#VIDEO| ‘ನಮ್ಮ ಮೆಟ್ರೋ’ ಮೂರನೆಯ ಸಾಲಿನಲ್ಲಿ ಹಿಂದಿ ಬರಹದ ಮೇಲೆ ಅಂಟಿಸಿದ್ದ ಸ್ಟಿಕರ್ ತೆಗೆದ ವ್ಯಕ್ತಿ: ಯುವಕನಿಂದ ಕ್ಷಮಾಪಣೆ ಕೇಳಿಸಿದ ರೂಪೇಶ್ ರಾಜಣ್ಣ

in Uncategorized 304 views

ಕನ್ನಡಪರ ಹೋರಾಟಗಳಿಂದಲೇ ಗುರುತಿಸಿಕೊಂಡಿದ್ದ ರೂಪೇಶ್‌ ರಾಜಣ್ಣ ಕಿರುತೆರೆಯ ರಿಯಾಲಿಟಿ ಶೋ ಬಿಗ್‌ ಬಾಸ್‌ಗೆ ತೆರಳಿ, ಅಲ್ಲಿಯೂ ಮೋಡಿ ಮಾಡಿದ್ದರು. ಸೀಸನ್‌ 9ರಲ್ಲಿ ಕೊನೆಯವರೆಗೂ ಉಳಿದು ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದರು.

Advertisement

ಇದೀಗ ಸೀಸನ್‌ ಮುಗಿದು ಮನೆಯಿಂದ ಹೊರಬಂದ ಮೇಲೂ ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ. ಹಿಂದಿ ಹೇರಿಕೆ ವಿರುದ್ಧ ಮತ್ತೆ ಸಿಡಿದೆದ್ದಿದ್ದಾರೆ. ರೂಪೇಶ್ ಇದೀಗ ಪರಭಾಷಿಕರ ಮೇಲೆ ಮತ್ತೆ ತಮ್ಮ ಪ್ರಹಾರ ಶುರು ಮಾಡಿದ್ದಾರೆ.

ಇತ್ತೀಚೆಗಷ್ಟೇ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್‌ ಆಗಿತ್ತು. ಉತ್ತರ ಭಾರತದ ಅಕ್ಷಯ್‌ ಗುಪ್ತಾ ಎಂಬ ವ್ಯಕ್ತಿ ನಮ್ಮ ಮೆಟ್ರೊದಲ್ಲಿ ಮೂರನೆಯ ಸಾಲಿನಲ್ಲಿದ್ದ ಹಿಂದಿ ಭಾಷೆಯ ಮೇಲೆ ಅಂಟಿಸಿದ್ದ ಸ್ಟಿಕ್ಕರ್‌ ತೆಗೆದು ಆ ವಿಡಿಯೋವನ್ನು ಶೇರ್‌ ಮಾಡಿದ್ದರು. ಈ ವಿಡಿಯೋ ವೈರಲ್ ಆಗುತ್ತಲೇ ರೂಪೇಶ್ ರಾಜಣ್ಣ & ಟೀಂ ಅಕ್ಷಯ್ ಗುಪ್ತಾ ಆಫೀಸ್ ಗೆ ತೆರಳಿ ತರಾಟೆಗೆ ತೆಗೆದುಕೊಂಡಿದ್ದು ಅಕ್ಷಯ್‌ ಗುಪ್ತಾ ಕ್ಷಮೆ ಯಾಚಿಸಿದ್ದಾರೆ. ನನ್ನಿಂದ ತಪ್ಪಾಯ್ತು ಎಂದು ವಿಡಿಯೋ ಮೂಲಕ ಕನ್ನಡಿಗರಲ್ಲಿ ಕ್ಷಮೆಯನ್ನೂ ಕೋರಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಕನ್ನಡ, ಇಂಗ್ಲಿಷ್‌ ಮತ್ತು ಹಿಂದಿಯ ಭಾಷೆಯ ಸ್ಟಿಕ್ಕರ್‌ ಅಂಟಿಸಲಾಗಿತ್ತು. ಹಿಂದಿ ಹೇರಿಕೆ ಎಂಬ ವಿವಾದ ಸಾಕಷ್ಟು ದಿನಗಳಿಂದ ನಡೆಯುತ್ತಲೇ ಇದೆ, ನಮ್ಮ ಮೆಟ್ರೋ ದಲ್ಲಿನ ಹಿಂದಿ ಬರಹದ ಮೇಲೆ ಸ್ಟಿಕ್ಕರ್‌ ಅಂಟಿಸಲಾಗಿತ್ತು. ಹಾಗೆ ಹಿಂದಿ ಬರಹದ ಮೇಲೆ ಅಂಟಿಸಿದ ಸ್ಟಿಕ್ಕರ್‌ಅನ್ನು ಅಕ್ಷಯ್‌ ಗುಪ್ತಾ ಎಂಬ ವ್ಯಕ್ತಿ ತೆಗೆದಿದ್ದರು. ಹಾಗೆ ತೆಗೆಯುವ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದರು. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದಂತೆ, ಆತನ ವಿಳಾಸ ಪತ್ತೆ ಮಾಡಿ ತಂಡದೊಂದಿಗೆ ತೆರಳಿದ ರೂಪೇಶ್‌ ರಾಜಣ್ಣ, ನೀನು ಮಾಡಿದ್ದು ಸರೀನಾ ತಪ್ಪಾ? ಎಂದು ಹೇಳಿದ್ದಾರೆ. ಬಳಿಕ ಅಕ್ಷಯ್‌ ಗುಪ್ತಾ ವಿಡಿಯೋ ಮೂಲಕ ಕರ್ನಾಟಕದ ಜನತೆಗೆ ಕ್ಷಮಾಪಣೆ ಕೇಳಿದ್ದಾರೆ.

