ಪಾಕಿಸ್ತಾನದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಖೈಬರ್ ಪಖ್ತುಂಖ್ವಾ, ಸಿಂಧ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳ ಅನೇಕ ಪ್ರದೇಶಗಳಲ್ಲಿ ಗೋಧಿ ಬಿಕ್ಕಟ್ಟಿನಿಂದಾಗಿ, ಹಿಟ್ಟಿನ ಬೆಲೆ ಗಗನಕ್ಕೇರುತ್ತಿದೆ. ಜನರು ರೊಟ್ಟಿಗಾಗಿ ಕಚ್ಚಾಡುತ್ತಿದ್ದಾರೆ. ಸಬ್ಸಿಡಿ ಹಿಟ್ಟಿಗಾಗಿ ಜನರು ಕಾಲ್ತುಳಿತದಲ್ಲಿ ಸಾಯುತ್ತಿದ್ದಾರೆ. ಹಿಟ್ಟಿನ ಚೀಲ ಪಡೆಯಲು ಪರಸ್ಪರ ಜಗಳವಾಡುತ್ತಿದ್ದಾರೆ. ಅದೇ ಸಮಯದಲ್ಲಿ, ಪಾಕಿಸ್ತಾನದಲ್ಲಿ ಹಿಟ್ಟಿನ ಚೀಲಗಳನ್ನು ರಕ್ಷಿಸಲು ಸೆಕ್ಯುರಿಟಿ ಗಾರ್ಡ್ಗಳು ಎಕೆ 47 ಕೈಯಲ್ಲಿ ಹಿಡಿದು ಟ್ರಕ್ ಮೂಲಕ ಜನರಿಗೆ ಹಿಟ್ಟು ವಿತರಿಸಲು ಕೊಂಡೊಯ್ಯುತ್ತಿದ್ದಾರೆ.
ಅಲ್ಲಿನ ಸಚಿವರೊಬ್ಬರು ಅಲ್ಲಿನ ಜನತೆಗೆ ಚಹಾ ಕುಡಿಯೋದನ್ನ ಕಡಿಮೆ ಮಾಡಿ, ನಾವು ಸಾಲ ಮಾಡಿ ಚಹಾ ಆಮದು ಮಾಡಿಕೊಳ್ಳುತ್ತಿದ್ದೇವೆ ಎಂಬ ವಿಡಿಯೋ ಕೂಡ ವೈರಲ್ ಆಗಿತ್ತು. ಅಷ್ಟೇ ಅಲ್ಲ ದೇಶದಲ್ಲಿ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು ರಾತ್ರಿ 8 ಗಂಟೆಯ ನಂತರ ದೇಶಾದ್ಯಂತ ವಿದ್ಯುತ್ ಆಫ್ ಮಾಡಲಾಗುತ್ತಿದೆ. ದಿನ ಬಳಕೆಯ ವಸ್ತುಗಳು ಗಗನಕ್ಕೇರಿವೆ. ಒಂದು ಗ್ಯಾಸ್ ಸಿಲಿಂಡರ್ ಬೆಲೆ 10 ಸಾವಿರಕ್ಕೆ ತಲುಪಿದೆ. ಪಾಕಿಸ್ತಾನದ ಗತಿ ಭಿಕಾರಿ ರಾಷ್ಟ್ರವಾದಂತಾಗಿದೆ.
