ಬ್ಯಾಟರಿ ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ತಯಾರಾಗಿತ್ತು. ಬ್ಯಾಟರಿ ತಯಾರಿಸುವ ಮಹರ್ಷಿ ಅಗಸ್ತ್ಯ ಋಷಿಗಳ ಮೂಲಕ ನೀಡಿದ ಪ್ರಾಚೀನ ಭಾರತದ ವಿಧಾನವನ್ನ ಈಗಿನ ಆಧುನಿಕ ವಿಜ್ಞಾನವೂ ಒಪ್ಪಿಕೊಂಡಿದೆ. ಮಹರ್ಷಿ ಅಗಸ್ತ್ಯ ಮುನಿಗಳು ಮೊಟ್ಟಮೊದಲ ಬಾರಿಗೆ ಬ್ಯಾಟರಿಯನ್ನ ತಯಾರು ಮಾಡಿದ್ದರು ಹಾಗು ಅದರ ವಿಸ್ತೃತ ವರ್ಣನೆ ಅಗಸ್ತ್ಯ ಸಂಹಿತೆಯಲ್ಲಿದೆ. ಇಡೀ ಬ್ಯಾಟರಿ ತಯಾರಿಸುವ ವಿಧಾನ ಅಥವ ಟೆಕ್ನಿಕ್ನ್ನ ಅಗಸ್ತ್ಯ ಮುನಿಗಳೇ ನೀಡಿದ್ದರು ಹಾಗು ಅದರ ಪರೀಕ್ಷೆಯನ್ನ ಆಗಿನ ಕಾಲದಲ್ಲಿ ಹಲವಾರು ಜನರು ಪರೀಕ್ಷಿಸಿಯೂ ನೋಡಿದ್ದರು.
ಹೌದು ಈ ಟೆಕ್ನಾಲಾಜಿ ಸಾವಿರಾರು ವರ್ಷಗಳಷ್ಟು ಪುರಾತನವಾದದ್ದಾಗಿದೆ. ಇದರ ಮೂಲಕ ಅರ್ಥ ಮಾಡಿಕೊಳ್ಳಬಹುದೇನೆಂದರೆ ಬ್ಯಾಟರಿ ತಯಾರಿಸುವ ವಿಧಾನ ಪ್ರಾಚೀನ ಭಾರತೀಯರಿಗೆ ತಿಳಿದಿತ್ತೆಂದರೆ ಅವರಿಗೆ ವಿದ್ಯುತ್ (ಎಲೆಕ್ಟ್ರಿಕ್ ಕರೆಂಟ್) ಬಗ್ಗೆಯೂ ಗೊತ್ತಿತ್ತು ಅನ್ನೋದರಲ್ಲಿ ಸಂಶಯವೇ ಇಲ್ಲ. ಯಾಕಂದ್ರೆ ಬ್ಯಾಟರಿ ಕೂಡ ಎಲೆಕ್ಟ್ರಿಸಿಟಿ ಕೆಲಸವನ್ನೇ ಮಾಡುತ್ತದೆ. ಕರೆಂಟ್ ಫ್ಲೋ ಗೋಸ್ಕರವೇ ನಾವು ಬ್ಯಾಟರಿಯನ್ನ ಬಳಸುತ್ತೇವೆ. ಅದು ಡೈರೆಕ್ಟ್ ಕರೆಂಟೇ ಆಗಿರಲಿ ಅಥವ ನಾವೀಗ ಬಳಸುತ್ತಿರುವ ಆಲ್ಟರ್ನೇಟಿವ್ ಕರೆಂಟ್ ಆಗಿರಲಿ. ಇದರಿಂದ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವ ವಿಷಯವೇನೆಂದರೆ ಜಗತ್ತಿಗೆ ಮೊಟ್ಟ ಮೊದಲ ಡೈರೆಕ್ಟ್ ಕರೆಂಟ್ (DC Current) ಬಗ್ಗೆ ಜಗತ್ತಿಗೆ ಮಾಹಿತಿ ಕೊಟ್ಟಿದ್ದೇ ಅಗಸ್ತ್ಯ ಋಷಿಗಳು.
