ಅದು 1947 ಕ್ಕೂ ಹಿಂದಿನ ಕಥೆ, ಈ ಕಥೆ ಆಸ್ಟ್ರೀಯಾ ಮೂಲದ ಒಬ್ಬ ಯುವತಿಯದ್ದು. ಆಕೆಯ ಹೆಸರು Emilie Schenkl (ಎಮಿಲಿ ಶೆಂಕಲ್) ಅಂತ. ನನಗನಿಸುತ್ತೆ ಬಹುಶಃ ದೇಶದ ಬಹುತೇಕರಿಗೆ ಈ ಹೆಸರು ಗೊತ್ತಿರಕ್ಕಿಲ್ಲ, ಒಂದು ವೇಳೆ ಈ ಹೆಸರು ನಿಮಗೆ ಗೊತ್ತಿರದಿದ್ದರೆ ನೀವು ನಿಜಕ್ಕೂ ದುರಾದೃಷ್ಟವಂತರೇ ಸರಿ. ಈ ಹೆಸರನ್ನ ಇತಿಹಾಸದ ಪುಟಗಳಿಂದ ಕಮ್ಯುನಿಸ್ಟ್ ಇತಿಹಾಸಕಾರರು ಅದ್ಯಾವತ್ತೋ ತೆಗೆದು ಬಿಸಾಡಿಬಿಟ್ಟಿದ್ದರು.
ಶ್ರೀಮತಿ ಎಮಿಲಿ ಶೆಂಕಲ್ ರವರು ಭಾರತಮಾತೆಯ ಸುಪುತ್ರನ ಜೊತೆ ವಿವಾಹವಾಗಿದ್ದರು ಹಾಗು ಈಕೆ ಎಂಥಾ ದೇಶಕ್ಕೆ ಸೊಸೆಯಾಗಿ ಬಂದಿದ್ದಳೆಂದರೆ ಆ ದೇಶ ಈಕೆಯನ್ನ ಯಾವತ್ತೀಗೂ ಸೊಸೆಯಂತ ಒಪ್ಪಿಕೊಳ್ಳಲೇ ಇಲ್ಲ. ಸೊಸೆಯನ್ನ ದೇಶಕ್ಕೂ ಆಹ್ವಾನಿಸಲಿಲ್ಲ, ಆಕೆಯ ಸೀಮಂತ ಕಾರ್ಯವೂ ಮಾಡಲಿಲ್ಲ ಬಳಿಕ ಮೊಮ್ಮಗುವನ್ನ ಆಡಿಸಿಯೂ ಬೆಳೆಸಲಿಲ್ಲ. ಈಕೆಯ ಬಗ್ಗೆಯಾಗಲಿ ಈಕೆ ಹೇಗೆ ಜೀವನ ನಡೆಸುತ್ತಿದ್ದಾಳೆ, ಎಲ್ಲಿದ್ದಾಳೆ ಅನ್ನೋದನ್ನೂ ಕೂಡ ಇತಿಹಾಸದಲ್ಲಿ ಮುಚ್ಚಿ ಹಾಕಲಾಯಿತು.
7 ವರ್ಷಗಳ ವೈವಾಹಿಕ ಜೀವನದಲ್ಲಿ ಕೇವಲ 3 ವರ್ಷವಷ್ಟೇ ತನ್ನ ಪತಿಯ ಜೊತೆ ಇರುವ ಅವಕಾಶ ಸಿಕ್ಕಿತ್ತು ಹಾಗು ತನ್ನ ಪುಟ್ಟ ಮಗುವನ್ನ ಹಾಗು ಹೆಂಡತಿಯನ್ನ ಬಿಟ್ಟು ಆ ಮಹಾಪುರುಷ ದೇಶಕ್ಕಾಗಿ ಹೋರಾಡಲು ಹೊರಟುಬಿಟ್ಟಿದ್ದ. ತನ್ನ ಮಗು ಹಾಗು ಹೆಂಡತಿಯನ್ನ ಬಿಟ್ಟು ಹೊರಡುವಾಗ ಆತ ಮೊದಲು ದೇಶವನ್ನ ಸ್ವತಂತ್ರಗೊಳಿಸುತ್ತೇನೆ ಬಳಿಕ ನಾವು ಹೆಂಡತಿ ಮಕ್ಕಳ ಜೊತೆ ಜೀವನ ನಡೆಸೋದು ಇದ್ದೇ ಇದೆ ಎಂದು ಆತ ಹೊರಟೇ ಬಿಟ್ಟಿದ್ದ. ಆದರೆ 1945 ರಲ್ಲಿ ನಡೆದ ತಥಾಕಥಿತ (ಸುಳು) ವಿಮಾನ ದುರ್ಘಟನೆಯಲ್ಲಿ ಆತ ಕಾಣೆಯಾಗಿಬಿಟ್ಟ.
