#ರಿಯಾಜ್‌ ನ ಜೊತೆ ಲಿವ್-ಇನ್ ರಿಲೇಶನ್‌ಶಿಪ್ ನಲ್ಲಿದ್ದ #ವೈಷ್ಣವಿ: ಶೃದ್ಧಾಳಂತೆ ವೈಷ್ಣವಿಯನ್ನೂ ಕೊಂದು ಬಿಸಾಡಿದ #ರಿಯಾಜ್

in Uncategorized 286 views

ಮಹಾರಾಷ್ಟ್ರದ ನವಿ ಮುಂಬೈನ ಕಾಲುವೆ ಬಳಿ ಯುವತಿಯೊಬ್ಬಳ ಮೃ ತ ದೇ ಹ ಪತ್ತೆಯಾಗಿದೆ. ಮೃತರನ್ನು ಉರ್ವಿ ವೈಷ್ಣವ್ ಎಂದು ಗುರುತಿಸಲಾಗಿದೆ. ಯುವತಿ ಮೂಲತಃ ರಾಜಸ್ಥಾನದ ಬುಂದಿ ಜಿಲ್ಲೆಯವಳು. ಇಲ್ಲಿನ ಹೋಟೆಲ್ ಒಂದರಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದಳು. ರಿಯಾಜ್ ಖಾನ್ ಮೇಲೆ ಈಕೆಯ ಕೊ ಲೆ ಯ ಆರೋಪವಿದೆ. ಉರ್ವಿ ರಿಯಾಜ್ ನೊಂದಿಗೆ ಲಿವ್ ಇನ್‌ನಲ್ಲಿದ್ದಳು ಎಂದು ಹೇಳಲಾಗುತ್ತಿದೆ. ಮೃ ತ ದೇ ಹ ವನ್ನು ಶನಿವಾರ ರಂದು ವಶಪಡಿಸಿಕೊಳ್ಳಲಾಯಿತು.

Advertisement

ಮಾಧ್ಯಮ ವರದಿಗಳ ಪ್ರಕಾರ, 27 ವರ್ಷದ ಉರ್ವಿ ಸುಮಾರು 7 ವರ್ಷಗಳ ಹಿಂದೆ ರಾಜಸ್ಥಾನದಿಂದ ಮುಂಬೈಗೆ ಬಂದಿದ್ದಳು. ಇಲ್ಲಿ ಆಕೆಗೆ ಕೋಪರ್‌ಖೇರಣ್ ಪ್ರದೇಶದ ಹೋಟೆಲ್‌ನಲ್ಲಿ ವೇಟರ್ ಕೆಲಸ ಸಿಕ್ಕಿತು. ಆಕೆಯ ಇಬ್ಬರು ಸಹೋದರರಾದ ಪಾರಸ್ ಮತ್ತು ಆರುಷ್ ಕೂಡ ಅವರೊಂದಿಗೇ ವಾಸಿಸುತ್ತಿದ್ದರು. ಈ ವೇಳೆ ಉರ್ವಿ ರಿಯಾಜ್ ಖಾನ್ ಸಂಪರ್ಕಕ್ಕೆ ಬಂದಳು. ನಂತರ ಸ್ನೇಹ ಪ್ರೀತಿಗೆ ತಿರುಗಿತ್ತು. ಸ್ವಲ್ಪ ಸಮಯದ ನಂತರ ಆಕೆ ರಿಯಾಜ್ ಜೊತೆ ಲಿವ್ ಇನ್‌ನಲ್ಲಿ ವಾಸಿಸಲು ಪ್ರಾರಂಭಿಸಿದಳು.

ಯವತಿಯ ಸಹೋದರ ಪಾರಸ್ ಪ್ರಕಾರ, ಉರ್ವಿ ಬಳಿ ಕಾರು ಇತ್ತು. ರಿಯಾಜ್ ಖಾನ್ ಕೂಡ ಇದೇ ಕಾರಿನಲ್ಲಿ ಸುತ್ತಾಡುತ್ತಿದ್ದ. ಪ್ರತಿದಿನದಂತೆ, ಡಿಸೆಂಬರ್ 13, 2022 ರಂದು, ಉರ್ವಿ ಮನೆಯಿಂದ ಹೋಟೆಲ್‌ಗೆ ಹೊರಟಳು. ಅವಳು ಪ್ರತಿದಿನ ಸಂಜೆ 5 ಗಂಟೆಗೆ ತನ್ನ ಸಹೋದರ ಪಾರಸ್‌ಗೆ ಕರೆ ಮಾಡುತ್ತಿದ್ದಳು, ಆದರೆ ಆ ದಿನ ಕರೆ ಬರಲಿಲ್ಲ. ತನ್ನ ಸಹೋದರಿಯ ಕರೆ ಬಂದಿಲ್ಲವಾದ್ದರಿಂದ ಆತಂಕದಲ್ಲಿ ಪಾರಸ್ ಮತ್ತು ಆರುಷ್ ರಿಯಾಜ್ ಖಾನ್ ಗೆ ಕರೆ ಮಾಡಿದ್ದಾರೆ. ರಿಯಾಜ್ ಉತ್ತರ ಕೊಡದೆ ಫೋನ್ ಕಟ್ ಮಾಡಿದ.

