ಇಸ್ರೇಲ್ ಹಮಾಸ್ (ಪ್ಯಾಲೇಸ್ತೀನ್) ಬಗ್ಗೆ 1977 ರಲ್ಲೇ ಮಾತನಾಡಿದ್ದ ಅಟಲ್ ಬಿಹಾರಿ ವಾಜಪೇಯಿಯವರ ವಿಡಿಯೋ ಈಗ ವೈರಲ್

in Uncategorized 757 views

ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ಇದುವರೆಗೆ ಇಸ್ರೇಲ್‌ನ 286 ಸೇನಾ ಯೋಧರು ಮತ್ತು 51 ಪೊಲೀಸ್ ಅಧಿಕಾರಿಗಳು ಸಂಘರ್ಷದಲ್ಲಿ ಸಾವನ್ನಪ್ಪಿದ್ದಾರೆ. ಇಸ್ರೇಲ್ ಸತ್ತವರ, ಕಾಣೆಯಾದ ಹಾಗೂ ಅಪಹರಣಕ್ಕೊಳಗಾದವರ ಹುಡುಕಾಟವನ್ನು ಮುಂದುವರೆಸುತ್ತಿರುವುದರಿಂದ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಆಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಇಸ್ರೇಲ್ ಮೇಲೆ ಹಮಾಸ್ ದಾಳಿಯಲ್ಲಿ 1,400 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಇಸ್ರೇಲಿ ಪ್ರಧಾನ ಮಂತ್ರಿ ಕಚೇರಿ ಭಾನುವಾರ ತಿಳಿಸಿದೆ. ಯುದ್ಧದಲ್ಲಿ 2,670 ಪ್ಯಾಲೇಸ್ಟಿನಿಯನ್ನರು ಸಾವಿಗೀಡಾಗಿದ್ದಾರೆ. 9,600 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.

ಭಾರತದಲ್ಲಿಯೂ ಜನರು ಇಸ್ರೇಲ್ ಮತ್ತು ಹಮಾಸ್ ಉಗ್ರರ ಪರವಾಗಿ ಮತ್ತು ವಿರೋಧವಾಗಿ ಬರೆಯುತ್ತಿದ್ದಾರೆ. ಇವೆಲ್ಲದರ ಮಧ್ಯೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ರಚನೆಯಾದ ನಂತರ ಇಸ್ರೇಲ್-ಭಾರತ ಸಂಬಂಧಗಳು ಬಲಗೊಂಡವು ಎಂಬುದು ನಿಜ. ಪೋಖ್ರಾನ್ ಪರಮಾಣು ಪರೀಕ್ಷೆಯ ನಂತರ ಅಮೇರಿಕಾ ಸೇರಿದಂತೆ ಹಲವು ದೇಶಗಳು ಭಾರತವನ್ನು ಟೀಕಿಸಿದವು. ಆರ್ಥಿಕ ನಿರ್ಬಂಧಗಳನ್ನು ಹೇರಿದವು‌. ಆದರೆ ಅಮೆರಿಕದ ಮಿತ್ರರಾಷ್ಟ್ರವಾಗಿದ್ದರೂ ಇಸ್ರೇಲ್ ಭಾರತವನ್ನು ಮಾತ್ರ ಈ ವಿಷಯದಲ್ಲಿ ಖಂಡಿಸಲಿಲ್ಲ. ಬದಲಾಗಿ, ಇಸ್ರೇಲ್ ರಕ್ಷಣೆಗೆ ಸಂಬಂಧಿಸಿದ ವಿಷಯಗಳಲ್ಲಿ ಭಾರತಕ್ಕೆ ಸಹಾಯ ಮಾಡಿತು. ಕಾರ್ಗಿಲ್ ಯುದ್ಧದ ಸಮಯದಲ್ಲಿ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಮತ್ತೊಂದು ದೊಡ್ಡ ಜುಗಲಬಂದಿ ನಮಗೆ ಕಾಣಸಿಗುತ್ತದೆ. ಈ ಸಮಯದಲ್ಲಿ ಇಸ್ರೇಲ್ ಭಾರತಕ್ಕೆ ಶಸ್ತ್ರಾಸ್ತ್ರಗಳನ್ನು ನೀಡಿತು. ಕಾರ್ಗಿಲ್ ನಲ್ಲಿನ ವಿಜಯದ ನಂತರ, ಇಸ್ರೇಲ್ ನಿಂದ ಶ#ಸ್ತ್ರಾ-ಸ್ತ್ರ-ಗಳನ್ನು ಖರೀದಿಸಲು ಭಾರತವು ದೊಡ್ಡ ಒಪ್ಪಂದವನ್ನು ಮಾಡಿತು. ಇವುಗಳಲ್ಲಿ ಡ್ರೋನ್‌ಗಳು, ರಾಡಾರ್‌ಗಳು ಮತ್ತು ಕ್ಷಿಪಣಿಗಳು ಸೇರಿವೆ. 2003 ರಲ್ಲಿ, ಈ ಬೆಳೆಯುತ್ತಿದ್ದ ಸ್ನೇಹದಿಂದಾಗಿ, ಇಸ್ರೇಲಿ ಪ್ರಧಾನಿ ಏರಿಯಲ್ ಶರೋನ್ ಭಾರತಕ್ಕೆ ಭೇಟಿ ನೀಡಿದರು. 2009 ರಲ್ಲಿ, ಇಸ್ರೇಲ್ ಎಂಟು ಬರಾಕ್ ಏರ್ ಡಿಫೆನ್ಸ್ ಸಿಸ್ಟಂ ಗಳನ್ನ ಭಾರತಕ್ಕೆ ನೀಡಿತು.

