1942 ರಲ್ಲಿ ಹಿಟ್ಲರ್ ದಾಳಿ ಮಾಡಿದ್ದ ಹಾಗು 78 ವರ್ಷಗಳಿಂದ ಸಮುದ್ರದಾಳದಲ್ಲಿದ್ದ ಭಾರತದ ಹಡಗು ಪತ್ತೆ: ಹಡಗಿನಲ್ಲಿ ಅಪಾರ ಪ್ರಮಾಣದ ನಿಧಿ ಪತ್ತೆ

in Uncategorized 109 views

ನವದೆಹಲಿ: ಚಿನ್ನದ ಹಕ್ಕಿಯೆಂದೇ ಕರೆಯಲ್ಪಡುತ್ತಿದ್ದ ಭಾರತವನ್ನ ಬ್ರಿಟಿಷರು ತಮ್ಮ ಆಳ್ವಿಕೆಯ ಸಮಯದಲ್ಲಿ ಅದೆಷ್ಟು ಲೂಟಿ ಮಾಡಿದ್ದರು ಎಂಬುದಕ್ಕೆ ಉದಾಹರಣೆ ಎಸ್ ಎಸ್ ಗೈರಸೊಪ್ಪಾ (SS Gairsoppa) ಹಡಗು ಪತ್ತೆಯಾಗಿದ್ದರಿಂದ ಅಂದಾಜು ಮಾಡಬಹುದು ನೋಡಿ. 2011 ರಲ್ಲಿ, ಪುರಾತತ್ತ್ವಜ್ಞರು ಸಮುದ್ರದಲ್ಲಿ ಮುಳುಗಿದ್ದ ಐತಿಹಾಸಿಕ ಎಸ್ ಎಸ್ ಗೈರಸೊಪ್ಪಾ (SS Gairsoppa) ಹಡಗನ್ನು ಪತ್ತೆ ಮಾಡಿದ್ದರು.

Advertisement

ಇತಿಹಾಸಕಾರರು ಹಾಗು ಪುರಾತತ್ವ ಅಧಿಕಾರಿಗಳ ಪ್ರಕಾರ ಬ್ರಿಟಿಷರ ಆಡಳಿತದ ಸಮಯದಲ್ಲಿ ಬ್ರಿಟಿಷರು ಭಾರತದಿಂದ ಹಣವನ್ನ ಲೂಟಿ ಮಾಡಿ ಬ್ರಿಟನ್‌ಗೆ ಕಳಿಸುತ್ತಿದ್ದರು. ಇದೇ ರೀತಿಯಾಗಿ ವಿಶ್ವಯುದ್ಧ 2 ಸಮಯದಲ್ಲೂ ಬ್ರಿಟಿಷರು ಕೋಲ್ಕತ್ತಾ ಸಮುದ್ರ ತಟದಿಂದ 14 ಬಿಲಿಯನ್ ರೂಪಾಯಿ ಅಂದರೆ ಬರೋಬ್ಬರಿ 1400 ಕೋಟಿ ಬೆಲೆಬಾಳುವ ಬೆಳ್ಳಿಯಿಂದ ತುಂಬಿದ್ದ ಎಸ್ ಎಸ್ ಗೈರಸೊಪ್ಪಾ (SS Gairsoppa) ಹಡಗನ್ನ ಕಳಿಸಿದ್ದರು. ಕಾರಣ ಇದನ್ನ ವಿಶ್ವಯುದ್ಧದ ಸಮಯದಲ್ಲಿ ಬ್ರಿಟನ್‌ನ ಆಗಿನ ಪ್ರಧಾನಮಂತ್ರಿ ವಿನ್ಸ್ಟಲ್ ಚರ್ಚಿಲ್ ಈ ಸಂಪತ್ತನ್ನ ಬಳಸಿಕೊಂಡು ತನ್ನ ಶತ್ರು ರಾಷ್ಟ್ರವಾದ ಜರ್ಮನಿಯ ವಿರುದ್ಧ ಉಪಯೋಗಿಸಿಕೊಳ್ಳುವುದಾಗಿತ್ತು.‌ ಆದರೆ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಗೆ ಈ ಹಡಗಿನ ಬಗ್ಗೆ ಮಾಹಿತಿ ಸಿಕ್ಕಿತು ಹಾಗು 1400 ಕೋಟಿ ಬೆಲೆಬಾಳುವ ಹಡಗಿನ ಮೇಲ ದಾಳಿ ಮಾಡಿಬಿಟ್ಟ. ಬನ್ನಿ ಹಾಗಿದ್ದರೆ ಈ ಇಡೀ ಘಟನೆಯ ಬಗ್ಗೆ ತಿಳಿದುಕೊಳ್ಳೋಣ…

