ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರದ ಅಡಿಯಲ್ಲಿ ಹಿಂದೂಗಳು ಕಿರುಕುಳಕ್ಕೆ ಬಲಿಯಾಗುತ್ತಿದ್ದಾರೆ. ಈ ಕಾರಣದಿಂದ ಪಶ್ಚಿಮ ಬಂಗಾಳದ ಹಿಂದೂಗಳು ಕಂಗಾಲಾಗಿದ್ದು ಯಾರ ಸಹಾಯ ಪಡೆದರೆ ತಮ್ಮ ಜೀವ ಉಳಿಯಬಹುದು ಎಂದು ಚಿಂತಿಸುತ್ತ ಕೊನೆಗೆ ಯಾವುದೇ ದಾರಿ ಕಾಣದೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮೇಲೆ ತಮ್ಮ ಕೊನೆಯ ಭರವಸೆಯನ್ನು ಇಟ್ಟುಕೊಂಡಿದ್ದಾರೆ. ಸಿಎಂ ಯೋಗಿ ಆದಿತ್ಯನಾಥರ ಜನತಾ ದರ್ಬಾರ್‌ಗೆ ಬಂದ ಬಂಗಾಳಿ ಹಿಂದೂಗಳು ಯೋಗಿ ಆದಿತ್ಯನಾಥರ ಸಹಾಯವನ್ನು ಕೋರಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಹಿಂದುಗಳು ಪಲಾಯನ ಮಾಡುವಂತೆ ಮಾಡಲಾಗುತ್ತಿದೆ. ಹಲವಾರು ಸಂದರ್ಭಗಳಲ್ಲಿ ಈ ರೀತಿಯ ಘಟನೆಗಳು ವರದಿಯಾಗಿವೆ. ಪಶ್ಚಿಮ ಬಂಗಾಳದ ಕೆಲ ಹಿಂದೂ ಕುಟುಂಬಗಳು ಲಖನೌನಲ್ಲಿ ಯೋಗಿ ಆದಿತ್ಯನಾಥರ ಜನತಾ ದರ್ಬಾರ್‌ಗೆ ಬಂದು ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಮೇಲಾಗುತ್ತಿರುವ ದೌರ್ಜನ್ಯ ಹಾಗು ಅಸಹಾಯಕ ಹಿಂದುಗಳ ರಕ್ಷಣೆ ಮಾಡುವಂತೆ ಮನವಿ ಮಾಡಿದ್ದಾರೆ.
‘ಕೇವಲ ನೀವು ಮಾತ್ರ ಹಿಂದುಗಳ ರಕ್ಷಣೆ ಮಾಡಬಹುದು’
ಮಾಧ್ಯಮ ವರದಿಗಳ ಪ್ರಕಾರ, ಪಶ್ಚಿಮ ಬಂಗಾಳದಿಂದ ಬಂದ ಹಿಂದೂ ಸಮುದಾಯದ ಕೆಲವರು ಲಕ್ನೋನಲ್ಲಿ ನಡೆಯುತ್ತಿರುವ ಜನತಾ ದರ್ಬಾರ್‌ಗೆ ಆಗಮಿಸಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ತಮ್ಮ ಸಮಸ್ಯೆಗಳನ್ನು ಹೇಳಿದರು. ಬಂಗಾಳದಲ್ಲಿ ತಮ್ಮ ಭೂಮಿಯನ್ನು ಪ್ರಬಲ ಮುಸ್ಲಿಮರು ವಶಪಡಿಸಿಕೊಳ್ಳುತ್ತಿದ್ದಾರೆ ಎಂದು ಅವರು ಅಳಲು ತೋಡಿಕೊಂಡರು. ನಮ್ಮ ಭೂಮಿಯನ್ನು ಕಬಳಿಸಿದವರು ನಮಗೆ ಬೆದರಿಕೆ ಹಾಕುತ್ತಿದ್ದಾರೆ, ಈಗ ನೀವೇ ನಮ್ಮ ಕೊನೆಯ ಭರವಸೆ ಎಂದು ಸಿಎಂ ಯೋಗಿ ಅವರೆದುರು ಅಳಲು ತೋಡಿಕೊಂಡಿದ್ದಾರೆ.