ಅಟಲ್ ಬಿಹಾರಿಯ ವೈರಲ್ ವೀಡಿಯೊಗೆ ಹಿಂತಿರುಗೋಣ.  ಈ ವೀಡಿಯೊದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ಏನು ಹೇಳುತ್ತಿದ್ದಾರೆಂದು ತಿಳಿಯೋಣ ಬನ್ನಿ. 1977 ರ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷದ ವಿಜಯದ ನಂತರ ಅಟಲ್ ಬಿಹಾರಿ ವಾಜಪೇಯಿ ನವದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಭಾಷಣ ಮಾಡುತ್ತಿದ್ದರು. ಈ ಸಮಯದಲ್ಲಿ, ಅವರು ಭಾರತದಲ್ಲಿ ಸಹೋದರತ್ವದ ಬಗ್ಗೆ ಮಾತನಾಡುತ್ತಾರೆ. ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು, ಪಾರ್ಸಿಗಳು, ಬೌದ್ಧರು, ಜೈನರು ಸೇರಿದಂತೆ ವಿವಿಧ ಧರ್ಮದವರು ರಾಷ್ಟ್ರ ನಿರ್ಮಾಣದಲ್ಲಿ ಸಹಕರಿಸುತ್ತಾರೆ ಎಂದು ಹೇಳುತ್ತಿದ್ದಾರೆ.

ಇದರ ನಂತರ ಅವರು ಇಸ್ರೇಲ್ ಹಾಗು ಪ್ಯಾಲೆಸ್ಟೈನ್ ಬಗ್ಗೆಯೂ ಮಾತನಾಡುತ್ತ, “ತಪ್ಪು ಸಂದೇಶ ಹಾಗು ಪ್ರೊಪೊಗಂಡಾ ಸೃಷ್ಟಿಸಲಾಗುತ್ತಿದೆ. ಜನತಾ ಪಕ್ಷ ಸರ್ಕಾರ ರಚನೆಯಾಗಿದೆ ಮತ್ತು ಈ ಸರ್ಕಾರ ಅರಬ್ಬರನ್ನು ಬೆಂಬಲಿಸುವುದಿಲ್ಲ, ಇಸ್ರೇಲ್ ಅನ್ನು ಬೆಂಬಲಿಸುತ್ತದೆ ಎಂದು ತಪ್ಪು ಸಂದೇಶ ರವಾನಿಸಲಾಗುತ್ತಿದೆ. ಮೊರಾರ್ಜಿ ದೇಸಾಯಿ ಈ ಪ್ರಕರಣದ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ತಪ್ಪುಗ್ರಹಿಕೆಯನ್ನು ತೆರವುಗೊಳಿಸಲು, ನಾವು ಪ್ರತಿ ಪ್ರಶ್ನೆಯನ್ನು ಅರ್ಹತೆ ಮತ್ತು ದೋಷದ ಆಧಾರದ ಮೇಲೆ ನೋಡುತ್ತೇವೆ ಎಂದು ಹೇಳಲು ಬಯಸುತ್ತೇನೆ. ಆದರೆ ಮಧ್ಯಪ್ರಾಚ್ಯದ ಬಗ್ಗೆ ಇಸ್ರೇಲ್ ವ-ಶ-ಪಡಿಸಿಕೊಂಡ ಅರಬ್ಬರ ಭೂಮಿಯನ್ನು ಸ್ಪಷ್ಟಪಡಿಸಲಾಗಿದೆ, ಆ ಭೂಮಿಯನ್ನು ಖಾಲಿ ಮಾಡಬೇಕಾಗಿದೆ”

