನು ಒಡೆದನೆಂದು ಜನ ಹೇಳುತ್ತಿದ್ದರಂತೆ. ನಂಬಿಕೆಯ ಹೆಸರಲ್ಲಿ ಅಲ್ಲಿ ಏನಾಗುತ್ತಿದೆ? ದೇವರ ಹೆಸರಿನಲ್ಲಿ ಏನಾಗುತ್ತಿದೆ? ಅಲ್ಲಿ ಹುಡುಗಿಯರನ್ನ ಕಿಡ್ನ್ಯಾಪ್ ಮಾಡಲಾಗುತ್ತಿದೆ ಎಂದು ಅಲ್ಲಿನ ಜನ ಘಜ್ನವಿಗೆ ತಿಳಸಿದ್ದು ಇತಿಹಾಸ” ಎಂದು ಹೇಳಿದ್ದಾನೆ.
गजनवी ने सोमनाथ मंदिर तोड़कर गलत नहीं किया- साजिद रशीदी#Somnath pic.twitter.com/VgHtYWeRG9
— TV9 Bharatvarsh (@TV9Bharatvarsh) January 22, 2023
ರಶೀದಿ ಇಲ್ಲಿಗೇ ನಿಲ್ಲದೆ, “ಇದಾದ ನಂತರ ಗಜ್ನವಿ ಅಲ್ಲಿ ತಪಾಸಣೆ/ವಿಚಾರಣೆ ನಡೆಸಿದರನು. ಅಲ್ಲಿನ ಸ್ಥಿತಿ ಹೀಗಿದೆ ಎಂದು ತಿಳಿದು ಹೋಗಿ ಸೋಮನಾಥ ದೇವಸ್ಥಾನದ ಮೇಲೆ ಹತ್ತಿದ ಹೊರತು ಸೋಮನಾಥ ದೇಗುಲವನ್ನು ಕೆಡವುವ ಕೆಲಸ ಮಾಡಿಲ್ಲ, ಅಲ್ಲಿ ಏನೆಲ್ಲಾ ಅನಾಹುತ ಆಗುತ್ತಿದೆಯೋ ಅದನ್ನು ತಡೆಯುವ ಕೆಲಸ ಮಾಡಿದ” ಎಂದಿದ್ದಾನೆ.
ಈ ಹಿಂದೆಯೂ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ರಶೀದಿ
ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಕಾನೂನಿನ ಬಗ್ಗೆ ಹಗಲಿರುಳು ಅಳುವ ಮೂಲಭೂತವಾದಿಗಳು ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರವನ್ನ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಯೋಧ್ಯೆಯಲ್ಲಿ ಮಸೀದಿ ಇತ್ತು ಮುಂದೆಯೂ ಅದು ಹಾಗೆಯೇ ಉಳಿಯುತ್ತದೆ ಎಂದು ಕಾಲಕಾಲಕ್ಕೆ ಬೆದರಿಕೆ ಹಾಕುತ್ತಲೇ ಇರುತ್ತಾರೆ.
ಮೌಲಾನಾ ರಶೀದಿ ಈ ರೀತಿ ಹಿಂದುಗಳ ಬಗ್ಗೆ, ಮಂದಿರಗಳ ಬಗ್ಗೆ ಈ ರೀತಿ ಬೊಗಳುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆಯೂ ಈತ ರಾಮಮಂದಿರವನ್ನು ಕೆಡವುವುದಾಗಿ ಬೆದರಿಕೆ ಹಾಕಿದ್ದ. 50-100 ವರ್ಷಗಳ ನಂತರ ಮುಸ್ಲಿಂ ದೊರೆ ಬಂದಾಗ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕೆಡವಿ ಮಸೀದಿ ಕಟ್ಟಬಹುದು, ಮುಸಲ್ಮಾನರ ಮುಂದಿನ ಪಿಳಿಗೆಗಳು ಈ ಬಗ್ಗೆ ಸುಮ್ಮನಿರಲ್ಲ ಎಂದು ಹೇಳಿದ್ದ.
#राम_मंदिर पर #मौलाना_साजिदी_रशीदी का भड़काऊ बयान.. कहा- '50-100 साल बाद मुस्लिम शासक आने पर #RamMandir तोड़कर मस्जिद बनाई जा सकती है, आने वाली नस्लें खामोश नहीं रहेंगी'
अभी से प्लानिंग तैयार है। और हिन्दू जातीय लाभ में व्यस्त है। pic.twitter.com/xbFUyiKZsJ
— Pt. Shrikant Upadhyay (@shrikantryvbjp) December 29, 2022
ಟೈಮ್ಸ್ ನೌ ನವಭಾರತದೊಂದಿಗೆ ಮಾತನಾಡಿದ್ದ ಮೌಲಾನಾ, “ಈ ದೇಶದ ಇತಿಹಾಸವನ್ನು ಬರೆಯಲಾಗುವುದು ಮತ್ತು 1992 ರಲ್ಲಿ ಬಾಬರಿ ಮಸೀದಿ ಧ್ವಂಸವಾಯಿತು ಎಂದು ಇತಿಹಾಸವನ್ನು ಬರೆಯಲಾಗುವುದು ಎಂದು ಹೇಳಿದರು ಮತ್ತು ಆ ನಂತರ ಅಂದಿನ ಪ್ರಧಾನಿ ಹೋಗಿ ರಾಮಮಂದಿರದ ಶಂಕುಸ್ಥಾಪನೆ ಮಾಡಿದರು. ಇದು ಸಂಪೂರ್ಣವಾಗಿ ಸಂವಿಧಾನಕ್ಕೆ ವಿರುದ್ಧವಾಗಿತ್ತು ಎಂದು ನಮ್ಮ ಮುಂದಿನ ಪೀಳಿಗೆ ಓದುತ್ತಾರೆ”.
“ಇಂದು ಮುಸ್ಲಿಮರು ಮೌನವಾಗಿದ್ದಾರೆ. ನನ್ನ ಮುಂದಿನ ಸಂತತಿ… ನನ್ನ ಮಗ, ಅವನ ಮಗ, ಅವನ ಮೊಮ್ಮಗ…. 50 ರಿಂದ 100 ವರ್ಷಗಳ ನಂತರ ನಮ್ಮ ಮಸೀದಿಯನ್ನು (ಬಾಬ್ರಿ ಮಸ್ಜಿದ್) ಕೆಡವಿ ದೇವಸ್ಥಾನವನ್ನಾಗಿ ಮಾಡಿದ ಇತಿಹಾಸವನ್ನ ತಿಳಿದುಕೊಳ್ಳುತ್ತಾರೆ. ಆ ಸಮಯದಲ್ಲಿ ಭಾರತದಲ್ಲಿ ಮುಸ್ಲಿಮ್ ದೊರೆ, ಮುಸ್ಲಿಂ ನ್ಯಾಯಾಧೀಶರು ಅಥವಾ ಮುಸ್ಲಿಂ ಆಡಳಿತ ಬರಬಹುದು… ಬದಲಾವಣೆಗಳಾಗಬಹುದು ಎಂದು ಏನೂ ಹೇಳಲಾಗದು… ಹಾಗಾದರೆ ಆ ಇತಿಹಾಸದ ಆಧಾರದಲ್ಲಿ ಈ ದೇವಸ್ಥಾನವನ್ನು ಕೆಡವಿ ಮಸೀದಿ ಕಟ್ಟುವುದಿಲ್ಲವೇ? ಖಂಡಿತವಾಗಿಯೂ ಮಾಡ್ತಾರೆ” ಎಂದಿದ್ದ.