ಆ ಸಮಯದಲ್ಲಿ ಎಮಿಲಿ ಶೆಂಕಲ್ ಯುವತಿಯಾಗಿದ್ದಳು, ಸುಂದರಿಯಾಗಿದ್ದಳು, ಆಕೆ ಬಯಸಿದ್ದರೆ ಯುರೋಪಿಯನ್ ಸಂಸ್ಕೃತಿಯ ಪ್ರಕಾರ ಮತ್ತೊಂದು ಮದುವೆಯಾಗಬಹುದಿತ್ತು ಆದರೆ ಆಕೆ ಹಾಗೆ ಮಾಡಲಿಲ್ಲ ಹಾಗು ತನ್ನ ಜೀವನವಿಡಿ ಸಂಘರ್ಷ ಮಾಡುತ್ತಲೇ ತನ್ನ ಜೀವನ ಸಾಗಿಸಿದ್ದಳು. ಒಂದು ಮನೆಯಲ್ಲಿ ಆಕೆ ಸಾಧಾರಣ ಕ್ಲರ್ಕ್ ಆಗಿ ಕೆಲಸ ಮಾಡುತ್ತ ಕಡಿಮೆ ವೇತನದಲ್ಲೇ ತನ್ನ ಮಗಳ ಪಾಲನೆ ಪೋಷಣೆ ಮಾಡುತ್ತಲಿದ್ದಳು ಹೊರತು ಯಾರ ಬಳಿಯೂ ಕಂಪ್ಲೇಂಟ್ ಮಾಡಲೇ ಇಲ್ಲ.
ಭಾರತವೂ ಆಗ ಸ್ವತಂತ್ರವಾಗಿತ್ತು ಹಾಗು ಆಕೆ ಬಯಸಿದ್ದರೆ ಒಂದು ಬಾರಿ ಆಕೆ ತನ್ನ ಗಂಡ ಯಾವ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನೆಲ್ಲಾ ಬಿಟ್ಟು ಹೋಗಿದ್ದ ಆ ದೇಶಕ್ಕೆ ಬಂದು ಹೋಗಬಹುದಾಗಿತ್ತು. ಆದರೆ ಆಕೆ ಹಾಗೆ ಮಾಡಲೇ ಇಲ್ಲ. ಭಾರತದ ಮತ್ತೊಂದು ರಾಜಕೀಯ ಪಕ್ಷದ ಪರಿವಾರ ಈ ಮಹಿಳೆಯಿಂದ ಅದೆಷ್ಟು ಬೆಚ್ಚಿ ಬೆದರಿತ್ತೆಂದರೆ ಕಡೆ ಆಕೆಗೆ ಭಾರತದ ಪೌರತ್ವ ಕೊಡೋದಾಗಲಿ, ಒಂದು ಬಾರಿ ದೇಶಕ್ಕೆ ಕರೆಸೋದಾದರೂ ಬಿಡಿ ಆಕೆಗೆ ಭಾರತಕ್ಕೆ ಬರೋಕೆ ವೀಸಾ ಕೂಡ ಕೊಡಲೇ ಇಲ್ಲ.
ಯಾವ ವ್ಯಕ್ತಿ ದೇಶದ ಸ್ವಾತಂತ್ರ್ಯಕ್ಕಾಗಿ ತಾನು ಪಡೆದುಕೊಂಡಿದ್ದ ICS (ಈಗಿನ IAS ಗೆ ಸಮ) ಪದವಿಯನ್ನೇ ತ್ಯಾಗ ಮಾಡಿದ್ದರೋ ಆ ಮಹಾನಾಯಕನೇನಾದ? 70 ವರ್ಷಗಳ ಬಳಿಕವೂ ದೇಶಕ್ಕೆ ಆತನ ಕುರಿತಾಗಿ ಸತ್ಯ ಸಂಗತಿಗಳು ಈಗಲೂ ನಿಗೂಢವಾಗೇ ಉಳಿದಿವೆ. ನೇತಾಜಿ ಸುಭಾಷಚಂದ್ರ ಬೋಸರ ಹತ್ಯೆಯಾಯ್ತೋ ಅಥವ ನಿಜಕ್ಕೂ ವಿಮಾನ ದುರ್ಘಟನೆಯಲ್ಲಿ ತೀರಿಕೊಂಡರೋ ಯಾರಿಗೂ ತಿಳಿಯದು.
ಕೇಂದ್ರದ ಮೋದಿ ಸರ್ಕಾರ ಯಾವಾಗ ನೇತಾಜಿ ಸುಭಾಷಚಂದ್ರ ಬೋಸರ ಜೀವನದ ಕುರಿತಾದ 64 ಸೀಕ್ರೆಟ್ ಫೈಲ್ ಗಳನ್ನು ಜನರೆದುರಿಟ್ಟರೋ ಆಗ ನೇತಾಜಿ ರವರ ಕೆಲವು ರಹಸ್ಯಗಳ ಮೇಲಿನ ಪರದೆ ಸರಿದಿತ್ತು. ಈ ಫೈಲುಗಳಲ್ಲಿ ನೇತಾಜಿಯವರ ಆಸ್ಟ್ರಿಯಾ ಮೂಲದ ಧರ್ಮಪತ್ನಿ ಎಮಿಲಿ ಶೆಂಕಲ್ ರವರ ಬಗ್ಗೆಯೂ ಮಾಹಿತಿಗಳಿದ್ದವು. 1945 ರ ತೈಪೆ ವಿಮಾನ ಅಪಘಾತದಲ್ಲಿ ನೇತಾಜಿ ತೀರಿಕೊಂಡರು ಎಂಬ ಸುದ್ದಿ ಹರಿದಾಡಿದ ಬಳಿಕವೂ ಅವರಿಗೆ ನೇತಾಜಿ ಒಂದಿಲ್ಲೊಂದು ದಿನ ವಾಪಸ್ ಬಂದೇ ಬರುತ್ತಾರೆ ಎಂಬ ಭರವಸೆ ಇತ್ತಂತೆ.
ಈ ವಿಷಯವನ್ನ ಅವರು ನೇತಾಜಿಯವರ ಸಹೋದರ ಶರತ್ ಚಂದ್ರ ಬೋಸರಿಗೆ ಬರೆದ ಪತ್ರದಲ್ಲಿ ಉಲ್ಲೇಖವಾಗಿದೆ. ಮೋದಿ ಸರ್ಕಾರ ಡಿಕ್ಲಾಸಿಫೈ ಮಾಡಿದ್ದ ಫೈಲುಗಳಲ್ಲಿನ ಒಂದು ಫೈಲಿನಲ್ಲಿ ಈ ವಿಷಯ ಪ್ರಸ್ತಾಪವಾಗಿತ್ತು. ಎಮಿಲಿ ಶೆಂಕಲ್ ಹಾಗು ಶರತಚಂದ್ರ ಬೋಸರ ನಡುವೆ 1945 ರ ಬಳಿಕ ಪತ್ರ ವ್ಯವಹಾರ ಹೆಚ್ಚಾಗಿತ್ತಂತೆ. ವಿಮಾನ ದುರ್ಘಟನೆಯಲ್ಲಿ ನೇತಾಜಿ ಅಸುನೀಗಿದ್ದಾರೆ ಎಂಬ ಸುದ್ದಿ ಹರಿದಾಡಿದಾಗಲೂ ಎಮಿಲಿ ಶೆಂಕಲ್ ರಿಗೆ ಅವರ ಪತಿ ಸುಭಾಷಚಂದ್ರ ಬೋಸ್ ವಾಪಸ್ ಬಂದೇ ಬರುತ್ತಾರೆ ಎಂಬ ಭರವಸೆಯಿತ್ತಂತೆ.
