ಕೇಂದ್ರ ಸರ್ಕಾರ ನಡೆಸಿದ ತನಿಖೆಯಲ್ಲಿ, ಅನೇಕ ಕಂಪನಿಗಳು ತಂಪು ಪಾನೀಯಗಳಲ್ಲಿ ಅಪಾಯಕಾರಿ ಅಂಶಗಳಿವೆ ಎಂಬ ವರದಿಗಳು ಬಂದಿವೆ. ಆ್ಯಂಟಿಮೋನಿ, ಲೀಡ್ (ಸೀಸ), ಕ್ರೋಮಿಯಂ, ಕ್ಯಾಡ್ಮಿಯಮ್ ಮತ್ತು ಕಾಂಪೌಂಡ್ ಡಿಹೆಚ್ಪಿ ಮುಂತಾದ ವಿಷಕಾರಿ ಪದಾರ್ಥಗಳು ಪೆಪ್ಸಿಕೋ ಮತ್ತು ಕೋಕಾ-ಕೋಲಾದಂತಹ ಕಂಪನಿಗಳ ಕೋಲ್ಡ್ ಡ್ರಿಂಕ್ ಗಳಲ್ಲಿ ಕಂಡುಬಂದಿವೆ. ಆರೋಗ್ಯ ಸಚಿವಾಲಯದ ಡ್ರಗ್ಸ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್ (ಡಿಟಿಎಬಿ) ತನಿಖೆಯಲ್ಲಿ ಪೆಪ್ಸಿ, ಕೋಕಾ-ಕೋಲಾ, ಮೌಂಟೇನ್ ಡ್ಯೂ, ಸ್ಪ್ರೈಟ್ ಮತ್ತು 7UP ಕೋಲ್ಡ್ರಿಂಕ್ಗಳ ಮಾದರಿಗಳನ್ನು ಒಳಗೊಂಡಿತ್ತು.
7UP ಮತ್ತು ಮೌಂಟೇನ್ ಡ್ಯೂ ಪೆಪ್ಸಿಕೋ ಉತ್ಪನ್ನಗಳಾದರೆ, ಸ್ಪ್ರೈಟ್ ಕೋಕಾ-ಕೋಲಾ ಕಂಪನಿಯ ಡ್ರಿಂಕ್ ಆಗಿದೆ. ಈ ವರದಿಯ ನಂತರ, ಮನುಷ್ಯರಿಗೆ ಈ ತಂಪು ಪಾನೀಯಗಳು ಸುರಕ್ಷಿತವೇ? ಎಂಬ ಪ್ರಶ್ನೆಗಳು ಉದ್ಭವಿಸಿದ್ದರೂ, ಕಾರ್ಪೊರೇಟ್ ಕಂಪೆನಿಗಳು ಕೆಮಿಕಲ್ ಬಳಸಿ ಜನರ ಪ್ರಾಣದ ಜೊತೆ ಆಟವಾಡುತ್ತಿವೆ. ಆಘಾತಕಾರಿ ಸಂಗತಿಯೆಂದರೆ, ಕೋಲ್ಡ್ ಡ್ರಿಂಕ್ ತಯಾರಕರಾದ ಪೆಪ್ಸಿಕೋ ತನ್ನ ಉತ್ಪನ್ನ ‘ಮೌಂಟೇನ್ ಡ್ಯೂ ನಲ್ಲಿ ಇಲಿಯನ್ನು ಮುಳುಗಿಸಿಟ್ಟರೆ ಅದು 30 ದಿನಗಳಲ್ಲಿ ಕರಗಿಬಿಡುತ್ತದೆ ಎಂದು ನ್ಯಾಯಾಲಯದಲ್ಲಿ ಸ್ವತಃ ತಾನೇ ಹೇಳಿಕೆಯನ್ನ ನೀಡಿದೆ.
