ಕಾರಿನ ಮೇಲಿದ್ದ ‘ॐ’ನ್ನ ಒದ್ದು ಅವಮಾನ ಮಾಡಿದ ನಾಯಕ: ನನ್ನಿಂದ ತಪ್ಪಾಯ್ತು ಕ್ಷಮಿಸಿ ಎಂದು ಅಂಗಲಾಚಿದ ಬಾಲಿವುಡ್ ನಟ

in Uncategorized 288 views

ಬಾಲಿವುಡ್ ನಟ ಶ್ರೇಯಸ್ ತಲ್ಪಡೆ (Shreyas Talpade) ಅವರ ಸಿನಿಮಾದ ದೃಶ್ಯವೊಂದು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಈ ಚಿತ್ರದ ಹೆಸರು ‘ಕಮಲ್ ಧಮಾಲ್ ಮಾಲಾಮಾಲ್’. ನಿರ್ದೇಶಕ ಪ್ರಿಯದರ್ಶನ್ ನಿರ್ದೇಶನದ ಈ ಕಾಮಿಡಿ ಚಿತ್ರ 2012 ರಲ್ಲಿ ಬಿಡುಗಡೆಯಾಗಿತ್ತು. ಇದರಲ್ಲಿ ಜಾನಿ ಎಂಬ ವ್ಯಕ್ತಿಯ ಪಾತ್ರದಲ್ಲಿ ಶ್ರೇಯಸ್ ತಲ್ಪಡೆ ನಟಿಸಿದ್ದಾರೆ. ಇವರಲ್ಲದೆ ನಾನಾ ಪಾಟೇಕರ್, ಓಂ ಪುರಿ, ಅಸ್ರಾಣಿ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಳ ವೈರಲ್ ಆಗುತ್ತಿರುವ ದೃಶ್ಯದಲ್ಲಿ, ಶ್ರೇಯಸ್ ತಲ್ಪಡೆ ಹಿಂದೂಗಳ ಪವಿತ್ರ ಧಾರ್ಮಿಕ ಸಂಕೇತವಾದ ಓಂ ನ ಮೇಲೆ ಕಾಲಿಟ್ಟ  ಅವಮಾನ ಮಾಡುತ್ತಿದ್ದಾರೆ.

Advertisement

ಈ ವೀಡಿಯೊವನ್ನು ‘ಜೆಮ್ಸ್ ಆಫ್ ಬಾಲಿವುಡ್ ಫ್ಯಾನ್’ ಅವರು ಫೆಬ್ರವರಿ 13, 2023 ರಂದು ಹಂಚಿಕೊಂಡಿದ್ದಾರೆ. ಕ್ರಿಶ್ಚಿಯನ್ ವ್ಯಕ್ತಿಯೊಬ್ಬ ಓಂ ಮೇಲೆ ಕಾಲಿಟ್ಟಿದ್ದಾನೆ. ಉರ್ದುವುಡ್‌ನಲ್ಲಿ ಬೇರೆ ಯಾವುದಾದರೂ ಧರ್ಮವನ್ನು ಈ ರೀತಿ ಅವಮಾನಿಸುವುದನ್ನು ನೀವು ನೋಡಿದ್ದೀರಾ?‌ಎಂದು ವಿಡಿಯೋದಲ್ಲಿ ಬರೆಯಲಾಗಿದೆ. ವೀಡಿಯೊ ವೈರಲ್ ಆದ ನಂತರ, ನಟ ಟ್ವಿಟರ್‌ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡು, ತಮ್ಮ ಪ್ರಮಾದಕ್ಕಾಗಿ ಕ್ಷಮೆಯಾಚಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಶ್ರೇಯಸ್ ತಲ್ಪಡೆ, “ಯಾರಾದರೂ ಶೂಟಿಂಗ್ ಮಾಡುವಾಗ ಎರಡು ಫ್ಯಾಕ್ಟರ್ ಗಳಿರುತ್ತವೆ… ಒಂದು ಸೀಕ್ವೆನ್ಸ್ ಸಮಯದಲ್ಲಿ ವಿಶೇಷವಾಗಿ ಆಕ್ಷನ್ ದೃಶ್ಯಗಳ ಸಮಯದಲ್ಲಿ ವ್ಯಕ್ತಿಯ ಮನಸ್ಥಿತಿ. ಇದು ನಿರ್ದೇಶಕರ ಅಗತ್ಯತೆಗಳು, ಸಮಯದ ನಿರ್ಬಂಧಗಳು ಮತ್ತು ಇತರ ಹಲವು ವಿಷಯಗಳನ್ನು ಒಳಗೊಂಡಿರುತ್ತದೆ. ಈ ವೀಡಿಯೊದಲ್ಲಿ ನೀವು ನೋಡುತ್ತಿರುವುದನ್ನು ವಿವರಿಸುವುದು ಅಥವಾ ಸಮರ್ಥಿಸುವುದು ಸರಿಯಲ್ಲ. ಇದು ಉದ್ದೇಶಪೂರ್ವಕವಾಗಿ ಮಾಡಲ್ಪಟ್ಟಿದ್ದಲ್ಲ ಎಂದು ನಾನು ಹೇಳಲು ಬಯಸುತ್ತೇನೆ” ಎಂದಿದ್ದಾರೆ.