ವಿದೇಶದಿಂದ ಕಳಿಸಲಾಗುತ್ತಿದ್ದ ಈ ಪತ್ರಗಳಲ್ಲಿ ಎಮಿಲಿ ರವರು ಸದಾ ನೇತಾಜಿಯವರ ಬಗ್ಗೆ ಹಾಗು ತಮ್ಮ ಮಗಳು ಅನಿತಾ ಪಾಫ್ ರವರ ಬಗ್ಗೆಯೇ ಬರೆಯುತ್ತಿದ್ದರು. ಎಮಿಲಿ ಶೆಂಕಿಲ್ ಪತ್ರ ಬರೆಯುತ್ತ ಅದರಲ್ಲಿ ನೇತಾಜಿಯವರ ಕುಟುಂಬಕ್ಕೆ ಅನಿತಾ ಈಗ ದೊಡ್ಡವಳಾಗುತ್ತಿದ್ದಾಳೆ ಎನ್ನುತ್ತಿದ್ದರಂತೆ. ಪ್ರತಿ ದಿನ ಪ್ರತಿ ಕ್ಷಣವೂ ಎಮಿಲಿ ಶೆಂಕಲ್ ನೇತಾಜಿ ವಾಪಸ್ ಬರುತ್ತಾರೆ ಎಂಬ ನಿರೀಕ್ಷೆಯಲ್ಲೇ ಅವರ ಹಾದಿ ಕಾಯುತ್ತಿದ್ದರಂತೆ.
ನೇತಾಜಿ ಸುಭಾಷಚಂದ್ರ ಬೋಸ್ ಜೀವಂತವಿದಾರೋ ಇಲ್ಲವೋ ಎಂಬುದರ ಬಗ್ಗೆ ಆತನ ಪತ್ನಿಗೆ ವಿಷ್ಯ ಗೊತ್ತೇ ಇರುತ್ತೆ ಅನ್ನೋ ಕಾರಣಕ್ಕೆ ಭಾರತ ಸ್ವಾತಂತ್ರ್ಯವಾದ ಬಳಿಕವೂ ನೆಹರು ನೇತಾಜಿಯವರ ಕುಟುಂಬ ಹಾಗು ಎಮಿಲಿ ಶೆಂಕಲ್ ರವರ ಹಿಂದೆ ಗುಪ್ತಚರ ಏಜೆಂಟ್ ಗಳ ಮೂಲಕ ಬೇಹುಗಾರಿಕೆ ನಡೆಸಿದ್ದ. ಆಕೆಯನ್ನು ಫಾಲೋ ಮಾಡಿ, ಆಕೆಯ ಪತ್ರಗಳನ್ನೆಲ್ಲಾ ಟ್ರ್ಯಾಪ್ ಮಾಡಿ ಎಂದು ನೆಹರು ತಿಳಿಸಿದ್ದ. ಬಳಿಕ ಎಮಿಲಿ ಶೆಂಕಲ್ ನೇತಾಜಿ ಕುಟುಂಬಕ್ಕೆ ಬರೆಯುತ್ತಿದ್ದ ಪತ್ರಗಳ ಮೇಲೂ ಕಣ್ಣಿಡಲಾಗಿತ್ತು.
ಎಮಿಲಿ ಶೆಂಕಲ್ ರವರು ಬರೆದ ಪತ್ರವೊಂದರಲ್ಲಿ ಅವರು ತಮ್ಮ ಹಾಗು ನೇತಾಜಿಯವರ ಮದುವೆ ಹಿಂದೂ ಸಂಪ್ರದಾಯದಂತೆಯೇ ಆಗಿತ್ತು ಎಂದು ತಿಳಿಸಿದ್ದರು. ಎಮಿಲಿ ಶೆಂಕಲ್ ನೇತಾಜಿಯವರ ಸಹೋದರನಿಗೆ ಬರೆದ ಮತ್ತೊಂದು ಪತ್ರದಲ್ಲಿ ಅವರು ಹೀಗೆ ಬರೆಯುತ್ತಾರೆ “ಎಲ್ಲ ಕಡೆ ನೇತಾಜಿಯವರ ಸಾವಿನ ಸುದ್ದಿಯೇ ಚರ್ಚೆಯಲ್ಲಿದೆ ಆದರೆ ಅವರು ಸತ್ತಿಲ್ಲ ಅವರು ಇವತ್ತಿಲ್ಲ ನಾಳೆ ವಾಪಸ್ ಬಂದೇ ಬರುತ್ತಾರೆ, ತಮ್ಮ ಈ ವಿಶ್ವಾಸ ನಿಜವಾಗೇ ಆಗುತ್ತೆ” ಎಂದಿದ್ದರಂತೆ.