ಡಿಸೆಂಬರ್ 13 ರಂದು ರಿಯಾಜ್ ತನ್ನ ಸಹೋದರಿಯನ್ನು ಕಾರಿನಲ್ಲಿ ಹೋಟೆಲ್‌ಗೆ ಬಿಡಲು ಹೋಗಿದ್ದ ಎಂದು ಉರ್ವಿ ಸಹೋದರ ಆರುಷ್ ಹೇಳುತ್ತಾರೆ. ಮಧ್ಯಾಹ್ನ 1.30ರ ಸುಮಾರಿಗೆ ಉರ್ವಿ ಕಾರಿನಲ್ಲಿ ರಿಯಾಜ್ ಒಬ್ಬನೇ ವಾಪಸ್ ಬಂದಿದ್ದ ಎನ್ನಲಾಗಿದೆ. ತಲೆ ನೋವು ಇದೆ ಎಂದು ಕಾಫಿ ಕೇಳಿದ್ದು ಉರ್ವಿಯನ್ನು ಕರೆದುಕೊಂಡು ಬರುವುದಾಗಿ ಹೇಳಿ ಮನೆಯಿಂದ ಹೊರಟು ಹೋಗಿದ್ದಾನೆ. ತಡರಾತ್ರಿಯಾದರೂ ಉರ್ವಿ ಮನೆಗೆ ಬಂದಿರಲಿಲ್ಲ. ಆಕೆಯ ಫೋನ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ಹೇಳುತ್ತಿತ್ತು. ಮರುದಿನ, ಡಿಸೆಂಬರ್ 14 ರಂದು, ಸಹೋದರರು ನೆರೂಲ್ ಪೊಲೀಸ್ ಠಾಣೆಯಲ್ಲಿ ತಮ್ಮ ಸಹೋದರಿ ಕಾಣೆಯಾಗಿದ್ದಾರೆ ಎಂದು ಕಂಪ್ಲೇಂಟ್ ಕೊಟ್ಟಿದ್ದಾರೆ. ಈ ವೇಳೆ ರಿಯಾಜ್ ಬಗ್ಗೆ ಸುದ್ದಿಯೇ ಇರಲಿಲ್ಲ. 3 ದಿನಗಳ ಕಾಲ ತಮ್ಮ ಸಹೋದರಿ ಉರ್ವಿಗಾಗಿ ಸಹೋದರರಿಬ್ಬರೂ ಸಾಕಷ್ಟು ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ಸಿಗಲಿಲ್ಲ.

ಡಿಸೆಂಬರ್ 17 ರಂದು ಪನ್ವೇಲ್ ಪೊಲೀಸ್ ಠಾಣೆಯಿಂದ ಸಹೋದರರಿಬ್ಬರಿಗೂ ಫೋನ್ ಬಂದಿತ್ತು. ಫೋನ್ ನಲ್ಲಿ ಪೋಲಿಸರು, ಕಾಲುವೆ ಬದಿಯಲ್ಲಿ ಪತ್ತೆಯಾದ ಯುವತಿಯ ಶ-ವ-ವನ್ನು ಗುರುತಿಸಲು ಅವರನ್ನು ಕರೆಸಲಾಯಿತು. ಸಹೋದರರಿಬ್ಬರೂ ಪೊಲೀಸ್ ಠಾಣೆಗೆ ಹೋದಾಗ ಉರ್ವಿ ಶ-ವ-ವನ್ನು ಗುರುತಿಸಿದ್ದಾರೆ. ನಂತರ ರಾಜಸ್ಥಾನದಲ್ಲಿರುವ ಉರ್ವಿ ಸಂಬಂಧಿಕರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಅವರೆಲ್ಲರೂ ಉರ್ವಿಯ ಮೃ-ತ ದೇಹವನ್ನು ತೆಗೆದುಕೊಂಡು ಡಿಸೆಂಬರ್ 19, 2022 ರಂದು ರಾಜಸ್ಥಾನದ ಬುಂದಿಯಲ್ಲಿ ಉರ್ವಿಯ ಅಂತಿಮ ವಿಧಿವೊಧಾನಗಳನ್ನು ನೆರವೇರಿಸಿದರು. ಉರ್ವಿ ಕುಟುಂಬಸ್ಥರು ರಿಯಾಜ್ ಖಾನ್ ಕೊ-ಲೆ ಮಾಡಿದ್ದಾನೆ ಎಂದು ಆರೋಪ ಮಾಡುತ್ತಿದ್ದಾರೆ. ನವಿ ಮುಂಬೈ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ರಿಯಾಜ್ ನಾಪತ್ತೆಯಾಗಿದ್ದು ಆತನಿಗಾಗಿ ಪೋಲಿಸರು ಹುಡುಕಾಟ ನಡೆಸಿದ್ದಾರೆ.

Advertisement
Share this on...