ಯಾವಾಗ ಗೈರಸೊಪ್ಪಾ ಹಡಗು ಭಾರತದಿಂದ ಬೆಳ್ಳಿಯನ್ನ ಹೊತ್ತುಕೊಂಡು ಐರ್ಲ್ಯಾಂಡ್ ಕಡೆಗೆ ಹೋಗುತ್ತಿತ್ತೋ ಆಗ ಮಾರ್ಗ ಮಧ್ಯದಲ್ಲೇ ಹಡಗಿನ ಇಂಧನ ಖಾಲಿಯಾಯಿತು ಅದೇ ಸಂದರ್ಭದಲ್ಲಿ ಈ ವಿಷಯ ತಿಳಿದುಕೊಂಡ ಒಂದು ಜರ್ಮನ್ ಟಾರಪೀಡೋ ಇದರ ಮೇಲೆ ದಾಳಿ ಮಾಡಿತು. ಪುರಾತತ್ವ ಅಧಿಕಾರಿಗಳು ಹಾಗು ಇತಿಹಾಸಕಾರರ ಪ್ರಕಾರ ದಾಳಿಯಲ್ಲಿ ಹಡಗು ಸಂಪೂರ್ಣವಾಗಿ ನ-ಷ್ಟ-ವಾಯಿತು ಹಾಗಯ ಅದರಲ್ಲಿದ್ದ 85 ಜನ ಕೂಡ ಸಾವನ್ನಪ್ಪಿದರು.‌ ಇದರ ಜೊತೆ ಜೊತೆಗೆ 1400 ಕೋಟಿ ಬೆಲೆ ಬಾಳುವ ಬೆಳ್ಳಿ ಕೂಡ ಹಡಗಿನ ಜೊತೆ ಸಮುದ್ರದಲ್ಲಿ ಮುಳುಗಿಹೋಯಿತು.

ಈ ಬೆಳ್ಳಿ ತುಂಬಿದ್ದ ಹಡಗನ್ನ ಪತ್ತೆ ಹಚ್ಚಿರುವ ಓಡೆಸ್ಸಿ ಮರೈನ್ ಗ್ರೂಪ್ ಶೋಧಕರ್ತರು ಹೇಳುವ ಪ್ರಕಾರ ಸದ್ಯ ಈ ಹಡಗಿನಿಂದ 99% ಬೆಳ್ಳಿಯನ್ನ ಹೊರತೆಗೆಯಲಾಗಿದೆ. ಈ ದಳದ ಮುಖ್ಯ ಅಧಿಕಾರಿ ಗ್ರೇಗ್ ಸ್ಟೆಮ್ ಹೇಳುವ ಪ್ರಕಾರ ಸಮುದ್ರದಲ್ಲಿ ಮುಳುಗಿರುವ ಹಡಗಿನಿಂದ ಬೆಳ್ಳಿ ತೆಗೆಯುವ ಕೆಲಸ ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ಹಡಗಿನಲ್ಲಿ ಬೆಳ್ಳಿಯನ್ನ ಒಂದು ಸಣ್ಣ ಕಂಪಾರ್ಟಮೆಂಟ್ ನಲ್ಲಿ‌ ಸುರಕ್ಷಿತವಾಗಿ ಇಡಲಾಗಿತ್ತು, ಅಂಥದ್ರಲ್ಲಿ ಸಮುದ್ರದಾಳಕ್ಕೆ ಹೋಗಿ ಮುಳುಗಿರುವ ಹಡಗಿನಲ್ಲಿ ಆ ಕಂಪಾರ್ಟಮೆಂಟ್ ತಲುಪಿ ಬೆಳ್ಳಿ ಹೊರತೆಗೆಯುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು ಎನ್ನುತ್ತಾರೆ.

ಸಮುದ್ರದಲ್ಲಿ ಟೈಟಾನಿಕ್ ಗಿಂತಲೂ ಅಧಿಕ ಆಳದಲ್ಲಿ ಬಿದ್ದಿದ್ದ ಗೈರಸೊಪ್ಪಾ ಹಡಗು

ಓಡೆಸ್ಸಿ ಮರೈನ್ ಗ್ರೂಪ್ ಅಧ್ಯಕ್ಷ ಮಾರ್ಕ್ ಗಾರ್ಡನ್ ಮಾತನಾಡುತ್ತ ಸಮುದ್ರದಲ್ಲಿ ಇಷ್ಟು ಆಳಕ್ಕೆ ಬಿದ್ದ ಯಾವ ಹಡಗನಿಂದಲೂ ಖಜಾನೆಯನ್ನ ಹೊರತೆಗೆದಿರಲಿಲ್ಲ. ಇದು ಒಂದು ರೆಕಾರ್ಡ್ ಎಂದೇ ಹೇಳಬಹುದು. ಗಾರ್ಡನ್ ಮುಂದೆ ಮಾತನಾಡುತ್ತ 2013 ರಲ್ಲಿ ನಾರ್ತ್ ಅಟ್ಲಾಂಟಿಕ್ ನಲ್ಲಿ ನಾಜಿಗಳಿಂದ ಮುಳುಗಿಸಲ್ಪಟ್ಟ ಒಂದು ಹಡಗಿನಿಂದ 2.3 ಮಿಲಿಯನ್ ಪೌಂಡ್ ಬೆಲೆಬಾಳುವ ಖಜಾನೆಯನ್ನ ಹೊರತೆಗೆಯಲಾಗಿತ್ತು. ಆದರೆ ಈ ಗೈರಸೊಪ್ಪಾ ಹಡಗು ಸಮುದ್ರದಲ್ಲಿ 3000 ಫೀಟ್ ಆಳಕ್ಕೆ‌ ಹೋಗಿತ್ತು, ಇದು ಟೈಟಾನಿಕ್ ಗಿಂತಲೂ ಅಧಿಕ ಆಳದಲ್ಲಿತ್ತು. ಈ ಖಜಾನೆ 70 ವರ್ಷಗಳ ಕಾಲ ಸಮುದ್ರದಲ್ಲೇ ಮುಳುಗಿತ್ತು ಎಂದು ತಿಳಿಸಿದ್ದಾರೆ.

Advertisement
Share this on...