ಹಿಂದೂ ಧರ್ಮದಲ್ಲಿ ತ್ರಿಮೂರ್ತಿಗಳಿಗೆ ವಿಶೇಷ ಪ್ರಾಮುಖ್ಯತೆ ಇದೆ – ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ. ಬ್ರಹ್ಮ ನನ್ನು ಸೃಷ್ಟಿಕರ್ತ, ವಿಷ್ಣುವನ್ನ ಲಯಕರ್ತ ಮತ್ತು ಮಹೇಶ್ವರ ಅಂದರೆ ಶಿವನನ್ನು ವಿನಾಶಕರ್ತ ಎಂದು ಪರಿಗಣಿಸಲಾಗುತ್ತದೆ. ನೀವು ಭಗವಾನ್ ವಿಷ್ಣು ಮತ್ತು ಭಗವಾನ್ ಶಿವನ ಅನೇಕ ದೇವಾಲಯಗಳನ್ನು ನೋಡಿರುತ್ತೀರ ಆದರೆ ನೀವು ಎಂದಾದರೂ ಬ್ರಹ್ಮನ ದೇವಾಲಯವನ್ನು ನೋಡಿದ್ದೀರಾ? ಇಲ್ಲ! ಹಾಗಾದರೆ ಇದರ ಹಿಂದಿನ ಕಾರಣವನ್ನು ನೀವು ಎಂದಾದರೂ ಯೋಚಿಸಿದ್ದೀರಾ…? ಹಾಗಾದರೆ ಇದರ ಹಿಂದೆ ಅಡಗಿರುವ ಕಥೆಯ ಬಗ್ಗೆ ನೋಡೋಣ ಬನ್ನಿ. ಇಡೀ ಪ್ರಪಂಚದಲ್ಲಿ ಬ್ರಹ್ಮನ ಒಂದೇ ಒಂದು ದೇವಾಲಯವಿದೆ ಅದು ರಾಜಸ್ಥಾನದ ಪುಷ್ಕರ್ನಲ್ಲಿದೆ.
ಈ ಕಥೆ ಪದ್ಮ ಪುರಾಣದ್ದಾಗಿದೆ. ಒಮ್ಮೆ ವಜ್ರನಾಶ ಎಂಬ ರಾಕ್ಷಸನು ಇಡೀ ಭೂಮಿಯನ್ನು ಬಾಧಿಸಿದನು. ಇಂದ್ರ ಇತ್ಯಾದಿ ದೇವತೆಗಳು ಅವನ ಮುಂದೆ ಸೋತಾಗ, ಅವರು ಪರಮಪಿತ ಬ್ರಹ್ಮನಲ್ಲಿ ಆಶ್ರಯ ಪಡೆದರು ಮತ್ತು ಕೊನೆಯಲ್ಲಿ, ಬ್ರಹ್ಮ ವಜ್ರನಾಶನನ್ನ ಅಂತ್ಯಗೊಳಿಸಿದರು. ವಜ್ರನಾಶವನ್ನು ವಧಿಸುವಾಗ ಬ್ರಹ್ಮನ ಕೈಯಿಂದ ಕಮಲದ ಹೂವು ಮೂರು ಸ್ಥಳಗಳಲ್ಲಿ ಬಿದ್ದಿತು ಮತ್ತು ಆ ಮೂರು ಸ್ಥಳಗಳಲ್ಲಿ ಮೂರು ಸರೋವರಗಳು ರೂಪುಗೊಂಡವು. ಈ ಸ್ಥಳಕ್ಕೆ ಪುಷ್ಕರ ಎಂದು ಹೆಸರಿಸಲಾಯಿತು ಮತ್ತು ಪ್ರಪಂಚದ ಒಳಿತಿಗಾಗಿ, ಬ್ರಹ್ಮಾಂಡದ ಸೃಷ್ಟಿಕರ್ತ ಬ್ರಹ್ಮನು ಇಲ್ಲಿ ಯಾಗವನ್ನು ಮಾಡಲು ನಿರ್ಧರಿಸಿದನು.
