ದೇಶದಲ್ಲಿ ಮತ್ತೊಂದು ರಾಜ್ಯಕ್ಕೆ ಭಗವಾಧಾರಿ ಯೋಗಿ ಮುಖ್ಯಮಂತ್ರಿ.! ಯಾವ ರಾಜ್ಯದ ಮುಖ್ಯಮಂತ್ರಿ? ಯಾರು ಗೊತ್ತಾ ಈ ಖಡಕ್ ಹಿಂದುತ್ವವಾದಿ?

in Uncategorized 170 views

ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಮಾದರಿಯಲ್ಲಿ ರಾಜಸ್ಥಾನದಲ್ಲಿ ಯೋಗಿ ಬಾಲಕನಾಥ್ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

ದೇಶದಲ್ಲಿ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಪಂಚರಾಜ್ಯ ಚುನಾವಣೆಯಲ್ಲಿ ರಾಜಸ್ಥಾನದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಯೋಗಿ ಬಾಲಕನಾಥ್ ಅವರು ಗೆಲುವು ಸಾಧಿಸಿದ್ದಾರೆ. ಈ ಬಾರಿ ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಮಾದರಿಯಲ್ಲಿ ರಾಜಸ್ಥಾನದಲ್ಲಿ ಯೋಗಿ ಬಾಲಕನಾಥ್ ಅವರು ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಉತ್ತರ ಪ್ರದೇಶ ರಾಜ್ಯದಲ್ಲಿ ಕಳೆದ ಎರಡು ಅವಧಿಯಲ್ಲಿ ಖಡಕ್ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಆಡಳಿತ ದೇಶಾದ್ಯಂತ ಪ್ರಸಿದ್ಧಿಯಾಗಿದೆ. ಈಗ ಯೋಗಿ ಆದಿತ್ಯನಾಥ್ ನಂತರ, ರಾಜಸ್ಥಾನದಲ್ಲಿ ಮತ್ತೊಬ್ಬ ಯೋಗಿಯ ಉದಯವಾಗಿದೆ. ಅದು ಮಹಂತ್ ಬಾಲಕ್ ನಾಥ್ ಯೋಗಿ. ರಾಜಸ್ಥಾನದಲ್ಲಿ ಈಗಾಗಲೇ ಅಲ್ವಾರ್‌ನಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದ ಯೋಗಿ ಬಾಲಕ್‌ನಾಥ್ ಅವರನ್ನು ಪುನಃ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಸಲಾಗಿತ್ತು. ಕಾಂಗ್ರೆಸ್‌ನ ಇಮ್ರಾನ್ ಖಾನ್ ಎದುರು ಸ್ಪರ್ಧೆ ಮಾಡಿದ್ದ ಸಂಸದ ಬಾಲಕ ನಾಥ್ ಅವರನ್ನು ಪಕ್ಷವು ಆಯ್ಕೆ ಮಾಡಿದೆ, ಇದು ನಿಕಟ ಹೋರಾಟವಾಗಿದೆ ಮತ್ತು ಪ್ರತಿ ಸ್ಥಾನವೂ ಮುಖ್ಯವಾಗಿದೆ.

ತಿಜಾರಾ ವಿಧಾನಸಭಾ ಕ್ಷೇತ್ರದಲ್ಲಿ ಬಾಲಕ ನಾಥ್ ಕಾಂಗ್ರೆಸ್‌ನ ಇಮ್ರಾನ್ ಖಾನ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಮಹಂತ್ ಬಾಲಕ ನಾಥ್ ಯೋಗಿ ಅವರಯ ತಿಜಾರಾದಲ್ಲಿ ಇಮ್ರಾನ್ ಖಾನ್ ವಿರುದ್ಧದ ಸ್ಪರ್ಧೆಯನ್ನು ತನ್ನ ಬಲವಾದ ಹೇಳಿಕೆಗಳಿಂದಲೇ ಮತದಾರರನ್ನು ಸೆಳೆದಿದ್ದಾರೆ. ತಮ್ಮ ಹಾಗೂ ಇಮ್ರಾನ್ ಖಾನ್ ನಡುವಿನ ಸ್ಪರ್ಧೆಯನ್ನು ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ಎಂದು ಬಣ್ಣಿಸಿದ್ದರು. ಡಿಸೆಂಬರ್ 1 ರಂದು ಬಿಡುಗಡೆಯಾದ ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್‌ ಸೇರಿದಂತೆ ವಿವಿಧ ಸಂಸ್ಥೆಗಳ ಎಕ್ಸಿಟ್‌ ಪೋಲ್‌ನಲ್ಲಿ ರಾಜಸ್ಥಾನದ ಮುಖ್ಯಮಂತ್ರಿಯಾಗಿ ಯೋಗಿ ಬಾಲಕ ನಾಥ್ ಆಗಬೇಕು ಎಂಬ ಸುಳಿವಿನ ಬಗ್ಗೆ ಬಿಚ್ಚಿಡಲಾಗಿತ್ತು.

ಈಗಾಗಲೇ ರಾಜಸ್ಥಾನದಲ್ಲಿ ವಸುಂಧರಾ ರಾಜೆ ಅವರು ಮುಖ್ಯಮಂತ್ರಿ ಆಗಿದ್ದರು. ಆದರೆ, ಸದರಿ ಚುನಾವಣೆಯಲ್ಲಿ ಬಿಜೆಪಿಯಿಂದ ಮುಖ್ಯಮಂತ್ರಿ ಹುದ್ದೆಗೆ ಯಾವುದೇ ಮುಖವನ್ನು ಬಿಂಬಿಸಿರಲಿಲ್ಲ. ಕಾಂಗ್ರೆಸ್‌ ಹಾಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡಿದೆ. ರಾಜಸ್ಥಾನದಲ್ಲಿ ನಡೆದ ಎಕ್ಸಿಟ್ ಪೋಲ್‌ನಲ್ಲಿ ಶೇ.32 ಜನರು ಅಶೋಕ್ ಗೆಹ್ಲೋಟ್ ಸಿಎಂ ಎಂದು, ಶೇ.10 ಜನರು ಬಾಲಕನಾಥ್ ಮುಖ್ಯಮಂತ್ರಿ ಎಂದು ಬೆಂಬಲ ನೀಡಿದ್ದಾರೆ. ಜೊತೆಗೆ ಶೇ.21 ಜನರು ಬಿಜೆಪಿ ಅಭ್ಯರ್ಥಿಯೇ ಸಿಎಂ ಆಗಲಿದ್ದು, ಯಾರಾಗುತ್ತಾರೆಂದು ಅಭ್ಯರ್ಥಿ ಹೆಸರನ್ನು ಹೇಳಿಲ್ಲ.

ಬಾಲಕ್ ನಾಥ್ ಮತ್ತು ಯೋಗಿ ಆದಿತ್ಯನಾಥ್:

ತಿಜಾರ್‌ನಿಂದ ಸ್ಪರ್ಧೆ ಮಾಡಿದ ಯೋಗಿ ಬಾಲಕ ನಾಥ್ ತನ್ನನ್ನು ತಾನು ರಾಜಸ್ಥಾನದ ಆದಿತ್ಯನಾಥ್ ಎಂದು ಬಿಂಬಿಸಿಕೊಂಡಿದ್ದಾರೆ. ಯುಪಿ ಮಾದರಿಯಲ್ಲಿ ಬುಲ್ಡೋಜರ್‌ ಇಲ್ಲಿಯೂ ಸದ್ದು ಮಾಡಲಿದೆ. ಇನ್ನು ಬಾಲಕನಾಥ್ ನಾಮಪತ್ರ ಸಲ್ಲಿಕೆ ವೇಳೆಯೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಸಾಥ್‌ ನೀಡಿದ್ದರು. ನಂತರ ಚುನಾವಣಾ ಪ್ರಚಾರದಲ್ಲಿಯೂ ಕೂಡ ಸ್ಟಾರ್ ಪ್ರಚಾರಕರಾಗಿ ಯೋಗಿ ಆದಿತ್ಯನಾಥ್ ಅವರು ಬಾಲಕನಾಥ್ ಅವರ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು. ಯೋಗಿ ಆದಿತ್ಯನಾಥ್ ಅವರಂತೆಯೇ 39 ವರ್ಷದ ಬಾಲಕ ನಾಥ್ ಹಿಂದೂ ಮಹಂತ್‌ನ ಕೇಸರಿ ನಿಲುವಂಗಿಯನ್ನು ಧರಿಸುತ್ತಾರೆ. ಅವರು ಯೋಗಿ ಆದಿತ್ಯನಾಥ್ ಅವರ ನಾಥ ಪಂಥದವರಾಗಿದ್ದಾರೆ. ಹೀಗಾಗಿ, ಯುಪಿ ಮುಖ್ಯಮಂತ್ರಿಯನ್ನು ತಮ್ಮ ‘ಹಿರಿಯ ಸಹೋದರ’ ಎಂದು ಬಾಲಕನಾಥ್ ಹೇಳಿಕೊಂಡಿದ್ದಾರೆ.

ಮಹಾಂತ್ ಬಾಲಕ್ ನಾಥ್ ಯಾರು?

ಅಲ್ವಾರ್‌ನ ಬಿಜೆಪಿ ಸಂಸದ ಮಹಂತ್ ಬಾಲಕನಾಥ್ ಅವರು 12ನೇ ತರಗತಿಯವರೆಗೆ ಓದಿದ್ದಾರೆ. ತಿಜಾರಾ ವಿಧಾನಸಭಾ ಚುನಾವಣೆಗೆ ಅವರು ಸಲ್ಲಿಸಿದ ಅಫಿಡವಿಟ್ ಅವರ ಬ್ಯಾಂಕ್ ಖಾತೆಯಲ್ಲಿ ಸುಮಾರು 14 ಲಕ್ಷ ರೂ. ಇದೆ ಎಂದು ತೋರಿಸುತ್ತದೆ.ಬಾಲಕನಾಥ್ ಅವರು ರೋಹ್ಟಕ್‌ನ ಮಸ್ತನಾಥ್ ಮಠದ ಎಂಟನೇ ಮಹಂತ್. ಇದು ನಾಥ ಪಂಥದ ಅತಿದೊಡ್ಡ ಸಂಸ್ಥೆಯಾಗಿದ್ದು, ಮಠವು ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳನ್ನು ನಡೆಸುತ್ತದೆ. 1984ರಲ್ಲಿ ಬೆಹ್ರೋಡ್‌ನ ಹಳ್ಳಿಯೊಂದರಲ್ಲಿ ಯಾದವ ಕುಟುಂಬದಲ್ಲಿ ಜನಿಸಿದ ಬಾಲಕ ನಾಥ್ ಅವರ ಹೆತ್ತವರ ಏಕೈಕ ಮಗನಾಗಿದ್ದಾರೆ.ಬಾಲಕನಾಥ್ ಅವರು 6 ವರ್ಷದವರಿದ್ದಾಗಲೇ ತಪಸ್ವಿ ಜೀವನಕ್ಕಾಗಿ ಮಹಂತ್ ಅವರನ್ನು ಖೇತನಾಥಕ್ಕೆ ಕಳುಹಿಸಲಾಯಿತು. ನಂತರ ಮಹಂತ್ ಅವರು ವಂದನಾಥ್ ಅವರ ಶಿಷ್ಯರಾಗಿ, ಬಾಲಕನಾಥ್ ಎಂಬ ಹೆಸರನ್ನು ಪಡೆದರು. ಇವರನ್ನು 2016ರಲ್ಲಿ ಅವರನ್ನು ತಮ್ಮ ಉತ್ತರಾಧಿಕಾರಿ ಎಂದು ಘೋಷಿಸಿದರು.

Advertisement
Share this on...