ಆಗ್ನೇಯ ಏಷ್ಯಾ ದೇಶವಾದ ವಿಯೆಟ್ನಾಂ ನಲ್ಲಿ ಇತ್ತೀಚೆಗೆ ನಡೆದ ಉತ್ಖನನದಲ್ಲಿ ಮರಳುಗಲ್ಲಿನಿಂದ ಮಾಡಿದ ಶಿವ ಲಿಂಗ ಪತ್ತೆಯಾಗಿದೆ. ಆರ್ಕ್ಯಾಲಾಜಿಕಲ್ ಸರ್ವೇ ಆಫ್ ಇಂಡಿಯಾ (ಎಎಸ್ಐ) ಪ್ರಸಿದ್ಧ ಮೈ ಸನ್ (ದೇವಾಲಯ) ದೇವಾಲಯವನ್ನು ಉತ್ಖನನ ಮಾಡುತ್ತಿದ್ದ ಸಂದರ್ಭದಲ್ಲಿ ಈ ಬೃಹತ್ ಶಿವಲಿಂಗ ಪತ್ತೆಯಾಗಿದೆ. ಇದನ್ನು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ ಮತ್ತು ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. ಈ ಶಿವಲಿಂಗ ಸುಮಾರು 1100 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತಿದೆ.
Reaffirming a civilisational connect.
Monolithic sandstone Shiv Linga of 9th c CE is latest find in ongoing conservation project. Applaud @ASIGoI team for their work at Cham Temple Complex, My Son, #Vietnam. Warmly recall my visit there in 2011. pic.twitter.com/7FHDB6NAxz
— Dr. S. Jaishankar (@DrSJaishankar) May 27, 2020
ಪ್ರಾಚೀನ ಭಾರತ ವಿಯೆಟ್ನಾಂನೊಂದಿಗೆ ಬಲವಾದ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಬಂಧಗಳನ್ನು ಹೊಂದಿತ್ತು. ಇದರ ಪುರಾವೆಗಳು ಈಗ ವಿಯೆಟ್ನಾಂ ನಲ್ಲಿ ಕಂಡುಬರುತ್ತಿವೆ. ಬೌದ್ಧಧರ್ಮವನ್ನ ನಂಬುವ ಈ ದೇಶದಲ್ಲಿ 13 ನೇ ಶತಮಾನದವರೆಗೆ, ಪುರಾತತ್ತ್ವ ಶಾಸ್ತ್ರದ ಉತ್ಖನನಗಳಲ್ಲಿ ಹಿಂದೂ ಮತ್ತು ಬೌದ್ಧಧರ್ಮದ ಕಲಾಕೃತಿಗಳು ಕಂಡುಬಂದಿವೆ.
A great cultural example of India’s development partnership. @AmbHanoi @ITECnetwork
@FMPhamBinhMinh pic.twitter.com/9kB6DZ8MbK— Dr. S. Jaishankar (@DrSJaishankar) May 27, 2020
2011 ರಲ್ಲಿ, ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ಎಎಸ್ಐ) ಮೈ ಸನ್ ದೇವಾಲಯದ ಕೆಲ ಭಾಗಗಳನ್ನು ಮರುಸ್ಥಾಪಿಸುವ ಕೆಲಸವನ್ನು ಕೈಗೆತ್ತಿಕೊಂಡಿತ್ತು. ಇದಕ್ಕೆ ಎರಡು ಕಾರಣಗಳಿವೆ. ಒಂದು, ಪ್ರಾಚೀನ ಕಾಲದಿಂದಲೂ ವಿಯೆಟ್ನಾಂನೊಂದಿಗಿನ ನಡೆದುಕೊಂಡು ಬರುತ್ತಿರುವ ನಮ್ಮ ಭಾರತದ ಸಂಬಂಧವನ್ನು ಬಲಪಡಿಸುವುದು ಮತ್ತು ಎರಡನೆಯದೆಂದರೆ ಈ ರೀಸ್ಟೋರೇಷನ್ ಮೂಲಕ ಭಾರತ ಮತ್ತು ವಿಯೆಟ್ನಾಂ ಎರಡೂ ದೇಶಗಳ ಸಾಂಸ್ಕೃತಿಕ ಇತಿಹಾಸವನ್ನ ಕಾಪಾಡುವುದಾಗಿದೆ.
