“ಮುಸ್ಲಿಂ ಮೌಲ್ವಿಗಳು ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿದ್ದರು, ಇನ್ನುಮುಂದೆ ಮುಸ್ಲಿಮರಾಗಲು ಬದುಕೋಕೆ ಸಾಧ್ಯವಿಲ್ಲ”: ಹಿಂದೂ ಧರ್ಮಕ್ಕೆ ಘರ್‌ವಾಪಸಿ ಮಾಡಿದ 8 ಮುಸ್ಲಿಮರು

in Uncategorized 19,330 views

ಉತ್ತರ ಪ್ರದೇಶದ ಮುಜಫರ್‌ನಗರ ಜಿಲ್ಲೆಯಲ್ಲಿ ಕಳೆದ ಮಂಗಳವಾರ ಎರಡು ಮುಸ್ಲಿಂ ಕುಟುಂಬಗಳ ಎಂಟು ಸದಸ್ಯರು ಹಿಂದೂ ಧರ್ಮಕ್ಕೆ ಮರಳಿದ್ದಾರೆ. ಬಾಘ್ರಾದಲ್ಲಿರುವ ಸ್ವಾಮಿ ಯಶ್ವೀರ್ ಆಶ್ರಮ ಪರಿಷತ್ತಿನ ಮಹಂತ್ ಸ್ವಾಮಿ ಯಶ್ವೀರ್ ಮಹಾರಾಜ್ ಮತ್ತು ಸ್ವಾಮಿ ಮೃಗೇಂದ್ರ ಮಹಾರಾಜ್ ಅವರು ಹವನ-ಪೂಜೆಯ ನಂತರ ಈ ಜನರು ಘರ್‌ವಾಪಸಿ ಮಾಡಿದ್ದಾರೆ. ಗಂಗಾಜಲದೊಂದಿಗೆ ಚಿಮುಕಿಸಿ ನಂತರ ಎಲ್ಲರೂ ಮಂತ್ರಗಳ ಮೂಲಕ ಶುದ್ಧರಾದರು. ಇದಾದ ಬಳಿಕ ಘರ್‌ವಾಪಸಿ ಮಾಡಿದವರಿಗೆ ಹೊಸ ಹೆಸರೂ ಸಿಕ್ಕಿವೆ. ರಾಧಾ ಆಗಿ ಶಾಹಿಸ್ತಾ, ಗೀತಾ ಆಗಿ ರಶೀದಾ, ಅರುಣ್ ಆಗಿ ಹಾರುನ್, ವರ್ಷಾ ಆಗಿ ಬರ್ಖಾ, ಕ್ರಿಶ್ ಆಗಿ ಅಕ್ಬರ್, ಶೀತಲ್ ಆಗಿ ಇಕ್ರಾ, ಸಚಿನ್ ಆಗಿ ಎಹ್ಸಾನ್ ಮತ್ತು ಹೃತಿಕ್ ಆಗಿ ಗುಲ್ಲು ಹೆಸರು ಬದಲಾಯಿಸಿಕೊಂಡಿದ್ದಾರೆ.

Advertisement

ಹಿಂದೂ ಧರ್ಮಕ್ಕೆ ಮರಳಿದ ಬಗ್ಗೆ ಸಂತಸ ವ್ಯಕ್ತಪಡಿಸಿದ ಈ ಕುಟುಂಬಗಳು ಅಜ್ಜ-ಅಪ್ಪ ಹಿಂದೂಗಳಾಗಿದ್ದರು ಆದರೆ ಮುಸ್ಲಿಂ ಮೌಲ್ವಿಗಳು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿದ್ದರು ಎಂದು ಹೇಳಿದ್ದಾರೆ. ಸ್ವಾಮಿ ಯಶ್ವೀರ್ ಮಹಾರಾಜ್ ಮತ್ತು ಸ್ವಾಮಿ ಮೃಗೇಂದ್ರ ಮಹಾರಾಜ್, ಹವನ-ಪೂಜೆಯನ್ನು ಮಾಡಿದ ನಂತರ, ಅವರ ಸದಸ್ಯರಿಗೆ ಗಂಗಾಜಲವನ್ನು ಅರ್ಪಿಸಿ ಶುದ್ಧೀಕರಿಸಿದರು ಮತ್ತು ಮಂತ್ರಗಳನ್ನು ಪಠಿಸಿದರು ಮತ್ತು ಅವರನ್ನು ಹಿಂದೂ ಧರ್ಮಕ್ಕೆ ಮರಳಿ ಕರೆತಂದರು. ಸ್ವಾಮಿ ಯಶ್ವೀರ್ ಅವರು ಇಲ್ಲಿಯವರೆಗೆ ವಿವಿಧ ನಗರಗಳಿಂದ ನೂರಾರು ಜನರನ್ನು ಹಿಂದೂ ಧರ್ಮಕ್ಕೆ ಮರಳುವಂತೆ ಮಾಡಿದ್ದಾರೆ ಎಂದು ಹೇಳಿದರು.

