ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಬೆಚ್ಚಿ ಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಒಬ್ಬ ವ್ಯಕ್ತಿ ಒಂದೇ ಕುಟುಂಬದ ಆರು ಮಂದಿಯನ್ನು ಕೊಂ-ದು ಹಾಕಿದ್ದಾನೆ. ವಿಶಾಖಪಟ್ಟಣಂನ ಜತ್ತಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೊ-ಲೆ ಮಾಡಿ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.
ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಬೆಚ್ಚಿ ಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಒಬ್ಬ ವ್ಯಕ್ತಿ ಒಂದೇ ಕುಟುಂಬದ ಆರು ಮಂದಿಯನ್ನು ಕೊಂ-ದು ಹಾಕಿದ್ದಾನೆ. ವಿಶಾಖಪಟ್ಟಣಂನ ಜತ್ತಡ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೊ-ಲೆ ಮಾಡಿ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಇದೀಗ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಎರಡು ಕುಟುಂಬಗಳ ನಡುವೆ ಹಳೆ ವೈಷಮ್ಯವಿದ್ದು, ಮೃತ ಕುಟುಂಬದ ಸದಸ್ಯರು ಕೊ-ಲೆ ಆರೋಪಿಯ ಮಗಳ ಮೇಲೆ ಅ-ತ್ಯಾ-ಚಾ-ರವೆಸಗಿದ್ದು, ಈ ವಿಷಯ ಸಂತ್ರಸ್ತೆಯ ತಂದೆಗೆ ತಿಳಿಯುತ್ತಲೇ ಕೋಪೋದ್ರಿಕ್ತನಾಗಿ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅ-ತ್ಯಾ-ಚಾ-ರದ ಆರೋಪಿ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಈ ಘಟನೆಯಿಂದ ಪೊಲೀಸರೂ ಬೆಚ್ಚಿಬಿದ್ದಿದ್ದು, ಕುಟುಂಬದ ಆರು ಮಂದಿಯನ್ನು ವ್ಯಕ್ತಿಯೊಬ್ಬ ಹೇಗೆ ಕೊಂ-ದಿ-ದ್ದಾನೆ ಎಂಬ ಬಗ್ಗೆ ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯ ನಂತರ ಇಡೀ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳದಲ್ಲಿ ಜನ ಜಮಾಯಿಸಿದರು.
ಇದೀಗ ಈ ಭೀಕರ ಘಟನೆಯ ನಂತರ ಇಡೀ ಗ್ರಾಮದಲ್ಲಿ ನಾನಾ ರೀತಿಯ ಚರ್ಚೆಗಳು ನಡೆಯುತ್ತಿವೆ. ತನ್ನನ್ನ ತಾನು ಪೊಲೀಸರಿಗೆ ಸರೆಂಡರ್ ಮಾಡಿದ ಬಳಿಕ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹ-ತ್ಯೆ-ಗೆ ಬಳಸಿದ ಹ-ರಿ-ತವಾದ ಆಯುಧವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅದೇ ಸಮಯದಲ್ಲಿ, ವ್ಯಕ್ತಿ ಸೇಡು ತೀರಿಸಿಕೊಳ್ಳಲು ಒಂದೇ ಕುಟುಂಬದ ಆರು ಜನರನ್ನು ಕೊಂ-ದಿ-ದ್ದಾನೆ ಎಂದು ಪೊಲೀಸರು ಹೇಳುತ್ತಾರೆ. ಇದರಲ್ಲಿ ಇಬ್ಬರು ಮಹಿಳೆಯರು, ಇಬ್ಬರು ಮಕ್ಕಳು ಮತ್ತು ಒಬ್ಬ ಪುರುಷ ಸೇರಿದ್ದಾರೆ. ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಮೃ-ತ-ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆ ಬಳಿಕ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮಧ್ಯಪ್ರದೇಶದಿಂದಲೂ ಇದೇ ರೀತಿಯ ಘಟನೆ ವರದಿಯಾಗಿತ್ತು
ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯಲ್ಲಿ ತನ್ನ ಅಪ್ರಾಪ್ತ ಮಗಳಿಗೆ ಕಿರುಕುಳ ನೀಡಿದ ವ್ಯಕ್ತಿಯೊಬ್ಬನನ್ನ ಯುವತಿಯ ತಂದೆ ಹರಿತವಾದ ಆಯುಧಗಳಿಂದ ಹ-ತ್ಯೆ ಮಾಡಿದ್ದಾನೆ. ಅವನ ತ-ಲೆ, ದೇಹ ಮತ್ತು ಕಾಲುಗಳನ್ನು ಕ-ತ್ತ-ರಿಸಿ ನದಿಗೆ ಎಸೆಯಲಾಗಿದೆ. ಮೃ-ತದೇ-ಹದ ತೇಲುವ ತುಂಡುಗಳು ನದಿಯಲ್ಲಿ ಪತ್ತೆಯಾದ ನಂತರ ಇಡೀ ವಿಷಯ ಬೆಳಕಿಗೆ ಬಂದಿದೆ. ಖಂಡ್ವಾ ಜಿಲ್ಲೆಯ ಸಕ್ತಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ವರದಿಗಳ ಪ್ರಕಾರ ನರೇಂದ್ರ ಎಂಬ ವ್ಯಕ್ತಿ ನದಿಯ ದಡದ ಹತ್ತಿರ ಬಂದಿದ್ದ. ಆತ ನದಿಯಲ್ಲಿ ಮೃ-ತದೇ-ಹದ ತುಂಡುಗಳನ್ನು ನೋಡಿದ. ಬಳಿಕ ತಡಮಾಡದೇ ಗ್ರಾಮದ ಸರಪಂಚರಿಗೆ ವಿಷಯ ತಿಳಿಸಲಾಯಿತು. ಇದಾದ ನಂತರ ಸರಪಂಚ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿಯ ನಂತರ, ಎಸ್ಪಿ ವಿವೇಕ್ ಸಿಂಗ್ ಅವರು ಪೊಲೀಸ್ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿದರು ಮತ್ತು ಡೈವರ್ಗಳ ಸಹಾಯದಿಂದ ನದಿಯಿಂದ ತಲೆ, ದೇಹ ಮತ್ತು ಕಾಲುಗಳನ್ನು ಹೊರತೆಗೆದಿದ್ದಾರೆ. ಪೊಲೀಸರು ಮೃ-ತನ ದೇ-ಹ-ವನ್ನು ಫಾರೆನ್ಸಿಕ್ ಪರೀಕ್ಷೆಗೆ ಕಳುಹಿಸಿದ್ದಾರೆ. ಇದರಿಂದ ಕೊ-ಲೆ-ಗೆ ಕೊಡಲಿ, ಕುಡುಗೋಲು ಬಳಸಿದ ಬಗ್ಗೆ ಮಾಹಿತಿ ಸಿಕ್ಕಿದೆ.