ಮಾಯ್ ಸನ್ ಟೆಂಪಲ್ ಅನ್ನು ವಿಯೆಟ್ನಾಂ ಮಧ್ಯದಲ್ಲಿ ಕ್ವೆಂಗ್ ಹೆಸರಿನ ಪ್ರಾಂತ್ಯದಲ್ಲಿ ನಿರ್ಮಿಸಲಾಗಿದೆ. 1969 ರಲ್ಲಿ ಯುಎಸ್ ವಾಯುದಾಳಿಯ ಸಮಯದಲ್ಲಿ ಈ ದೇವಾಲಯವು ಸಾಕಷ್ಟು ಹಾನಿಗೀಡಾಯಿತು. ಅಂದಹಾಗೆ, ಈ ದೇವಾಲಯವು ಮೂಲತಃ ಹಿಂದೂ ಧರ್ಮವನ್ನು ಆಧರಿಸಿದ ದೇವಾಲಯವಾಗಿದೆ, ಅಲ್ಲಿ ಒಂದೇ ಅಂಗಳದಲ್ಲಿ ದೇವಾಲಯಗಳ ಗುಂಪು ಇದೆ. ಕೃಷ್ಣ, ವಿಷ್ಣು ಮತ್ತು ಶಿವನ ಪ್ರತಿಮೆಗಳೂ ಈ ಹಿಂದೆ ಇಲ್ಲಿ ದೊರೆತಿವೆ. ನಾಲ್ಕನೆಯ ಶತಮಾನದಿಂದ 14 ನೇ ಶತಮಾನದವರೆಗೆ ಚಂಪಾ ದೊರೆಗಳು ಈ ದೇವಾಲಯವನ್ನು ನಿರ್ಮಿಸಿದ್ದಾರೆಂದು ನಂಬಲಾಗಿದೆ. ಪರ್ವತಗಳಿಂದ ಆವೃತವಾದ ಈ ದೇವಾಲಯದ ಪ್ರಾಂಗಣವು ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಡಿದೆ. ಆದರೆ ಬಾಂಬ್ ಸ್ಫೋಟದ ನಂತರ, ಈ ದೇವಾಲಯಕ್ಕೆ ಜನರ ಭೇಟಿ ಸಂಪೂರ್ಣವಾಗಿ ನಿಂತುಹೋಗಿದೆ ಮತ್ತು ಈಗ ಇಲ್ಲಿ ಉತ್ಖನನ ಕಾರ್ಯ ನಡೆಯುತ್ತಿದೆ.
ಪ್ರಸ್ತುತ ಕಂಡುಬಂದಿರುವ ಶಿವಲಿಂಗ ಮರಳುಗಲ್ಲಿನಿಂದ ಮಾಡಲ್ಪಟ್ಟಿದೆ ಮತ್ತು ಇದು ಈಗಲೂ ಸುರಕ್ಷಿತವಾಗಿದೆ. ಇಂಡಿಯನ್ ಎಕ್ಸ್ಪ್ರೆಸ್ನಲ್ಲಿನ ವರದಿಯಲ್ಲಿ, ಎಎಸ್ಐ ಅಧಿಕಾರಿಯೊಬ್ಬರು ಈ ಬೃಹತ್ ಶಿವಲಿಂಗದ ಹೊರತಾಗಿ, ಇನ್ನೂ 6 ಶಿವಲಿಂಗಗಳು ಕೂಡ ಉತ್ಖನನದಲ್ಲಿ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ದೇವಾಲಯದ ಆವರಣಕ್ಕೂ ಮುಂಚೆಯೇ ಅನೇಕ ಶಿಲ್ಪಗಳು ಮತ್ತು ಕಲಾಕೃತಿಗಳು ಕಂಡುಬಂದಿವೆ, ಅವುಗಳಲ್ಲಿ ವಿವಾಹ ಕಲಾಕೃತಿಗಳು ಮತ್ತು ರಾಮ, ಸೀತೆ ಮೂರ್ತಿಗಳು ಮತ್ತು ಶಿವಲಿಂಗಗಳು ಪತ್ತೆಯಾಗಿವೆ.
ಹಿಂದೂ ರಾಜರು ವಿಯೆಟ್ನಾಂನಲ್ಲಿ ಆಳ್ವಿಕೆ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ವಿಯೆಟ್ನಾಂ ಮಾತ್ರವಲ್ಲ, ಈ ಶ್ರೇಣಿಯು ಅನೇಕ ದೇಶಗಳನ್ನು ಒಳಗೊಂಡಿತ್ತು, ಇದನ್ನು ಮೊದಲು Father India ಎಂದು ಕರೆಯಲಾಗುತ್ತಿತ್ತು. ಈ ಪದವನ್ನು ಫ್ರೆಂಚ್ ಸಂಶೋಧಕ ಜಾರ್ಜ್ ಕೋಡ್ಸ್ ನೀಡಿದ್ದು, ಇದರಲ್ಲಿ ವಿಯೆಟ್ನಾಂ, ಕಾಂಬೋಡಿಯಾ, ಲಾವೋಸ್, ಥೈಲ್ಯಾಂಡ್, ಮ್ಯಾನ್ಮಾರ್ ಸೇರಿವೆ. ಅಂದರೆ, ಬರೆಯುವ ಅಥವಾ ದಾಖಲಿಸುವ ಕೆಲಸ ಪ್ರಾರಂಭವಾಗದ ಯುಗವಿದ್ದ ಸಮಯದಿಂದಲೇ ವಿಯೆಟ್ನಾಂ ಮತ್ತು ಭಾರತದ ನಡುವೆ ಆಳವಾದ ಸಾಂಸ್ಕೃತಿಕ ಸಂಬಂಧಗಳು ಇದ್ದವು ಎಂದು ನಂಬಲಾಗಿದೆ.