ಗಾಯತ್ರಿಯ ಜೊತೆ ಎರಡನೆಯ ವಿವಾಹವಾದ ಬ್ರಹ್ಮ
ಬ್ರಹ್ಮನು ಯಾಗವನ್ನು ಪೂರ್ಣಗೊಳಿಸಲು ಪುಷ್ಕರನನ್ನು ಬಂದನು, ಆದರೆ ಅವರ ಪತ್ನಿ ಸಾವಿತ್ರಿ ಕಾರಣಾಂತರಗಳಿಂದ ಸಮಯಕ್ಕೆ ಸರಿಯಾಗಿ ಬರಲು ಸಾಧ್ಯವಾಗಲಿಲ್ಲ ಮತ್ತು ಹಿಂದೂ ಧರ್ಮದಲ್ಲಿ ಯಾವುದೇ ಯಾಗವು ಹೆಂಡತಿಯಿಲ್ಲದೆ ಪೂರ್ಣಗೊಳ್ಳುವುದಿಲ್ಲ. ಇದರಿಂದಾಗಿ ಬ್ರಹ್ಮನು ಗಾಯತ್ರಿ ಎಂಬ ದೇವತೆಯನ್ನು ಸೃಷ್ಟಿಸಿ ಆಕೆಯ ಜೊತೆಗೆ ಮದುವೆಯಾದರು, ಅದರ ನಂತರ ಯಾಗ ಪ್ರಾರಂಭವಾಯಿತು. ಅಷ್ಟರಲ್ಲಿ ಸಾವಿತ್ರಿ ಕೂಡ ಅಲ್ಲಿಗೆ ಬಂದು ಬ್ರಹ್ಮನೊಂದಿಗೆ ಗಾಯತ್ರಿಯನ್ನು ನೋಡಿ ಕೋಪಗೊಂಡಳು.
ಬ್ರಹ್ಮನಿಗೆ ಶ್ರಾಪ ಕೊಟ್ಟ ಸಾವಿತ್ರಿ ದೇವಿ
ಕೋಪದ ಭರದಲ್ಲಿ, ಸಾವಿತ್ರಿಯು ಬ್ರಹ್ಮನನ್ನು ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದರೂ, ಅವನನ್ನು ಎಲ್ಲಿಯೂ ಪೂಜಿಸಬಾರದು ಎಂದು ಶಪಿಸಿದಳು. ಇದನ್ನು ಕೇಳಿ ಬ್ರಹ್ಮ ಸಮೇತ ಜನರೆಲ್ಲರಿಗೂ ಆಶ್ಚರ್ಯವಾಯಿತು. ಎಲ್ಲಾ ದೇವರುಗಳು ಸಾವಿತ್ರಿಯ ಕ್ಷಮೆಯನ್ನು ಕೇಳಿದರು ಮತ್ತು ಈ ಮದುವೆಯ ಹಿಂದಿನ ಕಥೆಯನ್ನು ಹೇಳಿದರು, ಇದನ್ನು ಕೇಳಿ ಸಾವಿತ್ರಿಯ ಕೋಪವು ತಣ್ಣಗಾಯಿತು. ಕೋಪದ ಬೆಂಕಿ ಕಡಿಮೆಯಾದಾಗ, ಸಾವಿತ್ರಿ ದೇವಿ ನೀವು ಇಡೀ ಭೂಮಿಯ ಮೇಲೆ ಪುಷ್ಕರದಲ್ಲಿ ಮಾತ್ರ ಪೂಜಿಸಲ್ಪಡುತ್ತೀರಿ. ಇದಲ್ಲದೆ ಬೇರೆ ಯಾರಾದರೂ ನಿಮ್ಮ ದೇವಸ್ಥಾನವನ್ನು ಕಟ್ಟಿದರೆ ಆ ದೇವಸ್ಥಾನದ ಜೊತೆಗೆ ಆ ವ್ಯಕ್ತಿಯೂ ನಾಶವಾಗುತ್ತಾರೆ ಎಂದು ಹೇಳಿದರು. ಇದೇ ಕಾರಣದಿಂದ ಇಡೀ ಪ್ರಪಂಚದಲ್ಲಿ ಒಂದೇ ಒಂದು ಬ್ರಹ್ಮದೇವನ ದೇವಾಲಯವಿದೆ, ಅದು ರಾಜಸ್ಥಾನದ ಪುಷ್ಕರದಲ್ಲಿದೆ …
ಇದನ್ನೂ ಓದಿ:
ರಾಮಾಯಣ, ಶ್ರೀರಾಮನ ಅಂತ್ಯದ ಬಳಿಕ ಅಯೋಧ್ಯೆ ಏನಾಯ್ತು? ಅದರ ಮುಂದಿನ ರಾಜ ಯಾರಾದ? ಹನುಮ ಏನಾದ? ಇಲ್ಲಿದೆ ಅದರ ರೋಚಕ ಮಾಹಿತಿ
ರಾಮಚಂದ್ರ ವಿಷ್ಣುವಿನ ಅವತಾರವಾಗಿದ್ದು, ಅವರನ್ನ ಮೊದಲು ರಾಮ ಬಳಿಕ ಶ್ರೀ ರಾಮಚಂದ್ರ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ರಾಮಾಯಣದಲ್ಲಿನ ವಿವರಣೆಯ ಪ್ರಕಾರ, ಚಕ್ರವರ್ತಿ ರಾಜ ದಶರಥನ ಹೆಂಡತಿಗೆ ಮಕ್ಕಳಾಗಿರಲಿಲ್ಲ, ಶೃಂಗಿ ಋಷಿ ಪ್ರಸಾದದ ಸ್ವರೂಪದಲ್ಲಿ ಕೊಟ್ಟ ಖೀರ್ (ಪಾಯಸ) ಅನ್ನು ತಿಂದ ಬಳಿಕ ದಶರಥನ ಪತ್ನಿಗೆ ಪುತ್ರ ಪ್ರಾಪ್ತಿಯಾಗುತ್ತದೆ. ಬಳಿಕ ನಡೆದ ವೃತ್ತಾಂತಗಳೆಲ್ಲಾ ತಮಗೆ ಗೊತ್ತಿದ್ದಿದ್ದೇ.
ಆದರೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡುವ ಪ್ರಶ್ನೆಯೆಂದರೆ ಭಗವಾನ್ ಶ್ರೀರಾಮನ ಅಂತ್ಯದ ಬಳಿಕ ಅಯೋಧ್ಯೆಯ ರಾಜ ಯಾರಾದ, ಅಯೋಧ್ಯೆಯ ಕಥೆ ಏನಾಯ್ತು? ಎಂಬುದಾಗಿದೆ. ಬನ್ನಿ ಈ ಬಗೆಗಿನ ಮಾಹಿತಿಯನ್ನ ನಾವು ನಿಮಗೆ ತಿಳಿಸಿಕೊಡುತ್ತೇವೆ. ಭಗವಾನ್ ರಾಮನ ನಂತರ ಅವರ ಹಿರಿಯ ಮಗ ಕುಶ ಅಯೋಧ್ಯೆಯ ರಾಜನಾದ. ಲವ ರಾಮನ ಹಿರಿಯ ಮಗ ಎಂಬ ಜನಪ್ರಿಯ ನಂಬಿಕೆಗೆ ವಿರುದ್ಧವಾಗಿ, ಕುಶ್ ಭಗವಾನ್ ರಾಮನಿಗೆ ಮೊದಲು ಜನಿಸಿದ್ದನು ಮತ್ತು ವಾಲ್ಮೀಕಿ ಮಹರ್ಷಿಗಳು ಸೀತಾಮಾತೆಯ ಸಂಭಾಷಣೆಯಲ್ಲಿ ಉಲ್ಲೇಖಿಸಿದಂತೆ ಕಿರಿಯ ಮಗನಾಗಿರುವ ಹೊರತಾಗಿಯೂ ಅವಳಿ ಜವಳಿ ಮಕ್ಕಳಲ್ಲಿ ಲವ ಸ್ಪುರದ್ರೂಪಿ, ಸುಂದರವಾದ ಮಗು ಎಂಬ ಕಾರಣಕ್ಕೆ ಅವನ ಹೆಸರನ್ನ ಮೊದಲು ನಾಮಕರಣ ಮಾಡಲಾಯಿತು ಎಂದು ಹೇಳುತ್ತಾರೆ.
ಭಗವಾನ್ ರಾಮನು ತನ್ನ ಮಕ್ಕಳು ಸೇರಿದಂತೆ ಯಾರಿಗೂ ಅಯೋಧ್ಯೆಯ ರಾಜ್ಯವನ್ನು ನೀಡಲಿಲ್ಲ. ಶ್ರೀರಾಮ ಇತರ ರಾಜ್ಯಗಳನ್ನು ತನ್ನ ಅಡಿಯಲ್ಲಿ ಎಂಟು ರಾಜ್ಯಗಳಾಗಿ ವಿಂಗಡಿಸಿದನು ಮತ್ತು ರಘುಕುಲದ 6 ರಾಜಕುಮಾರರಿಗೆ ಹಸ್ತಾಂತರಿಸಿದನು, ಆ ಆರು ರಾಜಕುಮಾರರಲ್ಲಿ ಲವ್ ಕುಶ್ ಕೂಡ ಇದ್ದರು.
ಕುಶ ತನ್ನ ತಂದೆ ರಾಮ ಅಥವಾ ತನ್ನ ಪೂರ್ವಜರಿಗಿಂತ ಭಿನ್ನವಾಗಿ, ಅವನು ನಾಗ ಜನಾಂಗದವರೊಂದಿಗೆ ಕದನಕ್ಕಿಳಿಯುತ್ತುದ್ದ, ಆದ್ದರಿಂದ ಆತನನ್ನ ಬುದ್ಧಿವಂತ ರಾಜನೆಂದು ಪರಿಗಣಿಸಲಾಗಲಿಲ್ಲ.
ಯುದ್ಧದಲ್ಲಿ ಸೋಲನ್ನು ಅನುಭವಿಸದ ರಘುವಂಶಿ ಖ್ಯಾತಿಯು ಅವನೊಂದಿಗೆ ಕೊನೆಗೊಂಡಿತು. ಅವನು ತನ್ನ ಜೀವನವನ್ನು ದುರ್ಜಯ ಎಂಬ ಹೆಸರಿನ ರಾಕ್ಷಸನೆದುರು ಕಳೆದುಕೊಂಡನು. ಕುಶ್ ಮರಣದ ನಂತರ, ಅವರ ಮಗ ಅತಿತಿ ಸಿಂಹಾಸನದ ಉತ್ತರಾಧಿಕಾರಿಯಾದನು.
ರಾಮನು ತನ್ನ ಅವತಾರ ಸಮಾಪ್ತಿಗೊಳಿಸಿದ ಬಳಿಕ, ಧರ್ಮಗ್ರಂಥಗಳಲ್ಲಿ ಉಲ್ಲೇಖವಾದ ಮಾತುಗಳ ಪ್ರಕಾರ, ಶ್ರೀರಾಮನು ಈ ಭೂಮಿ ಅಸ್ತಿತ್ವದಲ್ಲಿ ಇರುವವರೆಗೂ ಆಂಜನೇಯ ಚಿರಂಜೀವಿ ಯಾಗಿರುವಂತೆ ವಾಗ್ದಾನ ಮಾಡಿದ ಮತ್ತು ರಾಮಾಯಣವನ್ನು ಪಠಿಸಲಾಯಿತು. ಇಂದಿಗೂ ಸಹ ಆಂಜನೇಯ ಆ ಭರವಸೆಯನ್ನು ಈಡೇರಿಸುತ್ತಾನೆ ಎನ್ನಲಾಗಿದೆ. ಆಂಜನೇಯ ಮಹಾಭಾರತದಲ್ಲಿ ಅನೇಕ ಬಾರಿ ಕಾಣಿಸಿಕೊಳ್ಳುತ್ತಾನೆ. ಅಷ್ಟೇ ಅಲ್ಲ ಕಲಿಯುಗದಲ್ಲೂ ಅನೇಕ ಬಾರಿ ಹನುಮ ಅನೇಕ ಸಂತರಿಗೆ ಹಾಗು ಈಗಲೂ 41 ವರ್ಷಗಳಿಗೊಮ್ಮೆ ಶ್ರೀಲಂಕಾದ ಬುಡಕಟ್ಟು ಜನರಿಗೆ ದರ್ಶನ ನೀಡುತ್ತಾನೆ ಎಂದು ಹೇಳಲಾಗುತ್ತದೆ.
ಇದನ್ನ ಓದಿ:
ಶ್ರೀರಾಮ ಯುಗಾಂತ್ಯವಾಗಿದ್ದು ಹೇಗೆ?