ವಿಡಿಯೋದಲ್ಲಿ ಅಟಲ್ ಬಿಹಾರಿ ವಾಜಪೇಯಿ ಮುಂದೆ ಮಾತನಾಡುತ್ತ, “ಆಕ್ರಮಣಕಾರನು ದಾಳಿಯ ಫಲವನ್ನು ಸೇವಿಸಬೇಕು, ಇದು ನಮ್ಮ ಸಂಬಂಧದಲ್ಲಿ ಸ್ವೀಕಾರಾರ್ಹವಲ್ಲ. ಆದ್ದರಿಂದ, ನಮಗೆ ಅನ್ವಯವಾಗುವ ನಿಯಮವು ಇತರರಿಗೂ ಅನ್ವಯಿಸುತ್ತದೆ. ಅರಬ್ಬರ ಭೂಮಿ ಖಾಲಿಯಾಗಿರಬೇಕು. ಪ್ಯಾಲೇಸ್ಟಿನಿಯನ್ ಆಗಿರುವವರಿಗೆ ತಮ್ಮ ಸರಿಯಾದ ಹಕ್ಕುಗಳ ಪ್ರತಿಸ್ಥಾಪನೆಯಾಗಬೇಕು”

ಅವರು ಮುಂದೆ ಮಾತನಾಡುತ್ತ, “ಇಸ್ರೇಲ್ ಅಸ್ತಿತ್ವವನ್ನು ಸೋವಿಯತ್ ಒಕ್ಕೂಟ (ಈಗ ರಷ್ಯಾ), ಅಮೇರಿಕಾ ಒಪ್ಪಿಕೊಂಡಿದೆ.  ನಾವೂ ಒಪ್ಪಿಕೊಂಡಿದ್ದೇವೆ. ಮಧ್ಯಪ್ರಾಚ್ಯದಲ್ಲಿ ಪರಿಹಾರವನ್ನು ಕಂಡುಹಿಡಿಯಬೇಕಾಗಿದೆ, ಇದರಲ್ಲಿ ದಾಳಿಯನ್ನು ತಪ್ಪಿಸಿಬೇಕು. ಇದು ಶಾಶ್ವತ ಶಾಂತಿಗೆ ಆಧಾರವಾಗಿದೆ. ಇದರಲ್ಲಿ ತಪ್ಪು ತಿಳುವಳಿಕೆಯ ವ್ಯಾಪ್ತಿ ಎಲ್ಲಿದೆ?”

ಅಟಲ್ ಬಿಹಾರಿ ವಾಜಪೇಯಿ ಶಾಂತಿಯ ಬಗ್ಗೆ ಮಾತನಾಡಿರುವುದು ಒಳ್ಳೆಯದೇ. ಆದರೆ ಶಾಂತಿ ಅನ್ನೋದು  ಒಂದು ಕಡೆಯಿಂದ ಮಾತ್ರ ಅನುಷ್ಠಾನಗೊಳ್ಳಲು ಸಾಧ್ಯವಿಲ್ಲ.  ಇದು ಭಾರತ ಹಾಗು ಪಾಕಿಸ್ತಾನದ ಸಮಸ್ಯೆಯಂತೆಯೇ ಇದ್ದು ಭಾರತದ ಜಾಗದಲ್ಲಿ ಇಸ್ರೇಲ್ ಹಾಗು ಪಾಕಿಸ್ತಾನದ ಜಾಗದಲ್ಲಿ ಪ್ಯಾಲೇಸ್ತೀನ್ ಇದೆ. ಹೀಗಿರುವಾಗ ನಿಮಗೆ ಸಮಸ್ಯೆ ಯಾರಿಂದ ಸೃಷ್ಟಿಯಾಗುತ್ತಿದೆ ಅನ್ನೋದನ್ನ ಸಲೀಸಾಗಿ ಅರ್ಥ ಮಾಡಿಕೊಳ್ಳಬಹುದು.

ಅಟಲ್ ಬಿಹಾರಿ ವಾಜಪೇಯಿಯವರ ಈ ವೈರಲ್ ವೀಡಿಯೋ ನೋಡಿ. ಈ ವಿಡಿಯೋದಲ್ಲಿ 21 ನೆ ನಿಮಿಷಕ್ಕಿಂತ ಅಟಲ್ ಜೀ ಇಸ್ರೇಲ್ ಸಮಸ್ಯೆಯ ಬಗ್ಗೆ ಮಾತನಾಡುತ್ತಿದ್ದಾರೆ.

Advertisement
Share this on...