ಇದೀಗ ಪಾಕಿಸ್ತಾನಿ ಯುವಕನೊಬ್ಬನ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಆತ, “ಒಂದ್ ಅರ್ಧ ರೊಟ್ಟಿ ಇದೆ, ಇದರ್ ಜೊತೆ ಚಿಪ್ಸ್ ಇದೆ, ನೋಡಿ ಈ ಅರ್ಧ ರೊಟ್ಟಿಯನ್ನ ಈ ರೀತಿ ಚಿಪ್ಸ್ ಜೊತೆ ತಿಂದು ನೀರು ಕುಡಿದುಬಿಡಬೇಕು, ಇಷ್ಟೇ ಆಗಿದೆ ನಮ್ಮ ಪಾಕಿಸ್ತಾನದವರ ಪರಿಸ್ಥಿತಿ” ಎಂದು ಹೇಳುತ್ತಿದ್ದಾನೆ
ವಿಡಿಯೋ ನೋಡಿ
“ಒಂದ್ ಅರ್ಧ ರೊಟ್ಟಿ ಇದೆ, ಇದರ್ ಜೊತೆ ಚಿಪ್ಸ್ ಇದೆ, ನೋಡಿ ಈ ಅರ್ಧ ರೊಟ್ಟಿಯನ್ನ ಈ ರೀತಿ ಚಿಪ್ಸ್ ಜೊತೆ ತಿಂದು ನೀರು ಕುಡಿದುಬಿಡಬೇಕು, ಇಷ್ಟೇ ಆಗಿದೆ ನಮ್ಮ ಪಾಕಿಸ್ತಾನದವರ ಪರಿಸ್ಥಿತಿ”
ಪಾಕಿಸ್ತಾನಿಗಳ ಸ್ಥಿತಿ ಎಲ್ಲಿಗೆ ಬಂದು ನಿಂತಿದೆ ನೋಡಿ, ಇವರಿಗೆ ಕಾಶ್ಮೀರ ಬೇಕಂತೆ😂 pic.twitter.com/USNMrZT0G5
— Nationalist Views (@ntnlstviews) January 31, 2023
ಪಾಕಿಸ್ತಾನದಲ್ಲಿ ಹಿಟ್ಟಿಗಾಗಿ ಮುಂದುವರೆದಿರುವ ಹಾಹಾಕಾರದ ಮಧ್ಯೆ, ಕೆಲವು ವೀಡಿಯೊಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿವೆ. ಒಂದು ವೀಡಿಯೊದಲ್ಲಿ, ಒಬ್ಬ ವ್ಯಕ್ತಿ ಇತರ ಜನರನ್ನು ತೆರೆದ ಚರಂಡಿಗೆ ತಳ್ಳುತ್ತಿರುವುದನ್ನು ಕಾಣಬಹುದು.
ಸರ್ಕಾರದಿಂದ ಹಿಟ್ಟು ಹಂಚುವ ವೇಳೆ ಜನರ ಮಧ್ಯೆ ಈ ಘಟನೆ ನಡೆದಿರುವುದು ವಿಡಿಯೋ ನೋಡಿದರೆ ಗೊತ್ತಾಗಿದೆ. ಅದೇ ಸಮಯದಲ್ಲಿ, ಈ ವ್ಯಕ್ತಿಯು ಹಿಟ್ಟಿಗಾಗಿ ಜನರೊಂದಿಗೆ ಘರ್ಷಣೆಗೆ ಒಳಗಾಗುತ್ತಾನೆ ಮತ್ತು ಇತರರನ್ನು ಮೋರಿಗೆ ತಳ್ಳಲು ಪ್ರಾರಂಭಿಸುತ್ತಾನೆ.
ಅದೇ ರೀತಿ ಇನ್ನೊಂದು ವಿಡಿಯೋದಲ್ಲಿ ಹಿಟ್ಟಿಗಾಗಿ ಹೇಗೆ ಜಗಳವಾಗಿದೆ ಎಂಬುದನ್ನು ನೋಡಬಹುದು. ಅಷ್ಟರಲ್ಲಿ ಒಬ್ಬ ಬಂದು ಹಿಟ್ಟಿನ ಚೀಲಕ್ಕೆ ಇನ್ನೊಬ್ಬನಿಗೆ ಕಚಗುಳಿ ಇಡುತ್ತಾನೆ.
To the Publishers of "Global Hunger Index 2022", you guys have made blunder. You must apologize to the Indians. We can't continue to feed countries that were ranked higher than us for free any longer
People of Pakistan are fighting for Wheat Flour: pic.twitter.com/VBEJUW3NDE
— 🤟🤟 Sharma Ji Ka Ladka🇮🇳 (@MrSharma987) January 12, 2023
ವರದಿಗಳ ಪ್ರಕಾರ, ಪಾಕಿಸ್ತಾನದ ಕರಾಚಿಯಲ್ಲಿ ಒಂದು ಕೆಜಿ ಹಿಟ್ಟು 140-160 ರೂ.ಗೆ ಮಾರಾಟವಾಗುತ್ತಿದೆ. ಇಸ್ಲಾಮಾಬಾದ್ ಮತ್ತು ಪೇಶಾವರದಲ್ಲಿ 10 ಕೆಜಿ ಹಿಟ್ಟು 1,500 ರೂ.ಗೆ ಮಾರಾಟವಾಗುತ್ತಿದ್ದು, 20 ಕೆಜಿ ಹಿಟ್ಟು 2,800 ರೂ.ಗೆ ಮಾರಾಟವಾಗುತ್ತಿದೆ. ಪಂಜಾಬ್ ಪ್ರಾಂತ್ಯದ ಗಿರಣಿ ಮಾಲೀಕರು ಹಿಟ್ಟಿನ ಬೆಲೆಯನ್ನು ಕೆಜಿಗೆ 160 ರೂ.ಗೆ ಹೆಚ್ಚಿಸಿದ್ದಾರೆ. ಅದೇ ರೀತಿ ಖೈಬರ್ ಪಖ್ತುಂಖ್ವಾದಲ್ಲಿ ಜನರು ರೊಟ್ಟಿಗಾಗಿ ಕಚ್ಚಾಡಿತ್ತಿದ್ದಾರೆ. ಇಲ್ಲಿ 20 ಕೆ.ಜಿ ಹಿಟ್ಟು 3100 ರೂ.ಗೆ ಮಾರಾಟ ಮಾಡಲಾಗುತ್ತಿದ್ದು, ಸರಕಾರ ಹಿಟ್ಟಿನ ಬೆಲೆ ನಿಯಂತ್ರಿಸುವಲ್ಲಿ ವಿಫಲವಾಗಿದೆ.