ಸ್ವಾಮಿ ಯಶ್ವೀರ್ ಮಹಾರಾಜ್ ಪ್ರಕಾರ, ಆಮಿಷ ಅಥವಾ ಒತ್ತಡದಿಂದ ಮತಾಂತರಗೊಳ್ಳುತ್ತಿರುವ ಹಿಂದುಗಳ ಬಗ್ಗೆ ತಿಳಿದ ನಂತರ, ಅಂತಹ ಜನರನ್ನು ಘರ್‌ವಾಪಸಿ ಮಾಡಿಸಲು ಅವರು ನಿರ್ಧರಿಸಿದರು. ಇಲ್ಲಿಯವರೆಗೆ ನೂರಾರು ಜನರು ಹಿಂದೂ ಧರ್ಮಕ್ಕೆ ಘರ್‌ವಾಪಸಿ ಮಾಡಿದ್ದಾರೆ ಎಂದು ಅವರು ಹೇಳುತ್ತಾರೆ. ಇವರ ತಂದೆ-ತಾಯಿ ಅಥವಾ ಅದಕ್ಕಿಂತ ಹಿಂದಿನ ಪೀಳಿಗೆಯವರು ಯಾವುದೋ ಕಾರಣಕ್ಕೆ ಇಸ್ಲಾಂಗೆ ಮತಾಂತರಗೊಂಡವರಾಗಿದ್ದರು. ಘರ್‌ವಾಪಸಿ ಮೂಲಕ ಹಿಂದೂ ಧರ್ಮಕ್ಕೆ ಮರಳಿದ ಎರಡು ಕುಟುಂಬಗಳು ಮೂಲತಃ ಮೀರತ್ ಜಿಲ್ಲೆಯವರಾಗಿದ್ದಾರೆ.

ಸ್ವಾತಂತ್ರ್ಯಾ ನಂತರ 1947 ರಿಂದ ದೇಶದಲ್ಲಿ ಬಿಜೆಪಿ ಸರ್ಕಾರ ಬರುವವರೆಗೆ ಎಲ್ಲಾ ಸರ್ಕಾರಗಳು ಮತಾಂತರವನ್ನು ಉತ್ತೇಜಿಸುವ ಕೆಲಸವನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಮಾಡಿವೆ ಎಂದು ಹಿಂದೂ ಸಂತರು ಹೇಳುತ್ತಾರೆ. ಮಹಂತ್ ಪ್ರಕಾರ, ಮೌಲ್ವಿಗಳು ಆಗಾಗ್ಗೆ ಬಡ ಹಿಂದೂಗಳ ಮನೆಗಳಿಗೆ ಭೇಟಿ ನೀಡುತ್ತಾರೆ ಮತ್ತು ಅವರಿಗೆ ವಿವಿಧ ರೀತಿಯಲ್ಲಿ ಆಮಿಷವೊಡ್ಡುವ ಮೂಲಕ ಇಸ್ಲಾಂಗೆ ಮತಾಂತರಗೊಳ್ಳುವಂತೆ ಕೇಳುತ್ತಾರೆ. ಅವರು ಪಾಲಿಸದಿದ್ದಾಗ, ಅವರಿಗೆ ಬೆದರಿಕೆಯೂ ಹಾಕಲಾಗುತ್ತದೆ.