ಈ ಪ್ರಕರಣ 2009 ದ್ದಾಗಿದೆ. ಆಗ ಅಮೆರಿಕಾದ ಮ್ಯಾಡಿಸನ್ ಕೌಂಟಿ ನಿವಾಸಿಯಾದ ರೊನಾಲ್ಡ್ ಬಾಲ್ ಅವರು ಆಫೀಸಿನಿಂದ ಮೌಂಟೇನ್ ಡ್ಯೂನ ಕ್ಯಾನ್ನ ಖರೀದಿಸಿದ್ದರು ಹಾಗು ಅದರ ರುಚಿ ತುಂಬಾ ಕೆಟ್ಟದಾಗಿದೆ ಎಂದು ಹೇಳಿದ್ದರು. ಅವರು ಆ ಮೌಂಟೇನ್ ಡ್ಯೂ ಕುಡಿದಾಗ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು ಮತ್ತು ಅವರು ತಕ್ಷಣ ವಾಂತಿ ಮಾಡಲು ಪ್ರಾರಂಭಿಸಿದರು ಎಂದು ಅವರು ನ್ಯಾಯಾಲಯದಲ್ಲಿ ಹೇಳಿದ್ದರು. “ಮೌಂಟನ್ ಡ್ಯೂನ ಕ್ಯಾನ್ ನಿಂದ ಪಾನೀಯವನ್ನ ಕಪ್ ಗೆ ಹಾಕಿದಾಗ ಅದರಲ್ಲಿ ಸತ್ತ ಇಲಿಯೊಂದು ಕಂಡುಬಂದಿತು” ಎಂದು ಬಾಲ್ ಆರೋಪಿಸಿದ್ದರು. ಬಾಲ್ ಪೆಪ್ಸಿಕೋಗೆ ಇಲಿಯ ವಾಸನೆಯಿರುವ ಕೋಲ್ಡ್ ಡ್ರಿಂಕ್ ಮಾದರಿಯನ್ನ ತಮ್ಮ ಪತ್ರದೊಂದಿಗೆ ಕಳುಹಿಸಿದರು. ಅವರು ಹೇಳುವ ಪ್ರಕಾರ ಕೋಲ್ಡ್ ಡ್ರಿಂಕ್ ನಲ್ಲಿ ಇಲಿಯ ದೇಹ ಸಂಪೂರ್ಣವಾಗಿ ಸುಟ್ಟು ಹೋಗಿತ್ತು ಎಂದು ಹೇಳಿದ್ದರು.
ಆದರೆ ಪೆಪ್ಸಿಕೋ ಕಂಪೆನಿ ಬಾಲ್ ರವರ ಆರೋಪಗಳನ್ನ ಸಾರಾಸಗಟಾಗಿ ತಿರಸ್ಕರಿಸಿತು ಹಾಗು ತಮ್ಮ ಕಂಪೆನಿಯ ವಿರುದ್ಧ ದಾಖಲಾದ ಮೊಕದ್ದಮೆಯನ್ನ ರದ್ದುಗೊಳಿಸಿವಂತೆ ಒಂದು ಅಫಿಡೆವಿಟ್ ಹಾಕಿತು. ಇದರಲ್ಲಿ ಕಂಪೆನಿಯು, “ಬಾಲ್ ಅದನ್ನ ತಂದು ಎಷ್ಟು ದಿನಗಳವರೆಗಿಟ್ಟು ಅದನ್ನ ಕುಡಿಯೋಕೆ ಪ್ರಯತ್ನಿಸಿದ್ದರೋ ಅಷ್ಟು ದಿನಗಳೊಳಗೆ ಆ ಇಲಿ ಪಾನೀಯದಲ್ಲಿ ಕರಗಿಹೋಗಿರುತ್ತದೆ” ಎಂದು ಹೇಳಿತ್ತು.
ವೆಟೆರಿಯನ್ ಲಾರೆನ್ಸ್ ಮ್ಯಾಕ್ಗಿಲ್ ರವರು ಹೇಳುವ ಪ್ರಕಾರ “ಏಪ್ರಿಲ್ 2008 ರಲ್ಲಿ ಕ್ಯಾನ್ನ್ನ ಸೀಲ್ ಮಾಡಿ ಕಳಿಸಿದ್ದರು, ಆಗಿನಿಂದ ಒಂದು ವೇಳೆ ಅದರಲ್ಲಿ ನಿಜವಾಗಿಯೂ ಇಲಿ ಬಿದ್ದಿದ್ದರೆ ಅದು 30 ದಿನಗಳ ಬಳಿಕ ಅದು