ಕರಾಚಿ: ಪಾಕಿಸ್ತಾನದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಎಲ್ಲರಿಗೂ ಗೊತ್ತೇ ಇದೆ. ಪಾಕಿಸ್ತಾನದಿಂದ ಪ್ರತಿದಿನ ಚಿತ್ರ ವಿಚಿತ್ರ ಹಾಗು ಅಘಾತಕರಿ ಸುದ್ದಿಗಳು ವರದುಯಾಗುತ್ತಲೇ ಇರುತ್ತವೆ. ಇಂತಹುದೇ ಒಂದು ಘಟನೆ ಪಾಕಿಸ್ತಾನದ ಕರಾಚಿಯಿಂದ ಬೆಳಕಿಗೆ ಬಂದಿದೆ. ಇಲ್ಲಿ ತಂದೆಯೊಬ್ಬ ತನ್ನ ಒಣ ಪ್ರತಿಷ್ಟೆ, ಅಹಂಕಾರದಿಂದ ಕೋರ್ಟ್ ಆವರಣದಲ್ಲಿಯೇ ಮಗಳ ಮೇಲೆಯೇ ಗುಂಡು ಹಾರಿಸಿದ್ದಾನೆ. ನಗರದ ನ್ಯಾಯಾಲಯದ ಆವರಣದಲ್ಲಿ ಮಹಿಳೆಯನ್ನು ಹಾನರ್ ಕಿಲ್ಲಿಂಗ್ ಹೆಸರಿನಲ್ಲಿ ಗುಂಡಿಕ್ಕಿ ಹ-ತ್ಯೆ ಮಾಡಲಾಗಿದೆ. ಘಟನೆ ಮೊನ್ನೆ ಅಂದರೆ ಸೋಮವಾರ ನಡೆದಿದೆ. ಮೃತ ಯುವತಿ ಹಾಜ್ರಾ ತನ್ನಿಷ್ಟದ ಹುಡುಗನ ಜೊತೆ ಮದುವೆಯಾದ ಕಾರಣ ಅವಳ ತಂದೆ ತನ್ನ ಮಗಳನ್ನೇ ಕೊಂದಿದ್ದಾನೆ.
ಪೊಲೀಸ್ ಸೂಪರಿಂಟೆಂಡೆಂಟ್ ಪ್ರಕಾರ, ಹೆಡ್ ಕಾನ್‌ಸ್ಟೆಬಲ್ ಇಮ್ರಾನ್ ಜಮಾನ್ ಮತ್ತು ಮಹಿಳಾ ಕಾನ್‌ಸ್ಟೆಬಲ್ ಯುವತಿಯನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲು ಆವರಣದೊಳಗೆ ಕರೆದೊಕೊಂಡು ಬರುತ್ತಿದ್ದರು. ಇದೇ ವೇಳೆ ಯುವತಿಯ ತಂದೆ ಅಮೀರ್ ಜಮಾನ್ ಮೆಹ್ಸೂದ್ (65) ತನ್ನ ಮಗಳನ್ನ ಹಿಂಬಾಲಿಸುತ್ತಿದ್ದ. ಯುವತಿ ನ್ಯಾಯಾಲಯದ ಆವರಣಕ್ಕೆ ಬಂದ ತಕ್ಷಣ ನಾಲ್ಕನೇ ಸಂಖ್ಯೆಯ ಗೇಟ್ ಬಳಿ ಗುಂಡು ಹಾರಿಸಿದ್ದಾನೆ. ಆರೋಪಿಯ ಗುಂಡಿನ ದಾಳಿಯಲ್ಲಿ ಮಗಳು ಸಾವನ್ನಪ್ಪಿದ್ದರೆ, ಇಮ್ರಾನ್ ಮತ್ತು ವಾಜಿದ್ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಎಸ್‌ಎಸ್‌ಪಿ ಪ್ರಕಾರ, ಮೃತಳ ವಯಸ್ಸು 18 ರಿಂದ 20 ವರ್ಷಗಳು ಎಂದು ತಿಳಿಸಿದ್ದಾರೆ.
ಯುವತಿ ತನ್ನಿಷ್ಟದ ಹುಡುಗನ ಜೊತೆ ಮದುವೆಯಾಗಿದ್ದಕ್ಕೆ ಕೋಪಗೊಂಡಿದ್ದ ತಂದೆ
ಪಾಕಿಸ್ತಾನಿ ನ್ಯೂಸ್ ರಿಪೋರ್ಟ್ ಗಳ ಪ್ರಕಾರ, ಆರೋಪಿಯ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನಿಷ್ಟದ ಯುವಕನ ಜೊತೆ ಮದುವೆ ಮಾಡಿಕೊಂಡಿದ್ದಕ್ಕೆ ಯುವತಿಯನ್ನ ಕೊಲೆ ಮಾಡಲಾಗಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ. ನ್ಯಾಯಾಲಯದ ಆವರಣದಲ್ಲೇ ಯುವತಿಯ ಹ-ತ್ಯೆ ನಡೆದ ಬಳಿಕ ಪಾಕಿಸ್ತಾನದ ಕಾನೂನು ಸುವ್ಯವಸ್ಥೆ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳು ಎದ್ದಿವೆ. ಪಾಕಿಸ್ತಾನದಲ್ಲಿ ಮಹಿಳೆಯರ ಸ್ವಾತಂತ್ರ್ಯದ ಬಗ್ಗೆ ಯಾವಾಗಲೂ ಪ್ರಶ್ನಾರ್ಥಕ ಚಿಹ್ನೆ ಇದ್ದೇ ಇರುತ್ತದೆ. ಹೀಗಿರುವಾಗ ಕೋರ್ಟ್ ಆವರಣದಲ್ಲೇ ನಡೆದ ಕೊ-ಲೆ ಕರಾಚಿಯ ಕಾನೂನು ಸುವ್ಯವಸ್ಥೆಯ ಕರಾಳ ಮುಖ ಬಯಲು ಮಾಡಿದೆ.
