ಬಿಹಾರದಲ್ಲಿ ಕಾಸ್ಮೆಟಿಕ್ ಶಾಪ್ ನಡೆಸುತ್ತಿರುವ ಯುವಕನೊಬ್ಬ ಫಿನ್‌ಲ್ಯಾಂಡ್‌ನ ಯುವತಿಯೊಬ್ಬಳೊಂದಿಗೆ ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿದ್ದ. ಸ್ನೇಹ ಪ್ರೀತಿಗೆ ತಿರುಗಿತು. ಇದಾದ ನಂತರ ಫಿನ್‌ಲ್ಯಾಂಡ್‌ನ ಜೂಲಿಯಾ ವ್ಯಾಲೆಂಟೈನ್ಸ್ ವೀಕ್ (Valentine Week) ನಲ್ಲಿ ಕುಟುಂಬ ಸದಸ್ಯರೊಂದಿಗೆ ಬಿಹಾರ ತಲುಪಿ ತನ್ನ ಭಾರತದ ಪ್ರಿಯಕರನನ್ನ ಮದುವೆಯಾಗಿದ್ದಾಳೆ. ಮದುವೆ ಸಮಾರಂಭದಲ್ಲಿ ಎರಡೂ ಕಡೆಯ ಜನರು ಅದ್ಧೂರಿಯಾಗಿ ಡ್ಯಾನ್ಸ್ ಮಾಡಿದರು.
ಫೇಸ್ ಬುಕ್ ನಲ್ಲಿ ಪ್ರೇಮಾಂಕುರವಾದ ನಂತರ ಫಿನ್ ಲ್ಯಾಂಡ್ ನ ಜೂಲಿಯಾ ಭಾರತಕ್ಕೆ ಬಂದು ವ್ಯಾಲೆಂಟೈನ್ಸ್ ವೀಕ್ ನಲ್ಲಿ ಬಿಹಾರದ ಪ್ರಣವ್ ನನ್ನು ವಿವಾಹವಾಗಿದ್ದಾಳೆ. ಪೂರ್ಣಿಯ ದೇವಸ್ಥಾನದಲ್ಲಿ ಈ ಮದುವೆ ನಡೆದಿದೆ. ಬಳಿಕ ಕತಿಹಾರ್‌ನಲ್ಲಿ ಆರತಕ್ಷತೆ ಏರ್ಪಡಿಸಲಾಗಿತ್ತು. ಮದುವೆಯಲ್ಲಿ ವಿದೇಶಿ ವಧು ಜೂಲಿಯಾ ಅವರ ಸಹೋದರಿ ಮತ್ತು ಸ್ನೇಹಿತರು ಬಾಲಿವುಡ್ ಹಾಡುಗಳಿಗೆ ನೃತ್ಯ ಮಾಡಿದರು. ಮದುವೆಯ ನಂತರ, ವಧು ಜೂಲಿಯಾ ತನ್ನ ವರನೊಂದಿಗೆ ಫಿನ್ಲ್ಯಾಂಡ್ಗೆ ಹಿಂತಿರುಗಿದಳು.
ಮಾಹಿತಿ ಪ್ರಕಾರ, ವಧು ಜೂಲಿಯಾ ಫಿನ್ಲ್ಯಾಂಡ್ನ ಹೆಲ್ಸಿಂಕಿ ನಿವಾಸಿ. ವರ ಪ್ರಣವ್ ಕುಮಾರ್ ಆನಂದ್ ಬಿಹಾರದ ಕಟಿಹಾರ್ ಜಿಲ್ಲೆಯ ಲಾಲಿಯಾಹಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಪ್ರಣವ್ ಫಿನ್ ಲ್ಯಾಂಡ್ ನಿವಾಸಿ 22 ವರ್ಷದ ಜೂಲಿಯಾ ಎಂಬಾಕೆಯೊಂದಿಗೆ ಫೇಸ್ ಬುಕ್ ಮೂಲಕ ಸ್ನೇಹ ಬೆಳೆಸಿದ್ದರು. ಕ್ರಮೇಣ ಇಬ್ಬರೂ ಒಬ್ಬರಿಗೊಬ್ಬರು ಹತ್ತಿರವಾದರು ಮತ್ತು ಸ್ನೇಹ ಪ್ರೀತಿಗೆ ತಿರುಗಿದ ನಂತರ ವಿಷಯ ಮದುವೆಯವರೆಗೆ ತಲುಪಿತು.
ಪ್ರಣವ್ ಕಟಿಹಾರ್‌ನಲ್ಲಿ ಕಾಸ್ಮೆಟಿಕ್ ಶಾಪ್ ನಡೆಸುತ್ತಿದ್ದಾರೆ. ಜೂಲಿಯಾ ಆದಷ್ಟು ಬೇಗ ಮದುವೆಯಾಗಲು ಬಯಸಿದ್ದಳು, ಆದರೆ ಪ್ರಣವ್ ಜೂಲಿಯಾ ಬಳಿ ಹೋಗಲು ಸಾಧ್ಯವಾಗಲಿಲ್ಲ. ಇಬ್ಬರ ಪ್ರೀತಿ ಎಷ್ಟರಮಟ್ಟಿಗೆ ಬೆಳೆಯಿತೆಂದರೆ ಜೂಲಿಯಾ ತನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಫಿನ್‌ಲ್ಯಾಂಡ್‌ನಿಂದ ಭಾರತಕ್ಕೆ ಬಂದಳು.
ಕಟಿಹಾರ್‌ನಲ್ಲಿ, ಪೂರ್ಣಿಯಾದ ದೇವಸ್ಥಾನದಲ್ಲಿ ಇಬ್ಬರೂ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾದರು. ಮದುವೆಯ ನಂತರ, ಕಟಿಹಾರ್‌ನ ಲಾಲಿಯಾಹಿ ಪ್ರದೇಶದಲ್ಲಿರುವ ಮದುಮಗ ಪ್ರಣವ್ ಅವರ ಮನೆಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ, ಈ ವಿಶೇಷ ಮದುವೆಯ ಆರತಕ್ಷತೆಯಲ್ಲಿ ಸ್ಥಳೀಯ ಜನರು ಭಾಗವಹಿಸಿದ್ದರು.
ವಧು ಜೂಲಿಯಾ ಆಕೆಯ ಮೂವರು ಸಹೋದರಿಯರು, ಸೋದರ ಮಾವ ಮತ್ತು ಫಿನ್‌ಲ್ಯಾಂಡ್‌ನ ಸ್ನೇಹಿತರು ಸೇರಿದಂತೆ 8 ಜನರು ಜೊತೆಗಿದ್ದರು. ಜೂಲಿಯಾ ಜೊತೆ ಬಂದಿದ್ದ ಎಲ್ಲರೂ ತುಂಬಾ ಖುಷಿಪಟ್ಟು ಮದುವೆಯಲ್ಲಿ ಬಾಲಿವುಡ್ ಹಾಡುಗಳಿಗೆ ಕುಣಿಯುತ್ತಿದ್ದರು. ಈ ವೇಳೆ ಪ್ರಣವ್ ಕುಟುಂಬಸ್ಥರು ಕೂಡ ವಿದೇಶಿ ಅತಿಥಿಗಳೊಂದಿಗೆ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಈ ಮದುವೆಗೆ ಪ್ರಣವ್ ಮನೆಯವರಿಗೆ ಯಾವುದೇ ಅಭ್ಯಂತರ ಇರಲಿಲ್ಲ.
ಮದುವೆಯ ನಂತರ ಪ್ರಣವ್‌ನನ್ನ ಫಿನ್ಲ್ಯಾಂಡ್ಗೆ ಕರೆದೊಯ್ದ ಜೂಲಿಯಾ
ಮದುವೆಯ ನಂತರ ವಧು ಜೂಲಿಯಾ ತನ್ನ ವರ ಪ್ರಣವ್ ಜೊತೆ ಫಿನ್‌ಲ್ಯಾಂಡ್‌ಗೆ ಹೋದಳು. ಕಟಿಹಾರ್ ನಲ್ಲಿ ಪ್ರೇಮಿಗಳ ವಾರದ ವೇಳೆ ನಡೆದ ಈ ಮದುವೆ ಬಗ್ಗೆ ಇದೀಗ ಭಾರೀ ಚರ್ಚೆಯಾಗುತ್ತಿದೆ.
ನಾವಿಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗಿದ್ದೆವು. ಅದರ ನಂತರ ಮದುವೆಯಾಗಲು ನಿರ್ಧರಿಸಿದೆವು. ಜೂಲಿಯಾ ಭಾರತಕ್ಕೆ ಬಂದರು, ನಂತರ ನಾವು ದೇವಸ್ಥಾನಕ್ಕೆ ಹೋಗಿ ಮದುವೆಯಾದೆವು. ನಮ್ಮ ನಡುವೆ ಹಲವು ವರ್ಷಗಳಿಂದ ಸ್ನೇಹವಿತ್ತು. ನಾವು ವಾಸಿಸುತ್ತಿರುವ ಫಿನ್‌ಲ್ಯಾಂಡ್‌ನಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಎಫೆಕ್ಟ್ ಇಲ್ಲ ಎಂದು ವರ ಪ್ರಣವ್ ಹೇಳಿದ್ದಾರೆ.