ದೇವನೊಬ್ಬ ನಾಮ ಹಲವು ಎನ್ನುತ್ತೇವೆ. ಆದರೆ ನಾರಾಯಣನ ಅವತಾರವಾದ ಶ್ರೀ ರಾಮನ ಅವತಾರ ಅಂತ್ಯವಾಗಲು, ಜೊತೆಗೆ ಶೇಷನ ಅವತಾರವಾದ ಲಕ್ಷ್ಮಣನ ಅಂತ್ಯವಾಗಲು ರುದ್ರದೇವರು ಅಂದರೆ ಶಿವನು ಕಾರಣ ಎಂದರೇ ಅಚ್ಚರಿ ಪಡಲೇಬೇಕು. ರಾಮನ ಆಳ್ವಿಕೆಯಲ್ಲಿ ರಾಮರಾಜ್ಯ ಅತ್ಯಂತ ಸುಂದರವಾಗಿ ಯಾವುದೇ ತೊಂದರೆಗಳಿಲ್ಲದೇ ಸ್ವರ್ಗದಂತಾಗಿರುತ್ತದೆ.
ಇಂದ್ರನ ಸ್ವರ್ಗಕ್ಕಿಂತ ಮಿಗಿಲಾದ ಲೋಕ ಮತ್ತೊಂದಿಲ್ಲ, ಆದರೇ ರಾಮನ ಆಳ್ವಿಕೆಯ ರಾಮರಾಜ್ಯ ಇಂದ್ರನ ಅಮರಾವತಿಯನ್ನೇ ಮೀರಿಸುವಂತಿತ್ತು. ಎಲ್ಲಾ ಅಷ್ಟವಿಧವಾದ ದೇವಾನು ದೇವತೆಗಳು ತಾವು ಅಮರಾವತಿಯನ್ನು ಬಿಟ್ಟು ರಾಮರಾಜ್ಯಕ್ಕೆ ಹೋಗುತ್ತೇವೆನ್ನುತ್ತಿದ್ದರು. ಎಲ್ಲಾ ದೇವತೆಗಳು ರಾಮನ ಸೇವೆಗೆ ಭೂಲೋಕಕ್ಕೋದರೇ ಸೃಷ್ಟಿಯಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆಂದು ಇಂದ್ರನ ಜೊತೆಗೂಡಿ ಹಲವು ದೇವತೆಗಳು ಬ್ರಹ್ಮನ ಬಳಿಗೆ ಹೋಗಿ ಮನವಿ ಮಾಡಿಕೊಳ್ಳುತ್ತಾರೆ. ಬ್ರಹ್ಮದೇವ ರಾಮರಾಜ್ಯ ನಮ್ಮ ದೇವನಗರಿಯನ್ನೇ ಮೀರಿಸುವಂತಿದ್ದು ಎಲ್ಲಾ ದೇವತೆಗಳು ನಾರಾಯಣನ ಸೇವೆಗೆ ಅಯೋಧ್ಯಾ ಪಟ್ಟಣಕ್ಕೋಗುತ್ತೇವೆ ಎನ್ನುತ್ತಿದ್ದಾರೆ. ಹೀಗಾದರೇ ಸೃಷ್ಟಿಯಲ್ಲಿ ವೈಪರೀತ್ಯಗಳು ಜರುಗಲಿವೆ. ಹಾಗೂ ನೀನು ದೇವತೆಗಳಿಗೆ ಒಪ್ಪಿಸಿರುವ ಕಾರ್ಯಗಳು ತಟಸ್ಥವಾಗುತ್ತವೆ. ಹಾಗಾಗಿ ರಾಮಾವತಾರವನ್ನು ನಾರಾಯಣನು ಕೊನೆಗೊಳಿಸಿ ವೈಕುಂಠಕ್ಕೆ ಬಂದರೇ ದೇವತೆಗಳಿಗೂ ಸಂತೋಷವಾಗುತ್ತದೆ.