Citizens of near-bankrupt Pakistan fighting over wheat flour
The funniest is one guy trying to snatch a sack from another by tickling his armpits. pic.twitter.com/7pHsRcGIkS
— Surajit Dasgupta (@surajitdasgupta) January 12, 2023
ಬಲೂಚಿಸ್ತಾನದ ಆಹಾರ ಸಚಿವ ಜಮರಕ್ ಅಚಕಜೈ ಪ್ರಕಾರ, ಪ್ರಾಂತ್ಯದಲ್ಲಿ ಗೋಧಿ ದಾಸ್ತಾನು ಸಂಪೂರ್ಣವಾಗಿ ಖಾಲಿಯಾಗಿದೆ. ಬಲೂಚಿಸ್ತಾನಕ್ಕೆ ತುರ್ತಾಗಿ 400,000 ಚೀಲ ಗೋಧಿ ಅಗತ್ಯವಿದೆ, ಇಲ್ಲದಿದ್ದರೆ ಬಿಕ್ಕಟ್ಟು ಇನ್ನಷ್ಟು ಹೆಚ್ಚಾಗಬಹುದು ಎಂದು ಅವರು ಹೇಳಿದರು.
ಮುಂದೆ ಮಾತನಾಡಿದ ಜಮರಕ್ ಅಚಕಜೈ, ನಮಗೆ 2 ಲಕ್ಷ ಚೀಲಗಳ ಬದಲಾಗಿ 10,000 ಚೀಲಗಳ ಗೋಧಿ ಮಾತ್ರ ಸಿಕ್ಕಿದೆ. 6 ಲಕ್ಷ ಚೀಲಗಳನ್ನು ನೀಡುವಂತೆ ಪಂಜಾಬ್ ಮುಖ್ಯಮಂತ್ರಿ ಚೌಧರಿ ಪರ್ವೇಜ್ ಇಲಾಹಿ ಅವರಿಗೆ ಮನವಿ ಮಾಡಿದ್ದೆವು. ಇಲಾಹಿ ಕೂಡ ತಮಗೆ ಗೋಧಿಯನ್ನು ನೀಡುವುದಾಗಿ ಭರವಸೆ ನೀಡಿದ್ದರು, ಆದರೆ ಅವರು ತಮ್ಮ ಭರವಸೆಯನ್ನು ಈಡೇರಿಸಲಿಲ್ಲ ಎಂದಿದ್ದಾರೆ.
ಗೋಧಿ ಆಮದು ಅಂದಾಜನ್ನು ಪತ್ತೆ ಹಚ್ಚುವಲ್ಲಿ ಸರ್ಕಾರ ವಿಫಲವಾಗಿರುವುದೇ ಬಿಕ್ಕಟ್ಟಿಗೆ ಕಾರಣ ಎನ್ನಲಾಗುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಪಾಕಿಸ್ತಾನದಲ್ಲಿ ನಡೆಯುತ್ತಿರುವ ಗೋಧಿ ಬಿಕ್ಕಟ್ಟಿಗೆ ಫೆಡರಲ್ ಮತ್ತು ಪಂಜಾಬ್ ಸರ್ಕಾರಗಳ ನಡುವಿನ ಜಗಳ ಸಮಾನವಾಗಿ ಕಾರಣವಾಗಿದೆ.
