ಬೈಬಲ್ ಓಪನ್ ಯೂನಿವರ್ಸಿಟಿ ಇಂಟರ್ನ್ಯಾಷನಲ್ (BOUI) ಉಪ ನಿರ್ದೇಶಕ (Deputy Director) ಪಾಸ್ಟರ್ ಉಪೇಂದ್ರ ವೈರಲ್ ವಿಡಿಯೋದಲ್ಲಿ “ನಮ್ಮ ಪ್ರೀತಿಯ ನಾಯಕ ಶ್ರೀ ಪಿಡಿ ಸುಂದರ ರಾವ್ ಅವರ ನೇತೃತ್ವದಲ್ಲಿ, ನಾವು ಅಖಿಲ ಭಾರತ ಟ್ರೂ ಕ್ರಿಶ್ಚಿಯನ್ ಕೌನ್ಸಿಲ್ (All India True Christian Council) ಪರವಾಗಿ ಭಾರತವನ್ನು ಎರಡು ಭಾಗಗಳನ್ನಾಗಿ ವಿಭಜಿಸಬೇಕು ಮತ್ತು ಒಂದು ಭಾಗವನ್ನು ಕ್ರಿಶ್ಚಿಯನ್ನರಿಗೆ ಪ್ರತ್ಯೇಕ ದೇಶವಾಗಿ ನೀಡಬೇಕು” ಎಂದು ಹೇಳುತ್ತಿರುವುದನ್ನ ನೀವು ಕೇಳಬಹುದು.
ಈ ಶಾಕಿಂಗ್ ವಿಡಿಯೋವನ್ನು SC ST Rights Forum, ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಎಸ್ಸಿ/ಎಸ್ಟಿಗಳ ಹಕ್ಕುಗಳನ್ನು ರಕ್ಷಿಸಲು ಕೆಲಸ ಮಾಡುವ ವಕೀಲರ ಗುಂಪೊಂದು ಪೋಸ್ಟ್ ಮಾಡಿದೆ. “ಹಾಗೆ ಮಾಡಿದರೆ ಆಗ ನಾವು ನಿಮಗೆ ತೊಂದರೆ ಕೊಡುವುದಿಲ್ಲ” ಎಂದು ಪಾದ್ರಿ ಹೇಳುತ್ತಿದ್ದಾನೆ. ಈ ವೀಡಿಯೊವನ್ನು ಆಗಸ್ಟ್ 24 ರಂದು ಶೇರ್ ಮಾಡಲಾಗಿದೆ.
"Under the leadership of our beloved leader Mr PD Sundara Rao, we, on behalf of All India True Christian Council demand that India should be split into 2 and 1 half given to Christians as a separate country. We'll not bother you":
-K Upendra, Bible Open University International pic.twitter.com/BzVHtGkbnoAdvertisement— SC ST RIGHTS FORUM (@SCSTForum) August 24, 2021
ವರದಿಗಳ ಪ್ರಕಾರ ಪಾಸ್ಟರ್ ಕೆ. ಉಪೇಂದ್ರ ರಾವ್ ತೆಲಂಗಾಣ ಮತ್ತು ಮಹಾರಾಷ್ಟ್ರದ ಆಲ್ ಇಂಡಿಯಾ ಟ್ರೂ ಕ್ರಿಶ್ಚಿಯನ್ ಕೌನ್ಸಿಲ್ ನ ರಾಜ್ಯಾಧ್ಯಕ್ಷನೂ ಆಗಿದ್ದಾನೆ ಎಂದು ಹೇಳಲಾಗುತ್ತಿದೆ.
AITCC ಯ ಫೇಸ್ಬುಕ್ ಪುಟವು 2019 ರಿಂದ ಅಷ್ಟೇನು ಆ್ಯಕ್ಟಿವ್ ಆಗಿಲ್ಲದಿದ್ದರೂ, ಅದರ ಸಾಮಾಜಿಕ ಮಾಧ್ಯಮ ಪುಟದಲ್ಲಿನ ಕೆಲವು ಪೋಸ್ಟ್ಗಳು “ದೇವರ ಸೇವಕರಿಗೆ” ಬೈಕ್ಗಳನ್ನು ನೀಡುವುದು ಸೇರಿದಂತೆ ಸಂಸ್ಥೆಯು ನಡೆಸಿರುವ ವಿವಿಧ ದೇಣಿಗೆಯ ಕುರಿತು ಅದರಲ್ಲಿ ಪೋಸ್ಟ್ ಮಾಡಲಾಗಿದೆ.