ಅದಲ್ಲದೇ ರಾಮಾವಾತರವಾದದ್ದೇ ರಾವಣ-ಕುಂಭಕರ್ಣರ ವಧೆಗೆ. ಅದು ಆಗಿ ಬಹಳ ವರ್ಷಗಳೆ ಕಳೆದಿವೆ. ಹೇಗಾದರೂ ಮಾಡಿ ನೀವು ರಾಮನಿಗೆ ಅವತಾರ ಸಮಾಪ್ತಿ ಮಾಡಲು ತಿಳಿಸಿ ಎಂದಾಗ ಬ್ರಹ್ಮ ಅರೆಕ್ಷಣ ದಿಗ್ಮೂಢನಾಗಿ ಈ ಕೆಲಸ ನನ್ನಿಂದ ಸಾಧ್ಯವಿಲ್ಲವೆಂದು, ಈಶ್ವರನ ಬಳಿ ದೇವತೆಗಳ ಜೊತೆಗೆ ಬಂದ ಬ್ರಹ್ಮ ರಾಮನ ಅವತಾರ ಸಮಾಪ್ತಿಗೊಳಿಸಲು ನೀನೇ ಹೋಗಿ ತಿಳಿಸಲು ಸೂಕ್ತವಾದವನು ಏಕೆಂದರೇ ನಾರಾಯಣ ಬ್ರಹ್ಮನ ತಂದೆ, ಬ್ರಹ್ಮನಿಂದ ಜನಿಸಿದವನು ಶಿವ, ಅಂದರೇ ನಾರಾಯಣನ ಮೊಮ್ಮಗ ಶಿವ.
ಅಜ್ಜಂದಿರೂ ಯಾವಾಗಲೂ ಮೊಮ್ಮಕ್ಕಳ ಮಾತನ್ನು ಕೇಳುತ್ತಾರೆ. ಹಾಗಾಗಿ ರಾಮನ ಬಳಿ ಹೋಗಿ ಭೂಲೋಕದಲ್ಲಿ ರಾಮಾವತಾರದ ಸಕಲ ಕಾರ್ಯಗಳು ಮುಗಿದಿರುವುದರಿಂದ ಅವತಾರ ಸಮಾಪ್ತಿಗೊಳಿಸಲು ತಿಳಿಸೆಂದು ಹೇಳುತ್ತಾರೆ. ಅದರಂತೆ ರಾಮನ ಅರಮನೆಗೆ ಕಾಲನ ರೂಪದಲ್ಲಿ ಬಂದ ಶಿವ, ರಾಮನೊಂದಿಗೆ ಏಕಾಂತದಲ್ಲಿ ಮಾತನಾಡಬೇಕು ಯಾರೂ ಕೂಡ ಮಧ್ಯೆ ತೊಂದರೆಕೊಡಬಾರದೆಂದು ಕೇಳಿದಾಗ ರಾಮ, ಲಕ್ಷ್ಮಣನಿಗೆ ಯಾರೇ ಬಂದರೂ ಒಳಗೆ ಬಿಡಬೇಡ, ಹಾಗೂ ಬಿಟ್ಟರೇ ನಿನಗೆ ಮರಣದಂಡನೆ ನೀಡುತ್ತೇನೆಂದು ಹೇಳುತ್ತಾನೆ.