ಕರಗಿಹೋಗಿರುತ್ತಿತ್ತು” ಎಂದಿದ್ದರು. ಅವರ ಮಾತಿನ ಅರ್ಥವೇನೆಂದರೆ “ನಾನು ಆ್ಯಸಿಡ್ ದ್ರವ್ಯದ ಪ್ರಭಾವವನ್ನ ಅರಿತಿದ್ದೇನೆ. ಮೌಂಟೆನ್ ಡ್ಯೂ ನಂತಹ ಸೋಡಾ ಡ್ರಿಂಕ್ಸ್ ನಲ್ಲಿ ಇದು ಸರ್ವೇ ಸಾಮಾನ್ಯ ವಿಷಯವಾಗಿದೆ. ಇದರಿಂದ ಇಲಿ ಹಾಗು ಇತರ ಪ್ರಾಣಿಗಳ ಮೇಲೂ ಪ್ರಭಾವ ಬೀರುತ್ತದೆ”
Pepsi ಕಂಪೆನಿಯ ಜಾಹೀರಾತಿನಲ್ಲಿ ರಾಕಿಂಗ್ ಸ್ಟಾರ್ ಯಶ್
ಅವರು ನ್ಯಾಯಾಲಯದಲ್ಲಿ ಮಾತನಾಡುತ್ತ, “ಒಂದು ವೇಳೆ ಇಲಿಯನ್ನ ಮೌಂಟೆನ್ ಡ್ಯೂ ನಲ್ಲಿ ನಾಲ್ಕರಿಂದ ಆರು ದಿನಗಳ ಕಾಲ ಮುಳುಗಿಸಿಟ್ಟರೆ ಅದರ ಎಲುಬುಗಳಲ್ಲಿನ ಕ್ಯಾಲ್ಶಿಯಂ ಉಳಿಯೋದೇ ಇಲ್ಲ” ಎಂದಿದ್ದರು. ಮ್ಯಾಕ್ಗಿಲ್ ಹೇಳುವ ಅರ್ಥವೇನೆಂದರೆ ಇಲಿಯ ಇಡೀ ಶರೀರ ಕರಗಿ ಕೇವಲ ಬಾಲ ಮಾತ್ರ ಉಳಿಯುತ್ತೆ ಎಂಬುದಾಗಿದೆ
ನ್ಯಾಯಾಲಯದಲ್ಲಿ ಕಂಪನಿಯು ಮಾತನಾಡುತ್ತ “ಬಾಲ್ ಯಾವ ಮೌಂಟೆನ್ ಡ್ಯೂ ಕ್ಯಾನ್ ಓಪನ್ ಮಾಡಿದ್ದರೋ ಅದನ್ನ 74 ದಿನಗಳ ಹಿಂದೆ ಸೆಂಟ್ ಲೂಯಿಸ್ ನಲ್ಲಿ ಪ್ಯಾಕ್ ಮಾಡಲಾಗಿತ್ತು. ಬಾಲ್ ಆ ಕ್ಯಾನ್ ನಲ್ಲಿ ಇಲಿಯಿತ್ತು ಅಂತ ಹೇಳಿದ್ದಾರೆ ಆದರೆ ಅದಕ್ಕೆ ಸಾಕ್ಷಿ ಕೊಟ್ಟಿಲ್ಲ” ಎಂದು ಹೇಳಿತ್ತು. ಬಾಲ್ ತನಗೆ 50,000 ಡಾಲರ್ ಪರಿಹಾರ ಕೊಡಬೇಕೆಂಬ ದಾವೆ ಹೂಡಿದ್ದರು ಆದರೆ ಪೆಪ್ಸಿಕೋ ಬಾಲ್ ಆರೋಪ ಸುಳ್ಳೆಂದು ಸಾಬೀತು ಮಾಡಿತ್ತು. ಇದರರ್ಥ ಪೆಪ್ಸಿಕೋ ಕಂಪೆನಿಯ ಯಾವುದೇ ಕೋಲ್ಡ್ ಡ್ರಿಂಕ್ಸ್ ನಲ್ಲಿ ಇಲಿ ಬಿದ್ದರೂ ಅದು 30 ದಿನಗಳೊಳಗಾಗಿ ಕರಗಿ ಹೋಗುತ್ತೆ ಅನ್ನೋದನ್ನ ಪರೋಕ್ಷವಾಗಿ ಕಂಪೆನಿ ತಾನೇ ಖುದ್ದು ನ್ಯಾಯಾಲಯದಲ್ಲಿ ಹೇಳಿತ್ತು. ಈಗ ನೀವು ಈ ಕೋಲ್ಡ್ ಡ್ರಿಂಕ್ಸ್ ಗಳನ್ನ ಕುಡಿದರೆ ನಿಮ್ಮ ದೇಹದಲ್ಲಿ ಏನೆಲ್ಲಾ ಆಗಬಹುದು ಅನ್ನೋದನ್ನ ಯೋಚಿಸಿ.
