ಐತಿಹಾಸಿಕ ರಾಮಮಂದಿರ, ಟ್ರಿಪಲ್ ತಲಾಕ್, ನೋಟ್ ಬ್ಯಾನ್ ಬಗ್ಗೆ ತೀರ್ಪು ನೀಡಿದ್ದ ಹಾಗು ಸಂಸ್ಕೃತ ಶ್ಲೋಕ ಹೇಳುವ ಮೂಲಕ ನಿವೃತ್ತರಾಗಿದ್ದ ಜಸ್ಟಿಸ್ ಅಬ್ದುಲ್ ನಜೀರ್ ರನ್ನ ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ಮಾಡಿದ ಮೋದಿ ಸರ್ಕಾರ

in Uncategorized 90 views

Former Supreme Court Judge Justice S Abdul Nazeer: ನಿವೃತ್ತಿಗೂ ಮುನ್ನ ನ್ಯಾಯಮೂರ್ತಿ ನಜೀರ್‌ ಮೋದಿ ಸರ್ಕಾರದ ನೋಟು ಅಮಾನ್ಯೀಕರಣದ ನಿರ್ಧಾರವನ್ನು ಸರಿ ಎಂದಿದ್ದರು.

Advertisement

ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ನ್ಯಾಯಮೂರ್ತಿ ನಜೀರ್ ಜನವರಿ 4, 2023 ರಂದು ನಿವೃತ್ತರಾಗಿದ್ದರು. ತಮ್ಮ ವಿದಾಯದ ಭಾಷಣದಲ್ಲಿ ನ್ಯಾಯಮೂರ್ತಿ ನಜೀರ್ ಅವರು ಧರ್ಮೋ ರಕ್ಷತಿ ರಕ್ಷಿತಃ ಎಂಬ ಅತ್ಯಂತ ಪ್ರಸಿದ್ಧ ಸಂಸ್ಕೃತ ಶ್ಲೋಕವನ್ನು ಉಲ್ಲೇಖಿಸಿದ್ದರು. “ಈ ಪ್ರಪಂಚದಲ್ಲಿ ಎಲ್ಲವೂ ಧರ್ಮದ ಮೇಲೆ ನಿಂತಿದೆ. ಧರ್ಮವು ಅದನ್ನು ನಾಶಪಡಿಸುವವರನ್ನು ನಾಶಮಾಡುತ್ತದೆ ಮತ್ತು ರಕ್ಷಿಸುವವರನ್ನು ರಕ್ಷಿಸುತ್ತದೆ.” ಎಂದು ಶ್ಲೋಕವನ್ನು ವಿವರಿಸಿದ್ದರು.

ರಾಮಜನ್ಮಭೂಮಿ ಪರವಾಗಿ ತೀರ್ಪು ನೀಡಿದ್ದರು

ಅಯೋಧ್ಯೆ ಪ್ರಕರಣದ ಸಂದರ್ಭದಲ್ಲಿ ನ್ಯಾಯಮೂರ್ತಿ ನಜೀರ್ ಅವರು ಭಾರೀ ಸುದ್ದಿಯಲ್ಲಿದ್ದರು. ಅವರು ಅಯೋಧ್ಯೆ ಪ್ರಕರಣದ ವಿಚಾರಣೆ ನಡೆಸುತ್ತಿದ್ದ 5 ನ್ಯಾಯಾಧೀಶರ ಪೀಠದ ಸದಸ್ಯರಾಗಿದ್ದರು. ಅವರಲ್ಲದೆ, ಅಂದಿನ ಸಿಜೆಐ ನ್ಯಾಯಮೂರ್ತಿ ರಂಜನ್ ಗೊಗೊಯ್, ನ್ಯಾಯಮೂರ್ತಿ ಶರದ್ ಅರವಿಂದ್ ಬೋಬ್ಡೆ, ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (ಈಗಿನ ಸಿಜೆಐ), ನ್ಯಾಯಮೂರ್ತಿ ಅಶೋಕ್ ಭೂಷಣ್ ಆ ಪೀಠದಲ್ಲಿ ಇದ್ದರು.

2019ರ ನವೆಂಬರ್‌ನಲ್ಲಿ ವಿವಾದಿತ ಭೂಮಿಯ ಮೇಲಿನ ಹಿಂದೂಗಳ ಹಕ್ಕನ್ನು ಪೀಠ ಗುರುತಿಸಿತ್ತು. ನ್ಯಾಯಮೂರ್ತಿ ನಜೀರ್ ಕೂಡ ರಾಮ ಜನ್ಮಭೂಮಿ ಪರವಾಗಿ ತೀರ್ಪು ನೀಡಿದರು. ಅವರು ಪೀಠದಲ್ಲಿದ್ದ ಏಕೈಕ ಮುಸ್ಲಿಂ ನ್ಯಾಯಾಧೀಶರಾಗಿದ್ದರು.