ಮತಾಂತರ ಮತ್ತು evangelism ಭಾರತದ ಹಲವಾರು ಭಾಗಗಳಲ್ಲಿ ಸುಸಂಘಟಿತ ಉದ್ಯಮವಾಗಿ ಸ್ಥಾಪಿಸಲಾಗಿದೆ. ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣದಂತಹ ರಾಜ್ಯಗಳು ಮಿಷನರಿಗಳು ಕ್ರೈಸ್ತ ಮತಕ್ಕೆ ಜನರನ್ನು ಸೆಳೆಯಲು ಬಹು ತಂತ್ರಗಳನ್ನು ಬಳಸುವುದರ ಮೂಲಕ ಮತಾಂತರವನ್ನು ಉತ್ತೇಜಿಸುತ್ತಿದೆ.
ಅನಾಥರು ಎಂದು ಹೇಳಿಕೊಂಡು ಹಣವನ್ನು ಸಂಗ್ರಹಿಸಲು ಹಳ್ಳಿಯೊಂದರ ಕುಟುಂಬಗಳ ಮಕ್ಕಳ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಿದ ಮೂವರು ಪಾಸ್ಟರ್ ಗಳ ವಿರುದ್ಧ ಆಂಧ್ರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ನಾವು ಈ ಹಿಂದೆಯೂ ವರದಿ ಮಾಡಿದ್ದೇವೆ.
ಕಳೆದ ತಿಂಗಳು ಕೃಷ್ಣಾ ಜಿಲ್ಲೆಯ ತುಕ್ಕುಲೂರು ಗ್ರಾಮಸ್ಥರು ಈ ಹಗರಣವನ್ನ ಅನ್ನು ಪತ್ತೆ ಹಚ್ಚಿದ್ದರು. ಒಬ್ಬ ಪಾಸ್ಟರ್ನ್ನ ಬಂಧಿಸಲಾಗಿದ್ದರೆ, ಇನ್ನಿಬ್ಬರು ಪರಾರಿಯಾಗಿದ್ದಾರೆ.
ಇದನ್ನೂ ಓದಿ:
“ನಾನೊಬ್ಬ ದಲಿತ ಕ್ರಿಶ್ಚಿಯನ್, ಕನ್ವರ್ಟ್ ಆಗಿಲ್ಲಾಂದಿದ್ರೆ ಈ ಬ್ರಾಹ್ಮಣರ ಮೇಲೆ SC/ST ಆ್ಯಕ್ಟ್ ನಲ್ಲಿ ಕೇಸ್ ಹಾಕಿ ಒಳಗ್ ಹಾಕಸ್ತಿದ್ದೆ”: ಶಾಲಿನ್ ಮರಿಯಾ
ಎಡಪಂಥೀಯ ಪೋರ್ಟಲ್ ‘ದಿ ಕ್ವಿಂಟ್’ ನಲ್ಲಿ ಲೇಖನ ಬರೆಯುವ ಆ್ಯಕ್ಟಿವಿಸ್ಟ್ ಶಾಲಿನ್ ಮರಿಯಾ ಲಾರೆನ್ಸ್ ಸುಳ್ಳು ಸುದ್ದಿಗಳನ್ನು ಹಬ್ಬಿಸುವಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ್ದಾಳೆ, ಆಕೆ ಟ್ವಿಟರ್ನಲ್ಲಿ ವಿವಾದಾತ್ಮಕ ಪೋಸ್ಟ್ ಒಂದನ್ನ ಮಾಡಿದ್ದಾಳೆ. ಈಕೆ ಬ್ರಾಹ್ಮಣರನ್ನು ಗೇಲಿ ಮಾಡುತ್ತಾ, “ಒಬ್ಬ ಬ್ರಾಹ್ಮಣ ನೆರೆಹೊರೆಯಾತ ನನ್ನ ಮನೆಯಲ್ಲಿರುವ ವೈಫೈ ಕನೆಕ್ಷನ್ನ್ನ ಹಾಳು ಮಾಡಿದ. ಆತ ವೈಫೈ ಕೇಬಲ್ನೊಂದಿಗೆ ಟಿಂಕರ್ ಮಾಡಲು ಪ್ರಾರಂಭಿಸಿದ, ಇದರಿಂದಾಗಿ ನನ್ನ ವೈಫೈ ಕೆಲಸ ಮಾಡುವುದನ್ನು ನಿಲ್ಲಿಸಿತು. ಅವರು ಏರ್ಟೆಲ್ ಇಂಡಿಯಾಗೆ ಕರೆ ಮಾಡಿದರು ಮತ್ತು ನನ್ನ ದೂರಿನ ನಂತರ ಅದನ್ನು ಸರಿಪಡಿಸಲು ಬಾಕ್ಸ್ ಅನ್ನು ಬದಲಾಯಿಸುವಂತೆ ಹೇಳಿದರು” ಎಂದು ಟ್ವೀಟ್ ಮಾಡಿದ್ದಾಳೆ.
Journalist with @TheQuint pic.twitter.com/IaPSzKl3RR
— iMac_too (@iMac_too) October 3, 2022
"messing with the cables stopped working wifi"..
I could not resolve the above sentence. WiFi = Wireless network protocol.
WiFi = "WIRELESS"
— スーパータンク supertank सुपरटैंक (@Smtank2) October 3, 2022
ಇದಾದ ಬಳಿಕ ಮರಿಯಾ ಲಾರೆನ್ಸ್ ಮತ್ತೊಂದು ಟ್ವೀಟ್ ಮಾಡಿದ್ದಾಳೆ. ತನ್ನ ಎರಡನೇ ಟ್ವೀಟ್ನಲ್ಲಿ, “ಇದು ಸ್ಪಷ್ಟ ಉಲ್ಲಂಘನೆಯಾಗಿದೆ. ಅವರು ನನ್ನ ವಿರುದ್ಧ ಹಲವಾರು ವರ್ಷಗಳಿಂದ ಮಾಡಿರುವ ಕೆಲಸಗಳಿಂದಾಗಿ ಎಸ್ಸಿ/ಎಸ್ಟಿ ಪ್ರಕರಣವನ್ನು ನಾನು ಅವರ ವಿರುದ್ಧ ದಾಖಲಿಸಬಹುದು. ಆದರೆ ನನಗೆ ಸಾಧ್ಯವಿಲ್ಲ, ಏಕೆಂದರೆ ನಾನು ಕ್ರಿಶ್ಚಿಯನ್ ದಲಿತ. ನಾನು SC/ST POA ಅಡಿಯಲ್ಲಿ ಬರುವುದಿಲ್ಲ” ಎಂದು ಬರೆದುಕೊಂಡಿದ್ದಾಳೆ
‘ದಿ ಕ್ವಿಂಟ್’ ನಲ್ಲಿ ಅಂಕಣಗಳನ್ನ ಬರೆಯವ ಪತ್ರಕರ್ತೆ ತನ್ನ ಟ್ವೀಟ್ ವೈರಲ್ ಆದ ನಂತರ ಅದನ್ನು ಡಿಲೀಟ್ ಮಾಡಿದ್ದಾಳೆ. ಆದರೆ, Twitter ನಲ್ಲಿ @iMac_too ಹೆಸರಿನ ಯೂಸರ್ ಅದರ ಸ್ಕ್ರೀನ್ಶಾಟ್ ತೆಗೆದುಕೊಂಡಿದ್ದಾರೆ. ಬ್ರಾಹ್ಮಣರ ಮೇಲಿನ ಆಕೆಯ ದ್ವೇಷವು ಈ ಪೋಸ್ಟ್ನಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ಆಕೆಯ ಈ ಟ್ವೀಟ್ ನಿಂದಾಗಿ ಆಕೆ ಸೋಶಿಯಲ್ ಮೀಡಿಯಾಗಳಲ್ಲಿ ಯೂಸರ್ಗಳ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಒಬ್ಬ ಯೂಸರ್ ಕಮೆಂಟ್ ಮಾಡುತ್ತ, “ಇತ್ತೀಚಿನ ದಿನಗಳಲ್ಲಿ ನನ್ನ ಇಂಟರ್ನೆಟ್ ತುಂಬಾ ನಿಧಾನವಾಗಿದೆ. ನನ್ನ ಊರಿನಲ್ಲಿ 5G ಕೂಡ ಸಿಗುತ್ತಿಲ್ಲ. ಇದು ಸ್ಪಷ್ಟ ಉಲ್ಲಂಘನೆಯಾಗಿದೆ” ಎಂದು ಬರೆದುಕೊಂಡಿದ್ದಾರೆ.
These days my internet is too laggy, I don't even get 5g in my hometown
This is a clear violationhttps://t.co/eRV4gXKao5 pic.twitter.com/gsDet3UgwT
— Sarvesh Gandhi (@sir_bae_) October 3, 2022
ಮತ್ತೊಬ್ಬ ಯೂಸರ್ ಕಮೆಂಟ್ ಮಾಡುತ್ತ, “ಬಿಜೆಪಿಯನ್ನು ಸೋಲಿಸಲು ಜನರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳಬೇಕೆಂದೂ ಈಕೆ ಬಯಸಿದ್ದಳು” ಎಂದು ಬರೆದಿದ್ದಾರೆ.
She also wanted people to convert to Christianity to defeat BJP. https://t.co/xJyJWkMihf
— Vijay (@dharma__vijaya) October 3, 2022
"messing with the cables stopped working wifi"..
I could not resolve the above sentence. WiFi = Wireless network protocol.
WiFi = "WIRELESS"
— スーパータンク supertank सुपरटैंक (@Smtank2) October 3, 2022
ಇನ್ನೊಬ್ಬ ಯೂಸರ್ ಕಮೆಂಟ್ ಮಾಡುತ್ತ, “ನರೇಂದ್ರ ಮೋದಿ? ಕ್ರೈಸ್ತರು/ಮುಸ್ಲಿಮರು ಎಂದಿಗೂ SC/ST ಸ್ಥಾನಮಾನವನ್ನು ನೀಡಬಾರದು ಎಂಬುದಕ್ಕೆ ಇದೇ ಕಾರಣ. ಅವರು ತುಳಿತಕ್ಕೊಳಗಾಗಿಲ್ಲ ಆದರೆ ಅವರು ಹಿಂದೂ/ವಿಗ್ರಹಾರಾಧನೆ ವಿರೋಧಿಗಳು. ಇಲ್ಲಿಯವರೆಗೆ ನಾನು ನಿಮ್ಮ ಎಲ್ಲಾ ‘ಮಾಸ್ಟರ್ಸ್ಟ್ರೋಕ್’ಗಳಲ್ಲಿ ನಿಮ್ಮನ್ನು ಬೆಂಬಲಿಸಿದ್ದೇನೆ, ಆದರೆ ದಯವಿಟ್ಟು ಅದನ್ನು ಬದಲಾಯಿಸಲು ನನ್ನನ್ನು ಕೇಳಬೇಡಿ.”
ಯೂಸರ್ ಗಳ ಕೆಂಗಣ್ಣಿಗೆ ಗುರಿಯಾದ ನಂತರ ಶಾಲಿನ್ ಮಾರಿಯಾ ಲಾರೆನ್ಸ್ ತನ್ನ ಎರಡೂ ಟ್ವೀಟ್ ಗಳನ್ನು ಡಿಲೀಟ್ ಮಾಡಿದ್ದಾಳೆ. ಆಕೆ ತನ್ನ ಹೊಸ ಟ್ವೀಟ್ನಲ್ಲಿ, “ನಾನು ನನ್ನ ಹಿಂದಿನ ಟ್ವೀಟ್ಗಳನ್ನು ಡಿಲೀಟ್ ಮಾಡಿದ್ದೇನೆ. ಬ್ರಾಹ್ಮಣರು ಮತ್ತು ಆರೆಸ್ಸೆಸ್ ನದ ಶೂದ್ರರ ಜಾತಿ ನಿಂದನೆ ಮತ್ತು ಬೆದರಿಕೆಗಳನ್ನು ನಾನು ನಿಜವಾಗಿಯೂ ಸಹಿಸಲಾರೆ. ಜಾತಿ (caste) ನೆಟ್ವರ್ಕ್ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನ ಯೋಚಿಸಿದರೆ ಅದು ನಿಜಕ್ಕೂ ಭಯಾನಕವಾಗಿದೆ. ಅದನ್ನು ಸಾಬೀತುಪಡಿಸಲು ನಾನು ಮಾನಸಿಕವಾಗಿ ತೊಂದರೆ ಕೊಡುವುದಿಲ್ಲ. ನಾನು ಹೇಳಿದ್ದು ಸರಿ, ಅದು ಸಾಕು. ಅದನ್ನು ಕಾನೂನಾತ್ಮಕವಾಗಿ ಎದುರಿಸುತ್ತೇನೆ” ಎಂದಿದ್ದಾಳೆ.