ಪ್ರತಿಯೊಂದು ಅಂಶವನ್ನೂ ಬರೆಯುವುದು ಕಷ್ಟ, ಈ ವಿಡಿಯೋ ನೋಡಿ
ಅಗಸ್ತ್ಯ ಸಂಹಿತೆಯಲ್ಲಿನ ಒಂದು ಸೂತ್ರ ಹೀಗಿದೆ:
ಸಂಸ್ಥಾಪ್ಯ ಮೃಣ್ಮಯೇ ಪಾತ್ರೆ ತಾಮ್ರಪತ್ರಂ ಸುಸಂಕೃತಂ|
ಛಾದಯೇಚ್ಛಿಖಿಗ್ರೀವೆನ ಚಾರ್ದಭಿ: ಕಾಷ್ಠಾಪಾಂಸುಭಿ|
ದಸ್ತಾಲೋಷ್ಟೋ ನಿಧಾತ್ವಯ: ಪಾರದಾಚ್ಛಾದಿತಸ್ತತ:|
ಸಂಯೋಗಾಜ್ಜಾಯತೆ ತೇಜೋ ಮಿತ್ರಾವರುಣಸಂಜ್ಞಿತಮ್||
ಇದರರ್ಥ ಒಂದು ಮಣ್ಣಿನ ಮಡಿಕೆಯನ್ನ ತೆಗೆದುಕೊಳ್ಳಿ, ಅದನ್ನ ಸ್ವಚ್ಚವಾಗಿ ತೊಳಿಯಿರಿ. ಬಳಿಕ ಅದರಲ್ಲಿ ತಾಮ್ರಪತ್ರ ಹಾಗು ಶಿಖಿಗ್ರೀವಾ (ನವಿಲಿನ ಕುತ್ತಿಗೆಯಂತಹ ಪದಾರ್ಥ ಅರ್ಥಾತ್ ಕಾಪರ್ಸಲ್ಫೇಡ್) ಹಾಕಿ. ಬಳಿಕ ಆ ಮಡಿಕೆಯನ್ನ ಒಣ ಕಟ್ಟಿಗೆಯ ತುಂಡುಗಳಿಂದ ತುಂಬಿಸಿಡಿ. ಅದರ ನಂತರ, ಪಾದರಸದಿಂದ ಮುಚ್ಚಿದ ಪಾದರಸ-ಸಂಯೋಜಿತ ಸತು ಹಾಳೆಯನ್ನು ಒದ್ದೆಯಾದ ಮರದ ಪುಡಿಯ ಮೇಲೆ ಇರಿಸಿ. ಈ ರೀತಿಯಾಗಿ, ಎರಡರ ಸಂಯೋಜನೆಯಿಂದ ಅರ್ಥಾತ್, ಅಂದರೆ ನಕ್ಷತ್ರಗಳಂತೆ ಸಂಪರ್ಕಿಸುವ ಮೂಲಕ, ಮಿತ್ರವನುನಾಶಕ್ತಿಯನ್ನು ಉತ್ಪತ್ತಿಯಾಗುತ್ತದೆ.
ಈ ಪ್ರಯೋಗವನ್ನು ಸಹ ಮಾಡಿದರೆ, ಇಲ್ಲಿ 1.138 ವೋಲ್ಟ್ ಮತ್ತು 23mA ಪ್ರವಾಹ ಉಂಟಾಗುತ್ತದೆ. ಆಗಸ್ಟ್ 8, 1990 ರಂದು ನಡೆದ ನಾಲ್ಕನೇ ವಾರ್ಷಿಕ ಸಭೆಯಲ್ಲಿ ಸ್ವದೇಶಿ ವಿಜ್ಞಾನ ಪರಿಷ್ಕರಣೆ ಸಂಸ್ಥೆ (ನಾಗ್ಪುರ) ವಿದ್ವಾಂಸರು ಮತ್ತು ಸಾರ್ವಜನಿಕರ ಮುಂದೆ ಈ ಪ್ರಯೋಗವನ್ನು ಮಾಡಿ ತೋರಿಸಲಾಯಿತು.