ದೇವಾರಿಯಾ ಹತ್ಯಾಕಾಂಡದಲ್ಲಿ ಎಸ್‌ಡಿಎಮ್ ಸಮೇತ ಹಲವು ಅಧಿಕಾರಿಗಳು ಸಸ್ಪೆಂಡ್
ಈ ಮಧ್ಯೆ, ದೇವಾರಿಯಾ ಹತ್ಯಾಕಾಂಡ ಪ್ರಕರಣದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹತ್ವದ ಕ್ರಮ ಕೈಗೊಂಡಿದ್ದಾರೆ. ಅವರ ಆದೇಶದ ಮೇರೆಗೆ ಸಬ್ ಕಲೆಕ್ಟರ್, ಏರಿಯಾ ಮ್ಯಾಜಿಸ್ಟ್ರೇಟ್, ಇಬ್ಬರು ತಹಸೀಲ್ದಾರ್‌ಗಳು, ಮೂವರು ಲೆಕ್ಕಾಧಿಕಾರಿಗಳು, ಹೆಡ್ ಕಾನ್ಸ್‌ಟೇಬಲ್, 4 ಕಾನ್‌ಸ್ಟೆಬಲ್‌ಗಳು, ಇಬ್ಬರು ಲೈಟ್ ಇಂಚಾರ್ಜ್‌ಗಳು ಮತ್ತು ಪೊಲೀಸ್ ಠಾಣೆ ಪ್ರಭಾರಿಗಳನ್ನು ಅಮಾನತುಗೊಳಿಸಲಾಗಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಜಮೀನು ವಿಚಾರವಾಗಿ ಹಲವು ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಸಿಎಂ ಯೋಗಿ ಗರಂ ಆಗಿದ್ದಾರೆ. ಈ ದೂರುಗಳನ್ನ ಪೊಲೀಸ್ ಇಲಾಖೆ ಮತ್ತು ಕಂದಾಯ ಇಲಾಖೆಗೆ ಆನ್‌ಲೈನ್‌ನಲ್ಲಿ ಕಳುಹಿಸಲಾಗಿತ್ತು. ಆದರೆ, ಎರಡೂ ಇಲಾಖೆಗಳ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಹಾಗು ಇದರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
#UPCM @myogiadityanath suspended officials, including a sub-divisional magistrate (SDM) and a deputy superintendent of police, and ordered departmental action against eight others for laxity in resolving a land dispute that allegedly led to the carnage in Deoria district’s… pic.twitter.com/i52uCqx6Xx
— CM Office, GoUP (@CMOfficeUP) October 6, 2023
ಇದಕ್ಕೂ ಮುನ್ನ, ಬುಧವಾರ (ಅಕ್ಟೋಬರ್ 4, 2023), ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭೂ ವಿವಾದಗಳು ಮತ್ತು ಸಾರ್ವಜನಿಕ ಸಮಸ್ಯೆಗಳನ್ನು ಆದ್ಯತೆಯ ಆಧಾರದ ಮೇಲೆ ಪರಿಹರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಭೂ ಮಾಫಿಯಾ ಮತ್ತು ಮೈನಿಂಗ್ ಮಾಫಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಭೂವಿವಾದ ಪ್ರಕರಣಗಳನ್ನು 48 ಗಂಟೆಯೊಳಗೆ ಬಗೆಹರಿಸುವಂತೆ ಮುಖ್ಯಮಂತ್ರಿ ತಿಳಿಸಿದರು.
ಉತ್ತರ ಪ್ರದೇಶದ ಯಾವುದೇ ದುರ್ಬಲ, ಬಡ ಅಥವ ಉದ್ಯಮಿಗಳ ಭೂಮಿಯನ್ನು ಯಾರೂ ಅತಿಕ್ರಮಿಸಲು ಬಿಡಬಾರದು. ಭೂವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ಘಟನೆ ನಡೆದಲ್ಲಿ ಜಿಲ್ಲಾ ಮತ್ತು ತಹಶೀಲ್ದಾರರ ಜವಾಬ್ದಾರಿಯನ್ನು ನಿಗದಿಪಡಿಸಲಾಗುವುದು. ಇಂತಹ ಪರಿಸ್ಥಿತಿಯಲ್ಲಿ ನೀವು ನಿಮ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
किसी भी कमजोर, गरीब, उद्यमी, व्यवसायी की भूमि पर कोई कब्जा न करने पाए।
भूमि विवादों एवं जनसमस्याओं का निस्तारण प्राथमिकता पर समयावधि में किया जाए: #UPCM @myogiadityanath pic.twitter.com/JRz6eAGtcV
— CM Office, GoUP (@CMOfficeUP) October 5, 2023
ಲಕ್ನೋ ಹಾಗು ಗೋರಖಪುರದಲ್ಲಿ ನಡೆಯುತ್ತೆ ಜನತಾ ದರ್ಬಾರ್
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜನರ ಸಮಸ್ಯೆಗಳನ್ನು ಆಲಿಸಲು ಮತ್ತು ಅವುಗಳನ್ನು ಪರಿಹರಿಸಲು ಎರಡು ಸ್ಥಳಗಳಲ್ಲಿ (ಗೋರಖ್‌ಪುರ ಮತ್ತು ಲಖನೌ) ಜನತಾ ದರ್ಬಾರ್ ನಡೆಸುತ್ತಾರೆ.. ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸುತ್ತಾರೆ. ಯೋಗಿ ಆದಿತ್ಯನಾಥ್ ಅವರ ಜನತಾ ದರ್ಬಾರ್‌ಗೆ ಸಾಮಾನ್ಯ ಜನರು ತಮ್ಮ ಸಮಸ್ಯೆಗಳೊಂದಿಗೆ ಬರುತ್ತಾರೆ. ಹೀಗಾಗಿ ನಾವು ಸಹಾಯದ ನಿರೀಕ್ಷೆಯಲ್ಲಿ ಪಶ್ಚಿಮ ಬಂಗಾಳದಿಂದ ಇಲ್ಲಿಗೆ ಬಂದಿದ್ದೇವೆ ಎಂದು ಪಶ್ಚಿಮ ಬಂಗಾಳದ ಹಿಂದುಗಳು ತಿಳಿಸಿದ್ದಾರೆ.