ಈ ಫೈ’ಲುಗಳಲ್ಲಿ ಮೇ 4, 1946 ರ ಉಲ್ಲೇಖವಿದ್ದು ನೇತಾಜಿ ತೀರಿಕೊಂಡಿದ್ದಾರೆಂದು ವಿಧವೆಯ ರೂಪದಲ್ಲಿ ಎಮಿಲಿ ಶೆಂಕಲ್ ಈ ಪತ್ರವನ್ನ ಬರೆದಿದ್ದರು. ಎಮಿಲಿ ಹಾಗು ನೇತಾಜಿಯವರ ಭೇಟಿ 1941 ರಲ್ಲಿ ಬರ್ಲಿನ್ ನಲ್ಲಾಗಿತ್ತು. ಪರಸ್ಪರ ಪ್ರೀತಿಸುತ್ತಿದ್ದ ಅವರು 1942 ರಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು. ಈ ಫೈಲಿನಲ್ಲಿ ಪಶ್ಚಿಮ ಬಂಗಾಳದ ಇಂಟೆಲಿಜೆನ್ಸ್ ಬ್ಯೂರೋ ವತಿಯಿಂದ ಮತ್ತೊಂದು ಮುಖ್ಯವಾದ ವಿಷಯದ ಬಗ್ಗೆ ಪ್ರಸ್ತಾಪಿಸಲಾಗಿದೆ.
ಆ ವಿಷಯದ ಪ್ರಕಾರ 1945 ರಲ್ಲಿ ನಡೆದಿದ್ದ ನೇತಾಜಿಯವರ ತಥಾಕಥಿತ ಸಾವಿನ ಸುದ್ದಿಯ ಬಳಿಕ ಎಮಿಲಿ ಶೆಂಕಲ್ ಕೊಲ್ಕತ್ತಾದಲ್ಲಿನ ತಮ್ಮ(ಸುಭಾಷರ) ಕುಟುಂಬಕ್ಕೆ ಪತ್ರವೊಂದನ್ನ ಬರೆದಿದ್ದರು. ಆ ಪತ್ರದಲ್ಲಿ ಅವರು ತನಗೆ ಆರ್ಥಿಕ ಸಹಾಯದ ಅವಶ್ಯಕತೆಯಿದೆ ಎಂದಿದ್ದರು. ಮೂಲಗಳ ಪ್ರಕಾರ ನೇತಾಜಿ ಕುಟುಂಬ ಆಕೆಗೆ ಆರ್ಥಿಕ ಸಹಾಯವನ್ನೂ ಮಾಡಿದ್ದರಂತೆ.
ಬಳಿಕ ಬಹಳ ಕಷ್ಟದ ದಿನಗಳನ್ನ ಎದುರಿಸಿ, ಜೀವನವಿಡೀ ಸಂಘರ್ಷ ಮಾಡುತ್ತಲೇ ಸಾಮಾನ್ಯನಿಗಿಂತಲೂ ಸಾಮಾನ್ಯರಂತೆ ಜೀವನ ನಡೆಸಿ ಶ್ರೀಮತಿ ಎಮಿಲಿ ಶೆಂಕಲ್ 1996 ರ ಮಾರ್ಚ್ ತಿಂಗಳಲ್ಲಿ ಗುಮನಾಮಿ (ಯಾರಿಗೂ ತಿಳಿಯದಂತಹ) ರೀತಿಯಲ್ಲೇ ತನ್ನ ಪ್ರಾಣವನ್ನ ಬಿಟ್ಟಿದ್ದರು.