ನೋಟ್‌ಬ್ಯಾನ್ ಮಾಡಿದ್ದು ಸರಿ ಎಂದಿದ್ದ ಎಸ್ ನಜೀರ್

ನಿವೃತ್ತಿಯಾಗುವ ಮುನ್ನ ನ್ಯಾಯಮೂರ್ತಿ ನಜೀರ್ ಅವರು ನರೇಂದ್ರ ಮೋದಿ ಸರ್ಕಾರ ಮಾಡಿದ್ದ ನೋಟು ಅಮಾನ್ಯೀಕರಣವನ್ನು ಸಮರ್ಥಿಸಿಕೊಂಡರು. ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠದಲ್ಲಿ ನ್ಯಾಯಮೂರ್ತಿ ವಿ ರಾಮಸುಬ್ರಮಣ್ಯಂ, ನ್ಯಾಯಮೂರ್ತಿ ಬಿಆರ್ ಗವಾಯಿ, ನ್ಯಾಯಮೂರ್ತಿ ಎಎಸ್ ಬೋಪಣ್ಣ, ನ್ಯಾಯಮೂರ್ತಿ ಅಬ್ದುಲ್ ನಜೀರ್, ನ್ಯಾಯಮೂರ್ತಿ ಬಿವಿ ನಾಗರತ್ನ ಇದ್ದರು. ನ್ಯಾಯಮೂರ್ತಿ ನಾಗರತ್ನ ಅವರನ್ನು ಹೊರತುಪಡಿಸಿ, ನಾಲ್ವರು ನ್ಯಾಯಾಧೀಶರು ನೋಟು ಅಮಾನ್ಯೀಕರಣವನ್ನು ಎತ್ತಿ ಹಿಡಿಯುತ್ತ, “500 ಮತ್ತು 1000 ನೋಟುಗಳ ಅಮಾನ್ಯೀಕರಣ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಪ್ರಮಾದ ಆಗಿಲ್ಲ. ಆರ್ಥಿಕ ನಿರ್ಧಾರಗಳನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದಿದ್ದರು. ನವೆಂಬರ್ 8, 2016 ರಂದು ರಾತ್ರಿ 12 ಗಂಟೆಯಿಂದ 500 ಮತ್ತು 1000 ರೂಪಾಯಿ ನೋಟುಗಳನ್ನು ಬ್ಯಾನ್ ಮಾಡುವುದಾಗಿ ಪ್ರಧಾನಿ ಮೋದಿ ಘೋಷಿಸಿದ್ದರು.

ಟ್ರಿಪಲ್ ತಲಾಕ್ ವಿರುದ್ಧ ತೀರ್ಪು ನೀಡಿದ್ದರು

ಆಗಸ್ಟ್ 2017 ರಲ್ಲಿ, ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು ಬಹುಮತದೊಂದಿಗೆ ತ್ರಿವಳಿ ತಲಾಖ್ ಅನ್ನು ಅಸಂವಿಧಾನಿಕ ಎಂದು ಘೋಷಿಸಿತು. ಪೀಠದಲ್ಲಿ ವಿವಿಧ ಧರ್ಮಗಳ ನ್ಯಾಯಾಧೀಶರು ಇದ್ದರು. ಟ್ರಿಪಲ್ ತಲಾಖ್ ಅಸಾಂವಿಧಾನಿಕವಲ್ಲ ಎಂದು ನ್ಯಾಯಮೂರ್ತಿ ಅಬ್ದುಲ್ ನಜೀರ್ ಅಭಿಪ್ರಾಯಪಟ್ಟಿದ್ದರು.

2017 ರಲ್ಲಿ ಸುಪ್ರೀಂಕೋರ್ಟ್ ಜಡ್ಜ್ ಆಗಿದ್ದ ನಜೀರ್

ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ಕರ್ನಾಟಕ ಹೈಕೋರ್ಟ್‌ನಿಂದ ಬಡ್ತಿ ಪಡೆದು ಫೆಬ್ರವರಿ 2017 ರಲ್ಲಿ ಸುಪ್ರೀಂ ಕೋರ್ಟ್‌ಗೆ ಬಡ್ತಿ ಪಡೆದರು. ಅವರು ಜನವರಿ 2023 ರಲ್ಲಿ ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾದರು. ಸುಪ್ರೀಂ ಕೋರ್ಟ್‌ಗೆ ನೇಮಕಗೊಳ್ಳುವ ಮೊದಲು ಅವರು ಯಾವುದೇ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿರಲಿಲ್ಲ.

ಮಂಗಳೂರಿನವರಾದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ಸುಮಾರು 20 ವರ್ಷಗಳ ಕಾಲ ವಕೀಲರಾಗಿ ಅಭ್ಯಾಸ ಮಾಡಿದರು. 2003 ರಲ್ಲಿ ಅವರು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು.

