ನವದೆಹಲಿ: ಟರ್ಕಿ ಮತ್ತು ಸಿರಿಯಾದ ಕೆಲವು ಭಾಗಗಳನ್ನು ಅಪ್ಪಳಿಸಿದ ಭಯಾನಕ ಭೂಕಂಪವು 21,000 ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಟರ್ಕಿ-ಸಿರಿಯಾದ ಭೂಕಂಪದ ಬಗ್ಗೆ ಭವಿಷ್ಯ ನುಡಿದಿದ್ದ ಡಚ್ ಸಂಶೋಧಕ ಈಗ ಏಷ್ಯಾದ ದೇಶಗಳು ‘ಮುಂದಿನ ಸಾಲಿನಲ್ಲಿವೆ’ ಎಂದು ಘೋಷಿಸಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ, ಫ್ರಾಂಕ್ ಹೊಗರ್ಬೀಟ್ಸ್ (Frank Hogerbeets) ಅವರು ಮಾತನಾಡುತ್ತ, ಅಫ್ಘಾನಿಸ್ತಾನದಲ್ಲಿ ಪ್ರಾರಂಭವಾಗಿ ಮತ್ತು ಅಂತಿಮವಾಗಿ ಪಾಕಿಸ್ತಾನ ಮತ್ತು ಭಾರತವನ್ನು ದಾಟಿದ ನಂತರ ಹಿಂದೂ ಮಹಾಸಾಗರದಲ್ಲಿ ಕೊನೆಗೊಳ್ಳುವ ದೊಡ್ಡ ಭೂಕಂಪವನ್ನು ಕಾಣಬಹುದು ಎಂದಿದ್ದಾರೆ.
ಟ್ವಿಟ್ಟರ್ ಯೂಸರ್ ಒಬ್ಬರು ಫ್ರಾಂಕ್ ಅವರ ವೀಡಿಯೊವನ್ನು ಶೇರ್ ಮಾಡುತ್ತ, “ಮೂರು ದಿನಗಳ ಹಿಂದೆ #ಟರ್ಕಿ ಮತ್ತು #ಸಿರಿಯಾದಲ್ಲಿ ಭೂಕಂಪಗಳ ಮುನ್ಸೂಚನೆ ನೀಡಿದ ಡಚ್ ಸಂಶೋಧಕ (Dutch researcher) @hogrbe, #Pakistan ಮತ್ತು #India #Seismic ಚಟುವಟಿಕೆಯ ಮೂಲಕ ಅಫ್ಘಾನಿಸ್ತಾನದಲ್ಲಿ ದೊಡ್ಡ ಭೂಕಂಪ ಸಂಭವಿಸುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ” ಎಂದು ಬರೆದುಕೊಂಡಿದ್ದಾರೆ.
Potential for Stronger Seismic activity in near Purple band with next few days. This is an Estimate Including Pakistan India and Afghanistan region. we are expecting Earthquake this Regions.#FrankHoogerbeets #hogrbe #TurkeyEarthquake #Turkey #EarthquakePH pic.twitter.com/FeQisv612g
— Frank Hoogerbeets (@_hogrbe) February 8, 2023
“ವಾತಾವರಣದ ಏರಿಳಿತಗಳನ್ನು ಗಮನಿಸಿದರೆ ಈ ಪ್ರದೇಶಗಳು ದೊಡ್ಡ ಭೂಕಂಪನ ಚಟುವಟಿಕೆಗಳಿಗೆ ಮುಂದಿನ ಕೇಂದ್ರಗಳಾಗಬಹುದು. ಒಂದು ವೇಳೆ ನಾವು ವಾಯುಮಂಡಲದ ಏರಿಳಿತಗಳನ್ನ ನೋಡಿದರೆ ಎಲ್ಲಾ ದೊಡ್ಡ ದೊಡ್ಡ ಭೂಕಂಪಗಳು ವಾತಾವರಣದ ಒಂದು ಪದಚಿಹ್ನೆಯನ್ನೂ ಬಿಡುವುದಿಲ್ಲ, ಅವು ಯಾವಾಗ ಏನು ಮಾಡುತ್ತವೋ ಅದು ಯಾರಿಗೂ ಗೊತ್ತಾಗುವುದಿಲ್ಲ” ಎಂದು ಹೋಗರಬೀಟ್ಸ್ ವಿಡಿಯೋದಲ್ಲಿ ಹೇಳುತ್ತಿರುವುದನ್ನ ಕಾಣಬಹುದಾಗಿದೆ.
Dutch researcher @hogrbe who anticipated the quake in #Turkey and #Syria three days ago had also predicted seismic activity anticipating a large size earthquake originating in #Afghanistan, through #Pakistan and #India eventually terminating into the Indian Ocean. @AlkhidmatOrg pic.twitter.com/qdg4xxREGf
— Muhammad Ibrahim (@miqazi) February 6, 2023
ಡಚ್ ಸಂಶೋಧಕ ಫೆಬ್ರವರಿ 3 ರಂದು ಒಂದು ಟ್ವೀಟ್ ಮಾಡಿ ಎಚ್ಚರಿಕೆ ನೀಡುತ್ತ, “ಸದ್ಯದಲ್ಲೇ ಅಥವ ಕೆಲ ದಿನಗಳ ಬಳಿಕ ಈ ಕೇತ್ರಗಳಲ್ಲಿ (ದಕ್ಷಿಣ-ಮಧ್ಯ ಟರ್ಕಿ, ಸಿರಿಯಾ, ಲೆಬನಾನ್) ~M 7.5 ತೀವ್ರತೆಯ ಭೂಕಂಪ ಬರಲಿದೆ” ಎಂದಿದ್ದರು.
Sooner or later there will be a ~M 7.5 #earthquake in this region (South-Central Turkey, Jordan, Syria, Lebanon). #deprem pic.twitter.com/6CcSnjJmCV
— Frank Hoogerbeets (@hogrbe) February 3, 2023
ಸೋಮವಾರದ ವಿನಾಶಕಾರಿ ಭೂಕಂಪದ ನಂತರ, ಅದರ ಮುನ್ಸೂಚನೆಯ ಬಗ್ಗೆ ಅವರ ಟ್ವೀಟ್ ವೈರಲ್ ಆಗಿದೆ. ಸಾವಿರಾರು ಜನರನ್ನು ಬಲಿ ಪಡೆದ ಮತ್ತು ಆಗ್ನೇಯ ಟರ್ಕಿಯಲ್ಲಿ ಪ್ರಮುಖ ಮೂಲಸೌಕರ್ಯವನ್ನು ನೆಲಸಮಗೊಳಿಸಿದ ದುರಂತವನ್ನು ಕಂಡ ಬಳಿಕ ಜನರು ಡಚ್ ಸಂಶೋಧಕನ ಭವಿಷ್ಯವಾಣಿಯ ನಿಖರತೆಯನ್ನ ಕಂಡು ನೆಟಿಜನ್ಗಳು ಆಘಾತಕ್ಕೊಳಗಾಗಿದ್ದಾರೆ.
ಡಚ್ ಸಂಶೋಧಕ ಸೋಮವಾರದ ಭೂಕಂಪದ ನಂತರ ಆಫ್ಟರ್ಶಾಕ್ಸ್ ನ ಎಚ್ಚರಿಕೆಯನ್ನು ನೀಡಿದ್ದರು. ಅವರು ಟ್ವೀಟ್ ಮಾಡಿ “ಮಧ್ಯ ಟರ್ಕಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚುವರಿ ಪ್ರಬಲ ಭೂಕಂಪನ ಚಟುವಟಿಕೆಯನ್ನು ವೀಕ್ಷಿಸಿ. ದೊಡ್ಡ ಭೂಕಂಪದ ನಂತರ, ನಂತರದ ಆಘಾತಗಳು ಸಾಮಾನ್ಯವಾಗಿ ಸ್ವಲ್ಪ ಸಮಯದವರೆಗೆ ಮುಂದುವರಿಯುತ್ತವೆ” ಎಂದಿದ್ದರು.
ಟರ್ಕಿ ಮತ್ತು ಸಿರಿಯಾದ ಭೂಕಂಪ ಪೀಡಿತ ಪ್ರದೇಶಗಳಲ್ಲಿ ಸಾವಿನ ಸಂಖ್ಯೆ 21,000 ದಾಟಿದ್ದು ಅದು ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಟರ್ಕಿಯಲ್ಲಿ, ಸಾವಿನ ಸಂಖ್ಯೆ ಕನಿಷ್ಠ 18,014 ಕ್ಕೆ ಏರಿದೆ ಎಂದು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಗುರುವಾರ ದಕ್ಷಿಣ ನಗರವಾದ ಗಾಜಿಯಾಂಟೆಪ್ನಲ್ಲಿ ಭೂಕಂಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾಗ ಮಾಹಿತಿ ನೀಡಿದ್ದರು. ಸಿಎನ್ಎನ್ ವರದಿಯ ಪ್ರಕಾರ, ಸಿರಿಯಾದಲ್ಲಿ ಒಟ್ಟು ಸಾವಿನ ಸಂಖ್ಯೆ 3,162 ಎಂದು ಹೇಳಲಾಗಿದೆ.