ಒಬ್ಬ ಹುಚ್ಚನಿಂದ OXFORD ಡಿಕ್ಷನರಿ ರಚನೆ, ಬಳಿಕ ಆತ ತನ್ನ ಹುಚ್ಚಿನಿಂದ ಶಿಶ್ನವನ್ನೇ ಕತ್ತರಿಸಿಕೊಂಡಿದ್ದ: Oxford Dictionary ರಚನೆಯ ಹಿಂದಿನ ಕರುಳುಹಿಂಡುವ ಸ್ಟೋರಿ

in Uncategorized 323 views

ಪ್ರತಿ ಪುಸ್ತಕವನ್ನು ಓದುವಾಗ, ಪ್ರತಿಯೊಂದು ಅಜ್ಞಾತ ಪದದ ಅರ್ಥವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಆಗ ಮಾತ್ರ ಪುಸ್ತಕ ಓದುವುದರಿಂದ ನಮಗೆ ಸಂಪೂರ್ಣ ಜ್ಞಾನ ಸಿಗುತ್ತದೆ. ‘ಅಮ್ಮ’ ಎಂಬ ಪದವೇ ಇರಲಿ. ‘ಅಮ್ಮ’ ಎಂದರೇನು ಎಂದು ನಮಗೆ ಚೆನ್ನಾಗಿ ತಿಳಿದಿದೆ. ಅಮ್ಮಾ, ಮಮ್ಮಿ, ಮೈಯಾ, ಮಾತಾ ಎಂದು ಬರೆದರೂ ನಮಗೆ ಅರ್ಥವಾಗುತ್ತದೆ.

ಬಾಲ್ಯದಿಂದಲೂ ಈ ಪದ ಗೊತ್ತಿದೆ. ಆದರೆ ಎಲ್ಲೋ ‘ಜನನಿ’ ಎಂದು ಬರೆದಿರಬಹುದು, ಆಗ ಬಹುಶಃ ನಮ್ಮಲ್ಲಿ ಕೆಲವರಿಗೆ ಅದರ ಅರ್ಥ ತಿಳಿದಿರುವುದಿಲ್ಲ. ನಂತರ ನಾವು ಡಿಕ್ಷನರಿಯಲ್ಲಿ ‘ಜನನಿ’ ಪದವನ್ನು ಹುಡುಕುತ್ತೇವೆ. ಅಲ್ಲಿ – ಜನ್ಮ ನೀಡುವವಳು, ತಾಯಿ, ಅಮ್ಮ ಎಂದು ಅದಕ್ಕೆ ನಮಗೆ ಉತ್ತರ ಸಿಗುತ್ತದೆ. ಇದನ್ನು ನಿಘಂಟು ಅಂದರೆ ಇಂಗ್ಲಿಷ್‌ನಲ್ಲಿ ನಾವು ‘ಡಿಕ್ಷನರಿ’ ಎಂದು ಕರೆಯುತ್ತೇವೆ.

Advertisement

ಅತ್ಯಂತ ಜನಪ್ರಿಯ ಡಿಕ್ಷನರಿ ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟು (Oxford English Dictionary). ನಮಗೆ ಯಾವುದೇ ಪದದ ಅರ್ಥ ಗೊತ್ತಾಗದಿದ್ದಾಗ, ನಾವು ಅದರ ಸಹಾಯವನ್ನು ತೆಗೆದುಕೊಂಡು ಆ ಪದದ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆಯುತ್ತೇವೆ. ಡಿಕ್ಷನರಿಯಲ್ಲಿನ ಪ್ರತಿ ಪದದ ನಂತರ, ಆ ಪದವು ನಾಮಪದ ಅಥವಾ ಸರ್ವನಾಮ ಅಥವಾ ಕ್ರಿಯಾಪದವೇ ಎಂದು ತಿಳಿಸುತ್ತದೆ.

ಈ ಮಾಹಿತಿಯ ನಂತರ ಅದರ ಅರ್ಥವನ್ನು ಬರೆಯಲಾಗುತ್ತದೆ. ಪದದ ಅರ್ಥವನ್ನು ವಿವರಿಸಲು, ಅದರ ವ್ಯಾಖ್ಯಾನವೂ ಅದರಲ್ಲಿ ಇರುತ್ತದೆ. ಕೆಲವೊಮ್ಮೆ ಆ ಪದವು ಅದು ನಮ್ಮದೇ ಭಾಷೆಯ ಪದವೋ ಅಥವಾ ಬೇರೆ ಭಾಷೆಯಿಂದ ಬಂದಿದೆಯೋ ಅದು ಹೇಗೆ ರೂಪುಗೊಂಡಿತು ಎಂದು ಸಹ ಅದರಲ್ಲಿ ಬರೆದಿರಲಾಗುತ್ತದೆ.