ಈಗಲೂ ಸಹ, ಈ ದೇಶದ ನಾಗರಿಕತೆ ಮತ್ತು ಜೀವನಶೈಲಿ ಭಾರತದೊಂದಿಗಿನ ಆಳವಾದ ಸಂಬಂಧಗಳನ್ನ ತೋರಿಸುತ್ತದೆ. ಅಲ್ಲಿ ಮಾತನಾಡುವ ಭಾಷೆಗಳು ಸಂಸ್ಕೃತ ಪದಗಳು ಮತ್ತು ಉಚ್ಚಾರಣೆಗಳಾಗಿವೆ. ವಿಯೆಟ್ನಾಂನಲ್ಲಿ ಭಾರತೀಯ ಕಾನೂನು ಮತ್ತು ಸುವ್ಯವಸ್ಥೆಯ ಒಂದು ನೋಟವೂ ಕಂಡುಬರುತ್ತದೆ.
ಲೇಖಕ ಮತ್ತು ಪತ್ರಕರ್ತ ಗೀತೇಶ್ ಶರ್ಮಾ ತಮ್ಮ‘Traces of Indian culture in Vietnam’ ಎಂಬ ಪುಸ್ತಕದಲ್ಲಿ, ಚಮ್ ಎಂದೂ ಕರೆಯಲ್ಪಡುವ ಚಂಪಾ ಪ್ರಾಚೀನ ಕಾಲದಲ್ಲಿ ಹಿಂದೂ ಸಾಮ್ರಾಜ್ಯವಾಗಿತ್ತು. ಇದು ಮೂರನೇ ಶತಮಾನದ ವಿಷಯವಾಗಿದೆ. ಹಿಂದೂಗಳ ಆಡಳಿತವು 1100 ವರ್ಷಗಳ ಕಾಲ ಮುಂದುವರೆಯಿತು. ಈಗಲೂ ಚಮ್ ಸಮುದಾಯದ ಅನೇಕ ವಿಷಯಗಳು ಹಿಂದೂಗಳ ಆಚಾರ ವಿಚಾರಗಳಿಗೆ ಹೋಲಿಕೆಯಾಗುತ್ತವೆ. ಈ ಸಮುದಾಯದ ಜನರು ಸ-ತ್ತ ವ್ಯಕ್ತಿಗಳನ್ನು ಸು-ಡು-ತ್ತಾರೆ ಹಾಗು ಪ್ರತಿವರ್ಷ ತಮ್ಮ ಪೂರ್ವಜರ ಪೂಜೆಯನ್ನೂ ಮಾಡುತ್ತಾರೆ ಎಂದು ಬರೆದಿದ್ದಾರೆ.
ಅಂದಹಾಗೆ, ಹಿಂದೂ ದೇವಾಲಯಗಳ ಅವಶೇಷಗಳು ದೊರೆಯುತ್ತಿರುವ ಏಕೈಕ ದೇಶ ವಿಯೆಟ್ನಾಂ ಅಲ್ಲ. ಕಾಂಬೋಡಿಯಾದಲ್ಲಿ ಬೃಹತ್ ದೇವಾಲಯವಿದೆ, ಇದನ್ನು ಹಿಂದೂಗಳ ಐದನೇ ಧಾಮ್ ನಿರ್ಮಿಸುವ ಬಗ್ಗೆ ಕೂಡ ಯೋಚಿಸಲಾಗುತ್ತಿದೆ. ಈ ದೇವಾಲಯವನ್ನು ಅಂಕೋರ್ ವಾಟ್ ದೇವಾಲಯ ಎಂದು ಕರೆಯಲಾಗುತ್ತದೆ, ಇದನ್ನು ಕ್ರಿ.ಶ 1113 ಮತ್ತು ಕ್ರಿ.ಶ 1150 ರ ನಡುವೆ ನಿರ್ಮಿಸಲಾಗಿದೆ ಇದನ್ನು 500 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿದೆ. ಅಕೋರ್ ವಾಟ್ ಎಂದರೆ ದೇವಾಲಯಗಳ ನಗರ ಎಂದರ್ಥ. ಈ ಸುಂದರ ದೇವಾಲಯವನ್ನು ಹಿಂದೂಗಳ ವಿಷ್ಣುವಿನ ದೇವಾಲಯವಾಗಿ ನಿರ್ಮಿಸಲಾಗಿದೆ. ಆದರೆ 14 ನೇ ಶತಮಾನದಲ್ಲಿ ಇದನ್ನು ಬೌದ್ಧಧರ್ಮದ ದೇವಾಲಯವನ್ನಾಗಿ ಪರಿವರ್ತಿಸಲಾಯಿತು ಮತ್ತು ಭಗವಾನ್ ಬುದ್ಧನ ಪ್ರತಿಮೆಯನ್ನೂ ಸ್ಥಾಪಿಸಲಾಯಿತು. ಇಂದಿಗೂ ಕಾಂಬೋಡಿಯಾದಲ್ಲಿ ನೂರಾರು ದೇವಾಲಯಗಳಿವೆ.