ಲಕ್ಷ್ಮಣನು ಅಣ್ಣನ ಮಾತಿಗೆ ತಲೆಬಾಗಿ ಹೊರಗೆ ಕಾಯುತ್ತಾ ನಿಂತಿದ್ದಾಗ ಅಲ್ಲಿಗೆ ಬಂದವರೇ ದೂರ್ವಾಸ ಮುನಿ, ರಾಮ, ರಾಮ, ಎಲ್ಲಿ ರಾಮ, ನಾನು ರಾಮನನ್ನ ನೋಡಬೇಕು, ನನ್ನ ಕೋರಿಕೆ ಅವನಿಂದಲೇ ತೀರಬೇಕು ಎನ್ನುತ್ತಾ ಬಂದಾಗ ಲಕ್ಷ್ಮಣ ಅವರನ್ನು ತಡೆದು ಏನೆಂದು ಕೇಳಿದಾಗ ದೂರ್ವಾಸರು ನಿನ್ನಿಂದಾಗದ ಕೆಲಸ ಅದು ಎನ್ನುತ್ತಾರೆ. (ದೂರ್ವಾಸರು ಕೂಡ ರುದ್ರದೇವರ ಅಂಶವೇ) ಆದರೇ ಲಕ್ಷ್ಮಣನ ಒತ್ತಾಯಕ್ಕೆ ಮಣಿದು ನನಗೆ ಹಸಿವಾಗುತ್ತಿದೆ ಊಟ ಬೇಕು, ಆದರೆ ಆ ಊಟ ಈಗಾಗಲೇ ತಯಾರಾಗಿರುವ, ಅಥವಾ ಮುಂದೆ ತಯಾರಾಗುವ ಊಟವಾಗಿರಬಾರದು. ಎಂದಾಗ ಲಕ್ಷ್ಮಣ ವಿಚಲಿತನಾಗುತ್ತಾನೆ. ದೂರ್ವಾಸರು ಮುಂದೆ ಹೋಗಲು ಹೋದಾಗ ಅವರನ್ನ ತಡೆದಾಗ ಕೋಪದಿಂದ ಹಸಿದು ಬಂದವರಿಗೆ ಅನ್ನ ಹಾಕದಂತಾದ ರಾಮನಿಗೆ ಮತ್ತು ಅವನ ರಾಜ್ಯಕ್ಕೆ ಶಾಪ ಕೊಟ್ಟುಬಿಡುತ್ತೇನೆಂದಾಗ ಲಕ್ಷ್ಮಣ ಯೋಚಿಸಿ ಸತ್ತರೇ ಅಣ್ಣನ ಆಜ್ಙೆಯಂತೆ ಸಾಯಲಿ, ಆದರೇ ಈ ದೂರ್ವಾಸರನ್ನೂ ತಡೆದು ರಾಮರಾಜ್ಯ ಶಾಪಕ್ಕೆ ಗುರಿಯಾಗುವುದು ಬೇಡವೆಂದು ಅವರನ್ನು ಒಳಗೆ ಬಿಡುತ್ತಾನೆ.
ಅಷ್ಟರಲ್ಲಿ ಶಿವನು ರಾಮನಲ್ಲಿ ಅವತಾರ ಸಮಾಪ್ತಿ ಮಾಡಲು ಮನವಿ ಮಾಡಿಕೊಂಡಿರುತ್ತಾನೆ. ನಂತರ ದೂರ್ವಾಸರು ಹಸಿವಾಗಿದೆ ಎಂದಾಗ ತನ್ನ ಅಮೃತ ಹಸ್ತದಿಂದ ಮೃಷ್ಟಾನ್ನವನ್ನು ಕೊಟ್ಟು ಹೊರಗೆ ಬಂದು ಲಕ್ಷ್ಮಣ ನೀನು ನನ್ನ ಮಾತನ್ನು ಮೀರಿದ್ದಕ್ಕಾಗಿ ಮರಣದಂಡನೆ ಕೋಡಬೇಕಿತ್ತು ಆದರೇ ನನ್ನ ಅತ್ಯಾಪ್ತನಾಗಿದ್ದ ಕಾರಣ ನಿನಗೆ ಗಡಿಪಾರು ಮಾಡುತ್ತಿದ್ದೇನೆ ಎಂದು ಹೇಳಿದಾಗ ಲಕ್ಷ್ಮಣ ಅಲ್ಲಿಂದ ಹೊರಟು ಸರಾಯು ನದಿಯಲ್ಲಿ ಧ್ಯಾನಾವಸ್ತೆಯಲ್ಲಿಯೇ ಪ್ರಾಣ ತ್ಯಾಗ ಮಾಡುತ್ತಾನೆ. ನಂತರ ರಾಮನು ತನ್ನೊಂದಿಗೆ ಬರಲು ಇಚ್ಚಿಸಿದ ಎಲ್ಲರನ್ನೂ ಕರೆದುಕೊಂಡು ಸರಾಯು ನದಿಯಲ್ಲಿ ಮುಳುಗಿ ಪ್ರಾಣತ್ಯಾಗ ಮಾಡಿ ಎಲ್ಲರಿಗೂ ಮುಕ್ತಿಯನ್ನು ಕೊಡುತ್ತಾನೆ.
ಹೀಗೆ ರಾಮಾವತಾರದ ಸಮಾಪ್ತಿ ಈಶ್ವರನ ಮೂಲಕವಾಗುತ್ತದೆ.