ಆಕ್ಸ್‌ಫರ್ಡ್ ಡಿಕ್ಷನರಿಯ ಮೊದಲ ವಾಲ್ಯೂಮ್‌ ಫೆಬ್ರವರಿ 1, 1884 ರಂದು ಪಬ್ಲಿಶ್ ಮಾಡಲಾಗಿತ್ತು. ಆಕ್ಸ್‌ಫರ್ಡ್ ಡಿಕ್ಷನರಿಗಳ ಮೊದಲ ಆವೃತ್ತಿಯನ್ನು ಕಂಪೈಲ್ ಮಾಡಲು ಸುಮಾರು 70 ವರ್ಷಗಳನ್ನು ತೆಗೆದುಕೊಂಡಿತ್ತು ಮತ್ತು ಆ ವರ್ಷಗಳು ಇಬ್ಬರು ವ್ಯಕ್ತಿಗಳ ನಡುವೆ ಬಹಳಷ್ಟು ಸಾಮ್ಯತೆಗಳು ಕಂಡುಬಂದಿದ್ದವು. ನೋಟದಲ್ಲಿ ಅವರು ಒಂದೇ ರೀತಿಯಾಗಿದ್ದರೂ, ಅವರ ಜೀವನ ಮಾತ್ರ ಪರಸ್ಪರ ಭಿನ್ನವಾಗಿತ್ತು.

ಈ ಎರಡು ಹೆಸರುಗಳು ಸರ್ ಜೇಮ್ಸ್ ಅಗಸ್ಟಸ್ ಹೆನ್ರಿ ಮುರ್ರೆ (Sir James Augustus Henry Murray) ಮತ್ತು ಡಾ. ವಿಲಿಯಂ ಚೆಸ್ಟರ್ ಮೈನರ್ (Dr. William Chester Minor). ಈ ಇಬ್ಬರ ಕಥೆಯು ಆಕ್ಸ್‌ಫರ್ಡ್ ಡಿಕ್ಷನರಿಗಳ ಇತಿಹಾಸದಲ್ಲಿ ಸಾಕಷ್ಟು ಆಸಕ್ತಿದಾಯಕ ಮತ್ತು ಕುತೂಹಲಕಾರಿಯಾಗಿದೆ. ಆಕ್ಸ್‌ಫರ್ಡ್‌ನ ಇತಿಹಾಸವು ಸ್ಕಾಲರ್ಶಿಪ್, ಹಿಂಸೆ, ಹುಚ್ಚುತನ, ಬಡತನ ಮತ್ತು ಪದಗಳಿಗೆ ಸಮರ್ಪಣೆಯ ಪ್ರಬಲ ಕಥೆಯನ್ನು ಬಹಿರಂಗಪಡಿಸುತ್ತದೆ.

ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಷನರಿ (OED) ಯಲ್ಲಿ ಪದದ ಪ್ರತಿಯೊಂದು ರೂಪವನ್ನು ಸುಸಜ್ಜಿತವಾಗಿ ಮತ್ತು ಜೋಡಿಸಿರುವ ರೀತಿಯನ್ನು ನೋಡಿದರೆ, ಹುಚ್ಚನೊಬ್ಬ ಅದರ ಸಿದ್ಧತೆಗೆ ಗಣನೀಯ ಕೊಡುಗೆ ನೀಡಿರಬಹುದೆಂದು ಯಾರಾದರೂ ಊಹಿಸಬಹುದೇ?! ಸರ್ ಜೇಮ್ಸ್ ಅಗಸ್ಟಸ್ ಹೆನ್ರಿ ಮುರ್ರೆ ಆಕ್ಸ್‌ಫರ್ಡ್ ನಿಘಂಟಿನ ಲೇಖಕರಾಗಿದ್ದರೂ, ಅದರ ಅತ್ಯಂತ ಗಮನಾರ್ಹ ಮತ್ತು ಸುಪ್ರಸಿದ್ಧ ಕೊಡುಗೆ ನೀಡಿದವರು ಡಾ. ವಿಲಿಯಂ ಚೆಸ್ಟರ್ ಮೈನರ್ ಎಂಬ ಅಮೇರಿಕನ್ ಶಸ್ತ್ರಚಿಕಿತ್ಸಕ. ಅವರು ಆಕ್ಸ್‌ಫರ್ಡ್ ನಿಘಂಟಿಗೆ 10,000 ಕ್ಕೂ ಹೆಚ್ಚು ಪದಗಳನ್ನು ನೀಡಿದ್ದಾರೆ.