ಮೃತನನ್ನು ಬೋಡಾನಿ ಗ್ರಾಮದ ನಿವಾಸಿ ತ್ರಿಲೋಕಚಂದ್ (55) ಎಂದು ಗುರುತಿಸಲಾಗಿದೆ. ತ್ರಿಲೋಕಚಂದ್‌ನ ತಂದೆ ಅದೇ ಗ್ರಾಮದ ಮಾಜಿ ಸರಪಂಚ್ ಆಗಿದ್ದರು. ತ್ರಿಲೋಕಚಂದ್ ತನ್ನ ಅಪ್ರಾಪ್ತ ಮಗಳಿಗೆ ಕಿರುಕುಳ ನೀಡುತ್ತಿದ್ದ ಎಂದು ಕೊ-ಲೆ ಮಾಡಿರುವುದಾಗಿ ಆರೋಪಿ ತಿಳಿಸಿದ್ದಾರೆ. ಆಕೆಗೆ ಎರಡು ಬಾರಿ ಕಿರುಕುಳ ನೀಡಿದ ನಂತರ ನಾನು ಆತನಿಗೆ ಬುದ್ಧಿ ಹೇಳಿದ್ದೆ. ಆದರೆ ಆತ ಅದಕ್ಕೂ ಜಗ್ಗಲಿಲ್ಲ. ಈ ವಿಚಾರದಲ್ಲಿ ಇಬ್ಬರ ನಡುವೆಯೂ ಜಗಳವಾಗಿತ್ತು.
ಶನಿವಾರ ರಾತ್ರಿ, ಆತ ಮತ್ತೆ ಗ್ರಾಮಕ್ಕೆ ಬಂದು ಅಪ್ರಾಪ್ತ ಯುವತಿಗೆ ಕಿರುಕುಳ ನೀಡಲು ಪ್ರಾರಂಭಿಸಿದ. ಇದರಿಂದ ಯುವತಿಯ ತಂದೆಯ ರ-ಕ್ತ ಕುದಿಯಿತು ಮತ್ತು ಆತ ತ್ರಿಲೋಕ್‌ನ ಕಥೆಯನ್ನ ಮುಗಿಸೋಕೆ ನಿರ್ಧರಿಸಿದನು. ಅಪ್ರಾಪ್ತ ಯುವತಿಯ ತಂದೆ ತನ್ನ ಸೋದರ ಮಾವನ ಸಹಾಯ ಪಡೆದು ಇಬ್ಬರೂ ತ್ರಿಲೋಕಚಂದ್‌ನನ್ನು ಬೈಕ್‌ನಲ್ಲಿ ಕರೆದುಕೊಂಡು ನದಿಯ ಹತ್ತಿರ ಕರೆದೊಯ್ದಿದ್ದಾರೆ. ಅಲ್ಲಿ ಇಬ್ಬರೂ ಸೇರಿ ಆತನನ್ನು ಕೊಂ-ದು ದೇ-ಹ-ವನ್ನು ತುಂಡು ತುಂಡು ಮಾಡಿ ನದಿಗೆ ಎಸೆದಿದ್ದಾರೆ. ಆರೋಪಿಗಳಿಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆ ಉತ್ತರ ಪ್ರದೇಶದಲ್ಲಿ ಇದೇ ರೀತಿ ಅ-ತ್ಯಾಚಾ-ರಕ್ಕೊ-ಳಗಾದ ಅಪ್ರಾಪ್ತ ಯುವತಿಯ ತಂದೆ ಜಾಮೀನಿನ ಮೇಲೆ ಹೊರಗೆ ತಿರುಗಾಡುತ್ತಿದ್ದ ರೇಪಿಸ್ಟ್ ದಿಲ್ಶಾದ್ ಹುಸೇನ್ ನನ್ನು ಗುಂ-ಡಿ-ಕ್ಕಿ ಕೊಂ-ದಿ-ರುವುದು ಗಮನಿಸಬೇಕಾದ ಸಂಗತಿ. ಸಂತ್ರಸ್ತೆಯ ತಂದೆ ಪಿಸ್ತೂಲ್‌ನಿಂದ ಆತನ ತಲೆಗೆ ಗುಂ-ಡು ಹಾರಿಸಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ದಿಲ್ಶಾದ್ ಹುಸೇನ್ ಮೇಲೆ ಅ-ತ್ಯಾಚಾ-ರ ಆರೋಪ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿ ಆತ ಜಾಮೀನಿನ ಮೇಲೆ ಹೊರಬಂದಿದ್ದ.