ವೈರಲ್‌ ಆದ ಅಕ್ಷಯ್‌ ಗುಪ್ತಾ ಮಾಡಿದ ವಿಡಿಯೋ

ಈ ವಿಚಾರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ರೂಪೇಶ್‌ ರಾಜಣ್ಣ, “ನಿನ್ನೆ ಮೆಟ್ರೋ ರೈಲಿನಲ್ಲಿ ಹಿಂದಿ ಸ್ಟಿಕ್ಕರ್ ತೆಗೆದು ಹಿಂದಿ ಹೇರಿಕೆ ಸಮರ್ಥನೆ ಮಾಡಿದ್ದ ಅಕ್ಷತ್ ಗುಪ್ತಾ ಅನ್ನೋ ವ್ಯಕ್ತಿಯ ಕಂಪನಿಗೆ ಭೇಟಿ ಕೊಟ್ಟು ಕನ್ನಡಿಗರು ಹಿಂದಿ ಹೇರಿಕೆ ಸಹಿಸೋಲ್ಲ ಅನ್ನೋದನ್ನ ಮನವರಿಕೆ ಮಾಡಲಾಯಿತು. ಆತ ಕ್ಷಮೆ ಕೇಳಿದ್ದಾನೆ.. ಹಿಂದಿ ಹೇರಿಕೆ ಬಗ್ಗೆ ಇಡೀ ಕಂಪನಿ ಉದ್ಯೋಗಿಗಳಿಗೆ ಮನವರಿಕೆ ಮಾಡಿದೆವು” ಎಂದು ರೂಪೇಶ್‌ ಬರೆದುಕೊಂಡಿದ್ದಾರೆ.

ರೂಪೇಶ್‌ ರಾಜಣ್ಣ ಮತ್ತು ಬೆಂಬಲಿಗರಿಂದ ವಾರ್ನಿಂಗ್

ಕ್ಷಮಾಪಣೆ ಕೇಳಿದ ಅಕ್ಷಯ್‌ ಗುಪ್ತಾ

Advertisement
Share this on...