Dr. William Chester Minor, American army surgeon, had worked as a surgeon during the American Civil War and his experiences on the battlefield led to paranoid delusions and an unstable mind.

ಅಮೆರಿಕದ ಅಂತರ್ಯುದ್ಧದಲ್ಲಿ ಹೋರಾಡುವ ಸೈನ್ಯದಲ್ಲಿ ಡಾ. ವಿಲಿಯಂ ಚೆಸ್ಟರ್ ಮೈನರ್ ಶಸ್ತ್ರಚಿಕಿತ್ಸಕರಾಗಿದ್ದರು. ಆದರೆ ಸೇನೆಯಲ್ಲಿದ್ದಾಗ ಐರಿಷ್ ಸೈನಿಕನ ಮುಖದ ಮೇಲೆ ‘Desert’ ನ್ನ ಶಾರ್ಟ್‌ಫಾರ್ಮ್ ನಲ್ಲಿ ‘D’ ಅಕ್ಷರದಿಂದ ಸುಡಬೇಕಾಯಿತು. ಈ ಘಟನೆಯು ಅವರನ್ನು ತುಂಬಾ ಪ್ರಭಾವಿತಗೊಳಿಸಿತು. ಯುದ್ಧದ ಅಂತ್ಯದ ನಂತರ ಅವರು ಅದರಿಂದ ಚೇತರಿಸಿಕೊಳ್ಳಲು ಲಂಡನ್‌ಗೆ ತೆರಳಿದರು, ಆದರೆ ಅಲ್ಲಿ ಅವರ ಅದೃಷ್ಟ ಅವರನ್ನು ಹುಚ್ಚಾಸ್ಪತ್ರೆಗೆ ಕಳಿಸಿತು. ವಾಸ್ತವವಾಗಿ, ಇಲ್ಲಿ ಅವರು ನಡೆದುಕೊಂಡು ಹೋಗುವಾಗ ದಾರಿಹೋಕನ ಮೇಲೆ ಗುಂಡು ಹಾರಿಸಿದರು. ನಂತರ ನ್ಯಾಯಾಲಯವು ಮಾನಸಿಕವಾಗಿ ಕುಗ್ಗಿರುವ ಅವರನ್ನು ಶಿಕ್ಷಿಸದೆ ಹುಚ್ಚಾಸ್ಪತ್ರೆಯಲ್ಲಿ ಇರಿಸಲು ಆದೇಶಿಸಿತು.

ಇಲ್ಲಿಯೇ ಮೈನರ್ ಮುರ್ರೆ ನೀಡಿದ ಜಾಹೀರಾತನ್ನು ಅವರು ನೋಡಿದರು. ಇದಾದ ನಂತರ ಅವರು ಪುಸ್ತಕಗಳನ್ನು ಆರ್ಡರ್ ಮಾಡಿದರು ಮತ್ತು ಸಾವಿರಾರು ಪದಗಳ ಸಂಪೂರ್ಣ ವಿವರಣೆಯನ್ನು ಬರೆದು ಮುರ್ರೆಗೆ ಕಳುಹಿಸಲು ಪ್ರಾರಂಭಿಸಿದರು. ಪ್ರತಿ ಪುಸ್ತಕವನ್ನು ಓದಿದ ನಂತರ ಅವರ ಮನಸ್ಸಿನಲ್ಲಿ ಒಂದು quotation ಬರುತ್ತಿತ್ತು. ಅದನ್ನ ಮೈನರ್ ಒಂದು ಪೇಪರ್ ನ ಮೇಲೆ ನೋಟ್ ಮಾಡಿಕೊಂಡು ಅದನ್ನ alphabetical order ನಲ್ಲಿ ಜೋಡಿಸುತ್ತಿದ್ದ‌. ಈ ತರಹದ ನೋಟ್ ಗಳನ್ನ ಮೈನರ್ 20 ವರ್ಷಗಳವರೆಗೆ ಪ್ರತಿ ವಾರ ಜೇಮ್ಸ್ ಮುರ್ರೆಗೆ ಕಳುಹಿಸುತ್ತಲೇ ಇದ್ದನು.