ಇದಲ್ಲದೆ, ಪಂಜಾಬ್ ಆಹಾರ ಇಲಾಖೆಯು ಆಮದು ಮಾಡಿಕೊಳ್ಳಬೇಕಾದ ಗೋಧಿಯ ಅಗತ್ಯವನ್ನು ಸರಿಯಾಗಿ ಅಂದಾಜು ಮಾಡಲು ಮತ್ತು ಟಿಪ್ಪಣಿ ಮಾಡಲು ಸಾಧ್ಯವಾಗಲಿಲ್ಲ. ಬಲೂಚಿಸ್ತಾನವು ಗೋಧಿಗಾಗಿ ಪಂಜಾಬ್ ಮತ್ತು ಸಿಂಧ್ನ ಮೇಲೆ ಶೇಕಡಾ 85 ರಷ್ಟು ಅವಲಂಬಿತವಾಗಿದೆ ಎಂದು ಹೇಳಲಾಗುತ್ತದೆ ಮತ್ತು ಎರಡೂ ಪ್ರಾಂತ್ಯಗಳು ಗೋಧಿ ರಫ್ತು ನಿಷೇಧಿಸಿವೆ.
ಈ ಹಿಂದೆ ಪಾಕಿಸ್ತಾನದಲ್ಲಿ ಹಿಟ್ಟಿಗಾಗಿ ನಡೆದ ಕಾಲ್ತುಳಿತದಲ್ಲಿ 7 ಮಕ್ಕಳ ತಂದೆ ಸಾವನ್ನಪ್ಪಿದ್ದರು ಎಂಬುದು ಗಮನಾರ್ಹ. ಕಾಲ್ತುಳಿತದ ನಂತರ ಸಾವಿಗೆ ಸಂಬಂಧಿಸಿದಂತೆ ಭೀಲ್ ಸಮುದಾಯದ ಜನರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಪ್ರತಿಭಟಿಸಿದರು. ಈ ವೇಳೆ ಹಲವು ರಾಜಕೀಯ ಪಕ್ಷಗಳ ಮುಖಂಡರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪಾಕಿಸ್ತಾನದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಖೈಬರ್ ಪಖ್ತುಂಖ್ವಾ, ಸಿಂಧ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳ ಅನೇಕ ಪ್ರದೇಶಗಳಲ್ಲಿ ಗೋಧಿ ಬಿಕ್ಕಟ್ಟಿನಿಂದಾಗಿ, ಹಿಟ್ಟಿನ ಬೆಲೆ ಗಗನಕ್ಕೇರುತ್ತಿದೆ. ಜನರು ರೊಟ್ಟಿಗಾಗಿ ಕಚ್ಚಾಡುತ್ತಿದ್ದಾರೆ. ಸಬ್ಸಿಡಿ ಹಿಟ್ಟಿಗಾಗಿ ಜನರು ಕಾಲ್ತುಳಿತದಲ್ಲಿ ಸಾಯುತ್ತಿದ್ದಾರೆ. ಹಿಟ್ಟಿನ ಚೀಲ ಪಡೆಯಲು ಪರಸ್ಪರ ಜಗಳವಾಡುತ್ತಿದ್ದಾರೆ. ಅದೇ ಸಮಯದಲ್ಲಿ, ಪಾಕಿಸ್ತಾನದಲ್ಲಿ ಹಿಟ್ಟಿನ ಚೀಲಗಳನ್ನು ರಕ್ಷಿಸಲು ಸೆಕ್ಯುರಿಟಿ ಗಾರ್ಡ್ಗಳು ಎಕೆ 47 ಕೈಯಲ್ಲಿ ಹಿಡಿದು ಟ್ರಕ್ ಮೂಲಕ ಜನರಿಗೆ ಹಿಟ್ಟು ವಿತರಿಸಲು ಕೊಂಡೊಯ್ಯುತ್ತಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಸಬ್ಸಿಡಿ ಹಿಟ್ಟು ವಿತರಣೆ ವೇಳೆ ಇಲ್ಲಿ ಅರಾಜಕತೆಯ ವಾತಾವರಣ ಕಂಡು ಬರುತ್ತಿದೆ. ವೈರಲ್ ವಿಡಿಯೋದಲ್ಲಿ, ಜನರು ಗೋಣಿಚೀಲವನ್ನು ಪಡೆಯಲು ಪರಸ್ಪರ ಹೇಗೆ ಜಗಳವಾಡುತ್ತಿದ್ದಾರೆ ಎಂಬುದನ್ನು ನೀವು ನೋಡಬಹುದು. ಕೈಯಲ್ಲಿ ಹಿಟ್ಟಿನ ಮೂಟೆ ಹಿಡಿದಿದ್ದ ವ್ಯಕ್ತಿಯ ಕೈಯಿಂದ ಚೀಲವನ್ನ ಇಬ್ಬರು ಕಿತ್ತುಕೊಂಡು ಹೋಗುತ್ತಿದ್ದಾರೆ. ಈ ವೇಳೆ ಜೋರಾಗಿ ಕೂಗುತ್ತಿದ್ದರೂ ಮೂಟೆಯನ್ನ ಬಿಡುತ್ತಿಲ್ಲ. ಹಿಟ್ಟಿಗಾಗಿ ಘರ್ಷಣೆಯ ಸುದ್ದಿ ಇಲ್ಲಿ ಸರ್ವೇ ಸಾಮಾನ್ಯ ಸಂಗತಿಯಾಗಿಬಿಟ್ಟಿದೆ
