ಸಂಜಯ್ ದತ್ ಹಿಂದಿ ಚಿತ್ರರಂಗದ ಪ್ರಸಿದ್ಧ ಮತ್ತು ಚರ್ಚಿತ ನಟರಗಳ ಸಾಲಿನಲ್ಲೂ ತಮ್ಮ ಸ್ಥಾನವನ್ನು ಹೊಂದಿದ್ದಾರೆ. ಸಂಜಯ್ ದತ್ ತಮ್ಮ ವೃತ್ತಿಪರ ಜೀವನದ ಬಗ್ಗೆ ಹಾಗೂ ಅವರ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆಯಲ್ಲಿರುತ್ತಾರೆ. ‘ಸಂಜು ಬಾಬಾ’ ಎಂದೇ ಜನಪ್ರಿಯವಾಗಿರುವ ಸಂಜಯ್ ದತ್ ಕೂಡ ವಿವಾದಗಳಿಗೆ ಹೊರತಾಗಿಲ್ಲ. ಸಂಜಯ್ ದತ್ ಹೆಸರು 1993 ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ ಕೇಳಿ ಬಂದಿತ್ತು ಆಗಿನಿಂದಲೇ ಸಂಜಯ್ ದತ್ ಸುದ್ದಿಯಲ್ಲಿದ್ದರು.
ಈ ಪ್ರಕರಣದಲ್ಲಿ ಸಂಜಯ್ ದತ್ ಹೆಸರು ಬಂದ ನಂತರ, ಅವರು ಕುಖ್ಯಾತರಾಗಿದ್ದರು. ಸಂಜಯ್ ದತ್ ಮೇ ಲೆ ಉಗ್ರನೆಂಬ ಆರೋಪವೂ ಇತ್ತು ಮತ್ತು ದೇಶಾದ್ಯಂತ ಸಂಜಯ್ ದತ್ ವಿಲನ್ ನಂತೆ ಕಂಡಿದ್ದರು. ಕೊನೆಗೂ ಆ ಪ್ರಕರಣದಲ್ಲಿ ಸಂಜಯ್ ದತ್ ತಪ್ಪಿತಸ್ಥನೆಂದು ಸಾಬೀತಾಯಿತು ಮತ್ತು ನ್ಯಾಯಾಲಯವು ನಟನಿಗೆ 6 ವರ್ಷಗಳ ಜೈಲು ಶಿಕ್ಷೆಯೂ ವಿಧಿಸಿತ್ತು. ಸಂಜಯ್ ದತ್ ಅವರ ಜೀವನವನ್ನ ಆಧರಿಸಿ ಬಾಲಿವುಡ್ನಲ್ಲಿ ಒಂದು ಚಿತ್ರವನ್ನೂ ಮಾಡಲಾಗಿದೆ, ಇದರಲ್ಲಿ ಸಂಜಯ್ ದತ್ ಪಾತ್ರವನ್ನು ರಣಬೀರ್ ಕಪೂರ್ ನಿರ್ವಹಿಸಿದ್ದಾರೆ. ಅಷ್ಟೇ ಅಲ್ಲದೆ ಸಂಜಯ್ ದತ್ ಜೀವನದ ಬಗ್ಗೆ ಒಂದು ಪುಸ್ತಕವನ್ನೂ ಬರೆಯಲಾಗಿದೆ. ಇದರ ಲೇಖಕರ ಯಾಸಿರ್ ಉಸ್ಮಾನ್. ಈ ಪುಸ್ತಕದ ಹೆಸರು ‘ಸಂಜಯ್ ದತ್: ದಿ ಕ್ರೇಜಿ ಅನ್ಟೋಲ್ಡ್ ಲವ್ ಸ್ಟೋರಿ ಆಫ್ ಬಾಲಿವುಡ್ ಬ್ಯಾಡ್ ಬಾಯ್’ ಬರೆದಿದ್ದಾರೆ. ಇದರಲ್ಲಿ ಸಂಜುವಿನ ಜೀವನದ ಹಲವಾರು ವಿಷಯಗಳನ್ನೂ ಬಹಿರಂಗ ಪಡಿಸಲಾಗಿದೆ.
ಪುಸ್ತಕದಲ್ಲಿನ ಒಂದು ವಿಷಯವು ಪ್ರಕಟವಾಗಿದ್ದು ಅದರ ಬಗ್ಗೆ ವಿ ವಾ ದ ಸೃಷ್ಟಿಯಾಗಿತ್ತು. ವಾಸ್ತವವಾಗಿ, ಯಾಸಿರ್ ಉಸ್ಮಾನ್ 1993 ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಸ್ಫೋಟಗಳನ್ನೂ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ ಮತ್ತು ಸುನೀಲ್ ದತ್ ತನ್ನ ಮಗ ಸಂಜಯ್ ದತ್ ಅವರನ್ನು ಪೋಲಿಸ್ ಹೆಡ್ ಕ್ವಾರ್ಟರ್ಸ್ ನಲ್ಲಿ ಭೇಟಿಯಾಗಲು ಹೋದಾಗ ಇಬ್ಬರ ನಡುವೆ ಏನಾಯಿತು ಎಂಬುದನ್ನ ಅವರು ಬರೆದಿದ್ದಾರೆ.
ಯಾಸಿರ್ ಪ್ರಕಾರ, ಸಂಜಯ್ ದತ್ ತನ್ನ ತಂದೆಯ ಮುಂದೆ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದರು ಮತ್ತು ಇದನ್ನು ಕೇಳಿದ ನಂತರ ಸುನೀಲ್ ದತ್ ಅಕ್ಷರಶಃ ಕಂಗಾಲಾಗಿದ್ದರು. ಸಂಜಯ್ ತಪ್ಪು ಮಾಡಿಲ್ಲ ಎಂದು ಸುನಿಲ್ ದತ್ ಭಾವಿಸಿದ್ದರು ಮತ್ತು ತನ್ನ ಮಗನ ಬಾಯಿಂದಲೂ ಅದನ್ನೇ ಕೇಳಲು ಅವರು ಬಯಸಿದ್ದರು. ಆದರೆ ಸಂಜಯ್ ಹೇಳಿದ ವಿಷಯಗಳನ್ನ ಕೇಳಿ ಸುನಿಲ್ ದತ್ ಕೂಡ ಒಂದು ಕ್ಷಣ ದಂಗಾಗಿದ್ದರು.
ಸಂಜಯ್ ದತ್ ತನ್ನ ತಂದೆಯ ಮುಂದೆ ತನ್ನ ಬಳಿ ಅಸಾಲ್ಟ್ ರೈಫಲ್ ಮತ್ತು ಕೆಲವು ಮದ್ದು ಗುಂಡುಗಳು ಇದ್ದವು, ಅದನ್ನು ಅನೀಸ್ ಇಬ್ರಾಹಿಂ ತನಗೆ ನೀಡಿದ್ದ ಎಂದು ಸಂಜಯ್ ದತ್ ತನ್ನ ತಂದೆಯ ಎದುರು ಒಪ್ಪಿಕೊಂಡಿದ್ದರು. ನಿನಗೆ ಈ ರೀತಿಯ ಕೆಲಸ ಮಾಡೋಕೆ ಕಾರಣವಾದರೂ ಏನಿತ್ತು ಅಂತ ಸುನೀಲ್ ದತ್ ಮಗನಿಗೆ ಕಾರಣ ಕೇಳುತ್ತಾರೆ.
ಆಗ ಸಂಜಯ್ ದತ್, “ಯಾಕಂದ್ರೆ ನನ್ನ ಕಣ ಕಣದಲ್ಲೂ ಮುಸ್ಲಿಂ ರಕ್ತವಿದೆ. ನಗರದಲ್ಲಿ ಘಟನೆ ನೋಡಿಯೂ ನಾನು ಸುಮ್ಮನಿರಲು ಸಾಧ್ಯವಾಗಲಿಲ್ಲ. (ಈ ಬಾಂಬ್ ಸ್ಪೋಟ ಬಾಬ್ರಿ ಮಸೀದಿ ವಿವಾದ ಹಾಗು ಮುಸಲ್ಮಾನರ ಹ-ತ್ಯೆ-ಗೆ ಪ್ರತೀಕಾರಕ್ಕಾಗಿ ಮುಂಬೈನಲ್ಲಿ ನಡೆದಿತ್ತು, ಸಂಜಯ್ ದತ್ ತಾಯಿ ಮುಸ್ಲಿಂ ಆಗಿದ್ದರು, ಇದರ ಬಗ್ಗೆ ಸಂಜಯ್ ಮಾತನಾಡುತ್ತಿದ್ದಾರೆ)”. ಮಗನ ಬಾಯಿಂದ ಈ ಶಬ್ದಗಳನ್ನು ಕೇಳುತ್ತಲೇ ಸುನಿಲ್ ದತ್ ಒಂದು ಕ್ಷಣ ಬೆಚ್ಚಿಬಿದ್ದಿದ್ದರು ಹಾಗು ಮಗನ ಮುಖವನ್ನೂ ನೋಡದೆ ಅಲ್ಲಿಂದ ಹೊರಟುಹೋಗಿದ್ದರು.
ಪುಸ್ತಕದಲ್ಲಿ ಪೂರ್ವಾಗ್ರಹ ಪೀಡಿತವಾಗಿ ನನ್ನ ಬರೆಯಲಾಗಿದೆ: ಸಂಜಯ್ ದತ್
ಆದರೆ ಪುಸ್ತಕದಲ್ಲಿ ಬರೆದ ಈ ವಿಷಯದ ಬಗ್ಗೆ ಸಂಜಯ್ ದತ್ ಆಕ್ಷೇಪ ವ್ಯಕ್ತಪಡಿಸುತ್ತ ಮನಸಿಗೆ ಬಂದಂತೆ ತನ್ನ ಬಗ್ಗೆ ಈ ರೀತಿಯ ಸುಳ್ಳುಗಳನ್ನ ಬರೆಯಲಾಗಿದೆ ಎಂದಿದ್ದರು. ಅಂತಹ ಯಾವ ಘಟನೆಯಾಗಲಿ ಅಥವ ನಾನು ಆ ರೀತಿಯದ್ದಾಗಿ ನನ್ನ ತಂದೆಯವರ ಜೊತೆ ಮಾತನ್ನೇ ಆಡಿರಲಿಲ್ಲ ಎಂದು ಸಂಜಯ್ ದತ್ ಸ್ಪಷ್ಟಪಡಿಸಿದ್ದಾರೆ.