ಏತನ್ಮಧ್ಯೆ, ಮೈನರ್ ಮಾನಸಿಕ ಸ್ಥಿತಿ ಸರಿಯಿಲ್ಲ ಅಥವ ಆತನೊಬ್ಬ ಹುಚ್ಚ ಹಾಗು ಆತ ಡಿಟೆನ್ಶನ್ ಸೆಂಟರ್ ನಲ್ಲಿದ್ದಾನೆ ಎಂಬುದು ಮುರ್ರೆಗೆ ಗೊತ್ತೇ ಇರಲಿಲ್ಲ. 1891 ರಲ್ಲಿ ಮುರ್ರೆ ಡಿಟೆನ್ಶನ್ ಸೆಂಟರ್ ನಲ್ಲಿ ಮೈನರ್‌ನನ್ನು ಭೇಟಿಯಾದಾಗ, ಮೈನರ್‌ನ ಕೊಡುಗೆಗಳಿಲ್ಲದಿದ್ದರೆ, ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿನಲ್ಲಿ ನಾಲ್ಕು ಶತಮಾನಗಳಿಗಿಂತ ಹೆಚ್ಚು ಪದ-ಉತ್ಪತ್ತಿಗಳು ಅದರ ಪಟ್ಟಿಯಿಂದ ಕಾಣೆಯಾಗಿರುತ್ತಿದ್ದವು ಎಂದು ಅವನು ಅರಿತುಕೊಂಡನು.

ಮೈನರ್ ನೀಡಿದ ಬಹುತೇಕ ಪದಗಳು ಆತನ ಓದುವ ಕ್ರೇಜ್‌ನಿಂದ ಬಂದಿದ್ದವು. ರಾಜಕೀಯ ತತ್ತ್ವಶಾಸ್ತ್ರದ ಪುಸ್ತಕಗಳಿಂದ ಅವರು ‘countenance’ ನಂತಹ ಪದಗಳನ್ನು ಉತ್ಪತ್ತಿ ಮಾಡಿದರು, ಅದನ್ನು ನಾವು ಇಂದು ಎಗ್ಗಿಲ್ಲದೆ ಬಳಸುತ್ತೇವೆ. ಪ್ರವಾಸ ಸಾಹಿತ್ಯವನ್ನು ಓದುವುದರಿಂದ, ವಿಶೇಷವಾಗಿ ಭಾರತದ ಬಗ್ಗೆ, ಅವರು ಆಕ್ಸ್‌ಫರ್ಡ್ ನಿಘಂಟುಗಳಿಗೆ ‘guz (ಗಝ್)’ ಎಂಬ ಪದವನ್ನು ನೀಡಿದರು, ಇದು ಮೂಲತಃ ಭಾರತದಲ್ಲಿ ಉದ್ದವನ್ನ ಅಳೆಯುವ ಮಾಪನವಾಗಿತ್ತು.

ಮೈನರ್‌ನ ಉತ್ತಮ ನಡತೆಯ ಹೊರತಾಗಿಯೂ, ಅಧಿಕಾರಿಗಳು ಮೈನರ್‌ನನ್ನು ಬ್ರಾಡ್‌ಮೂರ್‌ನಿಂದ ಹೊರಗೆ ಬಿಡಲು ನಿರಾಕರಿಸಿದರು. 1800 ರ ದಶಕದಲ್ಲಿ ಜೇಮ್ಸ್ ಮುರ್ರೆ ಸರ್ಕಾರಕ್ಕೆ ಡಜನ್ಗಟ್ಟಲೆ ಪತ್ರಗಳನ್ನು ಕಳುಹಿಸಿದನು ಮತ್ತು ಮೈನರ್‌ನನ್ನ ಬಿಡಲು ಪ್ರಮುಖ ಕಾನೂನು ಜಾರಿ ಅಧಿಕಾರಿಗಳಿಗೆ ವೈಯಕ್ತಿಕವಾಗಿ ಮನವಿ ಮಾಡಿದನು.