ಪಾಕಿಸ್ತಾನದಲ್ಲಿ ಹಿಟ್ಟಿನ ಚೀಲಗಳಿಗಾಗಿ ಜನರು ಕಚ್ಚಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡ ದಲೀಪ್ ಪಂಚೋಲಿ, “ಜನರು ಹಿಟ್ಟಿಗಾಗಿ ತಮ್ಮತಮ್ಮಲ್ಲೇ ಜಗಳವಾಡುತ್ತಿದ್ದರೂ, ಲಿಬರಲ್ ಸೆಕ್ಯುಲರ್ ಇಸ್ಲಾಮಿಕ್ ಗ್ಯಾಂಗ್ ಮತ್ತು ಪಿಡ್ಡಿ ಮಾಧ್ಯಮದ ನೆಚ್ಚಿನ ದೇಶ ಪಾಕಿಸ್ತಾನವು ‘ಹಂಗರ್ ಇಂಡೆಕ್ಸ್’ ನಲ್ಲಿ ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿದೆ… ಮತ್ತು ಕಚ್ಚಾಟದ ಮನರಂಜನೆಯಿಂದಾಗಿ ‘ಹ್ಯಾಪಿನೆಸ್ ಇಂಡೆಕ್ಸ್’ನಲ್ಲೂ” ಎಂದು ಬರೆದಿದ್ದಾರೆ.
भले ही लोग आटे के लिए आपस में लड़ रहे हो लेकिन लिबरल सेक्यूलर इज्लामिस्ट गैंग और पिद्दी मिडिया का चहेता मुल्क पाकिस्तान "हंगर इंडेक्स" में भारत से बेहतर स्थिती में तो है ही… और लड़ने के मनोरंजन की वजह से "हैप्पीनेस इंडेक्स" में भी 😂 pic.twitter.com/QaW5v6b3p8
— दलीप पंचोली 🇮🇳 (@idalippancholi) January 10, 2023
ಎರಡನೇ ವೀಡಿಯೊದಲ್ಲಿ, ಮಿನಿ ಟ್ರಕ್ಗಳು ಮತ್ತು ವ್ಯಾನ್ಗಳಲ್ಲಿ ಹಿಟ್ಟು ಹಂಚುಲು ಸೆಕ್ಯುರಿಟಿ ಗಾರ್ಡ್ಗಳು ಎಕೆ -47 ಗಳನ್ನು ಸಾಗಿಸುತ್ತಿದ್ದಾರೆ. ಹಿಟ್ಟಿನ ಮೂಟೆಗಳನ್ನು ನೋಡಿದ ಜನರು ಟ್ರಕ್ ಸುತ್ತಲೂ ಜಮಾಯಿಸಿದ್ದಾರೆ. ಇದೇ ವೇಳೆ ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿ ತಮ್ಮೊಳಗೆ ಜಗಳವಾಡುತ್ತಿರುವ ಜನರನ್ನು ಶಾಂತರನ್ನಾಗಿಸುತ್ತಿದ್ದಾರೆ.
#Pakistan में आटे की बोरियों के लिए लड़ रहे हैं लोग…देखिए कैसे Pakistan Occupied #Balochistan में आटे की बोरियों की सुरक्षा के लिए तैनात है AK-47… pic.twitter.com/pRdOfR0JEq
— Jyot Jeet (@activistjyot) January 8, 2023