ಉತ್ತರ ಪ್ರದೇಶದಲ್ಲಿ ಹಿಂದಿನ ಸರ್ಕಾರಗಳಲ್ಲಿ ಹಿಂದೂಗಳ ಮೇಲೆ ಶೋಷಣೆ ಇತ್ತು ಹಾಗಾಗಿ ಅವರು ಇಸ್ಲಾಂಗೆ ಮತಾಂತರಗೊಂಡರು. ಆದರೆ ಯೋಗಿ ಸರ್ಕಾರದಲ್ಲಿ ವಾತಾವರಣ ಬದಲಾಗಿದೆ. ಈಗ ಧರ್ಮ ತ್ಯಜಿಸಿದವರು ಘರ್‌ವಾಪಸಿ ಮಾಡುತ್ತಿದ್ದಾರೆ. ಜನರ ಸ್ವಾಭಿಮಾನ ಹೆಚ್ಚಿದೆ ಎಂದು ಮಹಂತ್ ಯಶ್ವೀರ್ ಮಹಾರಾಜ್ ಹೇಳುತ್ತಾರೆ.

ಇದನ್ನೂ ಓದಿ: “ಕನಸಿನಲ್ಲಿ ಸಾಕ್ಷಾತ್ ಶ್ರೀರಾಮನ ದರ್ಶನವಾಯಿತು ಹಾಗಾಗಿ ಇಸ್ಲಾಂ‌ ತೊರೆದೆ”: ಶಹಜಾದ್ ನಿಂದ ಸಂಜು ಆದ ಯುವಕ

ಶಾಮ್ಲಿ ಜಿಲ್ಲೆಯಲ್ಲಿ ಮತ್ತೊಮ್ಮೆ ಧಾರ್ಮಿಕ ಮತಾಂತರದ ವಿಚಾರ ಮುನ್ನೆಲೆಗೆ ಬಂದಿದೆ. ಮೂರು ವರ್ಷಗಳ ಹಿಂದೆ ಇಸ್ಲಾಂ ತ್ಯಜಿಸಿ ಹಿಂದೂ ಆಗಿದ್ಸ ಸಂಜು ರಾಣಾ ಈಗ ಅತ್ತೆಯ ಮನೆಯವರ ಕಡೆಯಿಂದ ಮತ್ತೆ ಇಸ್ಲಾಂಗೆ ಮತಾಂತರವಾಗುವಂತೆ ಒತ್ತಡ ಹಾಕಲಾಗುತ್ತಿದೆ ಎಂಬುದರ ಕುರಿತಾಗಿ ಮಾತನಾಡಿದ್ದಾರೆ. ಹಾಗಾಗಿ ಅದೇ ಸಮಯದಲ್ಲಿ ಸಂತ್ರಸ್ತ ವ್ಯಕ್ತಿ ಅತ್ತೆಯ ಮನೆಯವರ ಒತ್ತಡಕ್ಕೆ ಮಣಿದು ಹಿಂದೂ ಧರ್ಮದಿಂದ ಮತ್ತೆ ಇಸ್ಲಾಂಗಡ ಮತಾಂತರಗೊಳ್ಳುವ ಬಗ್ಗೆ ಮಾತನಾಡುತ್ತಿದ್ದಾನೆ. ನಿನ್ನ ಮನೆಯನ್ನು ಮಾರುತ್ತೇವೆ ಹಾಗು ಸಾಯಿಸಿಬಿಡ್ತೀವಿ ಅಂತ ಅತ್ತೆಯ ಮನೆಯವರು ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾನೆ. ಸಂತ್ರಸ್ತ ವ್ಯಕ್ತಿಯ ದೂರಿನ ಮೇರೆಗೆ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

ವಿಷಯವೇನೆಂದರೆ ಶಾಮ್ಲಿ ಜಿಲ್ಲೆಯ ಸದರ್ ಕೊತ್ವಾಲಿ ಪ್ರದೇಶದ ನೋಕುವಾನ್ ರಸ್ತೆ, ಅಲ್ಲಿ ಶಾಮ್ಲಿ ಜಿಲ್ಲೆಯ ನಿವಾಸಿ ಶಹಜಾದ್ ಅಲಿಯಾಸ್ ಸಂಜು ರಾಣಾ ಸುಮಾರು ಮೂರೂವರೆ ವರ್ಷಗಳ ಹಿಂದೆ ಇಸ್ಲಾಂ ತೊರೆದು ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದನು. ಇದಾದ ಬಳಿಕ ಆತನ ಸಂಸಾರದಲ್ಲಿ ಸಾಕಷ್ಟು ಜಗಳ ನಡೆದಿದ್ದು, ಒಂದೆಡೆ ಪತ್ನಿ ತನ್ನ ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದಳು. ಇದೇ ವೇಳೆ ಶಹಜಾದ್‌ನನ್ನೂ ಮನೆ ಖಾಲಿ ಮಾಡಿಸಿ ಹೊರಹಾಕಲಾಗಿತ್ತು. ಇದೀಗ ಈ ವಿಚಾರದಲ್ಲಿ ಕ್ರಮ ಕೈಗೊಳ್ಳುವಂತೆ ಸಂಜು ರಾಣಾ ಅಲಿಯಾಸ್ ಶಹಜಾದ್ ಸದರ್ ಕೊತ್ವಾಲಿಯಲ್ಲಿ ದೂರು ನೀಡಿ ತನ್ನ ಅತ್ತೆಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.

ಭಗವಾನ್ ಶ್ರೀರಾಮ ದರ್ಶನ ನೀಡಿದ್ದ

ಸುಮಾರು ಮೂರೂವರೆ ವರ್ಷಗಳ ಹಿಂದೆ ಭಗವಾನ್ ಶ್ರೀರಾಮ ಭಗವಾನ್ ನನಗೆ ದರ್ಶನ ನೀಡಿದ್ದರು, ಆ ನಂತರವೇ ನಾನು ಮುಸ್ಲಿಂ ಧರ್ಮವನ್ನು ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ್ದೇನೆ ಎಂದು ಸಂಜು ರಾಣಾ ಹೇಳುತ್ತಾರೆ. ನಮ್ಮ ಪೂರ್ವಜರೂ ಸನಾತನ ಧರ್ಮದ ಅನುಯಾಯಿಗಳಾಗಿದ್ದರು, ಆದರೆ ಅಂದಿನಿಂದ ನನ್ನ ಹೆಂಡತಿ ಮತ್ತು ಮಕ್ಕಳು ನನ್ನನ್ನು ಒಪ್ಪಿಕೊಳ್ಳುತ್ತಿಲ್ಲ, ಇದರಿಂದಾಗಿ ಈಗ ನನ್ನ ಅತ್ತೆಯ ಮನೆಯವರು ನನ್ನ ಹೆಂಡತಿಯನ್ನು ಮತ್ತೊಬ್ಬನೊಂದಿಗೆ ಮದುವೆ ಮಾಡಿಸಲು ಪ್ರಯತ್ನಿಸಿದರು. ಆದರೆ ನಾನು ವಿಚ್ಛೇದನ ನೀಡಲಿಲ್ಲ. ನೀನು ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರವಾದರೆ ಮಾತ್ರ ಹೆಂಡತಿ ಮತ್ತು ಮಕ್ಕಳನ್ನು ಕಳಿಸಿಕೊಡುತ್ತೇವೆ ಎಂದು ನನ್ನ ಅತ್ತೆಯ ಮನೆಯವರು ಕಂಡೀಷನ್ ಹಾಕಿದ್ದಾರೆ. ಆದರೆ ನಾನು ಹಿಂದೂ ಧರ್ಮದಿಂದ ಮುಸ್ಲಿಂ ಆಗಿ ಕನ್ವರ್ಟ್ ಆಗಲು ಬಯಸುವುದಿಲ್ಲ. ಹಾಗಾಗಿ ಆ ಜನ ನನ್ನ ಮನೆಯನ್ನೂ ಮಾರಿದ್ದಾರೆ. ಈ ಪ್ರಕರಣದಲ್ಲಿ ನಾನು ಈಗ ಪೊಲೀಸರಿಗೆ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದೇನೆ ಎಂದಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Advertisement
Share this on...