ಈ ಬಗ್ಗೆ ಮುಂದೆ ಬರೆದ ಅವರು,‌ “ಇದಕ್ಕಾಗಿ ನಾನು ನಿಮ್ಮೆಲ್ಲರಲ್ಲಿ ಕ್ಷಮೆಯಾಚಿಸುತ್ತೇನೆ. ಅದನ್ನು ನೋಡಿ ನಿರ್ದೇಶಕರ ಗಮನಕ್ಕೂ ತರಬೇಕಿತ್ತು. ನಾನು ಎಂದಿಗೂ ಉದ್ದೇಶಪೂರ್ವಕವಾಗಿ ಯಾರ ಭಾವನೆಗಳನ್ನು ನೋಯಿಸುವುದಿಲ್ಲ ಮತ್ತು ಅಂತಹ ದೃಶ್ಯವನ್ನು ಮತ್ತೆ ಪುನರಾವರ್ತಿಸುವುದಿಲ್ಲ” ಎಂದಿದ್ದಾರೆ.

ನಟ ತನ್ನ ಕೃತ್ಯಕ್ಕೆ ಕ್ಷಮೆಯಾಚಿಸಿದರೂ ಸಾಮಾಜಿಕ ಜಾಲತಾಣಗಳಲ್ಲಿ ಅವರ ಮೇಲಿನ ಕೋಪ ಇನ್ನೂ ತಗ್ಗಿಲ್ಲ. ಒಬ್ಬ ಯೂಸರ್ ವ್ಯಂಗ್ಯವಾಗಿ, “ಅಬ್ಬಾ.. ತನ್ನ ತಪ್ಪನ್ನಾದರೂ ಒಪ್ಪಿಕೊಂಡರಲ್ಲ … ನಮ್ಮ ಶತಮಾನದ ಮಹಾನ್ ನಾಯಕ (ಅಮಿತಾಭ್ ಬಚ್ಚನ್) ಇಂತಹ ದೃಶ್ಯಗಳನ್ನ ಮಾಡೋದ್ರಲ್ಲಿ ದಾಖಲೆಯನ್ನೇ ಮಾಡಿದ್ದಾನೆ ಮತ್ತು ಅವನ ತಪ್ಪನ್ನೂ ಸಹ ಒಪ್ಪಿಕೊಳ್ಳುವುದಿಲ್ಲ … ಕೆಲ ದಿನಗಳ ಹಿಂದೆ ಗುಡ್ ಬೈ ಚಿತ್ರದಲ್ಲೂ ವಿಚಿತ್ರ ಸಾಹಸಗಳನ್ನು ಮಾಡಿದ್ದ” ಎಂದು ಬರೆದಿದ್ದಾರೆ.

 

ಇನ್ನೊಬ್ಬ ಯೂಸರ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಕ್ಕಾಗಿ ಧನ್ಯವಾದಗಳು ಎಂದು ಬರೆದಿದ್ದಾರೆ. ನೀವು ಕೆಲಸ ಮಾಡುವ ಉದ್ಯಮದಲ್ಲಿ ನಿಮ್ಮ ಸಹೋದ್ಯೋಗಿಗಳಿಗೆ ನೀವು ಶಿಕ್ಷಣ ನೀಡುತ್ತೀರಿ ಎಂದು ಭಾವಿಸುತ್ತೇವೆ. ಇದು ಅಸಹ್ಯಕರವಾಗಿದೆ ಎಂದು ಹೇಳಿ ಎಂದಿದ್ದಾರೆ.

ಕನಿಷ್ಠ ಪಕ್ಷ ಈಗಲಾದರೂ ನಿಮ್ಮ ತಪ್ಪನ್ನ ನೀವು ಅರಿತುಕೊಂಡಿದ್ದೀರಿ. ಜಾಗರೂಕರಾಗಿರಿ ಮತ್ತು ಮುಂದಿನ ಬಾರಿ ಶೂಟಿಂಗ್ ಮಾಡುವ ಮೊದಲು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಎಂದು ಮತ್ತೊಬ್ಬ ಯೂಸರ್ ಕಮೆಂಟ್ ಮಾಡಿದ್ದಾರೆ.

Advertisement
Share this on...