1900 ರ ದಶಕದ ಆರಂಭದಲ್ಲಿ, ಮೈನರ್ ಆರೋಗ್ಯ ಸ್ಥಿತಿಯು ಹದಗೆಟ್ಟಿತು. ಆತನಿಗೆ ದುಸ್ವಪ್ನಗಳು ಕಾಣಲಾರಂಭಿಸಿದನು. ಅವನು ತನ್ನ ಜೀವನದ ಹಳೆಯ ದೃಶ್ಯಗಳನ್ನು ನೆನಪಿಸಿಕೊಳ್ಳಲು ಪ್ರಾರಂಭಿಸಿದನು, ಅದು ಅವನನ್ನು ವಿಚಲಿತಗೊಳಿಸಿದವು. ಅವನು ತನ್ನನ್ನು ತಾನೇ ದ್ವೇಷಿಸಲು ಪ್ರಾರಂಭಿಸಿದನು ಮತ್ತು ನಂತರ ಅವನು ತನ್ನ ಶಿಶ್ನವನ್ನು ಕತ್ತರಿಸುವ ಮೂಲಕ  ಗಾಯ ಮಾಡಿಕೊಂಡನು. 1910 ರಲ್ಲಿ ವಿನ್‌ಸ್ಟನ್ ಚರ್ಚಿಲ್ ಎಂಬ ಯುವಕ ಗೃಹ ಕಾರ್ಯದರ್ಶಿಯ ಬಳಿ ಹೋದಾಗ ಮುರ್ರೆಯ ಮನವಿಗಳು ಕಾರ್ಯರೂಪಕ್ಕೆ ಬಂದವು. ಮೈನರ್ ನಂತರ ಬಿಡುಗಡೆಯಾದರು ಮತ್ತು 1922 ರಲ್ಲಿ ಅವರ ಮನೆಯಲ್ಲೇ ನಿಧನರಾದರು.

ಆಕ್ಸ್‌ಫರ್ಡ್ ಡಿಕ್ಷನರಿಯ ಹಿಂದಿನ ಈ ಕುತೂಹಲಕಾರಿ ಕಥೆಯನ್ನು ಬ್ರಿಟಿಷ್ ಲೇಖಕ ಸೈಮನ್ ವಿಂಚೆಸ್ಟರ್ (Simon Winchester) ಬರೆದ The Surgeon of Crowthorne: A Tale of Murder, Madness and the Love of Words ಪುಸ್ತಕದಲ್ಲಿ ಪ್ರಕಟಿಸಲಾಗಿದೆ. ಈ ಕಾಲ್ಪನಿಕವಲ್ಲದ ಇತಿಹಾಸ ಪುಸ್ತಕವನ್ನು ಮೊದಲು ಇಂಗ್ಲೆಂಡ್‌ನಲ್ಲಿ 1998 ರಲ್ಲಿ ಪ್ರಕಟಿಸಲಾಯಿತು. ನಂತರ ಇದನ್ನು ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ The Professor and the Madman: A Tale of Murder, Insanity, and the Making of the Oxford English Dictionary ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಲಾಯಿತು.

ಈಗ ನಮ್ಮ ಮನೆಗಳಲ್ಲಿ ಮತ್ತು ಇಂಟರ್ನೆಟ್ ನಲ್ಲಿ ಸಾಮಾನ್ಯವಾಗಿ ಕಂಡುಬರುವ ಆಕ್ಸ್‌ಫರ್ಡ್ ಇಂಗ್ಲಿಷ್ ಡಿಕ್ಷನರಿಯ ಪೇಜ್ ಗಳನ್ನ ತಿರುಗಿಸಿದಾಗ, ಇತಿಹಾಸದ ವಿವಿಧ ಎಳೆಗಳನ್ನು ಒಟ್ಟಿಗೆ ಜೋಡಿಸಿದಂತೆ ಕಾಣುವುದಿಲ್ಲ. ಮತ್ತು ಈ ಪುಟಗಳ ಮಧ್ಯದಲ್ಲಿ ಎಲ್ಲೋ ಇನ್ನೂ ಈ ಇಬ್ಬರು ಗಮನಾರ್ಹ ಪುರುಷರ ಪ್ರತಿಧ್ವನಿಗಳು ಪ್ರತಿಧ್ವನಿಸುತ್ತವೆ ಅವು ಒಬ್ಬ ಪ್ರಾಧ್ಯಾಪಕ ಮತ್ತೊಬ್ಬ ಹುಚ್ಚನದ್ದು.

– Vinod Hindu Nationalist

Advertisement
Share this on...