ಫೆಮಿಸೈಡ್ ನಿಂದ ಆತಂಕದಲ್ಲಿರುವ ಪಾಕಿಸ್ತಾನಿ ಯುವತಿಯರು
ಪಾಕಿಸ್ತಾನದಲ್ಲಿ ಮಹಿಳೆಯರ ಜೊತೆ ಈ ರೀತಿ ನಡೆಯುತ್ತಿರೋ ಪ್ರಕರಣ ಇದೇ ಮೊದಲೇನಲ್ಲ, ಈ ಹಿಂದೆಯೂ ಇಲ್ಲಿ ಮಹಿಳೆಯರಿಗೆ ಕಿರುಕುಳದ ವರದಿಗಳು ಬಂದಿವೆ. ಪಾಕಿಸ್ತಾನದಲ್ಲಿ ಸ್ತ್ರೀಹತ್ಯೆ ಮಾಡುವ ಜನರ ಪ್ರಾಬಲ್ಯ ಹೊಂದಿದೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಮುನ್ನೆಲೆಗೆ ಬರುತ್ತಲೇ ಇವೆ. ಈ ವರ್ಷದ ಆರಂಭದಲ್ಲಿ, ಇಟಲಿಯನ್ ಅಧಿಕಾರಿಗಳಿಗೆ 18 ವರ್ಷದ ಪಾಕಿಸ್ತಾನಿ ಮೂಲದ ಸಮನ್ ಅಬ್ಬಾಸ್ ಎಂಬ ಮಹಿಳೆಯ ಶವ ಸಿಕ್ಕಿತ್ತು, ಆ ಯುವತಿ ಒಂದು ವರ್ಷದ ಹಿಂದೆ ನಾಪತ್ತೆಯಾಗಿದ್ದಳು. ಯುವತಿ ನಿಶ್ಚಯಿತ ಮದುವೆಗೆ ನಿರಾಕರಿಸಿದ್ದರಿಂದ ಆಕೆಯನ್ನು ಕೊ-ಲೆ ಮಾಡಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ. ನವೆಂಬರ್ 2022 ರಲ್ಲಿ ರೆಗ್ಗಿಯೊ ಎಮಿಲಿಯಾ ಪ್ರಾಂತ್ಯದ ನೊವೆಲ್ಲಾರಾ ಪಟ್ಟಣದಲ್ಲಿ ಆಕೆಯ ಮನೆಯ ಬಳಿ ಮಾನವ ಅವಶೇಷಗಳು ಕಂಡುಬಂದ ನಂತರ ಅಬ್ಬಾಸ್‌ನನ್ನ ಡೆಂಟಲ್ ರಿಕಾರ್ಡ್ ಚೆಕ್ ಮಾಡಿದ ಬಳಿಕ ಆಕೆಯನ್ನ ಕೊಂ-ದವನು ಆಕೆಯ ತಂದೆ ಅಬ್ಬಾಸ್ ಎಂದು ಪತ್ತೆ ಹಚ್ಚಲಾಗಿತ್ತು.
ಕಳೆದ ವರ್ಷ ನವೆಂಬರ್‌ನಲ್ಲಿ ಕರಾಚಿಯ ಶಮ್ಸಿ ಸೊಸೈಟಿಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ (38) ಮತ್ತು 3 ಹೆಣ್ಣು ಮಕ್ಕಳನ್ನು ಹ ರಿ ತವಾದ ಆಯು ಧದಿಂದ ಕೊಂ-ದಿದ್ದ. ಎಲ್ಲಾ ಮೂರು ಹುಡುಗಿಯರು ಅಪ್ರಾಪ್ತ ವಯಸ್ಕರಾಗಿದ್ದು, ಅವರ ವಯಸ್ಸು 16 ವರ್ಷ, 12 ವರ್ಷ ಮತ್ತು 10 ವರ್ಷವಾಗಿತ್ತು. ಆರೋಪಿ ಫವಾದ್ ಎಂದು ಗುರುತಿಸಲಾಗಿದ್ದು, ಹಣಕಾಸಿನ ಸಮಸ್ಯೆಗಳಿಂದ ಖಿನ್ನತೆಗೆ ಒಳಗಾಗಿದ್ದ ಮತ್ತು ತನ್ನ ಹೆಂಡತಿಗೆ ತನ್ನ ಪರಿಸ್ಥಿತಿ ವಿವರಿಸೋಕೆ ಸಾಧ್ಯವಾಗದೆ ಈ ಕೃತ್ಯ ಎಸಗಿದ್ದ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಇಸ್ಲಾಮಾಬಾದ್‌ನ ಚಕ್ ಶಹಜಾದ್ ಪ್ರದೇಶದಲ್ಲಿ ಹಿರಿಯ ಪತ್ರಕರ್ತ ಅಯಾಜ್ ಅಮೀರ್ ಅವರ ಸೊಸೆ ಸಾರಾ ಇನಾಮ್ ಅವರ ಹೈ ಪ್ರೊಫೈಲ್ ಹತ್ಯೆ ಸೇರಿದಂತೆ ಪಾಕಿಸ್ತಾನದಲ್ಲಿ ಇನ್ನೂ ಹಲವಾರು ಸ್ತ್ರೀ ಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿವೆ.