ನಿಮಗೆ ಗೊತ್ತಿರಲಿ ಭಾರತದ ರಾಷ್ಟ್ರಪತಿಗಳ ಹೊರತಾಗಿ ಉಪರಾಷ್ಟ್ರಪತಿ, ರಾಜ್ಯಗಳ ರಾಜ್ಯಪಾಲರು ಹಾಗೂ ವಿವಿಐಪಿ ವಾಹನಗಳಿಗೂ ‘ನಂಬರ್ ಪ್ಲೇಟ್’ ಇರುವುದಿಲ್ಲ.
Car Number Plate In India: ನೀವು ಭಾರತದ ಎಲ್ಲಾ ವಾಹನಗಳಲ್ಲೂ ‘ನಂಬರ್ ಪ್ಲೇಟ್’ ಇರೋದನ್ನ ನೋಡಿರುತ್ತೀರ. ನಂಬರ್ ಪ್ಲೇಟ್ ಇರುವ ಕಾರಣ ವಾಹನ ಮತ್ತು ಅದರ ಮಾಲೀಕರನ್ನು ಗುರುತಿಸಲಾಗುತ್ತದೆ. ನಂಬರ್ ಪ್ಲೇಟ್ ಇಲ್ಲದೇ ಭಾರತದಲ್ಲಿ ವಾಹನ ಚಲಾಯಿಸಿದರೆ ಏನಾಗಬಹುದು ಗೊತ್ತಾ? ಆದರೆ ಭಾರತದಲ್ಲಿ ‘ನಂಬರ್ ಪ್ಲೇಟ್’ ಇಲ್ಲದ ಕೆಲವು ವಾಹನಗಳಿವೆ. ಹೀಗಿರುವಾಗ ಈಗ ದೇಶದ ಎಲ್ಲ ಪ್ರಜೆಗಳಿಗೂ ಸಮಾನ ಹಕ್ಕು ಇರುವಾಗ ವಾಹನಗಳಿಗೆ ‘ನಂಬರ್ ಪ್ಲೇಟ್’ ಇಲ್ಲದಿರುವವರು ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಇಂದು ನಾವು ಹೇಳುತ್ತಿರುವ ವಾಹನಗಳು ಬಹಳ ವಿಶೇಷವಾದವುಗಳಾಗಿವೆ. ಈ ವಾಹನಗಳ ಮೇಲೆ ನಂಬರ್ ಪ್ಲೇಟ್ ಇರುವುದಿಲ್ಲ, ಅಥವಾ ಭಾರತದ ಕಾನೂನು ರಸ್ತೆಯಲ್ಲಿ ಈ ವಾಹನಗಳನ್ನ ಓಡಾಡುವುದನ್ನೂ ತಡೆಯಲು ಸಾಧ್ಯವಿಲ್ಲ. ಇದರ ಹಿಂದೆಯೂ ದೊಡ್ಡ ಕಾರಣವಿದೆ. ವಾಸ್ತವವಾಗಿ, ಈ ವಾಹನಗಳು ಭಾರತದ ರಾಷ್ಟ್ರಪತಿಗಳ ಬೆಂಗಾವಲು ವಾಹನಗಳಾಗಿವೆ.
ವಾಸ್ತವವಾಗಿ, ಘನತೆವೆತ್ತ ಭಾರತದ ರಾಷ್ಟ್ರಪತಿಗಳನ್ನು ದೇಶದ ‘ಪ್ರಥಮ ಪ್ರಜೆ’ ಎಂಬ ಸ್ಥಾನಮಾನದಲ್ಲಿ ಅತ್ಯಂತ ವಿಶೇಷ ವ್ಯಕ್ತಿಯ ವರ್ಗದಲ್ಲಿ ಇರಿಸಲಾಗಿದೆ. ಘನತೆವೆತ್ತ ಭಾರತದ ರಾಷ್ಟ್ರಪತಿಗಳು ರಾಷ್ಟ್ರಪತಿಗಳಷ್ಟೇ ಅಲ್ಲ, ಜಲ, ನೆಲ ಮತ್ತು ವಾಯು ಮೂರು ಸೇನೆಗಳ ಅಧ್ಯಕ್ಷರೂ ಹೌದು. ಈ ಸಂದರ್ಭದಲ್ಲಿ, ‘ಭಾರತದ ಸಂವಿಧಾನ’ದಲ್ಲಿ ಸಾಮಾನ್ಯ ನಾಗರಿಕರಿಗಾಗಿ ಮಾಡಲಾದ ಅನೇಕ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುವ ಬಾಧ್ಯತೆಯಿಂದ ರಾಷ್ಟ್ರಪತಿಗೆ ವಿನಾಯಿತಿ ನೀಡಲಾಗಿದೆ.