ಅಗಸ್ತ್ಯ ಸಂಹಿತೆಯಲ್ಲಿ ಮುಂದೆ ಉಲ್ಲೇಖಿಸಿದ್ದು ಹೀಗಿದೆ
ಅನೇನ ಜಲಭಂಗೋಸ್ತಿ ಪ್ರಾಣೋ ದಾನೆಷು ವಾಯುಷು|
ಏವಂ ಶಾತಾನಾಂ ಕುಂಭಾನಾಂಸಂಯೋಗಕಾರ್ಯಕೃತ್ಸಮೃತ:||
ಅರ್ಥಾರ್ ನೂರು ಕುಂಭಗಳ (ಅಂದರೆ ಉಪರೋಕ್ತ ಪ್ರಕಾರದಿಂದ ತಯಾರಿಸಲಾದ ಸರಣಿಗೆ ಸೇರಿಸಿದರೆ 100 ಸೆಲ್ ಉತ್ಪತ್ತಿಯಾಗುವ) ಶಕ್ತಿಯ ನೀರಿನಲ್ಲಿ ಪ್ರಯೋಗ ಮಾಡುವುದರಿಂದ ನೀರು ತನ್ನ ರೂಪ ಬದಲಿಸಿ ಪ್ರಾಣವಾಯು (ಆಕ್ಸಿಜನ್) ಹಾಗು ಜಲಜನಕ (ಹೈಡ್ರೋಜನ್) ನಲ್ಲಿ ಪರಿವರ್ತಿತವಾಗುತ್ತದೆ.
ಇದರಲ್ಲಿ ಮುಂದೆ
ವಾಯುಬಂಧಕವಸ್ತ್ರೇಣ ನಿಬದ್ಧೋ ಯಾನಮಸ್ತಕೆ ಉದಾನ ಸ್ವಲಘುತ್ವೆ ಬಿಭರ್ತ್ಯಾಕಾಶಯಾನಕಮ್|
ಎಂದು ಬರೆಯಲಾಗಿದೆ.
ಅರ್ಥಾತ್ ಉದಾನ ವಾಯು (ಹೈಡ್ರೋಜನ್) ಸ ಬಂಧಕ ವಸ್ತ್ರ (air tight cloth) ಮೂಲಕ ನಿಬದ್ಧ ಮಾಡಿದರೆ ವಿಮಾನ ವಿದ್ಯಾ (aerodynamics) ಗಾಗಿ ಬಳಸಬಹುದು. ಇದರಿಂದ ಸ್ಪಷ್ಟವಾಗಿ ಅರ್ಥವಾಗುವ ವಿಷಯವೇನೆಂದರೆ ಇಂದಿನ ವಿದ್ಯುತ್ (ಎಲೆಕ್ಟ್ರಿಸಿಟಿ) ಬ್ಯಾಟರಿಯ ಸೂತ್ರ (Formula for Electric battery) ವೇ ಆಗಿದೆ. ಜೊತೆಗೆ ಪ್ರಾಚೀನ ಭಾರತದಲ್ಲಿ ವಿಮಾನ ವಿದ್ಯೆ ಇದ್ದದ್ದರ ಬಗ್ಗೆಯೂ ಇದು ಪುಷ್ಟೀಕರಿಸುತ್ತದೆ.
ಈ ರೀತಿಯಾಗಿ, ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಅನೇಕ ವೈಜ್ಞಾನಿಕ ಪ್ರಯೋಗಗಳ ವಿವರಣೆಗಳಿವೆ, ಅವುಗಳ ಬಗ್ಗೆ ಸಂಶೋಧನೆ ನಡೆಸುವ ಅಗತ್ಯವಿದೆ. ಆದರೆ ವಿಪರ್ಯಾಸವೆಂದರೆ ನಮ್ಮ ಶಿಕ್ಷಣವು ನಮ್ಮ ಪ್ರಾಚೀನ ಗ್ರಂಥಗಳ ಮೇಲಿನ ನಂಬಿಕೆಯನ್ನೇ ಕೊನೆಗೊಳಿಸಿದೆ.