“ನನ್ನ ಹೆಂಡತಿಯರು ಹಿಂದುಗಳೇ ಆಗಿದ್ದರೂ ನನ್ನ ಮಕ್ಕಳು ಮಾತ್ರ ಮುಸಲ್ಮಾನರಾಗೇ ಇರುತ್ತಾರೆ ಹಾಗು ಇಸ್ಲಾಂ ಮತವನ್ನೇ ಪಾಲಿಸುತ್ತಾರೆ”: ಅಮೀರ್ ಖಾನ್

in Uncategorized 372 views

ಅಮಿರ ಖಾನ್ ನಿಂದ ವಿವಾದಾತ್ಮಕ ಹೇಳಿಕೆ

ಬಾಲಿವುಡ್ ನಟ ಅಮೀರ್ ಖಾನ್ ಘೋಷಣೆಯೊಂದನ್ನ ಮಾಡಿದ್ದು ತನಗೆ ಎಷ್ಟೇ ಮಕ್ಕಳಾದರೂ ಅವರನ್ನ ಮಸಲ್ಮಾನರಾಗೇ ಮಾಡುತ್ತೇನೆ ಎಂದಿದ್ದಾನೆ.

Advertisement

ನಟ ಅಮೀರ್ ಖಾನ್ ಎರಡು ಮದುವೆಯಾಗಿದ್ದಾನೆ, ಇಬ್ಬರೂ ಹೆಂಡತಿಯರು ಹಿಂದುಗಳೇ ಆಗಿದ್ದಾರೆ. ಮೊದಲ ಹೆಂಡತಿಯ ಹೆಸರು ರೀನಾ ದತ್ ಆಗಿತ್ತು, ಆಕೆಯಿಂದ ಅಮೀರ್ ಖಾನ್ ಇಬ್ಬರು ಮಕ್ಕಳ ತಂದೆಯಾಗಿದ್ದ.

ಇದಾದ ಬಳಿಕ ಅಮೀರ್ ಖಾನ್ ಮತ್ತೊಬ್ಬ ಹಿಂದೂ ಮಹಿಳೆಯನ್ನ ಮದುವೆಯಾದ, ಆಕೆಯ ಹೆಸರು ಕಿರಣ್ ರಾವ್ ಅಂತ. ಕಿರಣ್ ರಾವ್ ನಿಂದಲೂ ಅಮೀರ್ ಖಾನ್ ಒಂದು ಮಗುವಿನ ತಂದೆಯಾಗಿದ್ದಾನೆ. ಅಷ್ಟೇ ಅಲ್ಲದೆ ಮೊದಲ ಹೆಂಡತಿಗೆ ಡೈವೋರ್ಸ್ ಕೊಟ್ಟಿದ್ದ ಅಮೀರ್ ಖಾನ್ ಕೆಲ ವರ್ಷಗಳ ಹಿಂದೆ ಎರಡನೇ ಹೆಂಡತಿ ಕಿರಣ್ ರಾವ್‌ಗೂ ಡೈವೋರ್ಸ್ ಕೊಟ್ಟಿದ್ದಾನೆ.

ಸಂದರ್ಶನವೊಂದರಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಮೀರ್ ಖಾನ್ – ನನ್ನ ಹೆಂಡತಿಯರು ಹಿಂದುಗಳೇ ಆಗಿದ್ದರೂ ನನ್ನ ಮಕ್ಕಳು ಮಾತ್ರ ಮುಸಲ್ಮಾನರಾಗೇ ಇರುತ್ತಾರೆ ಹಾಗು ಇಸ್ಲಾಂ ಮತವನ್ನೇ ಪಾಲಿಸುತ್ತಾರೆ ಎಂದಿದ್ದಾನೆ.

ಅಷ್ಟೇ ಅಲ್ಲ ಮುಂದೆ ಮಾತನಾಡಿದ ಅಮೀರ್ ಖಾನ್ –  ನಾನೊಬ್ಬ ಪಕ್ಕಾ ಮುಸಲ್ಮಾನನಾಗಿದ್ದು ಇಸ್ಲಾಂ ಮತವನ್ನ ಶೃದ್ಧೆಯಿಂದ ಪಾಲಿಸುತ್ತೇನೆ ಹಾಗು ರೋಜಾ ಕೂಡ ಇರುತ್ತೇನೆ ಎಂದಿದ್ದಾನೆ.

ಅಮೀರ್ ಖಾನ್ ತನ್ನ ಪೂರ್ವಜರ ನಂಟು ಪಾಕಿಸ್ತಾನದ ಪೇಶಾವರದ ಖಾಮ್ ಖಾನ್‌ದಾನ್ ನದ್ದಾಗಿದೆ ಎಂದು ಹೇಳಿದ್ದಾನೆ ಹಾಗು ನಾನು ಯಾವು ಯಾವುದೇ ವಿಷಯವನ್ನೂ ಮರೆಮಾಚುವುದಿಲ್ಲ ಎಂದಿದ್ದಾನೆ. ಅಷ್ಟೇ ಅಲ್ಲ ಅಮೀರ್ ಖಾನ್ ದಿನಕ್ಕೆ ಐದು ಬಾರಿ ತಪ್ಪದೇ ನಮಾಜ್ ಮಾಡುತ್ತೇನೆ ಅಂತಲೂ ಹೇಳಿದ್ದಾನೆ.

ಇದನ್ನೂ ಓದಿ:

ಅಮೀರ್ ಖಾನ್ ನನ್ನ ಜೊತೆ ಈ ರೀತಿಯ ಅಸಹ್ಯ ಕೃತ್ಯವೆಸಗಿದ್ದ – ಮಾಧುರಿ ದೀಕ್ಷಿತ್

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಬಗ್ಗೆಯಂತೂ ತಮಗೆಲ್ಲರಿಗೂ ಗೊತ್ತು.‌ ಬಾಲಿವುಡ್‌ನ ಈ ಅದ್ಭುತ ನಟಿ 90 ರ ದಶಕಗಳಲ್ಲಿ ಹಲವಾರು ಸೂಪರ್ ಹಿಟ್ ಚಿತ್ರಗಳನ್ನ ಕೊಟ್ಟಿದ್ದಾರೆ. ಮಾಧುರಿ ದೀಕ್ಷಿತ್ ಹಲವಾರು ಬಾಲಿವುಡ್ ಸೂಪರ್ ಸ್ಟಾರ್ ಗಳ ಜೊತೆಗೂ ಕೆಲಸ ಮಾಡಿದ್ದಾರೆ. ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದು ಕರೆಸಿಕೊಳ್ಳುವ ಅಮೀರ್ ಖಾನ್ ಜೊತೆಗೂ ಮಾಧುರಿ ದೀಕ್ಷಿತ್ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಅದರಲ್ಲಿ ಸೂಪರ್ ಹಿಟ್ ಚಿತ್ರ ‘ದಿಲ್’. ಆ ಸಮಯದಲ್ಲಿ ಅಮಿರ್ ಖಾನ್ ಫಿಲಂನ ಸೆಟ್ ನಲ್ಲಿ ಬಹಳಷ್ಟು ತಮಾಷೆ ಮಾಡುತ್ತ ಎಂಜಾಯ್ ಮಾಡುತ್ತಿದ್ದುದಷ್ಟೇ ಅಲ್ಲದೆ ಬಹಳಷ್ಟು ಪ್ರ್ಯಾಂಕ್ ಕೂಡ ಮಾಡುತ್ತಿದ್ದರು. ಅವರು ಯಾವಾಗಲೂ ಸೆಟ್ ನಲ್ಲಿ ಪ್ರತಿಯೊಬ್ಬರ ಅಂಗೈಗಳನ್ನು ನೋಡಿ ಅವರ ಭವಿಷ್ಯ ಹೇಳುತ್ತೇನೆ ಎಂದು ಹೇಳುತ್ತಿದ್ದರು.

ಮಾಧುರಿ ದೀಕ್ಷಿತ್ ರವರಿಗೆ ಈ ವಿಷಯ ಗೊತ್ತಾದಾಗ ಅವರೂ ಕೂಡ ಅಮಿರ್ ಖಾನ್ ಬಳಿ ಹೋಗಿದ್ದರು ಹಾಗು ಅವರ ಬಳಿ ಹೋಗಿ ತನ್ನ ಅಂಗೈಯನ್ನೂ ತೋರಿಸೋಕೆ ಮುಂದಾದರು. ಫುಲ್ ಮಸ್ತಿ ಮೂಡಲ್ಲಿದ್ದ ಅಮಿರ್ ಖಾನ್ ಮಾಧುರಿ ದೀಕ್ಷಿತ ಕೈಯನ್ನ ನೋಡುವ ಬದಲು ಅವರ ಕೈ ಮೇಲೆ ಉಗಿದುಬಿಟ್ಟಿದ್ದರು. ಆದರೆ ಈ ಬಾರಿ ಅಮಿರ್ ಖಾನ್‌ನ ಈ ಪ್ರ್ಯಾಂಕ್ ಈ ಬಾರಿ ಭಾರೀ ಸಂಕಷ್ಟಕ್ಕೆ ಸಿಲುಕಿಸಿತ್ತು. ಪಾಪ ಮಾಧುರಿ ದೀಕ್ಷಿತ್ ಬಹಳ ಉತ್ಸಾಹದಿಂದ ತನ್ನ ಕೈ ತೋರಿಸೋಕೆ ಬಂದಿದ್ದರು ಆದರೆ ಅಮಿರ್ ಖಾನ್ ಈ ರೀತಿಯ ಪ್ರ್ಯಾಂಕ್ ಮಾಡಿದ್ದರು.

ಯಾವಾಗ ಅಮಿರ್ ಖಾನ್ ಪ್ರ್ಯಾಂಕ್ ಮಾಡುತ್ತಿದ್ದ ಸಂದರ್ಭದಲ್ಲಿ ಮಾಧುರಿ ದೀಕ್ಷಿತ್ ಕೈ ಮೇಲೆ ಉಗಿದ ಬಳಿಕ ಮಾಧುರಿ ಬಹಳ ಬೇಸರಗೊಂಡರು ಮತ್ತು ಅಮಿರ್ ಖಾನ್‌ನ ಈ ಕೃತ್ಯದಿಂದ ಅಮಿರ್ ಖಾನ್ ಎಂಥಾ ಕೆಟ್ಟ ಮನುಷ್ಯ ಅಂತ ಆತನನ್ನ ಹಿಡಿಯಲು ಆತನ ಹಿಂದೆ ಓಡಿದ್ದರು ಆದರೆ ಮಸ್ತಿ ಮೂಡಲ್ಲಿದ್ದ ಅಮಿರ್ ಖಾನ್ ಆಕೆಯ ಕೈಗೆ ಸಿಗಲಿಲ್ಲ. ಮಾಧುರಿ ದೀಕ್ಷಿತ್ ಎಷ್ಟು ಕೋಪಗೊಂಡಿರುತ್ತಿದ್ದರೋ ಅಮಿರ್ ಖಾನ್ ಆಕೆಯನ್ನ ಅಷ್ಟೇ ಕಾಡುತ್ತಿದ್ದ, ಕೆಣಕುತ್ತಿದ್ದನಂತೆ. ಈ ರೀತಿ ಅಮಿರ್ ಖಾನ್‌ನ ಈ ಕೃತ್ಯದ ಬಗ್ಗೆ ಇತ್ತೀಚೆಗೆ ಮಾಧುರಿ ದೀಕ್ಷಿತ್ ಬಹಿರಂಗಪಡಿಸಿದ್ದಾರೆ.

Advertisement
Share this on...