ಭಾರತದ ರಾಷ್ಟ್ರಪತಿಗಳು ಅನೇಕ ವಿಶೇಷ ಅಧಿಕಾರಗಳನ್ನ ಹೊಂದಿರುತ್ತಾರೆ, ಅದನ್ನು ಅವರು ಯಾವಾಗ ಬೇಕಾದರೂ ಬಳಸಬಹುದು. ಅವರು ಬಯಸಿದರೆ, ಅವರು ಮರಣದಂಡನೆ ಶಿಕ್ಷೆಯಾಗಿದ್ದರೂ ಯಾವುದೇ ಕೈದಿಯ ಶಿಕ್ಷೆಯನ್ನು ಕ್ಷಮಿಸಬಹುದು.
ಭಾರತದ ರಾಷ್ಟ್ರಪತಿಗಳ ಬೆಂಗಾವಲು ವಾಹನದಲ್ಲಿ ಹಲವು ವಾಹನಗಳು ಇರುವುದನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೀವೆಲ್ಲರೂ ನೋಡಿರುತ್ತೀರ. ಈ ಸಮಯದಲ್ಲಿ, ಈ ಎಲ್ಲಾ ವಾಹನಗಳು ಯಾವುದೇ ರೀತಿಯ ನಂಬರ್ ಪ್ಲೇಟ್ (ನೋಂದಣಿ ಫಲಕ) ಹೊಂದಿರುವುದಿಲ್ಲ. ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಈ ಆಚರಣೆಯ ಹಿಂದೆಯೂ ಒಂದು ನಿಯಮವಿದೆ.
ಬ್ರಿಟಿಷರು ಸುಮಾರು 200 ವರ್ಷಗಳ ಕಾಲ ಭಾರತವನ್ನು ಆಳಿದರು. ಬ್ರಿಟಿಷರು ಭಾರತವನ್ನು ತೊರೆದು ವರ್ಷಗಳೇ ಕಳೆದಿವೆ, ಆದರೆ ಅವರು ಮಾಡಿದ ನಿಯಮ, ಕಾನೂನುಗಳು ಮಾತ್ರ ಭಾರತದಲ್ಲಿ ಇನ್ನೂ ಅನ್ವಯಿಸುತ್ತವೆ. ಈ ನಿಯಮಗಳಲ್ಲಿ ಒಂದು ‘The King Can Do No Wrong’, ಅಂದರೆ ‘ರಾಜನು ಯಾವುದೇ ತಪ್ಪು ಮಾಡಲಾರನು’. ಈ ನಿಯಮದ ಪ್ರಕಾರ, ಭಾರತದ ರಾಷ್ಟ್ರಪತಿಗಳ ಕಾರಿನ ಮೇಲೆ ಯಾವುದೇ ನಂಬರ್ ಪ್ಲೇಟ್ ಇರುವುದಿಲ್ಲ.
ಭಾರತದ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಗಳ ರಾಜ್ಯಪಾಲರ ಹೊರತಾಗಿ ಹಲವು ವಿವಿಐಪಿ ವಾಹನಗಳಿಗೂ ‘ನಂಬರ್ ಪ್ಲೇಟ್’ ಇರುವುದಿಲ್ಲ. ಈ ವೇಳೆ ವಿವಿಐಪಿ ಕಾರುಗಳಲ್ಲಿ ‘ನಂಬರ್ ಪ್ಲೇಟ್’ ಇಲ್ಲದಿರುವುದಕ್ಕೆ ಅವುಗಳ ಭದ್ರತೆಯೇ ಕಾರಣವಾಗಿದ್ದು, ಕಾರಿನ ಮೇಲೆ ‘ನಂಬರ್ ಪ್ಲೇಟ್’ ಇಲ್ಲದ ಕಾರಣ ‘ಅಶೋಕ್ ಸ್ಥಂಭ’ ಮಾತ್ರ ಹಾಕಲಾಗಿರುತ್ತದೆ.
ಪ್ರಸ್ತುತ, ಭಾರತೀಯ ವಿದೇಶಾಂಗ ಸಚಿವಾಲಯದಲ್ಲಿ ಸುಮಾರು 14 ಕಾರುಗಳಿವೆ, ಇವುಗಳನ್ನು ನೋಂದಣಿ ಫಲಕ (ನಂಬರ್ ಪ್ಲೇಟ್) ಗಳಿಲ್ಲದೆಯೇ ನಡೆಸಲಾಗುತ್ತಿದೆ. ಸಾಮಾನ್ಯವಾಗಿ ಈ ಕಾರುಗಳನ್ನು ವಿದೇಶಿ ಅತಿಥಿಗಳನ್ನು ಕರೆತರಲು ಬಳಸಲಾಗುತ್ತದೆ ಮತ್ತು ಅವರನ್ನ ಐತಿಹಾಸಿಕ ಸ್ಮಾರಕಗಳ ಪ್ರವಾಸಕ್ಕೆ ಕರೆದೊಯ್ಯಲಾಗುತ್ತದೆ.