ಪೆಪ್ಸಿ ಜಾಹೀರಾತಿನಲ್ಲಿ ರಾಕಿಂಗ್ ಸ್ಟಾರ್ ಯಶ್
ನಟ ಯಶ್ (Yash) ಅವರು ‘ಕೆಜಿಎಫ್ 2’ ಸಿನಿಮಾ ತೆರೆಕಂಡ ಬಳಿಕ ಬೇಡಿಕೆಯ ನಟ ಆಗಿದ್ದಾರೆ. ವಿಶ್ವಮಟ್ಟದಲ್ಲಿ ಅವರನ್ನು ಗುರುತಿಸಲಾಗುತ್ತಿದೆ. ವಿದೇಶಕ್ಕೆ ತೆರಳಿದಾಗ ಅನೇಕರು ಅವರ ಜತೆ ಸೆಲ್ಫಿ ತೆಗೆದುಕೊಂಡಿದ್ದು ಇದಕ್ಕೆ ಸಾಕ್ಷಿ. ಯಶ್ ಖ್ಯಾತಿ ಹೆಚ್ಚಿದಂತೆ ಅವರಿಗೆ ಹೊಸ ಹೊಸ ಜಾಹೀರಾತು ಆಫರ್ಗಳು ಬರುತ್ತಿವೆ. ಅನೇಕ ಬ್ರ್ಯಾಂಡ್ಗಳಿಗೆ ಅವರು ಅಂಬಾಸಿಡರ್ ಆಗುತ್ತಿದ್ದಾರೆ. ಈಗ ರಾಕಿಂಗ್ ಸ್ಟಾರ್ ಪೆಪ್ಸಿ ಇಂಡಿಯಾಗೆ (Pepsi India) ರಾಯಭಾರಿ ಆಗಿದ್ದಾರೆ. ಇದರ ಪ್ರೋಮೋವನ್ನು ಯಶ್ ಹಂಚಿಕೊಂಡಿದ್ದಾರೆ.
‘ಕೆಜಿಎಫ್ 2’ ಕಳೆದ ವರ್ಷ ತೆರೆಗೆ ಬಂತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾವಿರಾರು ಕೋಟಿ ಕಲೆಕ್ಷನ್ ಮಾಡಿದೆ. 2022ರಲ್ಲಿ ತೆರೆಗೆ ಬಂದು ಅತಿ ಹೆಚ್ಚು ಬಿಸ್ನೆಸ್ ಮಾಡಿದ ಭಾರತೀಯ ಸಿನಿಮಾ ಎನ್ನುವ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ. ಯಶ್ ಅವರ ಖ್ಯಾತಿ ಕೂಡ ಹೆಚ್ಚಿದೆ. ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಹೀಗಿರುವಾಗಲೇ ಅವರು ಪೆಪ್ಸಿ ಕಂಪನಿಯ ಪ್ರಚಾರ ರಾಯಭಾರಿ ಆಗಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಯಶ್ ಅವರು ಈ ವಿಚಾರವನ್ನು ಅಧಿಕೃತ ಮಾಡಿದ್ದಾರೆ. ಪೆಪ್ಸಿ ಕುಡಿಯುತ್ತಿರುವ ವಿಡಿಯೋ ಹಂಚಿಕೊಂಡಿರುವ ಯಶ್, ‘ಅಭಿನಂದನೆಗಳು ಪೆಪ್ಸಿ. ಐ ಲವ್ ಯೂ’ ಎಂದು ಹೇಳಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ‘ಇನ್ಮುಂದೆ ಪೆಪ್ಸಿಗೆ ತೂಕ ಬರುತ್ತದೆ’ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ.
ಯಶ್ ಅವರಿಗೆ ಈ ಮೊದಲು ಪಾನ್ ಮಸಾಲಾ ಜಾಹೀರಾತಿನಲ್ಲಿ ನಟಿಸಲು ಆಫರ್ ಬಂದಿತ್ತು ಎನ್ನಲಾಗಿದೆ. ಆದರೆ, ಇದನ್ನು ಅವರು ರಿಜೆಕ್ಟ್ ಮಾಡಿದ್ದರು. ಪಾನ್ ಮಸಾಲ ಸೇವನೆ ಆರೋಗ್ಯಕ್ಕೆ ಹಾನಿಕರ. ಹೀಗಾಗಿ ಯಶ್ ಅವರು ಇದನ್ನು ಪ್ರೋತ್ಸಾಹಿಸಿರಲಿಲ್ಲ.
Let’s Rise together! @PepsiIndia #RiseUpBaby #Ad pic.twitter.com/tOvG9pJwIH
— Yash (@TheNameIsYash) January 24, 2023