ಚಿಕ್ಕಪ್ಪನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಅಬ್ದುಲ್ ನಜೀರ್

ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ‘ಜನರ ನ್ಯಾಯಾಧೀಶ’ ಎಂಬ ಬಿರುದು ನೀಡಿದರು. ನ್ಯಾಯಮೂರ್ತಿ ನಜೀರ್ ತೀರಾ ಸಾಮಾನ್ಯ ಕುಟುಂಬದಿಂದ ಬಂದವರು. ಅವರ ಪ್ರಯಾಣ ತುಂಬಾ ಕಷ್ಟಕರವಾಗಿತ್ತು. ಅವರು ತಮ್ಮ ಚಿಕ್ಕಪ್ಪನ ಹೊಲಗಳಲ್ಲಿ ಕೆಲಸ ಮಾಡುತ್ತಾ ಮತ್ತು ಕಡಲತೀರಗಳಲ್ಲಿ ಮೀನುಗಳನ್ನು ಹಿಡಿಯುತ್ತಾ ಬೆಳೆದವರು.

6 ಹೊಸ ರಾಜ್ಯಪಾಲರು, 7 ರಾಜ್ಯಪಾಲರ ರಾಜ್ಯ ಬದಲಾವಣೆ

ಅರುಣಾಚಲ ಪ್ರದೇಶ, ಸಿಕ್ಕಿಂ, ಜಾರ್ಖಂಡ್, ಹಿಮಾಚಲ ಪ್ರದೇಶ, ಅಸ್ಸಾಂ ಮತ್ತು ಆಂಧ್ರಪ್ರದೇಶದಲ್ಲಿ ಹೊಸ ರಾಜ್ಯಪಾಲರನ್ನು ನೇಮಿಸಲಾಗಿದೆ.

ಹೊಸ ರಾಜ್ಯಪಾಲರು –

ಅರುಣಾಚಲ ಪ್ರದೇಶ: ಲೆಫ್ಟಿನೆಂಟ್ ಜನರಲ್ (ನಿವೃತ್ತ) ಕೇವಲ್ಯಾ ತ್ರಿವಿಕ್ರಮ್ ಪರ್ನಾಯಕ್

ಸಿಕ್ಕಿಂ: ಲಕ್ಷ್ಮಣ್ ಪ್ರಸಾದ್ ಆಚಾರ್ಯ

ಜಾರ್ಖಂಡ್: ಸಿಪಿ ರಾಧಾಕೃಷ್ಣನ್

ಹಿಮಾಚಲ ಪ್ರದೇಶ: ಶಿವ ಪ್ರತಾಪ್ ಶುಕ್ಲಾ

ಅಸ್ಸಾಂ: ಗುಲಾಬ್ ಚಂದ್ ಕಟಾರಿಯಾ

ಆಂಧ್ರಪ್ರದೇಶ: ನ್ಯಾಯಮೂರ್ತಿ (ನಿವೃತ್ತ) ಎಸ್ ಅಬ್ದುಲ್ ನಜೀರ್

7 ರಾಜ್ಯಗಳ ರಾಜ್ಯಪಾಲರ ರಾಜ್ಯ ಬದಲಾವಣೆ

ಮೊದಲು ಆಂಧ್ರಪ್ರದೇಶ, ಈಗ ಛತ್ತೀಸ್‌ಗಢ: ವಿಶ್ವಭೂಷಣ ಹರಿಚಂಥಾ

ಮೊದಲು ಛತ್ತೀಸ್‌ಗಢ, ಈಗ ಮಣಿಪುರ: ಅನುಸೂಯಾ ಉಯಿಕೆ

ಮೊದಲು ಮಣಿಪುರ, ಈಗ ನಾಗಾಲ್ಯಾಂಡ್: ಲಾ. ಗಣೇಶನ್

ಮೊದಲು ಬಿಹಾರ, ಈಗ ಮೇಘಾಲಯ: ಫಗು ಚೌಹಾಣ್

ಮೊದಲು ಹಿಮಾಚಲ ಪ್ರದೇಶ, ಈಗ ಬಿಹಾರ: ರಾಜೇಂದ್ರ ವಿಶ್ವನಾಥ್ ಅರ್ಲೇಕರ್

ಮೊದಲು ಜಾರ್ಖಂಡ್, ಈಗ ಮಹಾರಾಷ್ಟ್ರ: ರಮೇಶ್ ಬೈಸ್

ಮೊದಲು ಅರುಣಾಚಲ ಪ್ರದೇಶ ಈಗ ಕೇಂದ್ರಾಡಳಿತ ಪ್ರದೇಶ ಲಡಾಖ್ ಲೆಫ್ಟಿನೆಂಟ್ ಗವರ್ನರ್: ಬ್ರಿಗೇಡಿಯರ್ (ಡಾ) ಬಿಡಿ ಮಿಶ್ರಾ (ನಿವೃತ್ತ)

Advertisement
Share this on...