ಶ್ರೀಮತಿ ಎಮಿಲಿ ಶೆಂಕಲ್ ರವರ ಪೂರ್ತಿ ಹೆಸರು “ಶ್ರೀಮತಿ ಎಮಿಲಿ ಶೆಂಕಲ್ ಬೋಸ್” ಎಂಬುದಾಗಿತ್ತು. ಅವರು ದೇಶದ ಜನಪ್ರೀಯ ಜನನಾಯಕ ನೇತಾಜಿ ಸುಭಾಷ್ ಚಂದ್ರ ಬೋಸರವರ ಧರ್ಮಪತ್ನಿಯಾಗಿದ್ದರು ಹಾಗು ಅವರನ್ನ ಗಾಂಧಿ ಪರಿವಾರದ ಧೂರ್ತರು ದೇಶದೊಳಗೆ ಕಾಲಿಡಲು ಬಿಡಲಿಲ್ಲ. ಬಹುಶಃ ನೆಹರು ಹಾಗು ಆತನ ಪರಿವಾರಕ್ಕೆ ಮುಂದೆ ಈ ದೇಶದ ಜನ ವಿದೇಶದಿಂದ ಬರುವವಳಿದ್ದ ಆ ಮಹಾತಾಯಿಯನ್ನ ತಮ್ಮ ನಾಯಕಿಯಾಗಿ ಸ್ವೀಕರಿಸುತ್ತಾರೆ ಅನ್ನೋದು ಗೊತ್ತಿತ್ತು ಅಂತ ಕಾಣುತ್ತೆ.
ನೆಹರುವಿಗೆ ಎಮಿಲಿ ಶೆಂಕಲ್ ಬೋಸ್ ಭರತ ಭೂಮಿಗೆ ಕಾಲಿಡೋದು ಬೇಕಿರಲಿಲ್ಲ, ಆಕೆ ಭಾರತಕ್ಕೆ ಬಂದರೆ ತನ್ನ ಅಧಿಕಾರ ಎಲ್ಲಿ ಸರ್ವನಾಶವಾಗಿ ಭಾರತದ ಮೇಲಿನ ತನ್ನ ಪ್ರಭುತ್ವ ಕೈ ತಪ್ಪಿಬಿಡುತ್ತೋ ಅನ್ನೋ ಭಯ ಕಾಡುತ್ತಲೇ ಇತ್ತು. ಅದಕ್ಕಾಗಿ ಆತ ಸುಭಾಷಚಂದ್ರ ಬೋಸರ ಕುಟುಂಬದ ಮೇಲೆ ಬೇಹುಗಾರಿಕೆ ನಡೆಸುತ್ತಲೇ ಇದ್ದ.
ಕಾಂಗ್ರೆಸ್ಸಿಗರು ಹಾಗು ಅದರ ಹುಟ್ಟು ಕುರುಡು ಚಮಚಾಗಳು, ಕೆಲ ಪತ್ರಕರ್ತರು ಹಾಗು ಇತಿಹಾಸಕಾರರು ಸದಾ ವಿದೇಶಿ ಮೂಲದ ರಾಜೀವ್ ಗಾಂಧಿ ಪತ್ನಿ, ಅರ್ಥಾತ್ ರಾಹುಲ್ ಗಾಂಧಿಯ ತಾಯಿಯನ್ನೇ ದೇಶದ ಸೊಸೆ, ಭಾರತದ ಸೊಸೆ ಎಂಬುದನ್ನ ಹೇಳುತ್ತ ಬಂದಿದ್ದಾರೆ. ಆಕೆಯ ಸೋ ಕಾಲ್ಡ್ ತ್ಯಾಗದ ಬಗ್ಗೆಯೇ ಹಾಡಿಹೊಗಳುತ್ತಿರುತ್ತಾರೆ.
ನಿಮ್ಮ ಪ್ರಕಾರ ಆ್ಯಂಟೋನಿಯೋ ಮೈನೋ (ಸೋನಿಯಾ ಗಾಂಧಿ) ರನ್ನ ಎಂದಾದರೂ ಸುಭಾಷಚಂದ್ರ ಬೋಸರ ಧರ್ಮಪತ್ನಿ ಶ್ರೀಮತಿ ಎಮಿಲಿ ಶೆಂಕಲ್ ರವರಿಗೆ ಹೋಲಿಕೆ ಮಾಡಬಹುದಾ? ಬೋಸರ ಪತ್ನಿ ಎಮಿಲಿ ಶೆಂಕಲ್ ರವರ ಮೌನ ತ್ಯಾಗದ ಮುಂದೆ ಆ್ಯಂಟೋನಿಯೋ ಮೈನೋ ದೇಶಕ್ಕಾಗಿ ಏನಾದರೂ ತ್ಯಾಗ ಮಾಡಿದ್ದಾರಂತ ನಿಮಗನಿಸುತ್ತಾ?
– Vinod Hindu Nationalist